Itel ನ ಈ ಸ್ಮಾರ್ಟ್ ಫೋನ್ 16GB ಮತ್ತು 256GB ಸ್ಟೋರೇಜ್ ನೊಂದಿಗೆ ಕೇವಲ 9,499 ರೂಪಾಯಿಗೆ ಖರೀದಿಸಿ.

Itel P55 Plus price

itel ಸ್ಮಾರ್ಟ್ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ. itel ಕಂಪನಿಯು ಈಗ ಹೊಸದಾಗಿ ಇನ್ನೊಂದು ಸ್ಮಾರ್ಟ್ ಫೋನ್ ಬಿಡುಗಡೆ ಆಗುತ್ತಿದೆ. ಅದರ ಬೆಲೆ ಹಾಗೂ ಅದರ ಪೂರ್ಣ ವಿವರಗಳನ್ನು ಈ ಲೇಖನದ ಮೂಲಕ ತಿಳಿಯಿರಿ.

WhatsApp Group Join Now
Telegram Group Join Now

ಸ್ಮಾರ್ಟ್ಫೋನ್ ವಿಶೇಷತೆಗಳು ಏನು?: ಫೆಬ್ರವರಿ 13 2024 ರಂದು Itel ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿದೆ. ಇದು Itel P55 ಸರಣಿಯ ಹೊಸ ಸ್ಮಾರ್ಟ್ ಫೋನ್ ಆಗಿದೆ. ಸ್ಮಾರ್ಟ್ ಫೋನ್ ಹೆಸರು Itel P55 Plus. ಇದರ ವಿನ್ಯಾಸವು ಐಫೋನ್‌ ಹಾಗೆಯೇ ಇದೆ. ಇದು ನಿಮಗೆ ಬಳಕೆಗೆ ತುಂಬಾ ಕನ್ಫರ್ಟ್ ಫೀಲ್ ಕೊಡುತ್ತದೆ. ಹಾಗಾದರೆ ಇದರ features ಹಾಗೂ specialisation ಬಗ್ಗೆ ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

  • ಇದರ ಹಿಂಭಾಗದ ವಿನ್ಯಾಸ Vegan leather (ಸಸ್ಯಾಹಾರಿ ಚರ್ಮ) ಆಗಿದೆ.
  • Itel P55 Plus ಫೋನ್ UNISOC ನ ಇತ್ತೀಚಿನ ಪ್ರೊಸೆಸರ್ UNISOC T606 ಅನ್ನು ಹೊಂದಿದೆ.
  • 8GB RAM ಹೊಂದಿದೆ. ನೀವು 24GB ವರೆಗೆ RAM ವಿಸ್ತರಿಸಬಹುದು.
  • ಮುಖ್ಯವಾಗಿ 256GB ಇಂಟರ್ನಲ್ ಸ್ಟೋರೇಜ್ ಇದೇ. 1TB ವರೆಗೆ ವಿಸ್ತರಿಸಬಹುದು.
  • 5,000mAh ದೀರ್ಘಾವಧಿ ಬ್ಯಾಟರಿ ಹೊಂದಿದೆ. ಹಾಗೂ ಚಾರ್ಜ್ ಮಾಡಲು ನಿಮಗೆ 45 ವ್ಯಾಟ್ ವೇಗದ ಚಾರ್ಜರ್(ಟೈಪ್-ಸಿ ) ಸಹ ಸಿಗುತ್ತದೆ.
  • ಇನ್ನು ಮೊಬೈಲ್ ತೆಗೆದುಕೊಳ್ಳುವಾಗ ತುಂಬಾ ಗಮನ ಕೊಡುವುದು ಕ್ಯಾಮರಾ ಬಗ್ಗೆ ಇದರಲ್ಲಿ ನಿಮಗೆ 50MP ಡ್ಯುಯಲ್ ರಿಯರ್ ಕ್ಯಾಮೆರಾಗಳು, 8MP ಫ್ರಂಟ್ ಕ್ಯಾಮೆರಾ ಇವೆ. ಹಾಗೂ ಪ್ಲಾಶ್ಲೈಟ್(flash light) ಸಹ ನೀಡಲಾಗಿದೆ. ಹಾಗೂ ಪೂರ್ಣ HD @30fps ವೀಡಿಯೊ ರೆಕಾರ್ಡಿಂಗ್ ಮಾಡಬಹುದು.
  • Display ಬಗ್ಗೆ ಹೇಳುವುದಾದರೆ Itel P55 Plus 6.6 ಇಂಚಿನ HD ಪ್ಲಸ್ ಡಿಸ್‌ಪ್ಲೇಯನ್ನು (display) ಹೊಂದಿದೆ.
  • ಬಲಭಾಗದಲ್ಲಿ finger print ಆಪ್ಷನ್ ಇದೆ. ನಂಬರ್ ಲಾಕ್, ಫೇಸ್ ಲಾಕ್ ಸಿಸ್ಟಮ್ ಸಹ ಇದೆ.
  • Android 13 ಆಪರೇಟಿಂಗ್ ಸಿಸ್ಟಮ್ ಒಳಗೊಂಡಿದೆ.
  • ರಾಯಲ್ ಗ್ರೀನ್ ಹಾಗೂ ಮೆಟಿಯರ್ ಬ್ಲ್ಯಾಕ್ ಹಾಗೂ ಮೆಟಿಯರ್ ಪರ್ಪಲ್ ಬಣ್ಣಗಳಲ್ಲಿ ಲಭ್ಯ ಇದೆ.
  • ಡ್ಯುಯಲ್ ಸಿಮ್ ಕಾರ್ಡನ್ನು ಅಳವಡಿಕೆಗೆ ಅವಕಾಶ ಇದೆ. ಎರಡು ಸಹ ನ್ಯಾನೋ ಸಿಮ್ ಗಳನ್ನು ಹಾಕಬಹುದು.
  • 4G ಸಂಪರ್ಕವನ್ನು ಹೊಂದಿದೆ. ಬ್ಲೂಟೂತ್, ವೈಫೈ , ಹಾಟ್ಸ್ಪಾಟ್ ಸಂಪರ್ಕವನ್ನು ಹೊಂದಿದೆ.

Itel P55 Plus ಬೆಲೆ ಏಷ್ಟು ಹಾಗೂ ಖರೀದಿಸುವುದು ಹೇಗೆ?

ಫೆಬ್ರುವರಿ 13 ರಂದು ಫೋನ್ ಬಿಡುಗಡೆ ಆಗುತ್ತದೆ. ನೀವು ಆನ್ಲೈನ್ ನಲ್ಲಿ ಬುಕಿಂಗ್ ಮಾಡಬಹುದು. Amazon, Flipkart, ಹಾಗೂ Itel ಅಧಿಕೃತ ಜಾಲತಾಣಕ್ಕೇ ಹೋಗಿ ಈಗಲೇ ಬುಕ್ ಮಾಡಬಹುದು. ಇದರ ಬೆಲೆ ಕೇವಲ 9,499 ರೂಪಾಯಿ. ಕಡಿಮೆ ಬೆಲೆಯಲ್ಲಿ ಹೆಚ್ಚಿನ features ಹೊಂದಿರುವ ಸ್ಮಾರ್ಟ್ ಫೋನ್ ಇದಾಗಿದ್ದು ಹೊಸದಾಗಿ ಮೊಬೈಲ್ ಫೋನ್ ತೆಗೆದುಕೊಳ್ಳುವ ಯೋಚನೆ ಇದ್ದರೆ ಅಥವಾ ಮೊಬೈಲ್ ಬದಲಾಯಿಸುವ ಆಲೋಚನೆ ಇದ್ದರೆ ನೀವು ನಿಸ್ಸಂದೇಹವಾಗಿ Itel P55 Plus ಸ್ಮಾರ್ಟ್ ಫೋನ್ ಕೊಂಡುಕೊಳ್ಳಬಹುದು. ಈಗಲೇ ನೀವು ಆನ್ಲೈನ್ ನಲ್ಲಿ ಇದರ ಬಗ್ಗೆ ತಿಳಿಯಬಹುದು. ಇದರ ಫೋಟೋಗಳು ಈಗಾಗಲೇ itel ವೆಬ್ಸೈಟ್ ಹಾಗೂ amazon and Flipkart ಆನ್ಲೈನ್ ಆ್ಯಪ್ ಗಳಲಿ ಲಭ್ಯವಿದೆ.

ಇದನ್ನೂ ಓದಿ: ಟಾಟಾ ಪ್ರೇಮಿಗಳಿಗೆ ಗುಡ್ ನ್ಯೂಸ್, 1 ಲಕ್ಷ ರೂ ರಿಯಾಯಿತಿಯಲ್ಲಿ ಟಾಟಾ ನೆಕ್ಸನ್ EV

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ, Dolby Atmos ತಂತ್ರಜ್ಞಾನವನ್ನು ಹೊಂದಿರುವ Moto G04 ನ ವಿಶೇಷ ವೈಶಿಷ್ಟತೆಗಳನ್ನು ತಿಳಿದರೆ ಖರೀದಿಸದೆ ಇರಲಾರಿರಿ