Airtel ಹಾಗೂ Jio ಟೆಲಿಕಾಂ ಕಂಪನಿಗಳು 666 ರೂಪಾಯಿಯ ಹೊಸ ಪ್ಲಾನ್ ಬಿಡುಗಡೆ ಮಾಡಿವೆ; ಒಂದೇ ದರದ ಪ್ಲಾನ್ ಗಳಲ್ಲಿ ಯಾವುದು ಬೆಸ್ಟ್

Jio And Airtel Plan

ಭಾರತದಲ್ಲಿ ಹಲವಾರು ಟೆಲಿಕಾಂ ಕಂಪನಿಗಳು ಇವೆ. ಆದರೆ ಹೆಚ್ಚು ಜನರು ಉಪಯೋಗಿಸುವ ಸಿಮ್ ಎಂದರೆ ಅದು ಜಿಯೋ. jio ಸಿಮ್ ಬಿಡುಗಡೆ ಆದಾಗ ಜನರು ಮುಗಿಬಿದ್ದು ಸಿಮ್ ಖರೀದಿಸಿದರು ಯಾಕೆಂದರೆ ಜಿಯೋ ಸಿಮ್ ಉಚಿತವಾಗಿ ಸಿಗುತ್ತಿತ್ತು ಅದರ ಜೊತೆಗೆ ಉಚಿತ ಕರೆ ಮತ್ತು ಉಚಿತ ಇಂಟರ್ನೆಟ್ ಸೌಲಭ್ಯ ಕಲ್ಪಿಸಿತ್ತು. ಗ್ರಾಹಕರು ತನ್ನತ್ತ ಸೆಳೆಯುತ್ತಿದ್ದಾರೆ ಎಂದಾಗ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿತ್ತು. ಆದರೂ ಸಹ ಉಳಿದ ಟೆಲಿಕಾಂ ಕಂಪನಿಗಳಿಗಿಂತ ಜಿಯೋ ಹೆಚ್ಚು ಗ್ರಾಹಕರನ್ನು ಹೊಂದಿದೆ.

WhatsApp Group Join Now
Telegram Group Join Now

ಜಿಯೋ ನಂತರ ಹೆಚ್ಚು ಜನರು ಬಳಸುವ ಸಿಮ್ ಎಂದರೆ ಅದು airtel. ಉತ್ತಮ ನೆಟ್ವರ್ಕ್, ಉಳಿದ ಸಿಮ್ ಗಳಿಗಿಂತ ಕಡಿಮೆ ದರದಲ್ಲಿ ಹೆಚ್ಚಿನ ಕೊಡುಗೆಗಳನ್ನು ನೀಡುವ ಏರ್ಟೆಲ್ ಭಾರತದಲ್ಲಿ 37 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿದೆ. ಸದಾ ಪೈಪೋಟಿಯಲ್ಲಿ ಇರುವ ಜಿಯೋ ಮತ್ತು ಏರ್ಟೆಲ್ ಈಗ ಒಂದೇ ಮೊತ್ತದ ಪ್ಲಾನ್ ಗಳನ್ನು ಬಿಡುಗಡೆ ಮಾಡಿವೆ. ಆದರೆ ಕೆಲವು ನೀಡುವ ಕೊಡುಗೆಗಳಲ್ಲಿ ತುಂಬಾ ವ್ಯತ್ಯಾಸವಿದೆ. ಹಾಗಾದರೆ ಈಗ ಎರಡು ಸಿಮ್ ಗಳ ಪ್ಲಾನ್ ಬಗ್ಗೆ ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಿಲಯನ್ಸ್ ಜಿಯೋದ 666 ರೂಪಾಯಿ ಪ್ಲಾನ್ ನ ಪೂರ್ಣ ವಿವರ:-

666 ಪ್ಲಾನ್ 84 ದಿನಗಳ ಕಾಲಾವಧಿ ಹೊಂದಿದ್ದು 84 ದಿನಗಳ ಕಾಲ ಗ್ರಾಹಕರು ಭಾರತದ ಎಲ್ಲಾ ನೆಟ್‌ವರ್ಕ್‌ಗಳಿಗೆ ಉಚಿತ ಕರೆ ಮಾಡಬಹುದು. ಒಟ್ಟು 126GB ಉಚಿತ ಡೇಟಾ ಸಿಗುತ್ತದೆ, ಇದನ್ನು ದಿನಕ್ಕೆ 1.5GB ಡೇಟಾ ಬಳಸಬಹುದು. ದಿನದ ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ಸ್ಲೋ ಆಗುತ್ತದೆ. ಹಾಗೂ ದಿನಕ್ಕೆ ಉಚಿತವಾಗಿ ಯಾವುದೇ ನೆಟ್ವರ್ಕ್ ಗೆ 100 SMS ಕಳುಹಿಸಬಹುದು. ಇದರ joteg jio TV, Jio ಸಿನಿಮಾ ಮತ್ತು Jio Saavn ಗೆ ಉಚಿತ ಚಂದಾದಾರರಾಗಬಹುದು.

ಏರ್‌ಟೆಲ್‌ನ 666 ರೂಪಾಯಿ ಪ್ಲಾನ್ ನ ಪೂರ್ಣ ವಿವರ:- 666 ರೂಪಾಯಿ ಪ್ಲಾನ್ ನಲ್ಲಿ ನಿಮಗೆ ಉಚಿತವಾಗಿ 115GB ಡೇಟಾ ಸಿಗುತ್ತದೆ. ಇದನ್ನು ದಿನಕ್ಕೆ 1.5 GB ಡೇಟಾ ಬಳಸಬಹುದು. ಜಿಯೋ 666 ರೂಪಾಯಿಯ ಸ್ಕೀಮ್ ಅವಧಿಗೆ ಹೋಲಿಸಿದರೆ, ಏರ್‌ಟೆಲ್ ತನ್ನ ಗ್ರಾಹಕರಿಗೆ ಕಡಿಮೆ ಅವಧಿಯನ್ನು ನೀಡಿದೆ. ಇದು ಕೇವಲ 77 ದಿನದ ಕಾಲಾವಧಿ ಹೊಂದಿದೆ. ಈ ಸ್ಕೀಮ್ ನಲ್ಲಿ ನೀವು ಉಚಿತವಾಗಿ Amazon Prime ವೀಡಿಯೊಗೆ ಚಂದಾದಾರರಾಗಬಹುದು, ಹಾಗೂ ಉಚಿತ ವಿಂಕ್ ಮ್ಯೂಸಿಕ್‌ ಆ್ಯಪ್ ಗೆ ಚಂದಾದಾರರಾಗಬಹುದು. ಹಾಗೂ ಹಲೋ ಟ್ಯೂನ್ಸ್‌ಗೆ ಚಂದಾದಾರರಾಗಬಹುದು. ಹಾಗೆಯೇ ಎರಡೂ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಅನಿಯಮಿತ 5G ಡೇಟಾವನ್ನು ನೀಡುತ್ತಿವೆ.

ರೀಚಾರ್ಜ್ ಮಾಡುವ ವಿಧಾನ:- ನೀವು ಯಾವುದೇ UPI ಪೇಮೆಂಟ್ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡುವುದಾದರೆ ಮೊಬೈಲ್ ರೀಚಾರ್ಜ್ ಆಪ್ಷನ್ ಗೆ ಹೋಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ಯಾವ ಸಿಮ್ ಎಂಬುದನ್ನು ಆಯ್ಕೆ ಮಾಡಿ ಪ್ಲಾನ್ 666 ಆಯ್ಕೆ ಮಾಡಿ ನಂತರ ನಿಮ್ಮ pin code ನಮೂದಿಸಿ ರೀಚಾರ್ಜ್ ಮಾಡಿ. ಇಲ್ಲವೇ airtel thanks – reacharge and UPI ಅಥವಾ my jio ಆ್ಯಪ್ ಗೆ ಹೋಗಿ ರೀಚಾರ್ಜ್ ಮಾಡಬಹುದು. ಯಾವುದೇ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ ಇಲ್ಲದೆ ಇದ್ದಲ್ಲಿ ಹತ್ತಿರದ ರೀಚಾರ್ಜ್ ಸೆಂಟರ್ ಗೆ ಹೋಗಿ 666 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿಸಿ.

ಇದನ್ನೂ ಓದಿ: ಸುಮಾರು 13000 ರೂಪಾಯಿಗಳ ರಿಯಾಯಿತಿಯೊಂದಿಗೆ Flipkart ನಲ್ಲಿ Apple iPhone 15 ನ ವಿಶೇಷತೆಯನ್ನು ನೀವೇ ನೋಡಿ

ಇದನ್ನೂ ಓದಿ: ಭಾರತದ UPI ಪೇಮೆಂಟ್ ಯಾವ ಯಾವ ದೇಶದಲ್ಲಿ ಬಳಸಬಹುದು.