ಅತಿ ಕಡಿಮೆ ದರದಲ್ಲಿ ಕೈಗೆಟುಕುವ ದರದಲ್ಲಿ ಇರುವ ರೈಲ್ವೆ ಪ್ರಯಾಣವನ್ನು ಎಲ್ಲರೂ ಇಷ್ಟ ಪಡುತ್ತಾರೆ. ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ನಿಯಮ ಇರುವಂತೆ ರೈಲ್ವೆ ಪ್ರಯಾಣದ ವೇಳೆಯೂ ಸಹ ಕೆಲವು ನಿಯಮಗಳನ್ನು ಅನುಸರಿಸಬೇಕು. ರೈಲ್ವೆ ಪ್ರಯಾಣ ವೇಳೆ ಪ್ರಯಾಣಿಕರು ಅನುಸರಿಸಲೇ ಬೇಕಾದ ನಿಯಮಗಳ ಬಗ್ಗೆ ತಿಳಿಯೋಣ.
ರೈಲ್ವೆ ಪ್ರಯಾಣದ ವೇಳೆ ಈ ನಿಯಮಗಳನ್ನು ಅನುಸರಿಸಿ:-
1) ನೀವು ರೈಲ್ವೆ ಪ್ರಯಾಣ ಮಾಡುವಾಗ ಯಾವುದೇ ಕಾರಣಕ್ಕೂ ನಿಮ್ಮ ಜೊತೆಗೆ ಪ್ರಯಾಣ ಮಾಡುವವರಿಗೆ ನಿಮ್ಮಿಂದ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಿ. ಜೋರಾಗಿ ಫೋನ್ ನಲ್ಲಿ ಮಾತನಾಡುವುದು ಇಲ್ಲ ನಿಮ್ಮ ಜೊತೆಗಾರರೊಂದಿಗೆ ಹರಟುತ್ತಾ ಇನ್ನಿತರ ಪ್ರಯಾಣಿಕರಿಗೆ ತೊಂದರೆ ಮಾಡುವುದು, ಮೊಬೈಲ್ ಫೋನ್ ನಲ್ಲಿ ದೊಡ್ದಕ್ಕೆ ಹಾಡು ಹಚ್ಚಿಕೊಂಡು ಹಾಡು ಕೇಳುವುದು ಮಾಡಬಾರದು. ಹೀಗೆ ಮಾಡಿದರೆ ನೀವು ದಂಡ ವಿಧಿಸಬೇಕಾಗಬಹುದು ಇಲ್ಲವೇ ನಿಮ್ಮ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬಹುದು.
2) ರೈಲ್ವೆ ಪ್ರಯಾಣದಲ್ಲಿ ಒಬ್ಬ ವ್ಯಕ್ತಿ ಇಂತಿಷ್ಟು kg ವಸ್ತುಗಳನ್ನು ಕೊಂಡೊಯ್ಯಬಹುದು ಎಂಬ ನಿಯಮ ಇದೆ. ಒಬ್ಬ ವ್ಯಕ್ತಿ ಗರಿಷ್ಠ 40 kg ವಸ್ತುವನ್ನು ರೈಲ್ವೆ ಪ್ರಯಾಣದ ಬೆಲೆ ಕೊಂಡೊಯ್ಯಬಹುದು. ಇದಕ್ಕೂ ಹೆಚ್ಚಿನ ತೂಕದ ವಸ್ತುವನ್ನು (ಲಗೇಜ್ ) ಕೊಂಡಿಯೊಯ್ಯಲು ನೀವು ಹೆಚ್ಚಿನ ಹಣ ಪಾವತಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
3) ರೈಲ್ವೆ ಇಲಾಖೆಯ ನಿಯಮದ ಪ್ರಕಾರ ಎಲ್ಲಾ ವಸ್ತುಗಳನ್ನು ನೀವು ರೈಲ್ವೆ ಪ್ರಯಾಣ ಮಾಡುವಾಗ ಕೊಂಡೊಯ್ಯಲು ಸಾಧ್ಯವಿಲ್ಲ. ರೈಲ್ವೆ ಇಲಾಖೆ ರೂಪಿಸಿದ ನಿಯಮದ ಅನುಸರ ನಿಮ್ಮ ಬಟ್ಟೆ ಲಗೇಜ್, ಇಲ್ಲ ತರಕಾರಿ ಬೆಳೆಗಳು ಇಂತಹ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು. ಯಾವುದೇ ಸುಡುವ ವಸ್ತುಗಳು ಹಾಗೂ ಸ್ಫೋಟಕ ಬಸ್ತಿಗಳೆ ಹಾಗೂ ವಾಸನೆಯ ವಸ್ತುಗಳು ಜೊತೆಗೆ ಗ್ಯಾಸ್ ಸಿಲಿಂಡರ್ಗಳು ಮತ್ತು ಸಿಗರೇಟ್ ಮತ್ತು ಸ್ಟೌವ್ಗಳು ಇತ್ಯಾದಿ ವಸ್ತುಗಳನ್ನು ಕೊಂಡಿಯ್ಯಬಾರದು. ಒಂದು ವೇಳೆ ತೆಗೆದುಕೊಂಡು ಹೋದರೆ ನೀವು ದಂಡ ಪಾವತಿಸಬೇಕಾಗುತ್ತದೆ.
4) ರೈಲ್ವೆ ಯಲ್ಲಿ ಪ್ರಯಾಣ ಮಾಡುವಾಗ ನೀವು ನಿಮ್ಮ ಟಿಕೆಟ್ ಅನ್ನು ಜಾಗ್ರತೆಯಿಂದ ಇಟ್ಟುಕೊಳ್ಳಬೇಕು. ಯಾವುದೇ ಕಾರಣದಿಂದ ಟಿಕೆಟ್ ಕಳೆದುಕೊಂಡರೆ ದಂಡ ನೀಡಬೇಕು ಇಲ್ಲವೇ ಕಾನೂನು ಕ್ರಮ ಕೈಗೊಳ್ಳಲಾಗುವುದು.
5) ರೈಲ್ವೆ ಯಲ್ಲಿ ಪ್ರಯಾಣ ಮಾಡುವಾಗ ಬೇರೆಯವರ ಟಿಕೆಟ್ ನಲ್ಲಿ ಯಾವುದೇ ಕಾರಣಕ್ಕೂ ನೀವು ಪ್ರಯಾಣ ಮಾಡಬಾರದು. ನೀವು ಬೇರೆಯವರ ಟಿಕೆಟ್ ನಲ್ಲಿ ಪ್ರಯಾಣ ಮಾಡುವಾಗ ನೀವು ಒಮ್ಮೆ ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
6) ರಾತ್ರಿಯ ಪ್ರಯಾಣದ ವೇಳೆ ತಡರಾತ್ರಿಯ ವರೆಗೆ ಲೈಟ್ ಹಾಕಿಕೊಂಡು ಇರಬಾರದು ಇದು ಇತರ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ.
7) ನಿಮ್ಮ ಲಗೇಜಗಳನ್ನು ಕೊಂಡೊಯ್ಯುವಾಗ ನಿಮ್ಮ ಲಗೇಜ್ ಗೆ ನೀವೇ ಜವಾಬ್ದಾರರು ಅದಕ್ಕೆ ರೈಲ್ವೆ ಇಲಾಖೆ ಯಾವುದೇ ಜವಾಬ್ದಾರಿ ಹೊಂದಿರುವುದಿಲ್ಲ.
ಇದರ ಜೊತೆಗೆ ನೀವು ರೈಲ್ವೆ ಯಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಬಳಿ ಇರುವ ಮೊಬೈಲ್ ಮತ್ತು ಪರ್ಸ್ ಜೊತೆಗೆ ಯಾವುದೇ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ಗಮನ ಇರಲಿ ಹಾಗೂ ನಿಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ರೈಲು ಬಿಡುವು ಬೆಲೆಗಿಂತ ಕನಿಷ್ಠ 10 ನಿಮಿಷ ಮೊದಲು ನೀವು ರೈಲ್ವೆ ಪ್ರಯಾಣದಲ್ಲಿ ಇರುವುದು ಉತ್ತಮ. ಕೊನೆಯ ಕ್ಷಣದಲ್ಲಿ ರೈಲ್ವೆ ಹತ್ತುವ ಮಾಡಬಾರದು.
ಇದನ್ನೂ ಓದಿ: ಫಿಕ್ಸೆಡ್ ಡಿಪಾಸಿಟ್ ಗೆ ಹೆಚ್ಚಿನ ಬಡ್ಡಿದರ ನೀಡುವ 5 ಬ್ಯಾಂಕ್ ಗಳ ಬಗ್ಗೆ ಮಾಹಿತಿ ಇಲ್ಲಿದೆ