ಸರಕಾರಿ ಕೆಲಸ ಸಿಗಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ ನಾನು ಓದಿರುವ ಓದಿಗೆ ಸರಕಾರಿ ಕೆಲಸ ಸಿಗುತ್ತದೆಯೇ ಎಂಬ ಸಂಶಯವೂ ಇರುತ್ತದೆ. ಈಗ ರೈಲ್ವೆ ಇಲಾಖೆ 1202 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ :- ರೈಲ್ವೆ ಇಲಾಖೆಯು 827 ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳು ಹಾಗೂ 375 ಟ್ರೈನ್ಸ್ ಮ್ಯಾನೇಜರ್ (ಗೂಡ್ಸ್ ಗಾರ್ಡ್) ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ.
ವಿದ್ಯಾರ್ಹತೆ :-
- ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ವಿದ್ಯಾರ್ಹತೆ :- ಈ ಹುದ್ದೆಗೆ ಅಭ್ಯರ್ಥಿಕನಿಷ್ಠ SSLC ಪಾಸ್ ಆಗಿರಬೇಕು. ಜೊತೆಗೆ ಐಟಿಐ ಕೋರ್ಸ್ ಮುಗಿಸಿರಬೇಕು. ಇಲ್ಲವೇ ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೋಮಾ ಪಾಸ್ ಆಗಿರಬೇಕು.
- ಟ್ರೈನ್ಸ್ ಮ್ಯಾನೇಜರ್ ಹುದ್ದೆಗೆ ವಿದ್ಯಾರ್ಹತೆ :- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಪದವಿ ಪಾಸ್ ಆಗಿರಬೇಕು.
ವಯಸ್ಸಿನ ಮಿತಿ :- ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 42 ಆಗಿರುತ್ತದೆ. ಸರಕಾರಿ ಮೀಸಲಾತಿ ನಿಯಮದ ಪ್ರಕಾರ ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರುಷಗಳ ಕಾಲ ವಯಸ್ಸಿನ ಸಡಿಲಿಕೆ ಇರುತ್ತದೆ ಹಾಗೂ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯಸ್ಸಿನ ಸಡಿಲಿಕೆ ಇರುತ್ತದೆ.
ಶುಲ್ಕದ ವಿವರ :- ರೈಲ್ವೆ ಇಲಾಖೆ ಕರೆದಿರುವ ಅಸಿಸ್ಟಂಟ್ ಲೋಕೋ ಪೈಲಟ್ ಹಾಗೂ ಟ್ರೈನ್ಸ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಯಾವುದೇ ಕಾರಣಕ್ಕೂ ಅರ್ಜಿ ಶುಲ್ಕವನ್ನು ಪಾವತಿ ಮಾಡಬಾರದು ಎಂದು ಇಲಾಖೆ ತಿಳಿಸಿದೆ.
ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ನಂತರ ಅಭ್ಯರ್ಥಿಗಳ ದಾಖಲಾತಿ ಎಂದರೆ ಮಾರ್ಕ್ಸ್ ಕಾರ್ಡ್ ಹಾಗೂ ಇತರ ಡಾಕ್ಯುಮೆಂಟ್ ಗಳ ಪರಿಶೀಲನೆ ಮಾಡಲಾಗುತ್ತದೆ. ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
ಸಂಬಳದ ಮಾಹಿತಿ :- ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಮಾಸಿಕ ವೇತನವೂ 5,200 ರೂಪಾಯಿಯಿಂದ 20,200 ರೂಪಾಯಿ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಂಧನ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶಗಳು! ಈ ದಿನದೊಳಗಾಗಿ ಅರ್ಜಿ ಸಲ್ಲಿಸಿ!
ಅರ್ಜಿ ಸಲ್ಲಿಸುವ ವಿಧಾನ :-
- ಸ್ಟೆಪ್ 1:- ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಸ್ಟೆಪ್ 2:- ನಂತರ ನೀವು ಅರ್ಜಿ ಸಲ್ಲಿಸಬೇಕಾದ ಹುದ್ದೆಗಳ ಆಯ್ಕೆ ಮಾಡಬೇಕು. ಅಂದರೆ South Eastern Railway Trains Manager ಅಥವಾ South Eastern Railway Assistant Loco Pilot ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 3:- apply now ಬಟನ್ ಕ್ಲಿಕ್ ಮಾಡಬೇಕು.
- ಸ್ಟೆಪ್ 4:- ನಿಮ್ಮ ಮೇಲ್ ವಿಳಾಸ ಹಾಗೂ ಪಾಸ್ವರ್ಡ್ ಹಾಕಿ ಮೊದಲು ಲಾಗಿನ್ ಆಗಬೇಕು.
- ಸ್ಟೆಪ್ 5:- ಅರ್ಜಿ ನಮೂನೆಯಲ್ಲಿ ಕೇಳಿದ ನಿಮ್ಮ ವಯಕ್ತಿಕ ಮಾಹಿತಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ನಿಖರವಾಗಿ ಭರ್ತಿ ಮಾಡಬೇಕು.
- ಸ್ಟೆಪ್ 6:- ಅರ್ಜಿ ನಮೂನೆಯಲ್ಲಿ ಕೇಳಿದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಸ್ಟೆಪ್ 7:- ಭರ್ತಿ ಮಾಡಿರುವ ಮಾಹಿತಿಗಳು ಸರಿಯಾಗಿ ಇವೆಯೇ ಎಂದು ಸಂಪೂರ್ಣವಾಗಿ ಪರಿಶೀಲನೆ ಮಾಡಿದ ನಂತರ submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.
ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯುಪಿಎಸ್‌ಸಿ ಬರೋಬ್ಬರಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ