ಭಾರತವನ್ನು ಅನೇಕ ಆಧ್ಯಾತ್ಮಿಕತೆಯ ನೆಲೆ ಎನ್ನುತ್ತಾರೆ. ಇಲ್ಲಿ ಕಲ್ಲಿಗೆ ಮಣ್ಣಿಗೆ ಸಹ ದೇವರು ಎಂದು ಭಕ್ತಿ ಭಾವದಿಂದ ಪೂಜೆ ಮಾಡುತ್ತಾರೆ. ಇಲ್ಲಿ ಸಾವಿರಾರು ಆಧ್ಯಾತ್ಮಿಕ ಕ್ಷೇತ್ರಗಳು ಇವೆ. ಉತ್ತರ ಭಾರತದಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳು ಇವೆ ಎಲ್ಲಾ ಧಾರ್ಮಿಕ ಕ್ಷೇತ್ರಗಳ ದರ್ಶನ ನಡೆಯಲು ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ IRCTC ಈಗ ಹೊಸದಾಗಿ ರಾಮಾಯಣ ಯಾತ್ರಾ ರೈಲು ಆರಂಭ ಮಾಡಿದೆ. ಇದರಿಂದ ಭಾರತದ 39 ಹಿಂದೂ ಧಾರ್ಮಿಕ ಕ್ಷೇತ್ರಗಳ ದರ್ಶನ ಭಾಗ್ಯ ಸಿಗುತ್ತದೆ.
ರೈಲಿನ ವಿಶೇಷತೆಗಳು ಏನೇನು?
IRCTC ಶ್ರೀ ರಾಮಾಯಣ ಯಾತ್ರಾ ಭಾರತ್ ಗೌರವ ಟೂರಿಸ್ಟ್ ರೈಲಿನ ಮೂಲಕ 18 ದಿನಗಳ ಪ್ರವಾಸವನ್ನು ಹೊಂದಿದೆ. ಈ ಯಾತ್ರೆಯು ರಾಮಾಯಣದ ಪ್ರಮುಖ ಸ್ಥಳಗಳನ್ನು ಒಳಗೊಂಡಿದೆ, ಭಗವಾನ್ ರಾಮನ ಜೀವನಗಾಥೆಯನ್ನು ನೀವು ನೋಡಲು ಸಾಧ್ಯವಿದೆ. ಈ ರೈಲಿನ ವಿಶೇಷತೆ ಏನೆಂದರೆ ಬೇಸಿಗೆ ಕಾಲಕ್ಕೆ ವಿನ್ಯಾಸಗೊಳಿಸಲಾಗಿದೆ ಈ ಐಷಾರಾಮಿ ಎಸಿ ಡಿಲಕ್ಸ್ ರೈಲು ಪ್ರಯಾಣದ ಅನನ್ಯ ಅನುಭವ ನೀಡುತ್ತದೆ. ನೀವು ಈ ರೈಲಿನಲ್ಲಿ ರೈಲು ಎಸಿ ಫಸ್ಟ್ ಕೊಚ್, ಎಸಿ ಫಸ್ಟ್, ಸೆಕೆಂಡ್ ಮತ್ತು ಥರ್ಡ್ ಕ್ಲಾಸ್ ಸೇರಿದಂತೆ ಹಲವಾರು ಕೋಚ್ ಪ್ರಕಾರಗಳನ್ನು ಒಳಗೊಂಡಿದೆ. ನಿಮ್ಮ ಆದ್ಯತೆಗಳ ಆಧಾರದ ಮೇಲೆ ಯಾವುದೇ ಆಯ್ಕೆ ನೀವು ಮಾಡಲು ಸಾಧ್ಯ.
ಯಾವ ಯಾವ ಕ್ಷೇತ್ರಗಳಿಗೆ ಈ ರೈಲು ಸಂಚರಿಸಲಿದೆ?: ಈ ರೈಲು ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಹೊರಟು, ಅಯೋಧ್ಯೆ, ಬಕ್ಸರ್, ನಂದಿಗ್ರಾಮ್, ಸೀತಾಮರ್ಹಿ, ಜನಕ್‌ಪುರ, ವಾರಣಾಸಿ, ಪ್ರಯಾಗ್‌ರಾಜ್, ಶೃಂಗವೇರಪುರ, ಚಿತ್ರಕೂಟ, ಹಂಪಿ, ನಾಸಿಕ್, ರಾಮೇಶ್ವರಂ, ಭದ್ರಾಚಲಂ ಮತ್ತು ಕಾಂಚೀಪುರಂ ಗೆ ತೆರಳಲಿದೆ. ಜೊತೆಗೆ ಗಾಜಿಯಾಬಾದ್, ಅಲಿಗಢ್, ತುಂಡ್ಲಾ, ಇಟಾವಾ, ಲಕ್ನೋ, ಕಾನ್ಪುರ್, ಝಾನ್ಸಿ, ಗ್ವಾಲಿಯರ್, ಮಥುರಾ, ಆಗ್ರಾ ಕ್ಯಾಂಟ್ ಮತ್ತು ಸಫದರ್‌ಜಂಗ್ ಸ್ಥಳಗಳಿಗೆ ಈ ರೈಲು ಸಂಚರಿಸಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಕ್ಷೇತ್ರಗಳ ದರ್ಶನ ಸಾಧ್ಯ :-
- ಅಯೋಧ್ಯೆ – ರಾಮ ಜನ್ಮಭೂಮಿ ಹಾಗೂ ಸರಯು ಘಾಟ್ ಮತ್ತು ಹನುಮಾನ್ ಗರ್ಹಿ ನೋಡಬಹುದು.
- ನಂದಿಗ್ರಾಮ್ – ಭರತ್ಕುಂಡ್ ಹಾಗೂ ಭಾರತ್-ಹನುಮಾನ್ ದೇವಸ್ಥಾನ ನೋಡಬಹುದು.
- ಜನಕಪುರ – ರಾಮ್ ಜಾನಕಿ ದೇವಸ್ಥಾನ ಹಾಗೂ ಪರಶುರಾಮ ಕುಂಡ ಮತ್ತು ಧನುಷ್ ಧಾಮ್ ದೇವಸ್ಥಾನ ನೋಡಲು ಸಾಧ್ಯವಿದೆ.
- ಸೀತಾಮರ್ಹಿ – ಪುನೌರ ಧಾಮ ಹಾಗೂ ಜಾನಕಿ ದೇವಸ್ಥಾನವನ್ನು ನೋಡಬಹುದು.
- ಬಕ್ಸರ್ – ರಾಮೇಶ್ವರನಾಥ ದೇವಾಲಯ ಹಾಗೂ ರಾಮರೇಖಾ ಘಾಟ್ ನೋಡಬಹುದು.
- ವಾರಣಾಸಿ – ತುಳಸಿ ಮಾನಸ ದೇವಸ್ಥಾನ ಹಾಗೂ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಸಂಕಷ್ಟ ಮೋಚನ ಮಂದಿರ, ಮತ್ತು ಗಂಗಾ ಆರತಿಯನ್ನೂ ನೋಡಲು ಅವಕಾಶ ಸಿಗುತ್ತದೆ.
- ಸೀತಾ ಸಮಾಹಿತ್ ಸ್ಥಳ, ಸೀತಾಮರ್ಹಿ – ಸೀತಾ ಮಾತಾ ದೇವಾಲಯ ನೋಡಲು ಸಾಧ್ಯ.
- ಪ್ರಯಾಗರಾಜ್ – ಶ್ರೀ ಭಾರದ್ವಾಜ ಆಶ್ರಮ ಹಾಗೂ ಹನುಮಾನ್ ದೇವಸ್ಥಾನ ಹಾಗೂ ಗಂಗಾ-ಯಮುನಾ ಸಂಗಮ ನೋಡಲು ಸಿಗುತ್ತದೆ.
- ಶೃಂಗ್ವೆರ್ಪುರ್ – ಶೃಂಗಿ ಋಷಿ ಆಶ್ರಮ ಹಾಗೂ ಶಾಂತಾ ದೇವಿ ದೇವಸ್ಥಾನ ಮತ್ತು ರಾಮಚೌರಾ ನೋಡಬಹುದು.
- ಚಿತ್ರಕೂಟ – ಸತಿ ಅನುಸೂಯಾ ದೇವಸ್ಥಾನ ಹಾಗೂ ಗುಪ್ತ ಗೋದಾವರಿ ಸ್ಥಳಕ್ಕೆ ಹೋಗಲು ಸಾಧ್ಯ.
- ನಾಸಿಕ್ – ತ್ರಯಂಬಕೇಶ್ವರ ಜ್ಯೋತಿರ್ಲಿಂಗ ದೇವಾಲಯ, ಶ್ರೀ ಕಲಾರಾಮ್ ದೇವಾಲಯ, ಪಂಚವಟಿ, ಸೀತಾ ಗುಫಾ ಸ್ಥಳವನ್ನು ವೀಕ್ಷಣೆ ಮಾಡಬಹುದು.
- ಹಂಪಿ – ಅಂಜನಾದ್ರಿ ಬೆಟ್ಟ ಹಾಗೂ ವಿಟ್ಲ ದೇವಸ್ಥಾನ ಹಾಗೂ ವಿರೂಪಾಕ್ಷ ದೇವಸ್ಥಾನ ನೋಡಬಹುದು.
- ರಾಮೇಶ್ವರಂ – ಧನುಷ್ಕೋಡಿ ಮತ್ತು ರಾಮನಾಥಸ್ವಾಮಿ ದೇವಸ್ಥಾನ ನೋಡಲು ಸಾಧ್ಯ.
- ಭದ್ರಾಚಲಂ – ಶ್ರೀ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ ಹಾಗೂ ನಾಮಕ್ಕಲ್ ಆಂಜನೇಯರ್ ದೇವಸ್ಥಾನ ನೋಡಲು ಸಾಧ್ಯ.
ಇದನ್ನೂ ಓದಿ: ನಿಮ್ಮ ಸ್ಮಾರ್ಟ್ ಫೋನ್ ನಿಂದ ಉತ್ತಮ ಫೋಟೋ ತೆಗೆಯಲು; ಈ ಐದು ಸೆಟ್ಟಿಂಗ್ ಮಾಡಿಕೊಳ್ಳಿ
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಪಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ