ರೈಲ್ವೆ ಇಲಾಖೆಯಿಂದ ಏಳು ಜ್ಯೋತಿರ್ಲಿಂಗ ದರ್ಶನ ಪ್ರವಾಸ ಪ್ಯಾಕೇಜ್ ದರ ಎಷ್ಟು?

IRCTC Jyotirlinga Yatra 2024

ಭಾರತದಲ್ಲಿ ಪುಣ್ಯ ಕ್ಷೇತ್ರಗಳಿಗೆ ತೆರಳುವ ಜನರ ಸಂಖ್ಯೆ ಹೆಚ್ಚು. ವಿಮಾನ ಮತ್ತು ಬಸ್ ಪ್ರಯಾಣ ಇಷ್ಟ ಪಡದ ಜನರಿಗೆ ರೈಲ್ವೆ ಇಲಾಖೆ ಯಿಂದ ಈಗ ಹೊಸ ಟ್ರಿಪ್ ಪ್ಯಾಜ್ ಇದೆ. ನೀವು ರೈಲ್ವೆ ಪ್ರಯಾಣ ಮಾಡುತ್ತೀರಿ ಎಂದರೆ ಈಗ ಏಳು ಜ್ಯೋತಿರ್ಲಿಂಗ ದರ್ಶನ ಪಡೆಯಲು ಹೊಸ ಪ್ಯಾಕೇಜ್ ರೈಲ್ವೆ ಇಲಾಖೆ ತಿಳಿಸಿದೆ.

WhatsApp Group Join Now
Telegram Group Join Now

ಎಷ್ಟು ದಿನದ ಪ್ರಯಾಣ?: ಏಳು ಜ್ಯೋತಿರ್ಲಿಂಗ ದರ್ಶನ ಪ್ರವಾಸವು ಒಟ್ಟು 11 ರಾತ್ರಿ ಹಾಗೂ 12 ಹಗಲಿನಲ್ಲಿ ಪೂರ್ಣಗೊಳ್ಳಲಿದೆ. ಈ ಪ್ಯಾಕೇಜ್ ನಲ್ಲಿ ನೀವು ಬೆಳಗ್ಗಿನ ಚಹಾ ಮತ್ತು ತಿಂಡಿ ಹಾಗೂ ಮಧ್ಯಾನ್ಹ ಊಟ ಹಾಗೂ ಸಂಜೆಯ ಕಾಫಿ ಹಾಗೂ ರಾತ್ರಿಯ ಊಟ ಎಲ್ಲವೂ ಸೇರಿರುತ್ತದೆ. ಪ್ರಯಾಣಿಕರಿಗೆ ಸಸ್ಯಾಹಾರಿ ಆಹಾರ ಮಾತ್ರ ಲಭ್ಯ ಇರುತ್ತದೆ. ಈ ವಿಶೇಷ ಪ್ಯಾಕೇಜ್ ಹೊಂದಿರುವ ರೈಲು ಮೇ 22 2024 ರಂದು ಹೊರಡಲಿದೆ. ಈ ವಿಶೇಷ ಪ್ರಯಾಣದ ಕೊಡ್ NZBG35.

ಯಾವ ಯಾವ ಕ್ಷೇತ್ರಗಳು ಒಳಗೊಂಡಿವೆ?

ಈ ವಿಶೇಷ ಪ್ರವಾಸವು ಒಟ್ಟು ಏಳು ಜ್ಯೋತಿರ್ಲಿಂಗ ಕ್ಷೇತ್ರಗಳಿಗೆ ತೆರಳಲಿದೆ. ಅವು ಯಾವುದೆಂದರೆ ಓಂಕಾರೇಶ್ವರ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾಧೀಶ ದೇವಸ್ಥಾನ ಮತ್ತು ನಾಗೇಶ್ವರ ಜ್ಯೋತಿರ್ಲಿಂಗ, ಭೇಟ್ ದ್ವಾರಕಾ ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಗೃಷ್ಣೇಶ್ವರ ಜ್ಯೋತಿರ್ಲಿಂಗ ಔರಂಗಾಬಾದ್, ಭೀಮಾಶಂಕರ ಜ್ಯೋತಿರ್ಲಿಂಗ ಇಷ್ಟು ಕ್ಷೇತ್ರಗಳ ಜೊತೆಗೆ ಪುಣೆ ಸಹ ಸೇರಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವ ಕ್ಲಾಸ್ ಬೇಕು ಎಂಬುದು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ :- ಜ್ಯೋತಿರ್ಲಿಂಗ ಯಾತ್ರೆಗಾಗಿ ವಿಶೇಷ ಭಾರತ್ ಗೌರವ್ ಎಸಿ ಟೂರಿಸ್ಟ್ ರೈಲನ್ನು ಇಲಾಖೆ ಬಿಡುತ್ತಿದ್ದು ನೀವು ಪ್ರಯಾಣಿಸುವಾಗ ಸ್ಲೀಪರ್ ಕ್ಲಾಸ್, ಥರ್ಡ್ ಎಸಿ ಮತ್ತು ಸೆಕೆಂಡ್ ಎಸಿ ಕ್ಲಾಸ್ ಹಾಲನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

ಪ್ರಯಾಣದ ದರ ಹೀಗಿದೆ :- ಟ್ರೈನ್ ಜರ್ನಿ ಸಿಂಗಲ್ ಹಾಗೂ ಡಬಲ್ ಮತ್ತು 5-11 ವರ್ಷದ ಮೂವರು ಮಕ್ಕಳಿಗೆ ಪ್ರಯಾಣದ ದರ ಪಟ್ಟಿ ಹೀಗಿದೆ. 2A ಕ್ಲಾಸ್ ನಲ್ಲಿ ಪ್ರಯಾಣ ಮಾಡಿದರೆ 48,600 ರಿಂದ 46,700 ರೂಪಾಯಿ ಆಗುತ್ತದೆ. ಹಾಗೂ 3A ಕ್ಲಾಸ್ ಪ್ರಯಾಣಕ್ಕೆ 36,700 ಇಂದ 35,150 ರೂಪಾಯಿ ಆಗುತ್ತದೆ. ಹಾಗೂ ಎಸ್ಎಲ್ 22,150 ರಿಂದ 20,800 ರೂಪಾಯಿ ಆಗುತ್ತದೆ.

ಇದನ್ನೂ ಓದಿ: ತಿಂಗಳಿಗೆ 5 ರಿಂದ 10 ಸಾವಿರ ಇನ್ವೆಸ್ಟ್ ಮಾಡಿ ಒಂದು ಕೋಟಿ ಗಳಿಸುವ SIP ಯೋಜನೆ

ಬೋರ್ಡಿಂಗ್ ಮತ್ತು ಡಿ ಬೋರ್ಡಿಂಗ್ ನಿಲ್ದಾಣಗಳು :-

ಐಆರ್‌ಸಿಟಿಸಿ ನಿಗಮದ ತಿಳಿಸಿರುವ ಬೋರ್ಡಿಂಗ್ ಅಥವಾ ಡಿ-ಬೋರ್ಡಿಂಗ್ ಪಾಯಿಂಟ್‌ಗಳನ್ನು ಯಾವುದೆಂದರೆ ಯೋಗ ನಗರಿ ರಿಷಿಕೇಶ್ ಹಾಗೂ ಹರಿದ್ವಾರ ಹಾಗೂ ಮೊರಾದಾಬಾದ್ ಮತ್ತು ಬರೇಲಿ ಹಾಗೂ ಶಹಜಹಾನ್‌ಪುರ ಮತ್ತು ಹರ್ದೋಯ್ ಮತ್ತು ಲಕ್ನೋ ಹಾಗೂ ಕಾನ್ಪುರ್ ಹಾಗೂ ಒಆರ್‌ಐ ಹಾಗೂ ವಿರಂಗನ ಲಕ್ಷ್ಮೀಬಾಯಿ ಮತ್ತು ಲಲಿತ್‌ಪುರ ಜಂಕ್ಷನ್.

ಪ್ರಯಾಣಿಕರಿಗೆ ಪ್ರಯಾಣ ವಿಮೆಯನ್ನು ಇಲಾಖೆ ನೀಡುತ್ತದೆ. ನೀವು ವೃತ್ತಿಪರ ಮತ್ತು ಸ್ನೇಹಪರ ಪ್ರವಾಸದ ಅನುಭವ ಪಡೆಯಲು ಸಾಧ್ಯವಿದೆ. ನಿಗಮದ ಟೂರ್ ಮ್ಯಾನೇಜರ್‌ಗಳು ಪ್ರವಾಸದ ಉದ್ದಕ್ಕೂ ಪ್ರವಾಸಿಗರ ಜೊತೆ ಪ್ರಯಾಣಿಸುತ್ತಾರೆ. ಇದರಿಂದ ಸುರಕ್ಷಿತ ಪ್ರವಾಸ ಆಗುತ್ತದೆ. ಪ್ರಯಾಣ ಮಾಡುವಾಗ ನೀವು ಯಾವುದೇ ನಿತ್ಯ ತೆಗೆದುಕೊಳ್ಳುವ ಮಾತ್ರೆಗಳನ್ನು ತೆಗದುಕೊಂಡು ಹೋಗಿ ಹಾಗೂ ಹೆಚ್ಚಿನ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.

ಇದನ್ನೂ ಓದಿ: 50MP ಕ್ಯಾಮೆರಾವನ್ನು ಹೊಂದಿರುವ, Realme C65 ಅತ್ಯಂತ ಕಡಿಮೆ ಬೆಲೆಯ 5G ಫೋನ್ ಇದು!