ಕೇಂದ್ರ ಸರಕಾರ ಮಾಧ್ಯಮ ಮತ್ತು ಬಡವರಿಗೆ ಕಡಿಮೆ ಮೊತ್ತದ ಪೆನ್ಷನ್ ಸ್ಕೀಮ್ ಗೆ ಇನ್ವೆಸ್ಟ್ ಮಾಡಲು ಅವಕಾಶ ನೀಡುತ್ತಿದೆ. ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ ನಿವೃತ್ತಿ ಜೀವನದಲ್ಲಿ ಆರ್ಥಿಕವಾಗಿ ಹಣ ಸಿಗಬೇಕು ಎಂದರೆ ನೀವು ದಿನಕ್ಕೆ ಕೇವಲ 7 ರೂಪಾಯಿ ಇನ್ವೆಸ್ಟ್ ಮಾಡಿದರೆ ಸಾಕು.
ಆರ್ಥಿಕ ಭದ್ರತೆ ನೀಡುತ್ತದೆ:- ನಿವೃತ್ತಿ ಜೀವನದಲ್ಲಿ ಯಾವುದೇ ರೀತಿಯ ಸಂಬಳ ಇರುವುದಿಲ್ಲ. ಆಗ ನಾವು ಆರ್ಥಿಕವಾಗಿ ಸಬಲರಾಗಿ ಇರಲು ಅಲ್ಪ ಹಣವಾದರೂ ಇರಬೇಕು. ಅದೇ ಕಾರಣಕ್ಕೆ ನಾವು ಯಾವುದಾದರೂ ಪೆನ್ಷನ್ ಸ್ಕೀಮ್ ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಅಟಲ್ ಯೋಜನೆ ಯಾವುದೇ ರೀತಿಯ ಮೋಸ ವಂಚನೆ ಇರುವುದು ಇಲ್ಲ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಇರುವುದರಿಂದ ಆರ್ಥಿಕ ಭದ್ರತೆ ನೀಡುತ್ತದೆ.
ಎಷ್ಟು ವಯಸ್ಸಿನವರು ಹೂಡಿಕೆ ಮಾಡಬಹುದು?: ಅಟಲ್ ಪೆನ್ಷನ್ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಹಾಗೂ ಗರಿಷ್ಠ 40 ವರ್ಷ ವಯಸ್ಸು ಆಗಿರಬೇಕು.
ಹೂಡಿಕೆಯ ವಿಧಾನ :-
ನೀವು ತಿಂಗಳಿಗೆ ಕೇವಲ 1,000 ರೂಪಾಯಿ ಪಡೆಯುವ ಅವಕಾಶವೂ ಇದೆ. ನೀವು ತಿಂಗಳಿಗೆ ಕೇವಲ 42 ರೂಪಾಯಿ ಹೂಡಿಕೆ ಮಾಡಿದರೆ ನೀವು ನಿವೃತ್ತಿ ನಂತರ ತಿಂಗಳಿಗೆ 1,000 ರೂಪಾಯಿ ಪಡೆಯುತ್ತೀರಿ ಹಾಗೂ 18 ನೇ ವಯಸ್ಸಿನಿಂದ ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಬೇಕು. ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 210 ರೂಪಾಯಿ ಆಗುತ್ತದೆ. ವರ್ಷಕ್ಕೆ ಸರಾಸರಿ 2,500 ರೂಪಾಯಿ ಆಗುತ್ತದೆ. ನೀವು ನಿರಂತರವಾಗಿ 60 ನೇ ವಯಸ್ಸಿನ ವರೆಗೆ ಈ ಯೋಜನೆಗೆ ಹೂಡಿಕೆ ಮಾಡಿದರೆ ನೀವು ತಿಂಗಳಿಗೆ 5,000 ರೂಪಾಯಿ ಪಡೆಯಲಿ ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದಂಪತಿಗಳಿಬ್ಬರೂ ಸೇರಿ ಹೂಡಿಕೆ ಮಾಡಬಹುದು. :- ಅಟಲ್ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಸೇರಿ ಜಾಯಿಂಟ್ ಅಕೌಂಟ್ ನಲ್ಲಿ ಹೂಡಿಕೆ ಮಾಡಬಹುದು. ಹೀಗೆ ಮಾಡಿದರೆ ಪ್ರತಿ ತಿಂಗಳು 10,000 ರೂಪಾಯ ಪೆನ್ಷನ್ ಪಡೆಯಬಹುದು. ಹಾಗೆಯೇ ಪತಿ ಅಥವಾ ಪತ್ನಿಯರಲ್ಲಿ ಒಬ್ಬರು ಸತ್ತರೆ, ಇನ್ನೊಬ್ಬರು ಪಿಂಚಣಿ ಪ್ರಯೋಜನ ಪಡೆಯುತ್ತಾರೆ. ಇಬ್ಬರೂ ಮರಣ ಹೊಂದಿದ ನಂತರ ನಾಮಿನಿ ಗೆ ಉಳಿದ ಹಣ ಹೋಗುತ್ತದೆ.
ಅಟಲ್ ಬಿಹಾರಿ ಪೆನ್ಷನ್ ಯೋಜನೆಗೆ ಇನ್ವೆಸ್ಟ್ ಮಾಡಬೇಕು?: ನೀವು ಬ್ಯಾಂಕ್ ಖಾತೆ ಹೊಂದಿದ್ದಾರೆ ನೀವು ಈ ಯೋಜನೆಯ ಪ್ರಯೋಜನ ಪಡೆಯಬಹುದು. ನೀವು ನಿಮ್ಮ ಬ್ಯಾಂಕ್ ಗೆ ಹೋಗಿ ಅಟಲ್ ಬಿಹಾರಿ ಪೆನ್ಷನ್ ಯೋಜನೆಗೆ ಇನ್ವೆಸ್ಟ್ ಮಾಡಬಹುದು. ನಿಮ್ಮ ಬಳಿ ಮೊಬೈಲ್ ಫೋನ್ ಹಾಗೂ ಬ್ಯಾಂಕ್ ಅಕೌಂಟ್ ಇದ್ದರೆ ನೀವು ಆರಾಮಾಗಿ ಇನ್ವೆಸ್ಟ್ ಮಾಡ್ಬಹುದು. ಈಗಾಗಲೆ ದೇಶದಲ್ಲಿ 5 ಕೋಟಿಗೂ ಅಧಿಕ ಜನರು ಅಟಲ್ ಬಿಹಾರಿ ಪೆನ್ಷನ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ದಾರೆ.
ಸಾಮಾನ್ಯವಾಗಿ ಪೆನ್ಷನ್ ಸ್ಕೀಮ್ ಎಂದರೆ ತಿಂಗಳಿಗೆ ಸಾವಿರಾರು ರೂಪಾಯಿ ಅಥವಾ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡ್ಬೇಕು ಎಂದುಕೊಂಡವರಿಗೆ ಈಗ ಕಡಿಮೆ ಮೊತ್ತದ ಹಣವನ್ನು ಇನ್ವೆಸ್ಟ್ ಮಾಡಿ ಬಡವರ ಪಾಲಿಗೆ ಉತ್ತಮ ಯೋಜನೆ ಆಗಿದೆ. ಈ ಯೋಜನೆ 2015-16 ಹಣಕಾಸು ವರ್ಷದಿಂದ ಆರಂಭ ಆಗಿದೆ.
ಇದನ್ನೂ ಓದಿ: PPF ನಲ್ಲಿ ಹೂಡಿಕೆ ಮಾಡಿ ಒಂದು ಕೋಟಿ ರೂಪಾಯಿ ಗಳಿಸಿ
ಇದನ್ನೂ ಓದಿ: ಬರೋಬ್ಬರಿ ಒಂದು ಲೀಟರ್ ಗೆ 73KM ಮೈಲೇಜ್ ನೀಡುವ. ಹೊಸ Hero Splendor Plus XTEC 2.0 ಬೈಕ್