IPL ಗೆ ಟಕ್ಕರ್ ಕೋಡಲು ಸೌದಿ ಶುರುಮಾಡ್ತಾ ಶ್ರೀಮಂತ ಕ್ರಿಕೆಟ್ ಲೀಗ್? ಇನ್ನೂ ಮುಂದೆ ಸೌದಿ ಲೀಗ್ ನಲ್ಲೂ ಇಂಡಿಯನ್ ಪ್ಲೇಯರ್ಸ್?

IPL: ಒಂದು ಕಾಲದಲ್ಲಿ ಕ್ರಿಕೆಟ್ ಪ್ಲೇಯರ್ಗಳನ್ನು ಬೇರೆ ದೇಶದಲ್ಲಿ ಕ್ರಿಕೆಟ್ ಆಡಲು ಕಳಿಸಲು ಕೂಡ ವಿಮಾನದ ಟಿಕೆಟ್ ಗೂ ದುಡ್ಡಿಲ್ಲದ ಬಿಸಿಸಿಐ ಇಂದು ಕ್ರಿಕೆಟ್ ಜಗತ್ತನ್ನೇ ಕಂಟ್ರೋಲ್ ಮಾಡುತ್ತಿದೆ ಎನ್ನಬಹುದು. ಅಂದು ಬಿಸಿಸಿಐನ ಲಕ್ ಚೇಂಜ್ ಆಗಿದ್ದು ಐಪಿಎಲ್ ಶುರುವಾದ ಮೇಲೆ ಎನ್ನಬಹುದು. ಬಿಸಿಸಿಐಗೆ ಐಪಿಎಲ್ ಎನ್ನುವುದು ಒಂದು ರೀತಿ ಚಿನ್ನದ ಮೊಟ್ಟೆ ಇಡುವ ಕೋಳಿ ಯಂತೆ ಐಪಿಎಲ್ ಬಿಸಿಸಿಐ ನ ದೊಡ್ಡ ಆರ್ಥಿಕತೆ ಇದ್ದಂತೆ ಆದರೆ ಈಗ ಶ್ರೀಮಂತ ಕ್ರಿಕೆಟ್ ಲೀಗ್ ಅನ್ನು ಶುರು ಮಾಡಲು ಹೊರಟಿದೆ ಸೌದಿ.

WhatsApp Group Join Now
Telegram Group Join Now

ಏತಕ್ಕಾಗಿ ಸೌದಿ ದೊರೆಗಳು ಶ್ರೀಮಂತ ಕ್ರಿಕೆಟ್ ಲೀಗ್ ಅನ್ನು ಶುರು ಮಾಡಲು ಮುಂದಾಗುತ್ತಿದ್ದಾರೆ?

ಹೌದು ಸೌದಿ ಅರೇಬಿಯಾದವರು ತಮ್ಮ ದೇಶದಲ್ಲಿ ಶ್ರೀಮಂತ ಲೀಗ್ ಯನ್ನು ಶುರು ಮಾಡಬೇಕು ಎನ್ನುತ್ತಿದ್ದರೆ ಏಕೆಂದರೆ ಸೌದಿ ಅರೇಬಿಯಾದ 74% ಆರ್ಥಿಕತೆ ಈ ಕಚ್ಚಾ ತೈಲದ ಮೇಲೆ ನಿಂತಿದೆ ಆದರೆ ಅವರಿಗೂ ಗೊತ್ತು ಈ ಕಚ್ಚಾತೈಲ ಇನ್ನು ಬರೀ ಸ್ವಲ್ಪ ವರ್ಷಗಳು ಮಾತ್ರ ಇರುತ್ತದೆ ಎಂದು ಅದಕ್ಕಾಗಿ ತಮ್ಮ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಪ್ರವಾಸೋದ್ಯಮದ ಕಡೆ ಕಣ್ಣಾಕಿದೆ ಅದಕ್ಕಾಗಿ ಬೇರೆ ದೇಶಗಳ ಜನರನ್ನು ಸೆಳೆಯಲು ಕ್ರೀಡೆಯನ್ನು ಕೂಡ ಒಂದು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಸ್ವಲ್ಪ ಕ್ರೀಡೆಗಳನ್ನು ಅವರ ದೇಶದಲ್ಲಿ ನಡೆಸುತ್ತಿದ್ದಾರೆ. ಈಗ ಸೌದಿ ಅವರು ಕ್ರಿಕೆಟ್ ಕೂಡ ಕೈ ಹಾಕಲು ಹೊರಟಿದ್ದಾರೆ.

ಈಗಾಗಲೇ ಯಾವ ಯಾವ ಕ್ರೀಡೆಗಳನ್ನು ಸೌದಿ ಅರೇಬಿಯಾದವರು ಶುರು ಮಾಡಿದ್ದಾರೆ?

ವಿಶ್ವದ ನಂಬರ್ ಒನ್ ಪ್ರವಾಸಿ ತಾಣ ಆಗಬೇಕು ಎಂದು ಕನಸಿನ ಭಾಗವಾಗಿದೇ ಸೌದಿ ಈಗಾಗಲೇ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಪ್ರಯತ್ನಗಳಿಗೆ ಕೈ ಹಾಕಿದೆ 2021 ರಲ್ಲಿ ಸೌದಿ ಅರೇಬಿಯಾ ಫಾರ್ಮುಲಾ 1 ಗ್ರಾಂಡ್ ಟ್ರಿಕ್ಸ್ ಶುರು ಮಾಡಿತ್ತು. ಅದಕ್ಕಾಗಿ ಜಡ್ಡದಲ್ಲಿ ಅತ್ಯಂತ ಫಾಸ್ಟ್ ಆದ ರೇಸಿಂಗ್ ಟ್ರ್ಯಾಕ್ ಅನ್ನು ನಿರ್ಮಾಣ ಮಾಡಿತ್ತು. ಅದೇ ವರ್ಷ ಇಂಗ್ಲಿಷ್ ಪ್ರೀಮಿಯರ್ ಲೀಗ್ ನಲ್ಲಿ ನ್ಯೂ ಕ್ಯಾಸ್ಟಲ್ ಯುನಿಟೆಡ್ ಅನ್ನೋ ಫುಟ್ಬಾಲ್ ಟೀಮ್ ಯನ್ನು ಕೂಡ ಖರೀದಿ ಮಾಡಿತ್ತು ಸೌದಿ. ಇನ್ನೂ ಕಳೆದ ವರ್ಷ ತಮ್ಮದೇ ಆದ ‘ಅಲ್-ನಾಸ್ರ್ ಎಫ್‌ಸಿ’ಗೆ ವರ್ಷಕ್ಕೆ ಬರೋಬರಿ 1800 ಕೋಟಿ ಕೊಟ್ಟು ಒಬ್ಬ ಆಟಗಾರನನ್ನು ಖರೀದಿ ಮಾಡಿತ್ತು ಅವರ ಹೆಸರು ಕ್ರಿಶ್ಚಿಯಾನೋ ರೊನಾಲ್ಡೋ. ನಂತರ ಗಾಲ್ಫ್ ಟೂರ್ನಿಯನ್ನು ಕೂಡ ಅವರ ದೇಶದಲ್ಲಿ ಶುರು ಮಾಡಿದರು ಸೌದಿ. ಈಗ ಅಕ್ಕ ಪಕ್ಕದಲ್ಲಿರುವ ಏಷ್ಯಾದ ಕ್ರಿಕೆಟ್ ಕ್ರೇಜ್ ಇರುವ ರಾಷ್ಟ್ರಗಳಿಂದ ಜನರನ್ನು ಸೆಳೆಯಬೇಕು ಎಂದು ಕ್ರಿಕೆಟ್ ಗೂ ಕೂಡ ಕೈ ಹಾಕುತಿದೆ ಸೌದಿ.

ಇದನ್ನು ಓದಿ: ತಾಯಿಯ “ಅಸ್ತಿ ವಿಸರ್ಜನೆ” ಮಾಡಿದ ನಟಿ ಮಾನ್ವಿತಾ

ಸೌದಿ ಮತ್ತು ಬಿಸಿಸಿಐ ನ ನಡುವೆ ಏನೆಲ್ಲ ಮಾತುಕತೆ ಆಗಿದೆ?

ಒಂದು ರಾಷ್ಟ್ರ ಏನಾದರೂ ಕ್ರಿಕೆಟ್ ಲೀಗ್ ಅನ್ನು ಶುರು ಮಾಡಬೇಕಾದರೆ ಅದಕ್ಕೆ ಐಸಿಸಿ ಮೆಂಬರ್ ರಾಷ್ಟ್ರಗಳ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು ಹೀಗಾಗಿ ಭಾರತದ ಜೊತೆಗೆ ಸೌದಿ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಮತ್ತು ಭಾರತೀಯ ಕ್ರಿಕೆಟರ್ ಗಳು ಸೌದಿ ಲೀಗ್ ನಲ್ಲಿ ಭಾಗವಹಿಸಲು ಸೌದಿ ಸರ್ಕಾರ ಬಿಸಿಸಿಐ ಮತ್ತು ಐಪಿಎಲ್ ಮಾಲೀಕರೊಂದಿಗೆ ಮಾತುಕತೆ ನಡೆಸಿದಾಗ ಭಾರತದ ಆಟಗಾರರು ತಮ್ಮ ಲೀಗ್ ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕೆಂದು ಕೇಳಿದ್ದರಂತೆ.

ಬಿಸಿಸಿಐ ನ ರೂಲ್ಸ್‌ನ ಪ್ರಕಾರ ಭಾರತದ ಯಾವುದೇ ಆಟಗಾರ ಬಿಸಿಸಿಐ ನ ಅನುಮತಿ ಇಲ್ಲದೆ ವಿದೇಶಿ T20 ಲೀಗ್ ನಲ್ಲಿ ಪಾಲ್ಗೊಳ್ಳುವ ಹಾಗಿಲ್ಲ . ಹಾಗೇನಾದರೂ ಭಾಗವಹಿಸಿದ್ದಾರೆ ಬಿಸಿಸಿಐ ಅವರನ್ನು ಬ್ಯಾನ್ ಮಾಡುತ್ತದೆ. ಏಕೆಂದರೆ ದೊಡ್ಡ ದೊಡ್ಡ ಫ್ಯಾನ್ ಬೆಸ್ ಇರುವ ಆಟಗಾರರು ವಿದೇಶಿ ಲೀಗ್ ಗಳಲ್ಲಿ ಆಡಲು ಶುರು ಮಾಡಿದರೆ. ಆ ಆಟಗಾರಾರ ಫ್ಯಾನ್ಸ್ ಗಳೆಲ್ಲ ಆ ಲೀಗನ್ನು ನೋಡುತ್ತಾರೆ ಆಗ ಆ ಲೀಗ್ ನ ಪಾಪುಲರಿಟಿ ಮತ್ತು ನೋಡುಗರ ಸಂಖ್ಯೆ ಕೂಡ ಹೆಚ್ಚಾಗುತ್ತದೆ ಮತ್ತು ಆ ಲೀಗ್ ನ ಬ್ರಾಂಡ್ ವ್ಯಾಲ್ಯೂ ಕೂಡ ಹೆಚ್ಚಾಗುತ್ತದೆ. ಆಗ ಆ ಲೀಗ್ ಐಪಿಎಲ್ ಗೆ ಪ್ರತಿ ಸ್ಪರ್ಧಿ ಆಗಿ ಬಿಡುತ್ತದೆ ಮತ್ತು ಐಪಿಎಲ್ ಗೆ ಪೆಟ್ಟು ಕೊಡುತ್ತದೆ. ಹೀಗಾಗಿ ಬಿಸಿಸಿಐ ಇಷ್ಟು ದಿನ ಅವಕಾಶ ಕೊಡುತ್ತಿರಲಿಲ್ಲ ಭಾರತದ ಆಟಗಾರರು ವಿದೇಶಿ  ಲೀಗ್ ಗಳನ್ನು ಆಡಬೇಕಾದರೆ ಆ ಆಟಗಾರ ಭಾರತದ ಕ್ರಿಕೆಟ್ ನಲ್ಲಿ ನಿವೃತ್ತಿ ಪಡೆದು ಬಿಸಿಸಿಐ ನ ಜೊತೆಗಿರುವ ಎಲ್ಲಾ ಸಂಬಂಧಗಳನ್ನು ಕಳೆದುಕೊಂಡ ಬೇರೆ ಲೀಗ್ ಗಳನ್ನು ಹೋಗಬೇಕಿತ್ತು. ಆದರೆ ಈ ನಿಯಮವನ್ನು ಸೌದಿಗಾಗಿ ಬಿಸಿಸಿಐ ಸಡಿಲ ಮಾಡಬಹುದೆಂದು ಹೇಳಲಾಗುತ್ತಿದೆ.

ಇದನ್ನು ಓದಿ: ಪತಿಯ ಸಮಾಧಿಗೆ ಪೂಜೆ ಸಲ್ಲಿಸಿದ ಮಾಲಾಶ್ರೀ ಮತ್ತು ಮಕ್ಕಳು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram