Indian Railway New Night Rules: ಟ್ರೈನ್ ನಲ್ಲಿ ರಾತ್ರಿ ಸಮಯ ಜರ್ನಿ ಮಾಡುವವರಿಗೆ, ರೈಲ್ವೆ ಇಲಾಖೆಯು ಹೊಸ ನಿಯಮಗಳನ್ನು ರೂಪಿಸಿದೆ

Indian Railway New Night Rules: ಬೆಂಗಳೂರಿನಿಂದ ಅಥವಾ ಬೇರೆ ಸ್ಥಳಗಳಿಂದ ದೂರದ ಸ್ಥಳಕ್ಕೆ ಪ್ರಯಾಣ ಮಾಡುವವರು ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ ಹಗಲಿನ ವೇಳೆ ದೂರ ಪ್ರಯಾಣ ಮಾಡುವುದರಿಂದ ಹೆಚ್ಚು ಸಮಯ ಬೇಕಾಗುತ್ತೆ ಅಥವಾ ಇಡೀ ದಿನ ಪ್ರಯಾಣದಲ್ಲಿ ಕಳೆಯುತ್ತದೆ ಎಂದು ಹೆಚ್ಚು ಜನರು ನೈಟ್ ಜರ್ನಿಯನ್ನು ಇಷ್ಟಪಡುತ್ತಾರೆ ಇನ್ನು ನೀವು ಸಹ ಹೆಚ್ಚಾಗಿ ರಾತ್ರಿ ಸಮಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಇಲ್ಲಿ ನಿಮಗಾಗಿ ಮುಖ್ಯ ವಿಷಯ ಇದೆ ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷಿತಗಾಗಿ ಕೆಲವು ಹೊಸ ನಿಯಮಗಳನ್ನು ತಂದಿದೆ ಹೌದು ಈ ನಿಯಮವು ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ತಪ್ಪಿಸಲು ರೈಲ್ವೆ ಇಲಾಖೆಯು ಈ ಹೊಸ ನಿಯಮಗಳನ್ನು ರೂಪಿಸಿದೆ ಈ ನಿಯಮಗಳನ್ನು ಪಾಲಿಸದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

WhatsApp Group Join Now
Telegram Group Join Now

ರೈಲ್ವೆ ಇಲಾಖೆ ತಂದ ಹೊಸ ನಿಯಮಗಳು

ರಾತ್ರಿ ವೇಳೆ ಪ್ರಯಾಣಿಸುವ ಪ್ರಯಾಣಿಕರು ರಾತ್ರಿ 10 ಗಂಟೆಯ ಬಳಿಕ ತಮ್ಮ ಮೊಬೈಲ್ ನಲ್ಲಿ ಇಯರ್ ಫೋನ್ ಇಲ್ಲದೆ ಜೋರಾಗಿ ಸ್ಪೀಕರ್ ಆನ್ ಮಾಡಿ ಹಾಡುಗಳನ್ನು ಕೇಳಬಾರದು, ಕರೆ ಮಾಡಿ ಜೋರಾಗಿ ಮಾತನಾಡಬಾರದು, ಜಗಳ ಅಥವಾ ಗಲಾಟೆ ಮಾಡಬಾರದು, 10 ಗಂಟೆಯ ಬಳಿಕ ರೈಲಿನಲ್ಲಿ ಇರುವ ಲೈಟ್ ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಲೈಟ್ ಗಳನ್ನು ಆನ್ ಮಾಡಬಾರದು, ರೈಲಿನಲ್ಲಿ ಸಂಚರಿಸುವ ಇತರ ಪ್ರಯಾಣಿಕರ ನಿದ್ದೆಗೆ ಭಂಗ ಆಗಬಾರದು, ಇದಲ್ಲದೆ ಧೂಮಪಾನ ಮಾಡುವುದು ಅಥವಾ ಮದ್ಯಪಾನ ಮಾಡುವುದು ಅಥವಾ ಇತರ ಪ್ರಯಾಣಿಕರ ಜೊತೆ ಜಗಳ ಕಿರಿಕಿರಿ ಇವುಗಳನ್ನು ಮಾಡಬಾರದು, ಇನ್ನು ಈ ಹೊಸ ನಿಯಮಗಳನ್ನು ಉಲ್ಲಂಘನೆ ಆದರೆ ಅಧಿಕಾರಿಗಳು ಅವರ ವಿರುದ್ಧ ಶಿಸ್ತು ಕ್ರಮಗಳನ್ನು ವಿಧಿಸುತ್ತಾರೆ.

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಇನ್ನೊಂದು ಹೊಸ ರೂಲ್ಸ್ ಅನ್ನು ತಂದಿದ್ದು. ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಮಧ್ಯದ ಬರ್ತ್(Middle Birth) ಅನ್ನು ತೆರೆಯಲು ವ್ಯವಸ್ಥೆ ಮಾಡಿದೆ ಅಂದರೆ ಮಧ್ಯದ ಬರ್ತ್ (Middle Birth) ಅನ್ನು ಬುಕ್ಕಿಂಗ್ ಮಾಡಿದ ಪ್ರಯಾಣಿಕರು ಆ ಬರ್ತನ್ನು ತೆರೆದು ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಅದರಲ್ಲಿ ಮಲಗಬಹುದು ಮುಂಜಾನೆ 6 ರಿಂದ ರಾತ್ರಿ 10ರವರೆಗೆ ಮಧ್ಯದ ಬರ್ತ್(Middle Birth) ಅನ್ನು ಮುಚ್ಚಬಹುದು ಹಾಗೂ ಕೆಳಗಿನ ಬರ್ತ್(Lower Birth) ನಲ್ಲಿ ಕುಳಿತುಕೊಳ್ಳಬಹುದು.

ಇದನ್ನೂ ಓದಿ: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ರಣ ಭಯಂಕರ ಮಳೆ.

ರಾತ್ರಿ 10 ಗಂಟೆಯ ಬಳಿಕ ರೈಲುಗಳಲ್ಲಿ ಯಾವುದೇ ಆನ್ ಲೈನ್ ಫುಡ್ ಡೆಲಿವರಿ ಇರುವುದಿಲ್ಲ. ನೀವು ಇ- ಕೇಟರಿಂಗ್ ನಲ್ಲಿ ಮೊದಲೇ (Pre-order) ಮಾಡಬಹುದು ಇನ್ನು ಈ ಎಲ್ಲಾ ನಿಯಮಗಳು ಕೂಡ ಪ್ರಯಾಣಿಕರ ಸುರಕ್ಷತೆಗೆ ಮತ್ತು ಯಾರಿಗೂ ಅನಾನುಕೂಲವಾಗಬಾರದು ಎಂದು ರೈಲ್ವೆ ಇಲಾಖೆಯು ಈ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ರೈಲ್ವೆ ಇಲಾಖೆಯು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Tv Actors Who Died At Young Age: ಚಿಕ್ಕ ವಯಸ್ಸಿಗೆ ಮರಣ ಹೊಂದಿದ ಕನ್ನಡದ ಕಿರುತೆರೆ ನಟ ನಟಿಯರು!

ಇದನ್ನೂ ಓದಿ: ಛೋಟಾ ಚಾಂಪಿಯನ್ ಶೋ ಗೆ ಟೈಟಲ್ ಹಾಡನ್ನು ಹೇಳಿದ ದಿಯಾ ಹೆಗ್ಡೆ, ಶೋ ಯಾವಾಗಿನಿಂದ ಶುರುವಾಗುತ್ತೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram