Jahnavi Karthik: ಸಿಂಗಲ್ ಪೇರೆಂಟ್ ಆಗಿ ನಾನು ಸ್ಟ್ರಾಂಗ್ ಇರಬೇಕು! ವಿಚ್ಚೇದನ, ಸಂಸಾರ ಕುರಿತು ನಟಿ, ನಿರೂಪಕಿ ಜಾನ್ಹವಿ ಮಾತು!

Jahnavi Karthik: ಜಾನ್ಹವಿ ಕಾರ್ತಿಕ್ ಅಂದ್ರೆ ಥಟ್ ಅಂತ ಇವಾಗ ನೆನಪಿಗೆ ಬರೋದು ಗಿಚ್ಚಿ ಗಿಲಿ ಗಿಲಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗಳು. ಆದರೆ ಇವ್ರು ವಾಸ್ತವದಲ್ಲಿ ಸುದ್ದಿ ಮಧ್ಯಮವೊಂದರ ನಿರೂಪಕಿ. ಆದರೆ ವೈವಾಹಿಕ ಜೀವನದಲ್ಲಿ ಸಂಭವಿಸಿದ ಕೆಲವೊಂದು ಘಟನೆಗಳು ಇವ್ರನ್ನ ಬಹಳಷ್ಟು ಗಟ್ಟಿ ಮಾಡಿ ಇಂದು ಚಂದನವನ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಆದ ಒಂದಷ್ಟು ಅಭಿಮಾನಿ ಬಳಗ ಹಾಗೂ ಒಂದಷ್ಟು ಜನರ ಪ್ರೀತಿಯನ್ನ ಸಂಪಾದನೆ ಮಾಡಿದ್ದಾರೆ. ಕಲೆ ಯಾರಪ್ಪನ ಮನೆಯ ಸ್ವತ್ತು ಅಲ್ಲ ಅಂತಾರಲ್ಲ ಆಗೇ ಜಾನ್ಹವಿ ಅವ್ರ ಮನೆಯಲ್ಲಿ ಗಂಡನ ಮನೆ ಎರಡು ಕಡೆಯುವಂತೆ ನಟನ ಕ್ಷೇತ್ರ ಬೇಡ ಬೇರೆ ಏನಾದ್ರೂ ಮಾಡು ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ನಿನಗಿದೆ ಅಂತ ಹೇಳ್ದಾಗ ಜಾನ್ಹವಿ ಅವ್ರಿಗೆ ಅದ್ರಲ್ಲೂ ಕನ್ನಡದಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ಇವ್ರಿಗೆ ಮಾಧ್ಯಮ ಲೋಕದ ಗೀಳು ಹಚ್ಚಿಕೊಳ್ಳುತ್ತೇ. ಅಷ್ಟೊತ್ತಿಗಗ್ಲೇ ಜಾನ್ಹವಿ ಅವ್ರಿಗೆ ಮದುವೆಯಾಗಿ ಪುಟ್ಟ ಮಗು ಕೂಡ ಇರುತ್ತೆ. 

WhatsApp Group Join Now
Telegram Group Join Now

ಹೀಗಾಗಿ ಅವಕಾಶಗಳು ಸಿಗೋದು ಕಷ್ಟವಾಗುತ್ತೆ, ಕಷ್ಟವಾದ್ರೂ ಅವಕಾಶಗಳು ಸಿಕ್ಕಾಗ ಅದನ್ನ ನಿಭಾಯಿಸೋದು ಜಾನ್ಹವಿ ಅವ್ರಿಗೆ ಕಷ್ಟವಾದ್ರೂ ಕೂಡ ಮಾಡಲೇಬೇಕು ಅನ್ನುವ ಹಠ ಛಲ ಕೊನೆಗೆ ಜಾನ್ಹವಿ ಅವ್ರನ್ನ ಮಾಧ್ಯಮ ಕ್ಷೇತ್ರದ ಅತಿದೊಡ್ಡ ಸಂಸ್ಥೆ ಟಿವಿ 9 ಅಲ್ಲಿ ಅವಕಾಶ ಪಡೆಯುವಂತೆ ಮಾಡುತ್ತೆ. ಅಲ್ಲಿ ಹಗಲು ರಾತ್ರಿ ಕಷ್ಟ ಪಟ್ಟ ಜಾನ್ಹವಿ ಅವ್ರಿಗೆ ನ್ಯೂಸ್ ಫಸ್ಟ್ ವಾಹಿನಿಯಲ್ಲಿ ಅತಿದೊಡ್ಡ ವೇದಿಕೆ ನಿರ್ಮಾಣವಾಗುತ್ತೆ ಅಲ್ಲಿಂದಾಚೆಗೆ ಜಾನ್ಹವಿ ಅವ್ರ ಟ್ರೆಂಡ್ ಬದಲಾಗುತ್ತೆ ಅಷ್ಟು ವರ್ಷಗಳ ಕಷ್ಟಕ್ಕೆ ಅಲ್ಲಿ ಫಲ ಸಿಗುತ್ತೆ. ನಂತರ ನನ್ನಮ್ಮ ಸೂಪರ್ ಸ್ಟಾರ್‌ ರಿಯಾಲಿಟಿ ಶೋ, ಗಿಚ್ಚಿ ಗಿಲಿಗಿಲಿಯಲ್ಲೂ ಶೋ ಗಳಲ್ಲಿ ಭಾಗವಹಿಸಿದ್ದರು ಜೊತೆಗೆ ಇದೀಗ ಫ್ಯಾಮಿಲಿ ಗ್ಯಾಂಗ್ ಸ್ಟಾರ್ ನಲ್ಲೂ ಸ್ಪರ್ಧೆಯಾಗಿರುವ ಇವರು ಇದರ ಜೊತೆ ಜೊತೆಗೆ ಆ್ಯಂಕರಿಂಗ್, ಆ್ಯಕ್ಟಿಂಗ್‌ನಲ್ಲೂ ಮುಂದಿದ್ದು, ಆಗಾಗ ಕೆಲವು ಮ್ಯೂಸಿಕ್‌ಗಳಿಗೆ ಸ್ಟೆಪ್ ಹಾಕಿ, ರೀಲ್ಸ್ ಕೂಡ ಮಾಡ್ತಿರ್ತಾರೆ. ಇಷ್ಟೆಲ್ಲ ಇರುವ ಜಾನ್ಹವಿ ಅವ್ರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದಿದ್ದು, ಜಾನ್ಹವಿ ವಿಚ್ಚೇದನ ಪಡೆದಿದ್ದು ಇದೀಗ ಸಾಕಷ್ಟು ಚರ್ಚೆಯಾಗ್ತಿದೆ.

ಇದನ್ನೂ ಓದಿ: ಪತ್ನಿಯನ್ನ ಓದಿಸಿ ಸರ್ಕಾರಿ ನೌಕರಿ ಕೊಡಿಸಿದ ಪತಿ; ನೌಕರಿ ಸಿಕ್ಕ ಮೇಲೆ ಪತ್ನಿ ಶುರು ಮಾಡುದ್ಲು ನವರಂಗಿ ಆಟ

ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡ ಜಾನ್ನವಿ

ಹೌದು ಒಂದಷ್ಟು ಜನಪ್ರಿಯತೆ ಹಾಗೂ ಅಭಿಮಾನಿಗಳ ಸಂಪಾದನೆ ಮಾಡಿರೋ ನಟಿ ಹಾಗೂ ನಿರೂಪಕಿ ಜಾನ್ಹವಿ ಅವ್ರನ್ನ ಒಂದಷ್ಟು ಯೂಟ್ಯೂಬ್ ಚಾನಲ್ ಗಳು ಸಂದರ್ಶನ ಮಾಡಿದ್ದು ಆಗ ತಮ್ಮ ಹಾಗೂ ಕುಟುಂಬದ ಕುರಿತಾಗಿ ಒಂದಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅಲ್ದೇ ಸಿಂಗಲ್ ಪೇರೆಂಟ್ ಆಗಿರೋವಾಗ ನಾನು ಧೈರ್ಯವಾಗಿ ಇದ್ರೆ ಮಾತ್ರ ನನ್ನ ಮಗನನ್ನ ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ ಎಂದಿದ್ದಾರೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಸೀಸನ್ 2 ರಿಯಾಲಿಟಿ ಶೋ ಸ್ಪರ್ಧಿ ಜಾನ್ವಿ ಟ್ರೋಫಿ ಪಡೆದು ಯಶಸ್ಸು ಎಂಜಾಯ್ ಮಾಡುತ್ತಿದ್ದಾರೆ. ಆದ್ರೆ ಇದರ ಜೊತೆ ಜೊತೆಗೆ ಜಾನ್ಹವಿ ವೈಯಕ್ತಿಕ ಜೀವನದ ಬಗ್ಗೆ ಕೆಲವೊಂದು ನೆಗೆಟಿವ್ ಕಾಮೆಂಟ್ ಹರಿದಾಡುತ್ತಿದೆ. ಹೀಗಾಗಿ ಇದರ ಬಗ್ಗೆ ಮಾತನಾಡಿರುವ ಇವ್ರು ಎಲ್ಲಾ ಕಡೆ ಪಾಸಿಟಿವ್ ಮತ್ತು ನೆಗೆಟಿವ್ ಇರುತ್ತದೆ. ಆರಂಭದಲ್ಲಿ ಕೆಲವೊಂದು ವಿಚಾರಗಳಿಂದ ಬೇಸರ ಆಗುತ್ತಿತ್ತು, ಆದ್ರೆ ವರ್ಷ ಕಳೆಯುತ್ತಿದ್ದಂತೆ ಇದೆಲ್ಲಾ ಕಾಮನ್ ಇರಲಿ ಬಿಡು ಅಂತ ನೆಗೆಲೆಟ್ ಮಾಡುವುದಕ್ಕೆ ಶುರು ಮಾಡಿದೆ. ಬಣ್ಣದ ಲೋಕದಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್ ಮಾತನಾಡುವವರು ಹೆಚ್ಚು ಏಕೆಂದರೆ ಒಬ್ಬರನೊಬ್ಬರು ಕಾಲು ಎಳೆಯುವುದು ಸಹಜ. ಆರಂಭದಲ್ಲಿ ಭಯ ಆಗುತ್ತಿತ್ತು ಹೀಗಾಗಿ ಎಲ್ಲದಕ್ಕೂ ರಿಯಾಕ್ಟ್ ಮಾಡುವುದು, ತುಂಬಾ ನೇರವಾಗಿ ಮಾತನಾಡುವುದು ಮಾಡ್ತಿದ್ದೆ ಆದ್ರೆ ಯಾವಾಗ ಮೆಚ್ಯೂರಿಟಿ ಬಂತು ಅಲ್ಲಿಂದ ಸೈಲೆಂಟ್ ಅಗಿರುವುದಕ್ಕೆ ಶುರು ಮಾಡಿದೆ. ಗಾಸಿಪ್‌ಗಳ ನಡುವೆ ಇದ್ರೂ, ಎಲ್ಲದಕ್ಕೂ ರಿಯಾಕ್ಟ್‌ ಮಾಡಬಾರದು ಅಂತ ಅರ್ಥ ಮಾಡಿಕೊಂಡೆ.

ನಾನು ಎಲ್ಲ ತಾಯಂದಿರ ಥರಾನೇ!

ಈ ರೂಮರ್ಸ್‌ಗಳು ನಾವು ಊರಿನಲ್ಲಿ ಇದ್ದಾಗಲೂ ನಡೆಯುತ್ತಿತ್ತು ಇಲಿ ಹೋದರೆ ಹುಲಿ ಹೋಯಿತ್ತು ಅಂತಾರಲ್ಲ ಹಾಗೆ ಆದ್ರೆ ನನಗಿರುವ ಫ್ಯಾಮಿಲಿ ಸಪೋರ್ಟ್‌ ಬಗ್ಗೆ ಹೆಮ್ಮೆಯಿದೆ. ಆಗದೇ ಇರುವವರು ಸುಮ್ಮನೆ ನೆಗೆಟಿವ್ ಮಾತನಾಡಿದಾಗ ಬೇಸರ ಅಗುತ್ತೆ ಆಗ ಫ್ಯಾಮಿಲಿ ಸಪೋರ್ಟ್ ಬೇಕೇ ಬೇಕು. ನನ್ನನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತಾಗುತ್ತೆ ನಾನು ಹೇಗೆ ಅಂತ, ಆದ್ರೆ ದೂರದಲ್ಲಿ ನಿಂತುಕೊಂಡು ಯಾರೋ ಏನೋ ಹೇಳಿದನ್ನು ಕೇಳಿಸಿಕೊಂಡು ಒಂದು ಜಡ್ಜ್‌ಮೆಂಟ್‌ಗೆ ಬರುತ್ತಾರೆ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಮಾತಿದೆ. ಮಾಡರ್ನ್‌ ಅಗಿ ಕಾಣಿಸುತ್ತೀನಿ ಅಂತ ಏನ್ ಏನೋ ಕಾಮೆಂಟ್ ಮಾಡಬಹುದು. ಆದ್ರೆ ನಾನು ಬಣ್ಣದ ಪ್ರಪಂಚದಲ್ಲೇ ಇದ್ದರೂ ಬೆಳಗ್ಗೆ 3 ಅಥವಾ 4 ಗಂಟೆಗೆ ಎದ್ದು ನನ್ನ ಮಗನ ತಿಂಡಿ ರೆಡಿ ಮಾಡಿ ಪ್ಯಾಕ್ ಮಾಡಿ ಆನಂತರ ಅವನಿಗೆ ಹಾಲು ಬಿಸಿ ಮಾಡಿಟ್ಟು ಕೆಲಸಕ್ಕೆ ಹೋಗುತ್ತೇನೆ.

ಎಲ್ಲಾ ಹೆಣ್ಣು ಮಕ್ಕಳು ಹೇಗೆ ಕೆಲಸ ಮಾಡುತ್ತಾರೆ ನನ್ನ ಕೆಲಸ ಕೂಡ ಹಾಗೆ ಇರುತ್ತೆ ಹೊರತು ಬೇರೆ ಏನೂ ಇಲ್ಲ, ಸ್ಟೈಲ್ ಮಾಡ್ತೀನಿ ಕೆಲಸ ಮಾಡಲ್ಲ ಅನ್ನೋ ತರ ಅಲ್ಲ, ಇನ್ನು ‘ನಾನು ತುಂಬಾ ಸ್ಟ್ರಾಂಗ್ ವ್ಯಕ್ತಿ. ಸಿಂಗಲ್ ಪೇರೆಂಟ್ ಆಗಿ ನಾನು ಸ್ಟ್ರಾಂಗ್ ಆಗಿದ್ದರೆ ಮಾತ್ರ ಅವರು ಕೂಡ ಸ್ಟ್ರಾಂಗ್ ಆಗಿರುತ್ತಾರೆ. ನಾನು ಯೋಚನೆ ಮಾಡಿಕೊಂಡು ಏನೋ ಆಯ್ತು ಅಂದ್ರೆ ಅವ್ರು ಕೂಡ ಯೋಚನೆ ಮಾಡುತ್ತಾರೆ. 12 ವರ್ಷದಿಂದ ಏಳು ಬೀಳುಗಳನ್ನು ನೋಡಿ ನೋಡಿ ಗಟ್ಟಿಯಾಗಿದ್ದೆ, ಈಗ ಅಭ್ಯಾಸ ಆಗೋಯ್ತು. ಅಲ್ದೇ ಬಿಟ್ಟೋದ ವ್ಯಕ್ತಿಗಳೇ ನಮ್ಮನ್ನು ಸ್ಟ್ರಾಂಗ್ ಮಾಡಿಬಿಟ್ಟರು ಅಂತ ಹೇಳುವ ಮೂಲಕ ತಾವು ಗಂಡನಿಂದ ದೂರವಾಗಿರೋದನ್ನ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ಆದ್ರೆ ಎಲ್ಲಿಯೂ ಗಂಡನಿಂದ ದೂರವಾಗಿರಲು ಕಾರಣವೇನು? ವಿಚ್ಚೇದನ ಯಾಕಾಯ್ತು ಇದ್ಯಾವುದರ ಬಗ್ಗೆಯು ಮಾತನಾಡಿಲ್ಲ, ಆದ್ರೆ ತಾವೊಬ್ಬ ಸಿಂಗಲ್ ಪೇರೆಂಟ್ ಅನ್ನೋದನ್ನ ಮಾತ್ರ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಇವ್ರ ಬಗ್ಗೆ ಒಂದಷ್ಟು ಜನ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆ. ಆದರೆ ಜಾನ್ಹವಿ ಅದೆಲ್ಲವನ್ನು ಸೀರಿಯಸ್ ಆಗಿ ಎಂದಿಗೂ ತೆಗೆದುಕೊಂಡಿಲ್ಲ. ಜೀವನ ಬಂಡೆ ಹಾಗೆ ತೋಚಿದ ಆಗೇ ಇರಲೇ ಬೇಕು ಅಂತ. ಜೀವನದಲ್ಲಿ ಬಂದಿದ್ದೆಲ್ಲವನ್ನು ಬಹಳ ನಾಜೂಕಾಗಿ ತೆಗೆದುಕೊಂಡು ಹೋಗ್ತಿದ್ದಾರೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ! ಹೀಗಿದೆ ನೋಡಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ..

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram