ಬೇಸಿಗೆ ರಜೆಯಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ರೈಲ್ವೆ ಇಲಾಖೆಯು ಯೋಜನೆ ರೂಪಿಸಿದೆ

Indian Railways

ಬೇಸಿಗೆಯಲ್ಲಿ ಮಕ್ಕಳಿಗೆ ರಜೆ ಇರುವುದರಿಂದ ಜನರು ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಬೆಳೆಸುವುದು ಸಾಮಾನ್ಯ. ಅದರಲ್ಲೂ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಜನರು ತೆರಳಲು ರೈಲು ಬಸ್ ಎಲ್ಲಾ ಟಿಕೆಟ್ ಗಳು ಬುಕ್ ಆಗಿ ಇರುತ್ತವೆ ಹಾಗಿದ್ದಾಗ ಪ್ರಯಾಣಿಕರಿಗೆ ಕೆಲವು ಸಲ ತಾವು ಅಂದುಕೊಂಡಂತೆ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ರೈಲ್ವೆ ಇಲಾಖೆಯು ಹೊಸದಾಗಿ ಜನರ ಬೇಡಿಕೆಯ ಅನುಗುಣವಾಗಿ ಹೆಚ್ಚುವರಿ ರೈಲು ಓಡಿಸಲು ತೀರ್ಮಾನಿಸಲಾಗಿದೆ.

WhatsApp Group Join Now
Telegram Group Join Now

ರೈಲುಗಳ ಬೇಡಿಕೆ ಹೆಚ್ಚಾಗಲು ಕಾರಣವೇನು?: ಕಳೆದ ವರ್ಷ ಗೋ ಫಸ್ಟ್ ಗ್ರೌಂಡಿಂಗ್ ಮತ್ತು ಪೈಲಟ್‌ಗಳ ಸಮಸ್ಯೆಯಿಂದಾಗಿ ವಿಮಾನ ಹಾರಾಟದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ವಿಮಾನದಲ್ಲಿ ಪ್ರಯಾಣ ಮಾಡುವ ಜನರ ಸಂಖ್ಯೆ ಹೆಚ್ಚಾಗಿದ್ದು ಹೆಚ್ಚಿನ ಬೇಡಿಕೆ ಇರುವುದರಿಂದ ಬೇಸಿಗೆಯಲ್ಲಿ ವಿಮಾನ ದರಗಳು ಗಗನಕ್ಕೇರಿವೆ. ಇದರಿಂದಾಗಿ ಹಲವರು ರೈಲು ಪ್ರಯಾಣ ಮಾಡಲು ಇಷ್ಟ ಪಡುತ್ತಾ ಇದ್ದಾರೆ. ಆದ್ದರಿಂದ ಜನರ ಬೇಡಿಕೆಯನ್ನು ಮನಗಂಡ ರೈಲ್ವೆ ಇಲಾಖೆಯು ಒಂದು ರೈಲುಗಳಲ್ಲಿ ಹೆಚ್ಚಿನ ಹೊರೆ ಬೀಳದಂತೆ ಮತ್ತು ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ಹೊಸದಗಿನ್ ಯೋಜನೆ ರೂಪಿಸಿದೆ. ಈ ಹೊಸ ಯೋಜನೆಯಿಂದ ನೀವು ಖಚಿತವಾದ ಟಿಕೆಟ್ ಪಡೆಯಲು ಸಾಧ್ಯವಾಗುತ್ತದೆ.

ರೈಲ್ವೆ ಇಲಾಖೆಯ ಯೋಜನೆ ಏನು?

ಬೇಸಿಗೆಯಲ್ಲಿ ಪ್ರಯಾಣದ ಬೇಡಿಕೆಯ ಪ್ರಮಾಣವು ಹೆಚ್ಚಾಗಿ ಇರುವ ಕಾರಣದಿಂದ ರೈಲ್ವೆ ಸಚಿವಾಲಯವು ಹೆಚ್ಚುವರಿಯಾಗಿ ಶೇಕಡಾ 43% ರಷ್ಟು ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆ ರೂಪಿಸಿದೆ. ರೈಲುಗಳ ಸಂಖ್ಯೆ ಹೆಚ್ಚು ಮಾಡುವುದರಿಂದ ಪ್ರಯಾಣಿಕರೂ ಅವರು ಬಯಸಿದ ಸ್ಥಳಗಳಿಗೆ ಅನುಕೂಲಕರವಾಗಿ ತಲುಪಲು ಸಹಾಯ ಆಗುತ್ತದೆ. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಮತ್ತು ಬೇಡಿಕೆ ಹೆಚ್ಚಾಗಿ ಇರುವುದರಿಂದ ಬೇಸಿಗೆ ಕಾಲದಲ್ಲಿ 9,111 ರೈಲುಗಳ ದಾಖಲೆಯನ್ನು ನಿರ್ವಹಿಸಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವ ಯಾವ ಮಾರ್ಗಗಳಿಗೆ ರೈಲ್ವೆ ಸಂಖ್ಯೆಯನ್ನು ಹೆಚ್ಚಿಸಲಾಗಿದೆ?: ಪ್ರಯಾಣಿಕ ಬೇಡಿಕೆಯ ಮೇರೆಗೆ ಪ್ರಮುಖ ರೈಲ್ವೆ ಮಾರ್ಗಗಳಲ್ಲಿ ತಡೆರಹಿತ ಪ್ರಯಾಣದ ಅನುಕೂಲ ನೀಡುವ ಭರವಸೆ ನೀಡಿದ ಇಲಾಖೆಯು ದೇಶಾದ್ಯಂತ ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲು ಹೆಚ್ಚುವರಿ ರೈಲುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಒಟ್ಟು 9,111 ಹೆಚ್ಚುವರಿ ರೈಲುಗಳಲ್ಲಿ, ಪಶ್ಚಿಮ ರೈಲ್ವೆ ಗರಿಷ್ಠ 1,878 ರೈಲುಗಳನ್ನು ನಿರ್ವಹಿಸಲಿದೆ ಎಂಬ ಮಾಹಿತಿಯನ್ನು ಇಲಾಖೆಯು ಸ್ಪಷ್ಟವಾಗಿ ತಿಳಿಸಿದೆ. ಜೊತೆಗೆ ವಾಯುವ್ಯ ರೈಲ್ವೆ 1,623 ಹೆಚ್ಚುವರಿ ರೈಲುಗಳು ಕಾರ್ಯನಿರ್ವಹಿಸಲಿವೆ. ದಕ್ಷಿಣ ಮಧ್ಯ ರೈಲ್ವೆ 1,012 ರೈಲುಗಳು ಹಾಗೂ ಪೂರ್ವ ಮಧ್ಯ ರೈಲ್ವೆ 1,003 ರೈಲುಗಳನ್ನು ಬಿಡುಗಡೆ ಮಾಡುವುದಾಗಿ ಇಲಾಖೆಯು ತಿಳಿಸಿದೆ. 

ಯಾವ ಯಾವ ಪ್ರದೇಶಗಳಲ್ಲಿ ರೈಲು ಸಂಚರಿಸಲಿದೆ?: ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ಜಾರ್ಖಂಡ್‌ ಇಂದ ದೇಶದ ಹಲವು ಪ್ರದೇಶಗಳಿಗೆ ರೈಲು ಸಂಚರಿಸಲಿದೆ ಮಧ್ಯಪ್ರದೇಶ ಮತ್ತು ರಾಜಸ್ಥಾನ ಮಾರ್ಗಗಳಲ್ಲಿ ರೈಲು ಸಂಚಾರ ಮಾಡುವುದರ ಬಗ್ಗೆ ವರದಿಗಳು ಪ್ರಸಾರವಾಗಿವೆ.

ಈ ಯೋಜನೆಯಿಂದ ಏನು ಲಾಭ :-

ಹೆಚ್ಚುವರಿ ರೈಲು ಬಿಡುಗಡೆ ಮಾಡಿರುವ ಕಾರಣದಿಂದ ಒಂದೇ ರೈಲಿನಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಕಡಿಮೆ ಆಗುವುದರ ಜೊತೆಗೆ ಪ್ರಯಾಣಿಕರಿಗೆ ರಜೆಯಲ್ಲಿ ಯಾವ ಪ್ರದೇಶಕ್ಕೆ ಹೋಗಬೇಕು ಎಂಬ ಇಚ್ಛೆ ಇರುತ್ತದೆಯೋ ಆ ಪ್ರದೇಶಗಳಿಗೆ ಹೋಗಲು ಅನುಕೂಲ ಆಗುತ್ತದೆ.

ಇದನ್ನೂ ಓದಿ: ವೈದ್ಯಕೀಯ ವೆಚ್ಚ ಭರಿಸುವುದು ಇನ್ನು ಮುಂದೆ ಸುಲಭ, ನಿಮ್ಮ EPF ನಿಂದ ರೂ.1 ಲಕ್ಷದವರೆಗೆ ಹಿಂಪಡೆಯಬಹುದು!

ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಆರ್ಥಿಕ ಭಧ್ರತೆ ಒದಗಿಸುತ್ತವೆ ಪೋಸ್ಟ್ ಆಫೀಸ್ ಯೋಜನೆಗಳು