ಯುವಕರ ಜೀವನವನ್ನು ಸ್ವಾವಲಂಬನೆ ಮಾಡಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಸ್ವಾವಲಂಬಿ ಸಾರಥಿ ಯೋಜನೆಯು ಪರಿಶಿಷ್ಟ ಜಾತಿಯ ಯುವಕ ಯುವತಿಯರಿಗೆ ಟ್ಯಾಕ್ಸಿ ಅಥವಾ ಕ್ಯಾಬ್ ಕಾರ್ ಅಂತಹ ವಾಹನಗಳನ್ನು ಖರೀದಿಸಲು ನೆರವಾಗುವ ಯೋಜನೆ ಆಗಿದೆ. ಈಗಾಗಲೇ ಈ ಯೋಜನೆ ಜಾರಿಯಲ್ಲಿ ಇದ್ದು ಇಷ್ಟು ದಿನಗಳ ವರೆಗೆ 3,50,000 ಲಕ್ಷ ರೂಪಾಯಿ ಸಹಾಯಧನವನ್ನು 50 ಸಾವಿರ ರೂಪಾಯಿ ಹೆಚ್ಚಳ ಮಾಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸ್ವಾವಲಂಬಿ ಸಾರಥಿ ಯೋಜನೆಯ ಉದ್ದೇಶ:- ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕ ಯುವತಿಯರು ಸ್ವಂತವಾಗಿ ಕ್ಯಾಬ್ ಅಥವಾ ಕಾರ್ ಕೊಂಡುಕೊಳ್ಳುವ ಸಾಲಕ್ಕೆ ಶೆ.50 ಪ್ರತಿಶತ ಅಥವಾ 3,50,000 ಲಕ್ಷದ ವರೆಗೆ ಸಹಾಯಧನವನ್ನು ಇಲಾಖೆ ನೀಡುತ್ತಿತ್ತು. ಈಗ ಆ ದರವನ್ನು ಹೆಚ್ಚಿಸಿದೆ 4,00,000 ಸಹಾಯ ಧನ ನೀಡುವುದಾಗಿ ಇಲಾಖೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸ್ವಾವಲಂಬಿ ಸಾರಥಿ ಅರ್ಜಿ ಹಾಕಲು ಇರುವ ನಿಯಮಗಳು :-
- ಅಭ್ಯರ್ಥಿಯು ಹಿಂದುಳಿದ ಸಮುದಾಯಕ್ಕೆ ಸೇರಿರಬೇಕು.
- ಅರ್ಜಿ ಸಲ್ಲಿಸಲು ಲಘು ವಾಹನ ಚಾಲನಾ ಪರವಾನಿಗೆ ಪತ್ರ ಹೊಂದಿರಬೇಕು.
- ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ .98,0000 ನಗರ ಪ್ರದೇಶದವರಿಗೆ 1,20,000 ಗಳಿಗಿಂತ ಜಾಸ್ತಿ ಇರಬಾರದು.
- ಕರ್ನಾಟಕದ ಯಾವುದೇ ಜಿಲ್ಲೆಯ ನಿವಾಸಿ ಆಗಿದ್ದರೂ ಅರ್ಜಿ ಸಲ್ಲಿಸಬಹುದು. ಹೊರರಾಜ್ಯದ ನಿವಾಸಿ ಆಗಿದ್ದಲ್ಲಿ ಈ ಯೋಜನೆ ಅನ್ವಯ ಆಗುವುದಿಲ್ಲ.
- ಅರ್ಜಿ ಸಲ್ಲಿಸಲು ಕನಿಷ್ಟ 21 ವರ್ಷ ಹಾಗೂ ಗರಿಷ್ಠ 45 ವರ್ಷ ಆಗಿರಬೇಕು.
- ಇದಕ್ಕೂ ಮೊದಲು ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ವಾಹನ ಖರೀದಿಸಲು ಸಹಾಯಧನ ಪಡೆದಿರಬಾರದು.
- ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಆಧಾರ್ ಲಿಂಕಿಂಗ್ ಖಾತೆಯನ್ನು ಹೊಂದಿರಬೇಕು.
- ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಅರ್ಜಿ ಹಾಕಲು ಅರ್ಹರು.
- ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು.
- ಮಂಗಳಮುಖಿಯಾರೂ ಅರ್ಜಿ ಸಲ್ಲಿಸಬಹುದಾಗಿದೆ.
- ಸ್ವಯಂ ಟ್ಯಾಕ್ಸಿ ಚಾಲನೆ (Yellow Board) ಉದ್ದೇಶಕ್ಕೆ ಮಾತ್ರ ಅರ್ಜಿ ಹಾಕಬಹುದು.
- ಯಾವುದಾದರೂ ಕಂಪನಿ ಅಥವಾ ಸರ್ಕಾರಿ ಉದ್ಯೋಗ ಹೊಂದಿದ್ದಾರೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅರ್ಜಿದಾರ ನಿರುದ್ಯೋಗಿ ಆಗಿರಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆ:-
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ಕರ್ನಾಟಕದ ನಿವಾಸಿ ಎಂಬ ದಾಖಲೆ (ಆಧಾರ್ ಕಾರ್ಡ್, ರೇಶನ್ ಕಾರ್ಡ್, ಎಲೆಕ್ಷನ್ ಕಾರ್ಡ್)
- ಪಾಸ್ ಪೋರ್ಟ್ ಸೈಜ್ ಫೋಟೋ.
- ನಿರುದ್ಯೋಗಿ ಎಂಬ ಸ್ವಯಂ ಘೋಷಿತ ಪ್ರಮಾಣಪತ್ರ.
- ಬ್ಯಾಂಕ್ ಖಾತೆಯ ವಿವರ.
ಇದನ್ನೂ ಓದಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ರೈಲ್ವೆ ನಿಲ್ದಾಣದಿಂದ ಅಯ್ಯೋಧ್ಯೆಗೆ ತೆರಳುವ ರೈಲುಗಳ ವಿವರ ಇಲ್ಲಿದೆ ನೋಡಿ
ಇದನ್ನೂ ಓದಿ: 108MP ಕ್ಯಾಮೆರಾವನ್ನು ಒಳಗೊಂಡಿರುವ Tecno ನ ಹೊಸ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕೇಳಿದರೆ ನೀವು ಆಶ್ಚರ್ಯಚಕಿತರಾಗುವಿರಿ.