ಕೋಟಿ ಗಳಿಸುವ ದಾರಿ ಇದೆ ಎಂದರೆ ಯಾರು ತಾನೇ ಇನ್ವೆಸ್ಟ್ಮೆಂಟ್ ಮಾಡದೆ ಇರುತ್ತಾರೆ ಹೇಳಿ.! ಚಿಕ್ಕ ಚಿಕ್ಕ ಮೊತ್ತವನ್ನು ಸಂಗ್ರಹಿಸಿ ಕೋಟಿ ರೂಪಾಯಿ ಗಳಿಸುವ ಒಂದು ಉತ್ತಮ SIP ಯೋಜನೆ ಈಗ ಚಾಲ್ತಿಯಲ್ಲಿ ಇದೆ. ಹಾಗಾದರೆ ಈ ಯೋಜನೆಯಲ್ಲಿ ಒಂದು ಕೋಟಿ ಗಳಿಸಬೇಕು ಎಂದರೆ ಹೂಡಿಕೆ ಮಾಡುವ ವಿಧಾನ ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಭಾರತದಲ್ಲಿ ಏಕೆ SIP ಗೆ ಹೆಚ್ಚು ಹೂಡಿಕೆ ಮಾಡುತ್ತಾರೆ?: ಮೊದಲನೆಯದಾಗಿ ಭಾರತದಲ್ಲಿ SIP ಯೋಜನೆಗಳಲ್ಲಿ ತಿಂಗಳಿಗೆ 100 ರೂಪಾಯಿಕ್ಕಿಂತ ಕಡಿಮೆ ಮೊತ್ತದಲ್ಲಿ ಹೂಡಿಕೆ ಮಾಡುವ ಅವಕಾಶ ಇದೆ. ಇದರಿಂದ ಎಲ್ಲಾ ವರ್ಗದ ಜನರು ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ಶಿಸ್ತುಬದ್ಧ ಹೂಡಿಕೆ ಮಾಡಲು ಇಲ್ಲಿ ಹೆಚ್ಚಿನ ಅವಕಾಶಗಳು ಇವೆ. ನೀವು ಒಂದು ಮೊತ್ತವನ್ನು ತ್ರೈಮಾಸಿಕ ಮಾಸಿಕ ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಹೂಡಿಕೆ ಮಾಡಲು ಸಾಧ್ಯವಿದೆ. ಕಡಿಮೆ ಮೊತ್ತದ ಇನ್ವೆಸ್ಟ್ಮೆಂಟ್ ಮಾಡಿ ಹೆಚ್ಚಿನ ಲಾಭ ಗಳಿಸಲು ಹೆಚ್ಚಿನ ಅವಕಾಶಗಳು ಇವೆ. ಹಾಗೂ tax benifits ಸಹ ಪಡೆಯುವ ಅವಕಾಶ ಇರುತ್ತದೆ. ಇವೆಲ್ಲ ಕಾರಣದಿಂದ ಭಾರತದಲ್ಲಿ SIP ಯೋಜನೆಗಳಲ್ಲಿ ಹೆಚ್ಚಿನ ಜನರು ಹೂಡಿಕೆ ಮಾಡುತ್ತಾರೆ.
SIP ಎಂದರೇನು?
SIP ಎಂಬುದು ಒಂದು ವ್ಯವಸ್ಥಿತವಾಗಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಯೋಜನೆ ಆಗಿದೆ. ಇದರಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ದೀರ್ಘಾವಧಿಯ ವರೆಗೆ ಹೂಡಿಕೆ ಮಾಡಲು ಅವಕಾಶ ಇದೆ ಜೊತೆಗೆ ಹೆಚ್ಚಿನ ಹಣ ಇರುವ ಸಿರಿವಂತರು ಒಮ್ಮೆಲೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ತಿಂಗಳಿಗೆ 5,000 ಹೂಡಿಕೆ ಮಾಡಿ 1 ಕೋಟಿ ಹಣ ಗಳಿಸಿ :- ಈ SIP ಯೋಜನೆಯಲ್ಲಿ ನೀವು ಒಟ್ಟು 26 ವರುಷಗಳ ಕಾಲ ತಿಂಗಳಿಗೆ 5,000 ರೂಪಾಯಿಯ ಹಾಗೆ ನಿಯಮಿತವಾಗಿ ಹೂಡಿಕೆ ಮಾಡಿದರೆ ನೀವು 1 ಕೋಟಿ ರೂಪಾಯಿ ಬಡ್ಡಿ ಸಮೇತ ಹಣವನ್ನು ಪಡೆಯಲು ಸಾಧ್ಯವಿದೆ. ಪ್ರತಿ ತಿಂಗಳು 5,000 ರೂಪಾಯಿಯಂತೆ ಹೂಡಿಕೆ ಮಾಡಿದರೆ 26 ವರ್ಷಗಳಲ್ಲಿ ನೀವು ಮಾಡಿರುವ ಹೂಡಿಕೆ ಮೊತ್ತವು 15,60,000 ರೂಪಾಯಿ ಆಗಿರುತ್ತದೆ ಹಾಗೂ ನೀವು ರೂ 91,95,560 ಆದಾಯವನ್ನು ಪಡೆಯಲು ಸಾಧ್ಯವಿದೆ. 26 ವರ್ಷಗಳ ನಂತರ ನಿಮಗೆ ಸಿಗುವ ಮೊತ್ತವು 1,07,55,560 ರೂಪಾಯಿ ಆಗಿರುತ್ತದೆ. ಯೋಜನೆಯಲ್ಲಿ ಹೂಡಿಕೆ ಮಾಡಿ ನೀವು 12% ಬಡ್ಡಿದರ ಪಡೆಯಲು ಸಾಧ್ಯವಿದೆ.
ತಿಂಗಳಿಗೆ 10,000 ರೂಪಾಯಿ ಹೂಡಿಕೆ ಮಾಡಿ 1 ಕೋಟಿ ಹಣ ಗಳಿಸಿ:- SIP ಯೋಜನೆಯಲ್ಲಿ ತಿಂಗಳಿಗೆ 10,000 ರೂಪಾಯಿ ಹಣವನ್ನು 26% ಬಡ್ಡಿದರದಲ್ಲಿ 20 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಹೂಡಿಕೆ ಮೊತ್ತ. 24,00,000,ರೂಪಾಯಿ ಆಗಿರುತ್ತದೆ. 75,91,479 ರೂಪಾಯಿ ದೀರ್ಘಾವಧಿಯ ಮೊತ್ತ ಆಗಿರುತ್ತದೆ. ಹಾಗೂ ಬಡ್ಡಿದರಗಳು ಸೇರಿ ನಿಮಗೆ ಸಿಗುವ ಹಣವೂ 99,91,479 ಆಗಿರುತ್ತದೆ.
ಇದನ್ನೂ ಓದಿ: ಕಡಿಮೆ ಇರುವ ನಿಮ್ಮ CIBIL ಸ್ಕೋರ್ ಅನ್ನು ಈ ಸರಳ ಹಂತಗಳು ಹೆಚ್ಚಿಸುತ್ತವೆ!
ತಿಂಗಳಿಗೆ 15,000 ರೂಪಾಯಿ ಹೂಡಿಕೆ ಮಾಡಿ 1 ಕೋಟಿ ಹಣ ಗಳಿಸಿ :- SIP ಯೋಜನೆಯಲ್ಲಿ ತಿಂಗಳಿಗೆ 15,000 ರೂಪಾಯಿ ಮೊತ್ತವನ್ನು 17 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಹೂಡಿಕೆಯ ಮೊತ್ತ 30,60,000 ರೂಪಾಯಿ ಆಗಿರುತ್ತದೆ. ಹೂಡಿಕೆಯ ಲಾಭ 69,58,812 ರೂಪಾಯಿ ಆಗಿರುತ್ತದೆ. ಬಡ್ಡಿದರ ಹಾಗೂ ನೀವು ಇನ್ವೆಸ್ಟ್ ಮಾಡಿದ ಹಣ ಎಲ್ಲವನ್ನೂ ಕೂಡಿದರೆ ನಿಮಗೆ 1,00,18,812 ರೂಪಾಯಿ ಹಣ ಸಿಗುತ್ತದೆ.
ಇದನ್ನೂ ಓದಿ: ಒಂದು ವರ್ಷದ FD ಯೋಜನೆಗೆ ಯಾವ ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿದರಗಳು ಇವೆ.