IPL 2023 Final: ಸುಮಾರು 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಫೈನಲ್ ದಿನ ಪಂದ್ಯ ನಡೆಯದೆ ಮುಂದಿನ ದಿನದಂದು ನಡೆಯುತ್ತಿರುವುದು ಇದೇ ಮೊದಲ ಬಾರಿಗೆ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಹಣಹಣಿ ರಣಭಯಂಕರ ಮಳೆಗೆ ಕೊಚ್ಚಿ ಹೋಯಿತ್ತು. ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸುರಿದ ರಣ ಮಳೆಗೆ ಟಾಸ್ ಪ್ರಕ್ರಿಯೆ ಕೂಡ ನಡೆಯಲಿಲ್ಲ . ಸದ್ಯ ಪಂದ್ಯವನ್ನು ಮುಂದಿನ ದಿನ ಅಂದರೆ ಇಂದು ಸೋಮವಾರದಂದು ಮುಂದೂಡಲಾಗಿದೆ. ನಿನ್ನೆ ಫೈನಲ್ ಪಂದ್ಯವನ್ನು ನೋಡಲು 1,32,000 ಪ್ರೇಕ್ಷಕರು ಬಂದಿದ್ದರು. ಇನ್ನು ಇವರಿಗೆ ನಿರಾಸೆ ಆಗಿದ್ದಂತೂ ಪಕ್ಕ. 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಫೈನಲ್ ಪಂದ್ಯ ಮೀಸಲು ದಿನದಂದು(Reserve Day) ನಡೆಯುತ್ತಿರುವುದು ಇದೇ ಮೊದಲು ಆಗಿದೆ. ಹಾಗಾದರೆ ಇಂದು ಕೂಡ ಮಳೆ ಬಂದರೆ ಪಂದ್ಯ ಏನಾಗಲಿದೆ ಯಾರು ಚಾಂಪಿಯನ್ ಆಗ್ತಾರೆ ನೋಡೋಣ ಬನ್ನಿ. ಮುಂದೆ ಓದಿ,
ನಿನ್ನೆ ಭಾನುವಾರ ರಾತ್ರಿ 7:00 ಕ್ಕೆ ಟಾಸ್ ಪ್ರಕ್ರಿಯೆ ನಡೆಯಬೇಕಿತ್ತು ಆದರೆ ಮಳೆಯ ತನ್ನ ಆರ್ಭಟವನ್ನು ಸಂಜೆ 6:00 ಗಂಟೆಯಿಂದಲೇ ಶುರು ಮಾಡಿದ. ಒದ್ದೆ ಆಗಬಾರದೆಂದು ಮೈದಾನಕ್ಕೆ ಸಿಬ್ಬಂದಿಗಳು ಪಿಚ್ ಗೆ ಹೊದಿಕೆ ಹಾಕಿದರು. ಟಾಸ್ ನಡೆಯಬೇಕಿದ್ದ ಸಂದರ್ಭದಲ್ಲಿ ಗುಡುಗು, ಮಿಂಚು ಸಹಿತ ಮಳೆ ಆರ್ಭಟ ಹೆಚ್ಚಾಯಿತು. ಇನ್ನೂ ಪಂದ್ಯ ವೀಕ್ಷಿಸಲು ಬಂದಿದ್ದ ಜನ ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡಿದರು, ರಾತ್ರಿ ಸುಮಾರು 8:20ಕ್ಕೆ ಮಳೆ ಕಡಿಮೆ ಆಯ್ತು, ಇನ್ನೇನು ಟಾಸ್ ನಡೆಸಿ ಮ್ಯಾಚ್ ಶುರುವಾಗುತ್ತೆ ಅಂತ ಎಲ್ಲರೂ ಕಾಯುತ್ತಿದ್ದರು ಆದರೆ ವರುಣನ ಆಟವೇ ಬೇರೆಯಾಗಿತ್ತು. 8:30 ಕ್ಕೆ ಅಂಪೈರ್ ಗಳು ಮೈದಾನ ಪರಿಶೀಲಿಸಿ ಟಾಸ್ ಮಾಡುವ ನಿರ್ಧಾರ ತೆಗೆದುಕೊಂಡರು ಆದರೆ ಮಳೆ ಆರ್ಭಟವೇ ಅಲ್ಲಿಂದ ಮತ್ತೆ ಶುರುವಾಯಿತ್ತು. ಇನ್ನೂ 8:30 ರಿಂದ ಶುರುವಾದ ಮಳೆ ರಾತ್ರಿ ಸುಮಾರು 10:30 ರವರೆಗೆ ಮಳೆಯ ಆರ್ಭಟ ಜೋರಾಗಿಯೇ ಇತ್ತು. ಪಿಚ್ ನಲ್ಲಿ ಮತ್ತು ಮೈದಾನದ ತುಂಬೆಲ್ಲ ನೀರು ತುಂಬಿತ್ತು. ಕೊನೆದಾಗಿ 10:56 ಸಮಯಕ್ಕೆ ಮ್ಯಾಚ್ ರೆಫರಿ ಮತ್ತು ಅಂಪೈರ್ ಗಳು ಮಾತುಕತೆ ನಡೆಸಿ ಪಂದ್ಯ ವನ್ನು ಮುಂದಿನ ದಿನ ಅಂದರೆ ಇಂದು ಸೋಮವಾರದಂದು ನಡೆಸಲು ತೀರ್ಮಾನ ತೆಗೆದುಕೊಂಡರು.
ಇದನ್ನೂ ಓದಿ: 75 ರೂ. ಹೊಸ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಎಲ್ಲಿ ಸೀಗುತ್ತದೆ, ಬೆಲೆ ಎಷ್ಟು?
ಇಂದು ಮಳೆ ಬಂದರೆ ಐಪಿಎಲ್ 2023 ಚಾಂಪಿಯನ್ ಯಾರಾಗ್ತಾರೆ?
ಇನ್ನೂ ನಿನ್ನೆ ಮಳೆಯಿಂದ ಪಂದ್ಯ ಮುಂದಿನ ದಿನ ಮುಂದೂಡಿದರು ಜನರಿಗೆ ಸ್ವಲ್ಪ ನಿರಾಸೆ ಆಗಿದ್ದರು ಪಂದ್ಯ ನಾಳೆಯಾದರೂ ನಡೆಯುತ್ತದೆ ಎಂಬ ಖುಷಿಯಲ್ಲಿದ್ದರೂ ಆದರೆ ಇದೀಗ ಅವರಿಗೆ ಬೇಸರಾಗುವ ಸಂಗತಿ ಎಂದರೆ ಇಂದು ಕೂಡ ಗುಜರಾತ್ ನಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇಂದು ಸಂಜೆ ವೇಳೆಗೆ ಮಳೆ ಸುರಿಯಲಿದೆ ಅಂತೆ ದಿನಪೂರ್ತಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಮಾನ ಇಲಾಖೆ ವರದಿ ಹೇಳಿದೆ ಯಾವುದೇ ಸಂದರ್ಭದಲ್ಲಿ ಮಳೆ ಆಗಬಹುದು ಹೀಗೆ ಮಳೆ ಬಂದರೆ 5 ಓವರ್ ಗಳ ಮ್ಯಾಚ್ ಅಥವಾ ಒಂದು ಓವರ್ ನ ಸೂಪರ್ ಓವರ್ ಕೂಡ ನಡೆಯುವುದಿಲ್ಲ ಎಂದರೆ ಲೀಗ್ ಪಂದ್ಯಗಳಲ್ಲಿ ಯಾವ ತಂಡ ಪಾಯಿಂಟ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿರುತ್ತೊ ಆ ತಂಡ ಈ ವರ್ಷದ ಐಪಿಎಲ್ ವಿನ್ನರ್ ಆಗುತ್ತೆ ಅಂದರೆ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡವು 2023ರ ಐಪಿಎಲ್ ಚಾಂಪಿಯನ್ ಆಗುತ್ತದೆ. ಈ ಮೂಲಕ ಹಾರ್ದಿಕ ಪಾಂಡ್ಯ ತಂಡವು ಬ್ಯಾಕ್ ಟು ಬ್ಯಾಕ್ ಟ್ರೋಪಿ ಗೆಲ್ಲುತ್ತದೆ.
ಇದನ್ನೂ ಓದಿ: ಭಕ್ತರಿಗೆ ದರ್ಶನ ಬೇಗ ನೀಡಲು ಮಹತ್ವದ ನಿರ್ಧಾರ ತೆಗೆದುಕೊಂಡ ತಿರುಪತಿ ದೇವಾಲಯ ಸಮತಿ. ಭಕ್ತಾಧಿಗಳಿಗೆ ಹೊಸ ರೂಲ್ಸ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram