ಹಣ ಹೂಡಿಕೆ ಮಾಡಲು ಇಂದು ಹಲವಾರು ಮಾರ್ಗಗಳು ಇವೆ. ನಾವು ಹಣವನ್ನು ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಪಡೆಯಲು ಎಫ್ ಡಿ ಯೋಚನೆ, ಚಿನ್ನದ ಹೂಡಿಕೆ ಹೀಗೆ ಹಲವಾರು ವಿಧಾನಗಳು ಇವೆ. ನಾವು ದುಡಿದ ಹಣವೂ ನಮಗೆ ಸಂತಸ ನೀಡಬೇಕು ಹಾಗೂ ನಮ್ಮ ಹೂಡಿಕೆಯ ಹಣ ನಮ್ಮ ಕಷ್ಟಕ್ಕೆ ಸಹಾಯ ಆಗಬೇಕು ಎಂದರೆ ಚಿನ್ನದ ಮೇಲಿನ ಹೂಡಿಕೆ ಬಹಳ ಉಪಯೋಗ ಆಗಿದೆ. ಹಾಗಾದರೆ ನಾವು ಯಾವ ಯಾವ ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಚಿನ್ನದ ಹೂಡಿಕೆಗೆ ಉತ್ತಮ ಮಾರ್ಗಗಳು :-
1) ಆಭರಣದ ಮೇಲಿನ ಹೂಡಿಕೆ:- ಚಿನ್ನದ ಆಭರಣ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಚಿನ್ನದ ಮೇಲೆ ಹೂಡಿಕೆ ಮಾಡುವವರ ಮೊದಲ ಆಯ್ಕೆಯೇ ಆಭರಣ. ನಾವು ನಮ್ಮ ಹಣವನ್ನು ಆಭರಣದ ಮೇಲೆ ಹೂಡಿಕೆ ಮಾಡಿದರೆ ಅದು ನಮಗೆ ಒಡವೆಯ ರೂಪದಲ್ಲಿ ಒಂದಿಷ್ಟು ದಿನಗಳ ಕಾಲ ಸಂತಸ ನೀಡುತ್ತದೆ ಜೊತೆಗೆ ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆ ಆಗುತ್ತಾ ಇರುವ ಕಾರಣದಿಂದ ನಾವು ಚಿನ್ನದ ಮೇಲಿನ ಹೂಡಿಕೆ ನಮಗೆ ಮಾರಾಟ ಮಾಡಿದರೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ. ಜೊತೆಗೆ ಇದು ನಮ್ಮ ಕಷ್ಟ ಕಾಲದಲ್ಲಿ ಚಿನ್ನ ಅಡ ಇಡುವುದು ಇಲ್ಲವೇ ಮಾರಾಟ ಮಾಡಿದರೆ ನಮಗೆ ಕಷ್ಟಕ್ಕೆ ಸಹಾಯ ಆಗುತ್ತದೆ.
2) ಡಿಜಿಟಲ್ ಚಿನ್ನದ ಹೂಡಿಕೆ:- ಇಂದು ಎಲ್ಲ ವ್ಯವಹಾರಗಳು ಡಿಜಿಟಲ್ ಮೂಲಕ ನಡೆಯುತ್ತಿದೆ. ಅದರಂತೆಯೇ ಈಗ ಚಿನ್ನದ ಮೇಲಿನ ಹೂಡಿಕೆಯ ಡಿಜಿಟಲ್ ಮೂಲಕ ಮಾಡಲು ಸಾಧ್ಯವಿದೆ. ನೀವು ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಚಿನ್ನದ ಖರೀದಿ ಅಥವಾ ಮಾರಾಟ ಮಾಡುವ ಮೂಲಕ ಲಾಭ ಗಳಿಸಬಹುದು. ಡಿಜಿಟಲ್ ಚಿನ್ನ 24ಕ್ಯಾರೆಟ್ ಚಿನ್ನ ಆಗಿರುತ್ತದೆ. ಇದು ನಿಮಗೆ ಯಾವುದೇ ರೀತಿಯ ಮೋಸದ ಬಲೆಗೆ ಸಿಲುಕಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
3) ಗೋಲ್ಡ್ ಇಟಿಎಫ್:- ಇವು ಎಕ್ಸ್ಚೇಂಜ್ – ಟ್ರೀಡಡ್ ಫಂಡ್ ಎಂದು ಕರೆಯಲ್ಪಡುತ್ತದೆ. ಇದು ಸ್ಥಳೀಯವಾಗಿ ಚಿನ್ನದ ಬೆಲೆಯ ಅನುಸರಿಸುವ ಉದ್ದೇಶ ಹೊಂದಿದೆ. ಇದು ಚಿನ್ನದ ಗಟ್ಟಿಗಳನ್ನು ಕೊಂಡುಕೊಳ್ಳಲು ಸಹಾಯ ಮಾಡುತ್ತದೆ. ಚಿನ್ನದ ಗಟ್ಟಿಗಳು ಮುಂದೆ ನಮಗೆ ಆಭರಣ ಅಥವಾ ಮಟ್ಟ ಮಾಡಲು ಸಾಧ್ಯವಿದೆ.
5) ಮ್ಯೂಚುವಲ್ ಫಂಡ್:- ಚಿನ್ನದ ಮೇಲಿನ ಮ್ಯೂಚುವಲ್ ಫಂಡ್ ಗಳ ಮೇಲೆ ಇಂದು ಹೂಡಿಕೆ ಮಾಡಲು ಸಾಧ್ಯವಿದೆ. ನಿಮಗೆ ಈ ಮ್ಯೂಚುವಲ್ ಫಂಡ್ ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ GST ಸಹ ಅನ್ವಯ ಆಗುವುದಿಲ್ಲ. ಹಾಗೂ ನಿಮಗೆ ಅನೇಕ ರೀತಿಯ ಹೂಡಿಕೆಯ ಲಾಭಗಳು ಈ ಮ್ಯೂಚುವಲ್ ಫಂಡ್ ಸಾಧ್ಯವಿದೆ.
5) ಸಾವರಿನ್ ಗೋಲ್ಡ್ ಬಾಂಡ್ ಗಳು :- ಗೋಲ್ಡ್ ಮ್ಯಾನಿಸೇಶನ್ ಸ್ಕೀಮ್ ಎಂದು ಸರ್ಕಾರವು ನವೆಂಬರ್ 2015 ರಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಆರಂಭ ಮಾಡಿತು. RBI ಕಾಲಕಾಲಕ್ಕೆ ಯೋಜನೆ ನಿಯಮಗಳು ಮತ್ತು ಷರತ್ತುಗಳನ್ನು ಇವೆ. ಒಂದು ಗ್ರಾಮ್ ನ ಗೋಲ್ಡ್ ಬಾಂಡ್ ಸಹ ಮಾಡಲು ಸಾಧ್ಯವಿದೆ. ಈ ಗೋಲ್ಡ್ ಬಾಂಡ್ ಗಳ ಹೂಡಿಕೆಗೆ ಬಡ್ಡಿದರವನ್ನು ಆದಾಯ ತೆರಿಗೆಯ ನಿಗಮದ ಅನುಸಾರವಾಗಿ ನಿಗಡಿಸಲಾಗುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ನಲ್ಲಿ ಹಣ ಇನ್ವೆಸ್ಟ್ ಮಾಡಲು ನೀವು ಹತ್ತಿರದ ಬ್ಯಾಂಕ್ ಗೆ ತೆರಳಿ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಿದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್‌ಗಳ ಕುರಿತು ಸಲಹೆ; ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲು ನೀವು ಬಯಸಿದರೆ ಇದನ್ನು ಪಾಲಿಸಿ