Indian Post Recruitment 2023: ಭಾರತೀಯ ಅಂಚೆ ಇಲಾಖೆಯಿಂದ, ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಹೌದು ಕೇಂದ್ರ ಸರ್ಕಾರದ ಅಡಿಯಲ್ಲಿ ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಭರ್ತಿ ಮಾಡುವ ಸಲುವಾಗಿ ಅರ್ಜಿಗಳನ್ನ ಕರೆದಿದ್ದಾರೆ. ಹಾಗಾದ್ರೆ ಯಾವ ಹುದ್ದೆಗಳಿಗೆ ಕೆಲಸ ಖಾಲಿಯಿದೆ ಏನೆಲ್ಲಾ ದಾಖಲಾತಿಗಳು ಬೇಕು, ಆನ್ಲೈನ್ ಮತ್ತು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸೋದೇಗೆ, ಖಾಲಿಯಿರುವ ಹುದ್ದೆಯ ಸಂಪೂರ್ಣ ವಿವರ ಏನು ಎಲ್ಲವನ್ನ ನೋಡೋಣ. ಇದಂತೂ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗಂತೂ ಸುವರ್ಣಾವಕಾಶ ಅಂತಲೇ ಹೇಳಬಹುದು. ಯಾಕಂದ್ರೆ ಬರೋಬ್ಬರಿ 12828ಹುದ್ದೆಗಳಿಗೆ ನೇಮಕಾತಿ ನಡೆಯಲ್ಲಿದ್ದು, ಎಲ್ಲ ತರಹದ ಅಭ್ಯರ್ಥಿಗಳಿಗೂ ಕೂಡ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿಗೆ ಇದೆ. ಹಾಗಾದ್ರೆ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಕೆಲಸಗಳ ವಿವರವನ್ನ ನೋಡೋಣ ಬನ್ನಿ.
ಮೊದಲಿಗೆ ಖಾಲಿ ಇರುವ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯಸ್ಸಿನ ಮಿತಿ,ಅರ್ಜಿ ಶುಲ್ಕದ ವಿವರ , ಅಗತ್ಯ ದಾಖಲಾತಿಗಳು, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಪ್ರತಿಯೊಂದನ್ನ ನೋಡೋಣ..
- ಇಲಾಖೆ : ಭಾರತೀಯ ಅಂಚೆ ಇಲಾಖೆ
- ಹುದ್ದೆಯ ವಿವರ : ಗ್ರಾಮೀಣ ಡಾಕ್ ಸೇವಕ್ ಹುದ್ದೆ
- ಒಟ್ಟು ಖಾಲಿಯಿರುವ ಹುದ್ದೆಗಳು ಸಂಖ್ಯೆ : 12828
- ಸಂಬಳ : 12000 – 29380
- ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನ: 22-5-2023
- ಅರ್ಜಿ ಸಲ್ಲಿಕೆಗೆ ಕೊನೆ ದಿನ : 11-6-2023
- ವಿದ್ಯಾರ್ಹತೆ :10ನೇ ತರಗತಿ ಪಾಸ್
- ವಯೋಮಿತಿ :18 ರಿಂದ 40ವರ್ಷ
- ಎಸ್ಸಿ ಎಸ್ಟಿ ಸಮುದಾಯಕ್ಕೆ ವಯೋಮಿತಿಯಲ್ಲಿ 5ವರ್ಷ ಸಡಿಲಿಕೆ
- 2ಎ,2ಬಿ ಮತ್ತು 3ಎ,3ಬಿ ಅಭ್ಯರ್ಥಿಗಳಿಗೆ 3ವರ್ಷ
- ಹಾಗೂ ಅಂಗವಿಕಲರಿಗೆ 10ವರ್ಷಗಳ ಸಡಿಲಿಕೆಯನ್ನ ನೀಡಲಾಗಿದೆ.
- ಅರ್ಜಿ ಶುಲ್ಕ :ಎಸ್ಸಿ ಎಸ್ಟಿ, ಅಂಗವಿಕಲರು ಮತ್ತು ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ, ಬಾಕಿ ಉಳಿದಂತೆ ಎಲ್ಲ ವರ್ಗದವರಿಗೆ 100ರೂಪಾಯಿ ಅರ್ಜಿ ಶುಲ್ಕ ವಿಧಿಸಲಾಗಿದೆ.
- ಬೇಕಾಗುವ ಅಗತ್ಯ ದಾಖಲಾತಿಗಳು: SSLC ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ, ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ, ಸಹಿ. ಇನ್ನು ಅಂಗ ವೈಕಲ್ಯ ಇದ್ದವರು ಅಂಗ ವೈಕಲ್ಯ ಪ್ರಮಾಣ ಪತ್ರ ನೀಡಬೇಕು.
- ಆಯ್ಕೆ ಮಾಡುವ ವಿಧಾನ: ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಿ ,ದಾಖಲೆಗಳ ಪರಿಶೀಲನೆ ನಡಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: ದುಬಾರಿಯಾಗಲಿವೆ ಎಲೆಕ್ಟ್ರಿಕಲ್ ವೆಹಿಕಲ್! ಜೂನ್ ನಿಂದಲೇ ಕಡಿತಾವಾಗಲಿದೆ ಸಬ್ಸಿಡಿ
ಅರ್ಜಿ ಸಲ್ಲಿಸುವುದು ಹೇಗೆ
ಮೊದಲಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂಥವರು ಸರಿಯಾದ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಐಡೆಂಟಿಟಿ ಪ್ರೂಫ್ ಅಂಕಪಟ್ಟಿ ಬಯೋಡೇಟಾ ಅಂದ್ರೆ ನಿಮ್ಮ ರೆಸುಮ್(Resum), ನಿಮ್ಮ ವಿದ್ಯಾರ್ಹತೆಯ ಡಿಟೇಲ್ಸ್ ಅಂದ್ರೆ ನೀವು ಏನು ಓದಿದಿರೋ ಅದರ ಎಲ್ಲಾ ಅಂಕಪಟ್ಟಿಗಳು ಮೊದಲು ಬೇರೆ ಎಲ್ಲಾದ್ರೂ ನೀವು ಕೆಲಸ ಮಾಡಿದ್ರೆ ಅದರ ಎಕ್ಸ್ಪೀರಿಯನ್ಸ್ ಲೆಟರ್ ಇವೆಲ್ಲವನ್ನೂ ಕೂಡ ನೀವು ಸ್ಕ್ಯಾನ್ ಮಾಡಿ ಮೊದಲಿಗೆ ಇಟ್ಟುಕೊಳ್ಳಬೇಕಾಗುತ್ತೆ. ನಂತರ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಗ್ರಾಮೀಣ ಡಾಕ್ ಸೇವಕ ಈ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಒಂದು ಆನ್ಲೈನ್ ಪೇಜ್ ತೆರೆದುಕೊಳ್ಳುತ್ತದೆ ಈಗ ಇದರಲ್ಲಿ ಕೇಳಿರತಕ್ಕಂತ ಎಲ್ಲ ದಾಖಲೆಗಳನ್ನು ವಿವರವಾಗಿ ನೀಡಬೇಕಾಗುತ್ತದೆ ಅಂದ್ರೆ ಈ ಹಿಂದೆ ನಾನು ಮೊದಲೇ ಹೇಳಿದಂತೆ ಬೇಕು ಅಂತ ಹೇಳಿದ್ನಲ್ಲ ಅದೆಲ್ಲವನ್ನ ಸ್ಕ್ಯಾನ್ ಮಾಡಿ ಇಟ್ಕೊಂಡಿರ್ತೀರಲ್ಲ ಅದನ್ನು ನೀವು ಇಲ್ಲಿ ಅಪ್ಲೋಡ್ ಮಾಡಬೇಕಾಗುತ್ತೆ ನಿಮ್ಮ ವರ್ಗಕ್ಕೆ ಅನುಗುಣವಾಗಿ ಅಂದ್ರೆ ನೀವು ಎಸ್ ಸಿ ಎಸ್ ಟಿ ನ ಅಥವಾ ಅಂಗವೈಕಲ್ಯ ಇರೋರ ಅಥವಾ ಮಹಿಳೆಯರ? ಇದರ ಆಧಾರದ ಮೇಲೆ ನೀವು ನಿಮ್ಮ ಫೀಸನ್ನು ಪೇ ಮಾಡಬೇಕಾಗುತ್ತೆ ಇದೆಲ್ಲಾ ಆದ ನಂತರ ಲಾಸ್ಟ ಅಲ್ಲಿ ನಿಮಗೆ ಸಬ್ಮಿಟ್ ಅನ್ನೋ ಒಂದು ಬಟನ್ ಇರುತ್ತೆ ಅಂದ್ರೆ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ನೀವು ಈ ಒಂದು ಹುದ್ದೆಗೆ ಅಪ್ಲಿಕೇಶನ್ ಹಾಕಿದ್ದು ಸಂಪೂರ್ಣವಾಗುತ್ತೆ ನಂತರ ನೀವು ಅಪ್ಲಿಕೇಶನ್ ಹಾಕಿದ್ದಿರಾ ಅನ್ನೋದಕ್ಕೆ ಒಂದು ಪ್ರೂಫ್ ಬೇಕಲ್ವಾ, ಸ್ವೀಕೃತಿ ಪತ್ರವನ್ನು ಕೊಡುತ್ತಾರೆ ಅಥವಾ ನಿಮ್ಮ ಅಪ್ಲಿಕೇಶನ್ ಐಡಿ ಅಥವಾ ಅಪ್ಲಿಕೇಶನ್ ನಂಬರ್ ಅನ್ನು ಕೊಡುತ್ತಾರೆ ಅದನ್ನು ನೀವು ಪ್ರಿಂಟ್ ಔಟ್ ತೆಗೆದುಕೊಂಡು ಇಟ್ಟುಕೊಂಡಿರಬೇಕಾಗುತ್ತದೆ.
ಇದಿಷ್ಟು ಅಂಚೆ ಇಲಾಖೆಯಲ್ಲಿ(Indian Post Recruitment 2023) ಖಾಲಿಯಿರುವ ಹುದ್ದೆಗಳ ವಿವರ. ನೀವು ಕೂಡ ಅರ್ಜಿಯನ್ನ ಸಲ್ಲಿಸಬೇಕು ಅಂದ್ರೆ https://indiapostgdsonline.gov.in/ ಈ ಒಂದು ವೆಬ್ಸೈಟ್ ಗೆ ಹೋಗಿ ಅಗತ್ಯ ದಾಖಲೆಗಳನ್ನ ಸಲ್ಲಿಸಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ. ಅಂಗಡಿ ಮುಂದೆ ಕ್ಯೂ ನಿಂತ ಜನ? ಹೀಗಿದೆ ಇಂದಿನ ದರ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram