Jai jagadish first daughter arpita: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಕಾರ್ಯಕ್ರಮದ 19ನೇ ಅತಿಥಿಯಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಾಲ್ಯದಿಂದ ಇದುವರೆಗಿನ ಅನೇಕ ನೆನಪುಗಳನ್ನು ಕಾರ್ಯಕ್ರಮದಲ್ಲಿ ಜೈ ಜಗದೀಶ್ ಹಂಚಿಕೊಂಡರು. ಹೌದು ‘ಫಲಿತಾಂಶ’ ಚಿತ್ರದ ಮೂಲಕ ಜೈ ಜಗದೀಶ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿದರು. ಪೈಲಟ್ ಆಗಬೇಕಿದ್ದವರು ಪುಟ್ಟಣ್ಣ ಕಣಗಾಲ್ ರವರು ಬುಲಾವ್ ಕೊಟ್ಟ ಕಾರಣ ಫೈಲೇಟ್ ತರಬೇತಿಯನ್ನ ಅರ್ಧಕ್ಕೆ ಬಿಟ್ಟು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಮುಂದೆ ನೂರಾರು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಹೀಗಾಗಿ ಸಿನಿ ಪಯಣದಲ್ಲಿ ಇವ್ರು ಹಿಂತಿರುಗಿ ನೋಡೇ ಇಲ್ಲ. ಇನ್ನು ಜೈ ಜಗದೀಶ್ ಶಾಲಾ ದಿನಗಳಲ್ಲಿ ಬಹಳ ಚೇಷ್ಟೆ ಮಾಡುತ್ತಿದ್ದರಂತೆ. ಪಟಾಕಿ ಹಚ್ಚಿ ಪ್ರಿನ್ಸಿಪಾಲರನ್ನೇ ಮಧ್ಯರಾತ್ರಿ ಕೆಳಗೆ ಬೀಳುವಂತೆ ಮಾಡಿದ್ರಂತೆ ಅಲ್ಲದೇ ಗೆಳೆಯರ ಜೊತೆಗೆ ಸೇರಿ ಸಾಕಷ್ಟು ಕಿತಾಪತಿಗಳನ್ನು ಮಾಡಿದ್ದರಂತೆ. ನಂತರ ಪುಟ್ಟಣ್ಣ ಕಣಗಾಲ್ ಅವ್ರ ಗರಡಿ ಸೇರಿ ಅಲ್ಲಿ ಸಾಕಷ್ಟು ಪೆಟ್ಟುಗಳನ್ನ ತಿಂದು ಬೆಳೆದು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ಬರೀ ಜಗದೀಶ್ ಆಗಿದ್ದವರನ್ನು ಪುಟ್ಟಣ್ಣ ಕಣಗಾಲ್ ತಿದ್ದಿ ತೀಡಿ ಜೈ ಜಗದೀಶ್ ಆಗಿ ಮಾಡಿದರು. ಪುಟ್ಟಣ್ಣನ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಜೈ ಜಗದೀಶ್ ನಂತರ ಹೀರೊ ಆಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಇಷ್ಟೇ ಅಲ್ಲದೇ ನೆಗೆಟಿವ್ ಪಾತ್ರಗಳಲ್ಲಿ, ಆ ನಂತರ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ‘ಬಂಧನ’ ಸಿನಿಮಾದಲ್ಲಿ ಜೈ ಜಗದೀಶ್ ಮಾಡಿದ್ದ ಬಾಲು ಪಾತ್ರಕ್ಕೆ ಬಹಳ ಮಹತ್ವ ಇತ್ತು. ಈ ಸಿನಿಮಾ ನಂತರ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ಅರಸಿ ಬಂದವು. ರಾಜೇಂದ್ರ ಸಿಂಗ್ ಬಾಬು ಅವ್ರು ಬಂಧನ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಸರಿಸಮಾನಾಗಿ ನಿಲ್ಲವಂತ ನಟನ ಹುಡುಕಾಟದಲ್ಲಿದ್ದರು. ದಾದಾ ವಿರುದ್ಧವಾಗಿ ನಟನೆ ಮಾಡಲು ಇಂತಹ ವ್ಯಕ್ತಿತ್ವವನ್ನ ನಾನು ಹುಡುಕುತ್ತಿದ್ದೆ ನಂತರ ನನ್ನ ಕಣ್ಣಿಗೆ ಬಿದ್ದವರೇ ಜೈ ಜಗದೀಶ್ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ ಅಷ್ಟರ ಮಟ್ಟಿಗೆ ಅದ್ಭುತ ವಾಗಿ ನಟಿಸಿ ಸೈ ಅನಿಸಿಕೊಂಡ ಜಗದೀಶ್ ಅವ್ರ ಮೊದಲ ವೈವಾಹಿಕ ಜೀವನ ಬಹಳ ಪೆಟ್ಟನ್ನ ಕೊಟ್ಟಿತ್ತು. ಆದ್ರೆ ವೀಕೆಂಡ್ ಟೆಂಟ್ ಗೆ ಮೊದಲ ಪತ್ನಿ ಮಗಳು ಅರ್ಪಿತಾ ಬಂದಿದ್ದು ಬಹಳ ವಿಶೇಷ ಅನ್ನಿಸಿತು.
ಇದನ್ನೂ ಓದಿ: ಮೊದಲ ದಿನ ಶಾಲೆಗೆ ಹೊರಟ ರಾಯನ್ ರಾಜ್ ಸರ್ಜಾ- ಮಗನ ಬಗ್ಗೆ, ಭವಿಷ್ಯದ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದ ಜೈ ಜಗದೀಶ್ ಮೊದಲ ಪತ್ನಿ ಮಗಳು ಅರ್ಪಿತ
ಹೌದು ವೀಕೆಂಡ್ ಕಾರ್ಯಕ್ರಮಕ್ಕೆ ಜೈ ಜಗದೀಶ್ ಸಹೋದರಿಯರು, ಸ್ನೇಹಿತರು, ಪತ್ನಿ ಮೂವರು ಮಕ್ಕಳು ಎಲ್ಲರೂ ಬಂದು ಹಳೆಯ ಸುಂದರ ನೆನಪಿಗೆ ಜಾರಿದರು. ಇದೇ ವೇಳೆ ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ತಮ್ಮಿಬ್ಬರ ಲವ್ ಸ್ಟೋರಿ ಬಗ್ಗೆ ಕೂಡಾ ಹೇಳಿದರು. ವಿಜಯಲಕ್ಷ್ಮಿ ಸಿಂಗ್ ಕೈ ಹಿಡಿಯುವ ಮುನ್ನ ಜೈ ಜಗದೀಶ್‌ಗೆ ರೂಪ ಎಂಬುವರೊಂದಿಗೆ ಮದುವೆ ಆಗಿತ್ತು. ಈ ಜೋಡಿಗೆ ಅರ್ಪಿತ ಎಂಬ ಮಗಳಿದ್ದಾರೆ. ರೂಪ ಜೊತೆಗೆ ಮನಸ್ತಾಪ ಉಂಟಾಗಿದ್ದರಿಂದ ಜೈ ಜಗದೀಶ್ ಅವರಿಗೆ ವಿಚ್ಛೇದನ ನೀಡಿ ವಿಜಯಲಕ್ಷ್ಮಿ ಸಿಂಗ್ ಕೈ ಹಿಡಿದರು. ಆದರೆ ಈ ಕಾರ್ಯಕ್ರಮಕ್ಕೆ ಮೊದಲ ಪುತ್ರಿ ಅರ್ಪಿತಾ ಕೂಡಾ ಆಗಮಿಸಿದ್ದು ವಿಶೇಷವಾಗಿತ್ತು. ಹೌದು ಮೊದಲು ವಿಜಯಲಕ್ಷ್ಮಿ ಸಿಂಗ್ ಅವರನ್ನು ಇಷ್ಟಪಟ್ಟಿದ್ದರೂ ಸಹ ಬೆಂಗಳೂರಿಗೆ ಬಂದ ನಂತರ ಜೈ ಜಗದೀಶ್ ರೂಪಾ ಅನ್ನೋರ ಜೊತೆಗೆ ಮದುವೆ ಆಗಿದ್ದರು ಜೈಜಗದೀಶ್ ಅವರ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡು ರೂಪ ಅವರಿಂದ ಜೈ ಜಗದೀಶ್ ದೂರವಾಗಿದ್ದರು. ನಂತರ ವಿಜಯಲಕ್ಷ್ಮಿ ಸಿಂಗ್ ಅವರೊಂದಿಗೆ ಮದುವೆ ಆದ್ರು. ರಾಜೇಂದ್ರ ಸಿಂಗ್ ಬಾಬು ಹಾಗೂ ಅಂಬರೀಶ್, ವಿಷ್ಣುವರ್ಧನ್ ಕೂಡ ಸೇರಿ ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಮದುವೆಯಾಗುವಂತೆ ಮಾಡಿದ್ದರಂತೆ.ಇನ್ನು ವಿಜಯಲಕ್ಷ್ಮಿ ಸಿಂಗ್ ಅವರು ಆಗಿನಿಂದ ಇವರೆಗೂ ಸಹ ಗಂಡನ ಜೊತೆ ಜೊತೆಯಲ್ಲಿ ಸಂಸಾರದ ನೊಗವನ್ನು ಹೊತ್ತು ಮಕ್ಕಳನ್ನು ಸಾಕಿದ್ದಾರೆ.
ಇಷ್ಟೇ ಅಲ್ಲದೇ ರೂಪ ಅವರ ಮೊದಲ ಮಗಳಾದ ಅರ್ಪಿತಾ(Jai jagadish first daughter arpita) ಅವರನ್ನು ತುಂಬಾ ಚೆನ್ನಾಗಿ ಜೈ ಜಗದೀಶ್ ನೋಡಿಕೊಳ್ಳುತ್ತಿದ್ದಾರೆ.ಈಗಲೂ ಕೂಡ ಅವ್ರ ನಾಲ್ವರು ಮಕ್ಕಳು ಬಹಳ ಖುಷಿಯಿಂದ ಇದ್ದಾರೆ. ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ ಮೂವರು ಹೆಣ್ಣು ಮಕ್ಕಳಾದರೆ ಅರ್ಪಿತಾ, ರೂಪ ಅವರ ಮಗಳಾಗಿದ್ದು ಯಾವುದೇ ತಾರತಮ್ಯವಿಲ್ಲದೆ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಇನ್ನು ಮೊದಲ ಪತ್ನಿ ರೂಪ ಅವರು ಸಹ ಜೈ ಜಗದೀಶ್ ಮದುವೆಯಾದ ನಂತರ ಬೇರೊಬ್ಬರೊಂದಿಗೆ ಮದುವೆಯಾದರು. ಅವರ ಪತಿ ನಿಧನರಾದ ಮೇಲೆ ಅವರು ವಾಪಾಸ್ ಬೆಂಗಳೂರಿಗೆ ಬಂದಾಗ ವಿಜಯಲಕ್ಷ್ಮಿ ಸಿಂಗ್ ಅವರನ್ನು ಬಹಳ ಪ್ರೀತಿಯಿಂದ ಮಾತನಾಡಿಸಿ ಕುಟುಂಬದವರಂತೆ ಕಾಣುತ್ತಿದ್ದಾರೆ. ಇಬ್ಬರ ಕುಟುಂಬದವರು ಸಹ ಪ್ರೀತಿಯಿಂದ ಇದ್ದೇವೆ ಎಂದು ವಿಜಯಲಕ್ಷ್ಮಿ ಸಿಂಗ್ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸಿದರು. ಇನ್ನು ಜೈ ಜಗದೀಶ್‌ರವರ ಮೂವರು ಮಕ್ಕಳು ಅರ್ಪಿತಾ ಅವರೊಂದಿಗೆ ಇರುವ ಸಂಬಂಧವನ್ನು ವೇದಿಕೆ ಮೇಲೆ ತಿಳಿಸಿದ್ದಾರೆ. ಅವರು ನಮ್ಮ ಮನೆಗೆ ಬರುತ್ತಾರೆ ನಾವು ಅವರ ಮನೆಗೆ ಹೋಗುತ್ತೇವೆ, ನಾವು ಎಲ್ಲರೂ ಸಹ ಚೆನ್ನಾಗಿದ್ದೇವೆ ಎಂದು ಜೈಜಗದೀಶ್ ಮಕ್ಕಳು ಕೂಡ ಹೇಳಿದ್ದಾರೆ. ವಿಜಯಲಕ್ಷ್ಮಿ ಕೂಡ ನಾನು ರೂಪ ಅವರ ಜೊತೆಗೆ ಊಟಕ್ಕೆ ಹಾಗೂ ಹೊರಗೆ ಹೋಗುತ್ತೇನೆ. ನಾವೆಲ್ಲರೂ ಸಹ ಬಹಳ ಅನ್ಯೋನ್ಯವಾಗಿ ಚೆನ್ನಾಗಿ ಇದ್ದೇವೆ ಅಂತ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಾಜಿ ಹೆಂಡತಿ ಹಾಗೂ ಹಾಲಿ ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಜೈ ಜಗದೀಶ್ ಈಗ ನೆಮ್ಮದಿಯುತ ಜೀವನವನ್ನ ಸಾಗಿಸುತ್ತಿದ್ದಾರೆ. ಹೀಗಾಗಿ ಅಪ್ಪನ ಮೇಲಿನ ಪ್ರೀತಿ ಅಭಿಮಾನದಿಂದ ವೀಕೆಂಡ್ ವೇದಿಕೆಗೆ ಮೊದಲ ಮಗಳು ಅರ್ಪಿತಾ ಬಂದು ಅಪ್ಪನನ್ನ ನೋಡಿ ಖುಷಿಟ್ಟಿದ್ದಾರೆ. ಇವ್ರ ಸಂಸಾರ ಹೀಗೆಯೇ ಖುಷಿಯಾಗಿರಲಿ ಅಂತ ನಾವು ಕೂಡ ಆರೈಸೋಣ.