ಐಪಿಎಲ್ 2024: ಈ 8 ಆಟಗಾರರ ಮರು ಪ್ರವೇಶದಿಂದ ಈ ಬಾರಿ ಟೂರ್ನಿಯಲ್ಲಿ ಭಾರೀ ಸದ್ದು ಉಂಟಾಗಲಿದೆ, ಯಾರಿರಬಹುದು ಅವರೆಲ್ಲ?

Ipl 2024 Comeback Players

ಜನರು IPL 2024 ತುದಿ ಗಾಲಿನಲ್ಲಿ ಕಾಯುತ್ತಿದ್ದಾರೆ. ಇನ್ನು 17 ನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಳಗೊಂಡ ಮೊದಲ ಪಂದ್ಯವನ್ನು ಮಾರ್ಚ್ 22 ರಂದು ಚೆಪಾಕ್‌ನಲ್ಲಿ ಪ್ರಾರಂಭ ಮಾಡಲಾಗುತ್ತಿದೆ. 17ನೇ ಸೀಸನ್ ನಲ್ಲಿ ಒಟ್ಟು ಎಂಟು ಆಟಗಾರರು ಪುನರಾಗಮಿಸಲಿದ್ದಾರೆ. ಅವರು ಯಾರಂದರೆ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ಮಿಚೆಲ್ ಸ್ಟಾರ್ಕ್. IPL 2024 ರ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗುವ ಈ ಲೀಗ್‌ನಲ್ಲಿ 46 ಆಟಗಾರರು IPL ಗೆ ಎಂಟ್ರಿ ಕೊಡಲಿದ್ದಾರೆ, ಆದರೆ 8 ಆಟಗಾರರು ಮಾತ್ರ ರೀ ಎಂಟ್ರಿಗೆ ಆಗಲೇ ಸಿದ್ಧವಾಗಿದ್ದಾರೆ. ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಗುಂಪಿನ ಒಂದು ಭಾಗ ಅಂತಾನೆ ಹೇಳಬಹುದು.

WhatsApp Group Join Now
Telegram Group Join Now

ಜಸ್ಪ್ರೀತ್ ಬುಮ್ರಾ

ಮುಂಬೈ ಇಂಡಿಯನ್ಸ್‌ನ ವೇಗದ ಬೌಲರ್ ಎಂದೇ ಪ್ರಸಿದ್ಧಿ ಪಡೆದಿರುವ ಜಸ್ಪ್ರೀತ್ ಬುಮ್ರಾ ಅವರು ಐಪಿಎಲ್ 2024 ಗೆ ಮರಳಲು ಸಿದ್ಧರಾಗಿದ್ದಾರೆ. 2023 ರಲ್ಲಿ, ಬೆನ್ನುನೋವಿನ ಕಾರಣ ಅವರು ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ಏಕದಿನ ವಿಶ್ವಕಪ್‌ ಕ್ರಿಕೆಟ್ ನಂತರ ಮೊದಲು ಅವರು ಈ ಬಾರಿ ಐಪಿಎಲ್‌ನಲ್ಲಿಯೂ ಆಡಲಿದ್ದಾರೆ.

ರಿಷಬ್ ಪಂತ್: ಹಿಂದಿನ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ರಿಷಬ್ ಪಂತ್ ಗೈರುಹಾಜರಾಗಿದ್ದರು. ಕಾರು ಅಪಘಾತದಲ್ಲಿ ಸಿಲುಕಿದ ನಂತರ, ಅವರು ಕಳೆದ 14 ತಿಂಗಳಿಂದ ಕ್ರಿಕೆಟ್ ಮೈದಾನದಿಂದ ವಿರಾಮ ತೆಗೆದುಕೊಳ್ಳಬೇಕಾಯಿತು. ಆದಾಗಲೂ ಸಹಿತ, ಬರುತ್ತಿರುವ 17 ನೇ ಸೀಸನ್ ನಲ್ಲಿ ಅವರ ರೀ ಎಂಟ್ರಿಗಾಗಿ ಜನರು ಉತ್ಸುಕತೆಯಿಂದ ಕಾಯುತ್ತಿದ್ದಾರೆ.

ಜಾನಿ ಬೈರ್‌ಸ್ಟೋವ್: ಜಾನಿ ಬೈರ್‌ಸ್ಟೋವ್ ತನ್ನ ಅಂತಿಮ IPL ಋತುವನ್ನು 2022 ರಲ್ಲಿ ಆಡಿದರು. ಅವರು 2023 ರಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ 2024 ರಲ್ಲಿ ಅವರು ಪಂಜಾಬ್ ಕಿಂಗ್ಸ್‌ಗಾಗಿ ಆಡಲಿದ್ದಾರೆ.

ಶ್ರೇಯಸ್ ಅಯ್ಯರ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ ಪುನರಾಗಮನ ಮಾಡಬಹುದು ಎಂದು ಅಂದಾಜು ಮಾಡಲಾಗಿದೆ. ಆದರೆ ಅವರ ಫಿಟ್ನೆಸ್ ಇನ್ನೂ ಅನಿಶ್ಚಿತವಾಗಿದೆ. ಬೆನ್ನುನೋವಿನ ಕಾರಣ ಕಳೆದ ವರ್ಷ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು.

ಪ್ಯಾಟ್ ಕಮ್ಮಿನ್ಸ್: ಐಪಿಎಲ್‌ನಲ್ಲಿ ಹೆಚ್ಚು ಮೌಲ್ಯಯುತ ಆಟಗಾರ ಎಂದೇ ಕರೆಸಿಕೊಂಡಿರುವ ಪ್ಯಾಟ್ ಕಮಿನ್ಸ್ ಅವರು ಟೂರ್ನಿಗೆ ಮರಳಲು ತಯಾರಾಗಿ ನಿಂತಿದ್ದಾರೆ. ಕಮ್ಮಿನ್ಸ್ 2023 ರಲ್ಲಿ ಏಜೆಸ್ ಕಾರಣ ODI ವಿಶ್ವಕಪ್‌ನಿಂದ ಹಿಂದೆ ಸರಿದರಾದರೂ ಅವರು ಈ ವರ್ಷ ಸನ್ ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ.

ಮಿಚೆಲ್ ಸ್ಟಾರ್ಕ್: ಮಿಚೆಲ್ ಸ್ಟಾರ್ಕ್, ಆಸ್ಟ್ರೇಲಿಯಾದ ವೇಗದ ಬೌಲರ್ ಇದು ಎಲ್ಲರಿಗೂ ಗೊತ್ತಿರುವ ವಿಚಾರ, 2015 ರಲ್ಲಿ ಅವರ ಕೊನೆಯ ಸೀಸನ್ ನ ನಂತರ 8 ವರ್ಷಗಳ ಅನುಪಸ್ಥಿತಿಯ ನಂತರ IPL ಗೆ ಪುನರಾಗಮನವನ್ನು ಮಾಡುತ್ತಿದ್ದಾರೆ. KKR, ಅವರನ್ನು IPL ಇತಿಹಾಸದಲ್ಲಿ ಕಂಡ ಅತ್ಯಧಿಕ ಬೆಲೆಗೆ ಖರೀದಿಸಿತು.

ಮುಖೇಶ್ ಚೌಧರಿ: 2023 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್‌ನ ವೇಗದ ಬೌಲರ್ ಮುಖೇಶ್ ಚೌಧರಿ ಅವರು ಗಾಯದ ಕಾರಣ ಇಡೀ ಸೀಸನ್ ನಲ್ಲಿ ಆಟವಾಡಲು ಸಾಧ್ಯವಾಗಿರಲಿಲ್ಲ. ಇದೀಗ, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡ ನಂತರ ಹಾಲಿ ಚಾಂಪಿಯನ್‌ಗಳಿಗಾಗಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.

ಕೇನ್ ವಿಲಿಯಮ್ಸನ್: 2023 ರ ಐಪಿಎಲ್ ಆರಂಭಿಕ ಪಂದ್ಯದ ವೇಳೆ ಕೇನ್ ವಿಲಿಯಮ್ಸನ್ ಗಾಯಗೊಂಡರು. ಅವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆಡುವಾಗ ಗಾಯಗೊಂಡರು. ಇದರಿಂದಾಗಿ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಈ ವರ್ಷ ಮತ್ತೆ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: OnePlus Nord CE4: ಕಡಿಮೆ ಬೆಲೆ, ಭರ್ಜರಿ ಫೀಚರ್ಸ್ ನೊಂದಿಗೆ ನಿಮ್ಮ ಕನಸಿನ ಫೋನ್, ಇನ್ನು ಮುಂದೆ ನಿಮ್ಮ ಕೈಯಲ್ಲಿ