ನಮ್ಮ ದೇಶದಲ್ಲಿ ಕೆಲವೊಂದಷ್ಟು ಮಂದಿ ಪ್ರಯಾಣ ಅಂದ್ರೆ ಅದು ರೈಲ್ವೆ ಪ್ರಯಾಣ. ಅದರಷ್ಟು ಸುಖಕರ ಮತ್ತೊಂದು ಇಲ್ಲ ಅಂತಾರೆ. ಹೌದು ರೈಲ್ವೆ ಪ್ರಯಾಣ ಯಾವುದೇ ವಿಚಾರಕ್ಕೆ ಹೋಲಿಸಿಕೊಂಡರು ಎಲ್ಲದಕ್ಕಿಂತ ಬೆಸ್ಟ್ ಅಂತ ಹೇಳಬಹುದು ಹೌದು ಅದರಲ್ಲೂ ಮಕ್ಕಳ ಜೊತೆ ದೂರದ ಪ್ರಯಾಣ ಮಾಡಬೇಕು ಅಂದ್ರೆ ಹೆಚ್ಚು ಮಂದಿ ಆಯ್ಕೆ ಮಾಡಿಕೊಳ್ಳುವುದು ರೈಲು ಪ್ರಯಾಣವನ್ನೇ ಕಾರಣ ಎಲ್ಲದರಲ್ಲೂ ಅದು ನಮಗೆ ಕಂಫರ್ಟ್ ಇರುತ್ತೆ ಅನ್ನೋದಕ್ಕೆ ಇನ್ನು ದೇಶದಲ್ಲಿ ಬಹುತೇಕ ಮಂದಿ ದೂರ ಪ್ರಯಾಣಕ್ಕೆ ರೈಲನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಅದು ಗೊತ್ತಿರುವ ವಿಚಾರನೇ. ಅದರಲ್ಲೂ ರೈಲು ಪ್ರಯಾಣ ಆರಾಮದಾಯಕವಾಗಿರುತ್ತದೆ ಅನ್ನೋ ಕಾರಣಕ್ಕೆ ಸಾಕಷ್ಟು ಮಂದಿ ರೈಲನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಪುಟ್ಟ ಮಕ್ಕಳನ್ನು ಹಿಡಿದು ಪ್ರಯಾಣ ಬೆಳೆಸುವುದು, ಹಿರಿಯರೊಂದಿಗಿನ ಪ್ರಯಾಣ ಮಾಡೋದು ರೈಲಿನಲ್ಲಿ ಕಷ್ಟ ಎನಿಸುವುದಿಲ್ಲ. ಅಲ್ಲದೆ ಯಾವಾಗ ಬೇಕೋ ಆಗ ಊಟ ತಿಂಡಿ ಕೂಡಾ ಸಮಸ್ಯೆ ಇಲ್ಲದೆ ಪೂರೈಸಿಕೊಳ್ಳಬಹುದು. ಆದರೆ, ಇಷ್ಟೆಲ್ಲ ಒಳ್ಳೆಯ ವಿಚಾರಗಳಿದ್ರು ರೈಲು ಪ್ರಯಾಣದ ವೇಳೆ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ರಿಸರ್ವ್ ಬೋಗಿಯಲ್ಲಿ ವೈಟಿಂಗ್ ಲಿಸ್ಟ್ ಪ್ರಯಾಣಿಕರು ಬಂದು ಸೇರಿಕೊಳ್ಳುವುದು.
ಹೌದು ಇ-ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿದ್ದರೆ ಅದು ಆಟೋಮ್ಯಾಟಿಕ್ ಆಗಿ ರದ್ದಾಗುತ್ತದೆ. ಆದರೆ, ಕೌಂಟರ್‌ನಿಂದ ಟಿಕೆಟ್ ಮಾಡಿಸಿದರೆ ಅದು ರದ್ದಾಗುವುದಿಲ್ಲ. ಈ ಕಾರಣದಿಂದಲೇ ವೈಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಕೊಂಡು ಜನರು ರಿಸರ್ವ್ದ್ ಬೋಗಿಯಲ್ಲಿ ಪ್ರಯಾಣಿಸಲು ಆರಂಭಿಸುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡುವುದು ಸಾಧ್ಯವಾಗುವುದಿಲ್ಲ. ಹೌದು ರೈಲ್ವೆ ಇಲಾಖೆ ಅಂತ ಪ್ರಯಾಣಿಕರಿಗೆ ಇದೀಗ ದೊಡ್ಡ ಶಾಕ್ ಕೊಟ್ಟಿದೆ ಅಂತಾನೆ ಹೇಳಬಹುದು. ಯಾಕೆ ಏನು ಅಂತ ಮುಂದೆ ನೋಡ್ತಾ ಹೋಗೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ರೈಲ್ವೆ ಇಲಾಖೆಯಿಂದ ಹೊಸ ಕಾನೂನು
ಈ ಡಿಜಿಟಲ್ ಯುಗದಲ್ಲಿ ಈಗ ಬಹಳಷ್ಟು ರೈಲ್ವೆ ಪ್ರಯಾಣಿಕರು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಬಯಸುತ್ತಾರೆ. ಭಾರತೀಯ ರೈಲ್ವೆ ಇಲಾಖೆಯೂ ಪ್ರಯಾಣಿಕರಿಗೆ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಅವಕಾಶವನ್ನು ನೀಡಿತ್ತು. ಇ-ಟಿಕೆಟ್ ಎಂದರೆ ಎಲೆಕ್ಟ್ರಾನಿಕ್ ಮುದ್ರಿತ ಟಿಕೆಟ್. ಪ್ರಯಾಣಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಟಿಕೆಟ್ ಅನ್ನು ಮುದ್ರಿಸಿಕೊಳ್ಳಬಹುದು ಅಂದರೆ ಕಾಪಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇ-ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮನೆಯಿಂದ ಅಥವಾ ಯಾವುದೇ ಕಂಪ್ಯೂಟರ್ ಸೆಂಟರ್ನಿಂದ ಬುಕ್ ಮಾಡಬಹುದು. ಇನ್ನು ಇದರ ಸಿಂಧುತ್ವವು ರೈಲ್ವೆ ಬುಕಿಂಗ್ ಕೌಂಟರ್‌ನಿಂದ ನೀಡಲಾದ ಟಿಕೆಟ್‌ನಂತೆಯೇ ಇರುತ್ತದೆ. ಪ್ರಯಾಣಿಕರು ಇ-ಟಿಕೆಟ್ ಮೂಲಕ ಪ್ರಯಾಣಿಸಲು ತಮ್ಮ ಸರ್ಕಾರಿ ಗುರುತಿನ ಚೀಟಿಯನ್ನು ಇಟ್ಟುಕೊಳ್ಳಬೇಕು. ಆದ್ರಿಗ ರಿಸರ್ವ್ಡ್ ಬೋಗಿಯಲ್ಲಿ ವೈಟಿಂಗ್ ಟಿಕೆಟ್ ಹಿಡಿದುಕೊಂಡು ಯಾರಾದರೂ ಪ್ರಯಾಣಿಸುತ್ತಿದ್ದರೆ, ಆ ಪ್ರಯಾಣಿಕರ ಬಗ್ಗೆ ಇದೀಗ ದೂರು ಸಲ್ಲಿಸಬಹುದಾಗಿದೆ.
ಇದಕ್ಕಾಗಿ ಹೊಸ ಆಪ್ಲಿಕೆಶನ್ ತಯಾರಾಗುತ್ತಿದೆ. ಪ್ರಸ್ತುತ, ಈ ಅಪ್ಲಿಕೇಶನ್‌ನಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಯಶಸ್ವಿ ಪ್ರಯೋಗದ ನಂತರ, ಪ್ರಯಾಣಿಕರು ಅದನ್ನು Google play store ಮತ್ತು Apple Play ಅಪ್ಲಿಕೇಶನ್ ಮೂಲಕ ಇಲ್ಲಿ ದೂರನ್ನು ದಾಖಲಿಸಬಹುದು. ರೈಲ್ವೇ ಮಂಡಳಿಯ ಪ್ರಕಾರ, ವೈಟಿಂಗ್ ಟಿಕೆಟ್ ಹೊಂದಿರುವವರು ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಾರೆ ಎಂಬ ದೂರುಗಳು ಪದೇ ಪದೇ ಬರುತ್ತಿವೆ. ಇದರಿಂದಾಗಿ ಇತರ ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ಕೆಲ ಪ್ರಕರಣಗಳಲ್ಲಿ ದೂರು ನೀಡಿದರೂ ತಕ್ಷಣ ಪರಿಹಾರ ಸಿಗುತ್ತಿಲ್ಲ ಎಂದು ಹೇಳಲಾಗಿದೆ. ಈಗಾಗಿ ಹೊಸ ಕ್ರಮಕ್ಕೆ ಇದೀಗ ಇಲಾಖೆ ಮುಂದಾಗಿದೆ.
ಇದನ್ನೂ ಓದಿ: 10 ಮತ್ತು 12ನೇ ತರಗತಿ ಪಾಸಾದವರಿಗೆ ರಾಯಚೂರು ನ್ಯಾಯಾಲಯದಲ್ಲಿ ಉದ್ಯೋಗಾವಕಾಶ, ಅರ್ಜಿಯನ್ನು ಸಲ್ಲಿಸಲು ಇಲ್ಲಿದೆ ಸರಳ ಮಾಹಿತಿ
ವೈಟಿಂಗ್ ಲಿಸ್ಟ್ ಟಿಕೆಟ್ ಇಟ್ಟುಕೊಂಡು ಪ್ರಯಾಣಿಸಿದ್ದಾರೆ ತೊಂದರೆ ಗ್ಯಾರಂಟಿ
ಹೌದು ರೈಲ್ವೆ ಇಲಾಖೆ ಹೊಸ app ನ ಸಿದ್ದಪಡಿಸ್ತಿದ್ದು ಇದರ ಮೂಲಕ ದೂರನ್ನ ಕೂಡ ನೀಡಬಹುದು. ಇನ್ನು ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ ಅಂದ್ರೆ ರೈಲು ನಿಲ್ದಾಣದಿಂದ ನಿರ್ಗಮಿಸಿದ ನಂತರ, ಟಿಟಿಇ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಆಸನಗಳ ಡೇಟಾವನ್ನು ಹ್ಯಾಂಡ್ ಹೆಲ್ಡ್ ಡಿವೈಸ್ ಮೂಲಕ ಫೀಡ್ ಮಾಡುತ್ತಾರೆ. ಆಗ ಪ್ರಯಾಣಿಕರು ಆ್ಯಪ್‌ನಲ್ಲಿ ರೈಲು ಸಂಖ್ಯೆ ಮತ್ತು ಕೋಚ್ ಅನ್ನು ಫೀಡ್ ಮಾಡುತ್ತಾರೆ. ಇದರ ನಂತರ, ಬೋಗಿಯ ಸೀಟ್ ಬರ್ತ್ ರಿಸರ್ವೇಶನ್ ಲೇಔಟ್ ಕಾಣಿಸುತ್ತದೆ. ಬೋಗಿಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಕಾಣಿಸಿಕೊಂಡರೆ, ಪ್ರಯಾಣಿಕರು ಆ್ಯಪ್ ಮೂಲಕ ದೂರು ನೀಡಲು ಸಾಧ್ಯವಾಗುತ್ತದೆ.
ಆಪ್ ನಲ್ಲಿ ದೂರು ದಾಖಲಾದ ತಕ್ಷಣ ಸಂಪೂರ್ಣ ಮಾಹಿತಿಯು ಸ್ವಯಂಚಾಲಿತವಾಗಿ ಸೆಂಟ್ರಲೈಸ್ಡ್ ಸಿಸ್ಟಮ್ ಗೆ ಹೋಗುತ್ತದೆ. ಇಲ್ಲಿಂದ TTEಗೆ ಅಲರ್ಟ್ ಬರುತ್ತದೆ. ದೂರನ್ನು ಸ್ವೀಕರಿಸಿದ ನಂತರ, ಟಿಟಿಇ ಟಿಕೆಟ್ ಇಲ್ಲದೆ ಪ್ರಯಾಣಿಸುವವರನ್ನು ಸಂಬಂಧಪಟ್ಟ ಕೋಚ್‌ನಲ್ಲಿರುವ ರಿಸರ್ವ್ ಕೋಚ್‌ನಿಂದ ಹೊರಗೆ ಕಳುಹಿಸುತ್ತಾರೆ. ಯಾವುದೇ ಸಮಸ್ಯೆ ಎದುರಾದರೆ ಅವರು ಆರ್‌ಪಿಎಫ್‌ನ ಸಹಾಯ ಪಡೆಯುತ್ತಾರೆ. ಒಂದು PNR ನಲ್ಲಿ ವೈಟಿಂಗ್ ಮತ್ತು ಕನ್ಫರ್ಮ್ ಟಿಕೆಟ್ ಇದ್ದರೆ ಏನಾಗಬಹುದು ಅಂದ್ರೆ ಮುಖ್ಯವಾಗಿ ಕೆಲವು ಟಿಕೆಟ್‌ಗಳು ಕನ್ಫರ್ಮ್ ಆಗಿದ್ದು, ಇನ್ನು ಕೆಲವು ಟಿಕೆಟ್ ಗಳು ಅದೆ ಪಿಎನ್ಆರ್ ನಂಬರ್ ನಲ್ಲಿ ವೈಟಿಂಗ್ ನಲ್ಲಿದ್ದರೆ, ಏನು ಮಾಡುವುದು ಎನ್ನುವುದು. ಅಂತಹ ಪರಿಸ್ಥಿತಿಯಲ್ಲಿ, ವೈಟಿಂಗ್ ಪ್ರಯಾಣಿಕರು ಅದೇ PNR ನ ಕನ್ಫರ್ಮ್ಡ್ ಸೀಟಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಪ್ರಯಾಣಿಕರು ಯಾವುದೇ ತೊಂದರೆಯಾಗದಂತೆ ಪ್ರಯಾಣಿಸುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಅಂತ ರೈಲ್ವೆ ಇಲಾಖೆ ಹೇಳಿದೆ. ಹೀಗಾಗಿ ಇನ್ಮುಂದೆ ಈ ಟಿಕೆಟ್ ಇಟ್ಟುಕೊಂಡು ರೆಸಾರ್ವೇಷನ್ ಸೀಟ್ ನಲ್ಲಿ ಕೂತು ಪ್ರಯಾಣಿಸಲು ಹೋದ್ರೆ ಖಂಡಿತವಾಗಿಯೂ ತೊಂದರೆಗೆ ಸಿಲುಕೋದು ಗ್ಯಾರಂಟಿ ಹೀಗಾಗಿ ಯೋಚಿಸಿ ಮುಂದುವರೆಯೋದು ಉತ್ತಮ.
ಇದನ್ನೂ ಓದಿ: ನೀವು ಶಿಕ್ಷಣಕ್ಕಾಗಿ ಸಾಲವನ್ನು ಪಡೆಯುವ ಮೊದಲು ಕೆಲವು ಅಂಶಗಳನ್ನು ನೆನಪಿಡಿ,