ಇಂದಿನ ಯುಗ ಇಂಟರ್ನೆಟ್ ಯುಗ. ಇಂಟರ್ನೆಟ್ ಇಲ್ಲದೆ ಇಂದು ಮನುಷ್ಯ ಬದುಕುವುದು ಕಷ್ಟ ಆಗಿದೆ. ಮಕ್ಕಳು ಹೋಮ್ ವರ್ಕ್ ಮಾಡುವುದರಿಂದ ಹಿಡಿದು ಫೋನ್ ಬಿಲ್ ಕರೆಂಟ್ ಬಿಲ್ ಮನೆಯ ರೇಷನ್, ಇನ್ಸೂರೆನ್ಸ್ ಹೀಗೆ ಎಲ್ಲ ಪಾವತಿಗಳನ್ನು ಪಾವತಿಸಲು ಜೊತೆಗೆ ಯುವಕರಿಗೆ ಫಿಲ್ಮ್ ನೋಡಲು ಮಹಿಳೆಯರ ಧಾರಾವಾಹಿ ನೋಡಲು ಹಾಗು ಪ್ರಪಂಚದ ಎಲ್ಲಾ ಮಾಹಿತಿಗಳನ್ನು ಪಡೆಯಲು ಇಂಟರ್ನೆಟ್ ಬಹಳ ಮುಖ್ಯ ಆಗಿದೆ.
ನಾವು ಏನಾದರೂ ಮೊಬೈಲ್ ನಲ್ಲಿ ಹುಡುಕಬೇಕು ಎಂದಾಗ ಅಥವಾ ಏನಾದರೂ ಇಂಟರೆಸ್ಟಿಂಗ್ ಆಗಿ ಮೊಬೈಲ್ ನಲ್ಲಿ ವೀಡಿಯೋ ಅಥವಾ ಯಾವುದೇ ವಿಷಯಗಳ ಬಗ್ಗೆ ಮಾಹಿತಿ ಪಡೆಯುವಾಗ ಇಂಟರ್ನೆಟ್ ಸ್ಪೀಡ್ ಕಡಿಮೆ ಆದರೆ ನಮಗೆ ಬಹಳ ಕೋಪ ಬರುವುದು ಸಹಜ. ಒಂದೊಮ್ಮೆ ಇಂಟರ್ನೆಟ್ ಸ್ಪೀಡ್ ಕಡಿಮೆ ಆದರೆ ನಾವು ಯಾವ ಮಾರ್ಗ ಅನುಸರಿಸಬೇಕು ಎಂಬ ಮಾಹಿತಿ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಂಟರ್ನೆಟ್ ಸ್ಪೀಡ್ ಕಡಿಮೆ ಆದರೆ ಈ ಮಾರ್ಗ ಅನುಸರಿಸಿ
1) ಸ್ವಿಚ್ ಆಫ್ ಮಾಡಿ :- ಮೊಬೈಲ್ ಫೋನ್ ನಲ್ಲಿ ಇಂಟರ್ನೆಟ್ ಸ್ಪೀಡ್ ಇಲ್ಲದೆ ಇದ್ದಲ್ಲಿ ನೀವು ನಿಮ್ಮ ಮೊಬೈಲ್ ಫೋನ್ ಅನ್ನು ಒಮ್ಮೆ ಸ್ವಿಚ್ ಆಫ್ ಮಾಡಿ ಸ್ವಲ್ಪ ಸಮಯದ ಬಳಿಕ ಮೊಬೈಲ್ ಫೋನ್ ಸ್ವಿಚ್ ಆನ್ ಮಾಡುವುದರಿಂದ ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಪೀಡ್ ಹೆಚ್ಚಾಗುತ್ತದೆ.
2) Rebbot ಮಾಡಿ: ಸ್ವಿಚ್ ಆಫ್ ಮಾಡಿ ಆನ್ ಮಾಡಿದರು ಸಹ ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಪೀಡ್ ಸ್ಲೋ ಇದ್ದರೆ ನೀವು ನಿಮ್ಮ ಫೋನ್ ನಲ್ಲಿ ಸ್ವಿಚ್ ಆಫ್ ಬಟನ್ ಒತ್ತಿದಾಗ ನಿಮ್ಮ reboot ಆಪ್ಟನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಒಮ್ಮೆ ಸ್ವಿಚ್ ಆಫ್ ಆಗಿ ತನಗೆಯೇ ಆನ್ ಆಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಮೊಬೈಲ್ refresh ಆಗುತ್ತದೆ. ಇಂಟರ್ನೆಟ್ ಸ್ಪೀಡ್ ಆಗುವುದರ ಜೊತೆಗೆ ನಿಮ್ಮ ಮೊಬೈಲ್ ಸ್ಲೋ ಆದರೂ ಸಹ ಮೊಬೈಲ್ ಮುಂಚಿನ ಹಾಗೆ ವರ್ಕ್ ಆಗುತ್ತದೆ.
3) ಸೆಟ್ಟಿಂಗ್ ಬದಲಾಯಿಸಿ:- ನೀವು ನಿಮ್ಮ ಮೊಬೈಲ್ ಸೆಟ್ಟಿಂಗ್ ಗೆ ಹೋಗಿ ಇಂಟರ್ನೆಟ್ ಸೆಟ್ಟಿಂಗ್ ಬದಲಾಯಿಸಿದಾಗ ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಪೀಡ್ ಆಗುತ್ತದೆ.
4) ಸ್ಥಳ ಬದಲಾಯಿಸಿ:- ಕೆಲವೊಮ್ಮೆ ಕೆಲವು ಸ್ಥಳಗಳಲ್ಲಿ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡುವುದಿಲ್ಲ ಅಥವಾ ರೀಚ್ ಆಗುವುದಿಲ್ಲ ಆಗ ನೀವು ನೀವು ಕುಳಿತಿರುವ ಜಾಗವನ್ನು ಬದಲಾಯಿಸಿದಾಗ ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಪೀಡ್ ಹೆಚ್ಚಾಗಬಹುದು. ಒಂದು ವೇಳೆ ನೀವು ಕುಳಿತ ಸ್ಥಳದಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಜಾಸ್ತಿ ಆಗಿದ್ದರೆ ಕೂಡ ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗುತ್ತದೆ. ಆಗಲೂ ಸಹ ನೀವು ಸ್ಥಳವನ್ನು ಬದಲಾಯಿಸಿ ಇಂಟರ್ನೆಟ್ ಉಪಯೋಗಿಸಿ ನೋಡಬಹುದು.
5) ದಿನದ ನೆಟ್ ಖಾಲಿ ಆಗಿದೆಯೇ ಎಂದು ಚೆಕ್ ಮಾಡಿ :- ನಿಮ್ಮ ಮೊಬೈಲ್ ನಂಬರ್ ಗೆ ನೀವು ದಿನದ ಇಂಟರ್ನೆಟ್ ಪ್ಯಾಕ್ ಏಷ್ಟು ರೂಪಾಯಿ ರೀಚಾರ್ಜ್ ಮಾಡಿಸಿದ್ದೀರಿ ಎಂಬುದನ್ನು ಮೊದಲು ಅರಿತುಕೊಳ್ಳಿ ನೀವು ರೀಚಾರ್ಜ್ ಮಾಡಿದ ಮೊತ್ತಕ್ಕೆ ಒಂದು GB ಎರಡು GB interent ಬಳಸಲು ಅವಕಾಶ ಇರುತ್ತದೆ. ನೀವು ಬಳಸಿದ ನಂತರ ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗುತ್ತದೆ. ನೀವು extra internet ಬೇಕು ಎಂದರೆ ನಿಮ್ಮ ಮೊಬೈಲ್ ಸಂಖ್ಯೆಗೆ ರೀಚಾರ್ಜ್ ಮಾಡಿಸಬೇಕು.
ಇದನ್ನೂ ಓದಿ: 108MP ಮತ್ತು 5800 mAh ಬ್ಯಾಟರಿ ಹೊಂದಿರುವ Honor ಫೋನ್ ನ ರಿಯಾಯಿತಿಯನ್ನು ತಿಳಿಯಿರಿ