ಸಾಮಾನ್ಯವಾಗಿ ರೈಲ್ವೆ ಟಿಕೆಟ್ ಬುಕ್ ಮಾಡುವರ ಯಾರದ್ದೋ ID ಯಲ್ಲಿ ನಾವು ಟಿಕೆಟ್ ಬುಕ್ ಮಾಡುತ್ತೇವೆ. ಆದರೆ ನಮಗೆ ಹೀಗೆ ಟಿಕೆಟ್ ಬುಕ್ ಮಾಡುವುದರಿಂದ ನೀವು ಭಾರಿ ಮೊತ್ತದ ದಂಡವನ್ನು ಕಟ್ಟಬೇಕು ಎಂಬ ವಿಷಯ ನಿಮಗೆ ತಿಳಿದಿದೆಯೇ? ಹಾಗಾದರೆ ಎಷ್ಟು ಹಣವನ್ನು ಪಾವತಿ ಮಾಡಬೇಕು ಎಂಬುದನ್ನು ತಿಳಿಯೋಣ.
ರೈಲ್ವೆ ಇಲಾಖೆ ನಿಯಮ ಏನು?: ಟಿಕೆಟ್ ಬುಕ್ ಮಾಡಲು IRCTC ಕೆಲವು ನಿಬಂಧನೆಗಳನ್ನು ತಿಳಿಸಿದೆ. ಹಾಗಾದರೆ ನೀವು ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಈ ನಿಯಮಗಳನ್ನು ತಿಳಿದುಕೊಳ್ಳಿ. ರೈಲ್ವೆ ಇಲಾಖೆಯ ಕಾಯಿದೆ ಸೆಕ್ಷನ್ 143 ರಲ್ಲಿ ಇರುವ ಪ್ರಕಾರವಾಗಿ ಅಧಿಕೃತವಾಗಿ ಯಾರ ಹೆಸರು ಇದೆಯೋ ಅವರು ಮಾತ್ರ ರೈಲು ಟಿಕೆಟ್ಗಳನ್ನು ಬುಕ್ ಮಾಡಬಹುದು ಅಂದರೆ ನೀವು ನಿಮ್ಮ ಸ್ನೇಹಿತರಿಗೆ ಟಿಕೆಟ್ ಬುಕ್ ಮಾಡಬಹುದು ಅದರ ಹೊರತಾಗಿ ನಿಮ್ಮ ಸ್ನೇಹಿತರು ಅಥವಾ ಪರಿಚಯ ಇಲ್ಲದ ಅಥವಾ ಪರಿಚಯವಿರುವ ಯಾವುದೇ ವ್ಯಕ್ತಿ ನಿಮ್ಮ IRCTC ID ಬಳಸಿ ಟಿಕೆಟ್ ಬುಕ್ ಮಾಡುವಂತೆ ಇಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವೈಯಕ್ತಿಕ ಗುರುತಿನ ID ಬಳಸಿ ಬೇರೆಯವರೂ ಟಿಕೆಟ್ ಬುಕ್ಕಿಂಗ್ ಮಾಡುವುದು ಅಪರಾಧ ಆಗಿದೆ :- ನಿಮ್ಮ ವೈಯಕ್ತಿಕ ಗುರುತಿನ ಚೀಟಿಯನ್ನು ಬಳಸಿ ಟಿಕೆಟ್ ಬುಕ್ಕಿಂಗ್ ಮಾಡುವುದು ಕಾನೂನಿನ ಅಡಿಯಲ್ಲಿ ಅಪರಾಧ ಆಗಿರುತ್ತದೆ. ಇದರಿಂದ ನೀವು ಹೆಚ್ಚಿನ ಹಣವನ್ನು ದಂಡವಾಗಿ ಕಟ್ಟುವ ಸಂದರ್ಭ ಬರುತ್ತದೆ. ಅದರಿಂದ ನೀವು ನಿಮ್ಮ ಗುರುತಿನ ID ಯಾರೊಂದಿಗೂ ಶೇರ್ ಮಾಡಿಕೊಳ್ಳಬಾರದು.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ SSLC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ ಇದೆ.
ನೀವು ಯಾರಿಗೆ ಟಿಕೆಟ್ ಬುಕಿಂಗ್ ಮಾಡಬಹುದು :-
ನೀವು ರೈಲ್ವೆ ಟಿಕೆಟ್ ಬುಕಿಂಗ್ ಮಾಡುವಾಗ ನಿಮ್ಮ ಹತ್ತಿರದ ಸಂಬಂಧಿಕರು ಅಂದರೆ ಅಪ್ಪ ಅಮ್ಮ, ತಂಗಿ, ಅಕ್ಕ, ಅಜ್ಜ, ಅಜ್ಜಿ ಹೀಗೆ ರಕ್ತ ಸಂಬಂಧಿಕರಿಗೆ ಮಾತ್ರ ನೀವು ನಿಮ್ಮ ಗುರುತಿನ ID ಬಳಸಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ನೀವು ಯಾವುದೇ ಕಾರಣಕ್ಕೂ ನಿಮ್ಮ ಸ್ನೇಹಿತರು ಅಥವಾ ಬೇರೆ ಯಾರೋ ಪರಿಚಯ ವ್ಯಕ್ತಿ ಎಂದು ನೀವು ಟಿಕೆಟ್ ಬುಕ್ ಮಾಡಿದರೆ ನೀವು ದಂಡ ನೀಡಬೇಕಾದ ಸಂದರ್ಭ ಬರಬಹುದು.
ಬೇರೆಯವರಿಗೆ ಟಿಕೆಟ್ ಬುಕ್ ಮಾಡಿದರೆ ಎಷ್ಟು ದಂಡ ಕಟ್ಟಬೇಕು :- ನೀವು ಒಂದುವೇಳೆ ನಿಮ್ಮ ಸ್ನೇಹಿತರು ಅಥವಾ ಯಾರೋ ಪಕ್ಕದವರ ಎಂದು ಅವರಿಗೆ ಟಿಕೆಟ್ ಬುಕ್ ಮಾಡಿದ್ದರೇ ನೀವು ಬರೋಬರಿ 10,000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಇಲ್ಲವೇ ನೀವು 3 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
IRCTC ವೆಬ್ಸೈಟ್ನಲ್ಲಿ ತಿಂಗಳಿಗೆ ಏಷ್ಟು ಟಿಕೆಟ್ ಬುಕ್ ಮಾಡಬಹುದು?
ನೀವು ಒಂದು ತಿಂಗಳಿಗೆ ಗರಿಷ್ಠ ಬುಕಿಂಗ್ ಮಾಡಬಹುದು ಎಂದು ಇಲಾಖೆ ತಿಳಿಸಿದೆ. ನೀವು ಒಂದು ತಿಂಗಳಲ್ಲಿ IRCTC ವೆಬ್ಸೈಟ್ನಲ್ಲಿ ಒಂದು ID ಯಲ್ಲಿ 24 ಟಿಕೆಟ್ ಬುಕಿಂಗ್ ಮಾಡುವ ಅವಕಾಶ ಇರುತ್ತದೆ. ಇದಕ್ಕೂ ಹೆಚ್ಚು ಬುಕಿಂಗ್ ಮಾಡಲು ಸಾಧ್ಯವಿಲ್ಲ. ನೀವು ನಿಮ್ಮ IRCTC ID ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದಾರೆ ನೀವು ಒಂದು ತಿಂಗಳಿಗೆ 24 ಟಿಕೆಟ್ ಬುಕಿಂಗ್ ಮಾಡಲು ಸಾಧ್ಯ. ಇಲ್ಲವಾದರೆ ನೀವು ತಿಂಗಳಿಗೆ ಕೇವಲ 12 ಟಿಕೆಟ್ ಬುಕಿಂಗ್ ಮಾಡಬಹುದು. ಈ ಟಿಕೆಟ್ ಗಳು ಕೇವಲ ನಿಮ್ಮ ಕುಟುಂಬದ ಸದಸ್ಯರಿಗೆ ಮಾತ್ರ ನೀವು ಬುಕ್ ಮಾಡಲು ಸಾಧ್ಯ ಇದೆ.
ಇದನ್ನೂ ಓದಿ: ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 78000 ರೂಪಾಯಿ ಸಬ್ಸಿಡಿ ಪಡೆಯಿರಿ.