ರೈಲ್ವೆ ಪ್ರಯಾಣ ಮಾಡುವಾಗ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ! ಬೀಳುತ್ತೆ ದಂಡ

Indian Railway Penalty

ದೇಶದಲ್ಲಿ ಅತಿ ಹೆಚ್ಚು ಜನರು ಪ್ರಯಾಣಿಸುವ ಸಾರಿಗೆ ಎಂದರೆ ಅದು ರೈಲು. ಸಾಮಾನ್ಯ ಬಡವರ ಕೈಗೆ ಎಟುಕುವ ಬೆಲೆಯಲ್ಲಿ ರೈಲ್ವೆ ಟಿಕೆಟ್ ಇದ್ದರೂ ಸಹ ಹಲವಾರು ಕೆಲವು ತಪ್ಪುಗಳನ್ನು ಮಾಡಿ ಹೆಚ್ಚಿನ ದಂಡವನ್ನು ನೀಡಬೇಕಾಗುತ್ತದೆ. ಹಾಗಾದರೆ ರೈಲ್ವೆ ಪ್ರಯಾಣಿಕರು ಯಾವ ತಪ್ಪು ಮಾಡಿದರೆ ದಂಡ ನೀಡಬೇಕಾಗುತ್ತದೆ ಎಂಬ ಮಾಹಿತಿ ಇಲ್ಲದೆ.

WhatsApp Group Join Now
Telegram Group Join Now

ರೈಲ್ವೆ ಪ್ರಯಾಣ ಮಾಡುವಾಗ ಈ ತಪ್ಪು ಮಾಡಬಾರದು.

  1. ಟಿಕೆಟ್ ಇಲ್ಲದೆ ಪ್ರಯಾಣಿಸಬಾರದು :- ರೈಲ್ವೆಯಲ್ಲಿ ಪ್ರಯಾಣ ಮಾಡುವಾಗ ನೀವು ಅನಧಿಕೃತವಾಗಿ ಪ್ರಯಾಣ ಮಾಡುವುದನ್ನು ತಪ್ಪಿಸಲು ರೈಲ್ವೆ ಇಲಾಖೆಯು ಬ್ಯಾಟ್‌ಮ್ಯಾನ್ 2.0″ ಟಿಕೆಟ್ ತಪಾಸಣೆ ಅಭಿಯಾನವನ್ನು ಆರಂಭಿಸಿದೆ. ಇದರಿಂದ ನೀವು ರೈಲ್ವೆಯಲ್ಲಿ ಪ್ರಯಾಣಿಸುವಾಗ ರೈಲ್ವೆ ಟಿಕೆಟ್ ಪಡೆಯದೆ ಪ್ರಯಾಣಿಸಿದರೆ ಹೆಚ್ಚಿನ ದಂಡ ಕಟ್ಟಬೇಕಾಗುತ್ತದೆ.
  2. ಬದಲಿ ಟಿಕೆಟ್ ನಿಂದ ಪ್ರಯಾಣಿಸಬಾರದು :- ನಿಮ್ಮ ಹತ್ತಿರದ ಸಂಬಂಧಿ ಅಥವಾ ನಿಮ್ಮ ಸ್ನೇಹಿತರ ಟಿಕೆಟ್ ನಿಂದ ಪ್ರಯಾಣಿಸಬಾರದು. ನೀವು ಟಿಟಿ ಬಂದಾಗ ನೀವು ಸಿಕ್ಕಿ ಬಿದ್ದಲ್ಲಿ ನೀವು ಹೆಚ್ಚಿನ ಮೊತ್ತದ ದಂಡವನ್ನು ಕಟ್ಟಬೇಕಾಗುತ್ತದೆ.

ಎರಡೇ ದಿನದಲ್ಲಿ 3.40 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ :- ಅನಧಿಕೃತವಾಗಿ ಟಿಕೆಟ್ ಇಲ್ಲದೆಯೇ ರಾತ್ರಿ ಸಮಯದಲ್ಲಿ ಪ್ರಯಾಣ ಮಾಡುವುದನ್ನು ತಡೆಯಲು ರೈಲ್ವೆ ಇಲಾಖೆಯು “ಬ್ಯಾಟ್‌ಮ್ಯಾನ್ 2.0” ಎಂಬ ಹೆಸರಿನಲ್ಲಿ ಟಿಕೆಟ್ ತಪಾಸಣೆ ಅಭಿಯಾನವನ್ನು ಆರಂಭಿಸಿತ್ತು. ಅಭಿಯಾನದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವುದನ್ನು ಅಥವಾ ಉನ್ನತ ದರ್ಜೆಯಲ್ಲಿ ಪ್ರಯಾಣಿಸುವುದು ಬೆಳಕಿಗೆ ಬಂದಿದೆ. ಅಭಿಯಾನದಲ್ಲಿ ಕೇವಲ ಎರಡೇ ಎರಡು ದಿನದಲ್ಲಿ ಮಧ್ಯರಾತ್ರಿಯಲ್ಲಿ ವೇಳೆಯಲ್ಲಿ ಬ್ಯಾಟ್‌ಮ್ಯಾನ್ ತಂಡವು 3.40 ಲಕ್ಷ ರೂ.ಗಳ ದಂಡ ಸಂಗ್ರಹ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏಪ್ರಿಲ್ 2024 ರಲ್ಲಿ ಸಂಗ್ರಹಿಸಿರುವ ಹಣ ಎಷ್ಟು?

ಏಪ್ರಿಲ್ 2024 ರಲ್ಲಿ ನಡೆಸಿದ ಟಿಕೆಟ್ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಬರೋಬ್ಬರಿ 20.84 ರೂಪಾಯಿ ಹಣ ದಂಡದ ರೂಪದಲ್ಲಿ ಸಂಗ್ರಹ ಆಗಿದೆ. ವಸೂಲಿ ಮಾಡಿದ ಹಣದಲ್ಲಿ ಒಟ್ಟು 5.57 ಕೋಟಿ ರೂಪಾಯಿ ಹಣವೂ ಮುಂಬೈ ಉಪನಗರ ವಿಭಾಗದಲ್ಲಿ ಸಂಗ್ರಹ ಆಗಿದೆ. ಒಟ್ಟು 98 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿರುವುದು ಅಚ್ಚರಿಯಾಗಿದೆ.

AC ಕೋಚ್ ನಲ್ಲಿ 4,000 ಪ್ರಕರಣ ದಾಖಲು :- ಏಪ್ರಿಲ್ 2024 ರಲ್ಲಿ AC ಕೋಚ್ ನಲ್ಲಿ ಬರೋಬ್ಬರಿ 4000 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಇದರಿಂದ ಸಂಗ್ರಹ ಆಗಿರುವ ಹಣ 13.71 ಲಕ್ಷ ರೂಪಾಯಿ ಆಗಿದೆ.

ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಕಾನೂನು ಬಾಹಿರವಾಗಿದೆ :-

ರೈಲು ಪ್ರಯಾಣ ಮಾಡುವಾಗ ಯಾವುದೇ ಕಾರಣದಿಂದ ಪ್ರಯಾಣಿಕರು ಟಿಕೆಟ್ ಇಲ್ಲದೆಯೇ ಪ್ರಯಾಣಿಸುವುದು ದಂಡ ಕಟ್ಟುವ ಜೊತೆಗೆ ಕಾನೂನು ಬಾಹಿರವಾಗಿದೆ. ನಿಮಗೆ ದಂಡ ವಿಧಿಸುವ ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈಲಿನಲ್ಲಿ ಪ್ರಯಾಣ ಮಾಡುವಾಗ ರೈಲ್ವೆ ಟಿಕೆಟ್ ಪಡೆಯದೆ ಪ್ರಯಾಣ ಬೆಳೆಸಬಾರದು ನೀವು ರೈಲ್ವೆ ಪ್ರಯಾಣ ಮಾಡುವಾಗ ನೀವು ಯಾವ ಸ್ಟೇಷನ್ ಇಂದ ಪ್ರಯಾಣಿಸುತ್ತಿರೋ ಅದೇ ಸ್ಟೇಷನ್ ಇಂದ ರೈಲ್ವೆ ಟಿಕೆಟ್ ಪಡೆಯಬೇಕು ಹಾಗೂ ನೀವು ತಲುಪುವ ಸ್ಥಳಕ್ಕೆ ಟಿಕೆಟ್ ಪಡೆಯಬೇಕು. ಯಾವುದೇ ಕಾರಣಕ್ಕೂ ನೀವು ಸಾಮಾನ್ಯ ಬೋಗಿಯಲ್ಲಿ ಟಿಕೆಟ್ ಪಡೆದು ac ಕೋಚ್ ನಲ್ಲಿ ಪ್ರಯಾಣ ಬೆಳೆಸಬಾರದು. ನೀವು ಯಾವ ಬೋಗಿಯಲ್ಲಿ ಟಿಕೆಟ್ ಪಡೆದುಕೊಂಡಿರುತ್ತಿರೋ ಅದೇ ಬೋಗಿಯಲ್ಲಿ ನೀವು ಪ್ರಯಾಣಿಸಬೇಕು ಹಾಗೂ ನಿಮ್ಮ ಸ್ನೇಹಿತರ ಟಿಕೆಟ್ ಪಡೆದು ಪ್ರಯಾಣಿಸುವುದು ಸಹ ಕಾನೂನು ಪ್ರಕಾರ ಅಪರಾಧ ಆಗಿದೆ.

ಇದನ್ನೂ ಓದಿ: ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ಹೇಗೆ ಬೆಳೆಸಬಹುದು?

ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಸ್ಕೀಮ್ ನಲ್ಲಿ 5 ವರ್ಷ ಹೂಡಿಕೆ ಮಾಡಿ 15 ಲಕ್ಷ ರೂಪಾಯಿ ಗಳಿಸಿರಿ