ಡ್ರೋನ್ ಪ್ರತಾಪ್(Drone Prathap) ಈ ಹಿಂದೆ ಡ್ರೋನ್ ವಿಚಾರವಾಗಿ ಕರ್ನಾಟಕ ಮಾತ್ರವಲ್ಲದೇ ಭಾರತಾದ್ಯಂತ ಜನಪ್ರಿಯರಾಗಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ವ್ಯಕ್ತಿ. ಇನ್ನು ಕನ್ನಡ ಕಿರುತೆರೆಯಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್ಬಾಸ್(BIg boss). ಸದ್ಯ ಬಿಗ್ಬಾಸ್ ಸೀಸನ್ 10ರ ಮೇಲೆ ಈಗ ಇಡೀ ಕರುನಾಡೇ ಕಣ್ಣಿಟ್ಟಿದೆ. ಎಲ್ಲರ ಕಾಯುವಿಕೆಯಂತೆ ಈ ಬಾರಿ ಡ್ರೋನ್ ಪ್ರತಾಪ್ ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್ ಅನ್ನುವುದಕ್ಕೂ ಮುಂಚೆ ಇವರ ಹೆಸರು ಪ್ರತಾಪ್ ಅಂತಷ್ಟೇ ಇತ್ತು. ಆದರೆ ಅದೊಂದು ದಿನ ಡ್ರೋನ್ ಕಂಡಿದ್ದು ಇಡೀ ದೇಶವೇ ತನ್ನ ಕಡೆ ನೋಡೋ ರೀತಿ ಮಾಡಿಕೊಂಡಿದ್ದರು ಪ್ರತಾಪ್. ಅತಿ ಚಿಕ್ಕ ವಯಸ್ಸಿನಲ್ಲಿ ಯಾರ ಸಹಾಯವು ಇಲ್ಲದೆ ಬಡತನದಲ್ಲೂ ಈ ರೀತಿಯ ಸಾಧನೆ ಮಾಡಿದ ಪ್ರತಾಪ್ಗೆ ಇಡೀ ಕರ್ನಾಟಕವೇ ಸಾಥ್ ಕೊಟ್ಟಿತ್ತು. ನಂತರದಲ್ಲಿ ಎಲ್ಲರ ಮನೆಯಲ್ಲೂ ಈ ಹುಡುಗನದ್ದೇ ಮಾತು.
ಎಲ್ಲರ ಮಕ್ಕಳಿಗೂ ಅವರ ತಂದೆ ತಾಯಿ ‘‘ನೋಡು ನೀನು ಇದೇ ರೀತಿ ಸಾಧನೆ ಮಾಡಬೇಕು’’ ಅಂತಾ ಬುದ್ಧಿ ಹೇಳುತ್ತಿದ್ದರು. ಅತೀ ಚಿಕ್ಕ ವಯಸ್ಸಲ್ಲೇ ಎಲ್ಲಾ ಶಾಲಾ ಕಾಲೇಜುಗಳಿಗೆ ವಿಐಪಿ(VIP), ಚೀಫ್ ಗೆಸ್ಟ್ ಆಗಿ ಹೋಗಿ ಎಲ್ಲಾ ವಿದ್ಯಾರ್ಥಿಗಳಿಗೂ ಹುರಿದುಂಬಿಸ್ತಾ ಇದ್ದರು ಡ್ರೋನ್ ಪ್ರತಾಪ್. ಆದರೆ ಅದೊಂದು ದಿನ ಡ್ರೋನ್ ಪ್ರತಾಪ್ನ ಪಾಲಿಗೆ ಕೆಟ್ಟ ದಿನವೇ ಆಗಿತ್ತು ಅಂದ್ರೆ ಸುಳ್ಳಲ್ಲ. ಯಾಕಂದ್ರೆ ಈತ ಡ್ರೋನ್ ಕಂಡೇ ಹಿಡಿದಿಲ್ಲ. ಇವರ ಮಾತು, ಸಾಧನೆ ಎಲ್ಲವು ಸುಳ್ಳು ಅಂತ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡೋಕೆ ಶುರುವಾಗಿ ಬಿಡ್ತು.
ಹೌದು ಈ ಸುದ್ದಿ ಎಲ್ಲಾ ಕಡೆ ಹರಿದಾಡಿದ ನಂತರ ಡ್ರೋನ್ ಪ್ರತಾಪ್ನ(Drone Prathap) ನಿಜವಾದ ಬಣ್ಣ ಬಯಲಾಯ್ತು. ಪ್ರತಾಪ್ ಅವರನ್ನು ಗೌರವದಿಂದ ಮಾತಾಡುತ್ತಿದ್ದ ಜನರು ಹಿಯಾಳಿಸೋಕೆ ಶುರು ಮಾಡಿದರು. ಕಾಲ ಕ್ರಮೇಣ ಸೋಷಿಯಲ್ ಮೀಡಿಯಾ ಹೊರ ಜಗತ್ತಿನಿಂದ ಸ್ವಲ್ಲ ದೂರವೇ ಉಳಿದಿದ್ದ ಪ್ರತಾಪ್ ಈಗ ಮತ್ತೆ ಕರುನಾಡ ಜನರ ಮುಂದೆ ಬಿಗ್ಬಾಸ್ ಸೀಸನ್ 10ರ ಮೂಲಕ ವಾಪಸ್ ಬಂದಿದ್ದಾರೆ. ಬಿಗ್ಬಾಸ್ಗೆ ಬಂದಿದ್ದೆ ಬಂದ್ದಿದ್ದು ಪ್ರತಾಪ್ಗೆ ಎಲ್ಲವು ಶುಭನೇ ಆಗ್ತಿದೆ. ಒಳಗೆ ಕೆಲವು ಹಿಯಾಳಿಸುತ್ತಿದರು ಕೂಡ ಆಚೆ ಪ್ರತಾಪ್ಗೆ ಕರುನಾಡ ವೀಕ್ಷಕರಿಂದ ಬಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿಯ ಬಿಗ್ಬಾಸ್ನ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ ಪ್ರತಾಪ್.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಡ್ರೋನ್ ಪ್ರತಾಪ್ ಬಗ್ಗೆ ಜಗ್ಗೇಶ್ ಮಾಡಿದ ಕಾಮೆಂಟ್ ಏನು
ಹೌದು ಪ್ರತಾಪ್ನ( Drone Prathap) ಮುಗ್ಧತೆ, ಸಿಪ್ಲಿಸಿಟಿ, ಆತ ಮಾತಾಡೋ ರೀತಿಗೆ ಎಲ್ಲರೂ ಮನಸೋತಿದ್ದಾರೆ. ಡ್ರೋನ್ ವಿಚಾರವಾಗಿ ಕರ್ನಾಟಕಕ್ಕೆ ಮೋಸ ಮಾಡಿದ್ದಕ್ಕೆ ಬೇಸರ ಪಟ್ಟಿಕೊಂಡಿದ್ದ ಕನ್ನಡಿಗರು. ಈಗ ತಪ್ಪು ಎಲ್ಲರು ಮಾಡುತ್ತಾರೆ. ಆದರೆ ಅದನ್ನು ತಿದ್ದಿ ನಡೆಯುವ ಮನುಜ ಗುಣ. ಪ್ರತಾಪ್ ಯಾರಿಗೂ ಮೋಸ ಮಾಡಿ ಏನ್ನನ್ನು ಕೊಳ್ಳೆ ಹೊಡೆದಿಲ್ಲ. ಬದಲಿಗೆ ಸಾಕಷ್ಟು ಜನರನ್ನ ಮೋಟಿವೇಟ್ ಮಾಡಿದ್ದಾರೆ. ಎಲ್ಲರಿಗೂ ಎರಡನೇ ಅವಕಾಶ ಜೀವನದಲ್ಲಿ ಬಹು ಮುಖ್ಯ ಆಗುತ್ತೆ. ಆ ಎರಡನೇ ಅವಕಾಶ ಪ್ರತಾಪ್ಗೆ ಬಿಗ್ಬಾಸ್ ಸ್ಟೇಜ್ ಕಲ್ಪಿಸಿಕೊಟ್ಟಿದೆ. ಇನ್ನೂ, ಇಡೀ ಕರ್ನಾಟಕ ಪ್ರತಾಪ್ ಬೆಂಬಲಕ್ಕೆ ನಿಂತಿದ್ದು ಶುರುವಾದ ಒಂದೇ ವಾರದಲ್ಲಿ ಬಿಗ್ಬಾಸ್ ಸೀಸನ್ 10 ಪ್ರತಾಪ್ ಅವರೇ ಗೆಲ್ಲಬೇಕು ಅನ್ನೋ ನಿರ್ಧಾರಕ್ಕೆ ಜನ ಬಂದಿದ್ದಾರೆ. ಆದ್ರೆ ಇದೀಗ ಈ ರೀತಿಯ ಟ್ರೋಲ್ ಹಾಗೂ ಕಮೆಂಟ್ಸ್ ನೋಡಿರೋ ಜಗಣ್ಣ ಇದೀಗ ಡ್ರೋನ್ ವಿರುದ್ಧ ಚಾಟಿ ಬೀಸಿದ್ದು ಕಮೆಂಟ್ಸ್ ಮೇಲೆ ಕಮೆಂಟ್ಸ್ ಮಾಡಿದ್ದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇನ್ನು ಮೈಸೂರಿನ ಭಾರತೀನಗರದ ಜೀ ಮಾದೇಗೌಡ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ನಂತರ ಜೆಎಸ್‌ಎಸ್ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ ಪಡೆದಿರೋ ಡ್ರೋನ್ ಪ್ರತಾಪ್ 2017ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆದ ಅಂತರಾಷ್ಟ್ರೀಯ ಡ್ರೋನ್ ಪ್ರದರ್ಶನದಲ್ಲಿ ತಾವೇ ತಯಾರಿಸಿರುವ ಡ್ರೋನ್ ಪ್ರದರ್ಶಿಸಿದ್ದೆ. ನೂರಕ್ಕೂ ಹೆಚ್ಚು ದೇಶಗಳ ಪ್ರತಿಭಾನ್ವಿತರು ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ ನನಗೆ ಗೋಲ್ಡ್ ಮೆಡಲ್ ದೊರಕಿತ್ತು ಅಂತ ಕನ್ನಡಿಗರಿಗೆ ಸುಳ್ಳು ಹೇಳಿದ್ರು, ಆದ್ರೆ ಈ ವಿಚಾರ ಗೊತ್ತಿಲ್ಲದ ನವರಸ ನಾಯಕ ಜಗ್ಗೇಶ್ ಡ್ರೋನ್ ಪ್ರತಾಪ್ ಗೆ ಸಹಾಯ ಮಾಡಿ ಜನರಲ್ಲಿ ಆತನನ್ನ ಬೆಳೆಸುವಂತೆ ಮನವಿ ಮಾಡಿ ಆತನಿಗೆ ಸಾಕಷ್ಟು ಸಹಾಯ ಮಾಡಿದ್ರು.
ಆದ್ರೆ ಆತ ಹೇಳಿದ್ದೆಲ್ಲ ಸುಳ್ಳು ಮಾಡಿದ್ದೆಲ್ಲ ಬಾರಿ ಡೋಂಗಿ ಅಂತ ಗೊತ್ತಾದ ಮೇಲೆ ಸಾಕಷ್ಟು ನೊಂದು ಹೋದ್ರು… ಸದ್ಯ ಇದೀಗ ಬಿಗ್ ಬಾಸ್ ಮನೆಗೆ ಹೋಗಿರುವ ಪ್ರತಾಪ್ ಅಲ್ಲಿ ಮನೆಯವರಿಂದ ಅವಮಾನ ಎದುರಿಸುತ್ತಿದ್ದೂ ಹೊರಗಿನ ಜನ ಆತನ ಪರ ನಿಂತಿರೋದ್ರಿಂದ ಜನರಿಗ ಆತನ ಸಹಾವಾಸ ಬೇಡ ಅವ್ನು ನೀವು ಅಂದುಕೊಂಡ ರೀತಿ ಅಲ್ಲ ಎಚ್ಚರ ಈ ಮನುಷ್ಯ ಎಲ್ಲರನ್ನ ಡೋಂಗಿ ಮಾಡಿ ನಂಬಿಸಿ ಬದುಕಲು ಯತ್ನಿಸುತ್ತಿದ್ದಾನೆ. ಇವನನ್ನ ಚೆಕ್ ಮಾಡಿ ದೀರ್ಘವಾಗಿ ಒಬ್ಬ ಫ್ರಾಡ್ ಸಿಗ್ತಾನೆ. ಅವನ ಪ್ಲಾನ್ ಬೇರೆ ಇರುತ್ತೆ. ನನ್ನ ಬದುಕಿನಲ್ಲಿ ನಾ ಕಂಡ ಮೋಸ್ಟ್ ಎಜುಕೇಷನಲ್ ಫ್ರಾಡ್ ಇವ್ನೆ ಅಂತೆಲ್ಲಾ ಕಾಮೆಂಟ್ಸ್ ಮೇಲೆ ಕಮೆಂಟ್ಸ್ ಮಾಡಿದ್ದಾರೆ. ಸದ್ಯ ಈ ಎಲ್ಲ ಬೆಳವಣಿಗೆ ನೋಡ್ತಿದ್ರೆ ಇದೆಲ್ಲಾ ಎಲ್ಲಿ ಹೋಗಿ ಮುಟ್ಟುತ್ತೋ ಹೇಳಲಾಗದು.
ಇದನ್ನೂ ಓದಿ: ಗೃಹಲಕ್ಷ್ಮೀ ಸಿಎಂ ಗುಡ್ ನ್ಯೂಸ್; ಎರಡು ತಿಂಗಳ 4000 ಹಣ ಒಟ್ಟಿಗೆ ಜಮಾ