Karthik Jayaram: ಹೆಂಡ್ತಿ ಅಂತ ಖಡಕ್ ಡೈಲಾಗ್ ಹೊಡೆಯುತ್ತಲೇ ಕಿರುತರೆ ವೀಕ್ಷಕರಿಗೆ ಮೋಡಿ ಮಾಡಿದ್ದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಖ್ಯಾತಿಯ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ಈ ಧಾರಾವಾಹಿಯಲ್ಲಿ ಪಕ್ಕ ದುರಹಂಕಾರಿ ಗಂಡನಾಗಿ ನಟನೆ ಶುರು ಮಾಡಿದ ಜೆಕೆ ಆಮೇಲೆ ಹೆಂಡತಿಯನ್ನ ಬಿಟ್ಟುಕೊಡಲಾಗದಷ್ಟು ಪ್ರೀತಿ ಮಾಡಲು ಹೇಗೆ ಶುರು ಮಾಡ್ತಾನೆ ಅನ್ನೋ ಕಥಾ ವಸ್ತುವಿಗೆ ಜೆಕೆ ಜೀವಾ ತುಂಬಿದ್ರು. ಹೌದು ಸಿನಿಮಾ ನಟ ಜೆಕೆ ಪಾತ್ರದಲ್ಲಿ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ನಟಿಸಿದ್ದ ಜಯರಾಮ್ ಕಾರ್ತಿಕ್ ಬೆಳ್ಳಿತೆರೆ, ಕಿರುತೆರೆ ವೀಕ್ಷಕರಿಗೆ ಬಹಳಷ್ಟು ಹತ್ತಿರವಾಗುತ್ತಾರೆ. ಅನಂತರ ಜೆಕೆ ಅಂತಲೇ ಎಲ್ಲರಿಗೂ ಪರಿಚಿತಾರಾಗುತ್ತಾರೆ. ಮತ್ತೊಂದು ವಿಷಯ ಅಂದ್ರೆ ಜೆಕೆ ಧಾರಾವಾಹಿಯಲ್ಲಿ ನಟಿಸುವ ಮುನ್ನ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಹೌದು 2011 ರಲ್ಲಿ ತೆರೆ ಕಂಡ ಸುದೀಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಕೆಂಪೇಗೌಡ ಚಿತ್ರದ ಮೂಲಕ ಜೆಕೆ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು. ಅದಾದ ನಂತರ ವಿಷ್ಣುವರ್ಧನ, ಜರಾಸಂಧ, ಫೈಟರ್ ಸಿನಿಮಾಗಳಲ್ಲಿ ಕೂಡ ಜೆಕೆ ನಟಿಸಿದರು.
ಇದಾದ ನಂತರ ಜೆಕೆ ಕಿರುತೆರೆಗೆ ಬಂದರು.ಹೌದು 2013-15 ವರೆಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಜೆಕೆಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡಿತು. ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಇವರು ಈ ಧಾರಾವಾಹಿ ಮೂಲಕ ಮನೆ ಮಾತಾದರು. ಜೆಕೆ ಜೋಡಿಯಾಗಿ ಮಯೂರಿ ಕ್ಯಾತರಿ ನಟಿಸಿದ್ದು, ಈ ಜೋಡಿ ಸಾಕಷ್ಟು ಫೇಮಸ್ ಕೂಡ ಆದ್ರು. ಇನ್ನು ಕನ್ನಡ ಮಾತ್ರವಲ್ಲದೆ ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಜೆಕೆ ಮಿಂಚಿದರು. ಆದರೆ ಇದೀಗ ಜಯರಾಮ್ ಕಾರ್ತಿಕ್ ಚಿತ್ರರಂಗ ಬಿಡಲು ನಿರ್ಧರಿಸಿದ್ದಾರಂತೆ. ಸ್ವತಃ ಅವರೇ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರದಲ್ಲಿ ಕುರಿತು ಕ್ಲಾರಿಟಿ ನೀಡಿದ್ದಾರೆ.
ಇದನ್ನೂ ಓದಿ: ಅಂಬಿ ಮನೆಯಲ್ಲಿ ಅಭಿ ಮದುವೆ ಸಂಭ್ರಮ, ಅರಿಶಿಣ ಶಾಸ್ತ್ರದಲ್ಲಿ ಅಂಬಿ ಪುತ್ರನ ಮಸ್ತ್ ಲುಕ್ ಹೇಗಿತ್ತು ಗೊತ್ತಾ
ಗಾಂಧಿ ನಗರದಲ್ಲಿ ಜೆ. ಕೆ ವಿರುದ್ಧ ಸಂಚು ನಡುತ್ತಿದ್ಯಾ
ಹೌದು ಜಯರಾಮ್ ಕಾರ್ತಿಕ್(Karthik Jayaram) ಅವ್ರು ಕನ್ನಡ ಮಾತ್ರವಲ್ಲ ಹಿಂದಿ ಚಿತ್ರರಂಗದಿಂದಲೂ ದೂರವಿರಲು ನಿರ್ಧರಿಸಿದ್ದಾರಂತೆ, ಸಂಪೂರ್ಣವಾಗಿ ಸಿನಿಮಾ ರಂಗದಿಂದ ದೂರ ಇರೋದಾಗಿ ಹೇಳಿದ್ದು, ಅವ್ರ ಈ ನಿರ್ಧಾರ ಕೇಳಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಜೆಕೆ ಈ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ ಕೂಡ ಇದೆಯಂತೆ. ಅದನ್ನ ಜೆಕೆ ಅವ್ರೆ ಹೇಳಿಕೊಂಡಿದ್ದಾರೆ. ಹೌದು ಎಷ್ಟೇ ಕಷ್ಟ ಪಟ್ಟು ಮೇಲೆ ಬರಲು ಪ್ರಯತ್ನಿಸಿದರೂ ಕೆಲವರು ನನ್ನನ್ನು ತುಳಿಯವ ಪ್ರಯತ್ನ ಮಾಡುತ್ತಿದ್ದಾರೆ ಅಂತ ನಟ ಜೆಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಿಂದಿಯಲ್ಲಿ ನನಗೆ ಸಾಕಷ್ಟು ಅವಕಾಶ ಇತ್ತು. ಆದರೆ ನಾನು ಕನ್ನಡಕ್ಕೆ ವಾಪಸ್ ಬಂದೆ. ಇಲ್ಲಿ ನನ್ನನ್ನು ಬೆಂಬಲಿಸುವ ಜನರಿದ್ದಾರೆ ಎಂದುಕೊಂಡೆ. ಆದರೆ ನನಗೆ ದೊರೆಯತ್ತಿರುವ ಅವಕಾಶಗಳನ್ನೆಲ್ಲಾ ಕೆಲವರು ದೂರ ಮಾಡುತ್ತಿದ್ದಾರೆ ಪರವಾಗಿಲ್ಲ ಅವರಿಗೆ ನನ್ನ ಮೇಲೆ ಯಾಕಿಷ್ಟು ಪ್ರೀತಿ ಅಂತ ಗೊತ್ತಾಗುತ್ತಿಲ್ಲ. ಆದ್ರೆ ಕೋವಿಡ್‌ಗೂ ಮುನ್ನ ಶೂಟಿಂಗ್ ಆರಂಭಿಸಿದ್ದ ‘ಐರಾವನ್’ ಬಿಡುಗಡೆಗೆ ಸಿದ್ಧವಿದೆ. ನಂತರ ‘ಕಾಡ’ ಸಿನಿಮಾ ಇದೆ. ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಹಿಂದಿ ಧಾರಾವಾಹಿಗಳನ್ನು ಮುಗಿಸಿಬಂದಿದ್ದೇನೆ. ಸಿನಿಮಾಗಳು ರಿಲೀಸ್ ಆದ ಬಳಿಕ ಇಲ್ಲಿ ಗುಡ್ ಬೈ ಹೇಳಿ ಬೇರೆ ಕ್ಷೇತ್ರಕ್ಕೆ ಹೋಗುತ್ತೇನೆ ಎಂದು ಜಯರಾಮ್ ಕಾರ್ತಿಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕನ್ನಡದ ಅಗ್ನಿಸಾಕ್ಷಿ, ನಾಗಿಣಿ 2 ಧಾರಾವಾಹಿಗಳಲ್ಲಿ ಜೆಕೆ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಅಲ್ಲದೇ 2017-18 ರಲ್ಲಿ ಪ್ರಸಾರವಾದ ಬಿಗ್ ಬಾಸ್ 5ನೇ ಸೀಸನ್ ನಲ್ಲಿ ಜೆಕೆ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇನ್ನು ಇಂಜಿನಿಯರಿಂಗ್ ಪದವಿ ಪಡೆದಿರುವ ಜಯರಾಮ್ ಕಾರ್ತಿಕ್ ಮಾಡೆಲ್ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಇವರ ಸೋಷಿಯಲ್ ಮೀಡಿಯಾ ತೆರೆದರೆ ಸಾಕು, ವರ್ಕೌಟ್ ಹಾಗೂ ಫ್ಯಾಷನ್ ಶೋಗಳದ್ದೇ ಹೆಚ್ಚು ಫೋಟೋಗಳನ್ನು ಕಾಣಬಹುದು. ಇನ್ನು 2015-16 ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರ ಕಂಡ ‘ಸಿಯಾ ಕೆ ರಾಮ್’ ಹಿಂದಿ ಧಾರಾವಾಹಿಯಲ್ಲಿ ಜಯರಾಮ್ ಕಾರ್ತಿಕ್ ರಾವಣನ ಪಾತ್ರದಲ್ಲಿ ನಟಿಸಿದ್ದರು. ಈ ಧಾರಾವಾಹಿ ಹಿಂದಿಯಲ್ಲಿ ಅವರಿಗೆ ಹೆಸರು ತಂದು ನೀಡಿತ್ತು. ನಂತರ ಹಿಂದಿಯಲ್ಲಿ ‘ಪುಷ್ಪ ಐ ಹೇಟ್’ ಟಿಯರ್ಸ್ ಸಿನಿಮಾದಲ್ಲಿ ಜೆಕೆ ನಾಯಕನ ಪಾತ್ರದಲ್ಲಿ ಮಿಂಚಿದ್ದರು. ಹೀಗೆ ಸಾಕಷ್ಟು ಅವಕಾಶ ಹಾಗೂ ಯಶಸ್ಸಿನ ಮಧ್ಯೆಯಲ್ಲಿ ಸಾಗುತ್ತಿದ್ದ ಜೆಕೆ ಮರಳಿ ಕನ್ನಡ ಚಿತ್ರರಂಗಕ್ಕೆ ಬಂದು ಈ ರೀತಿಯ ನಿರ್ಧಾರ ತೆಗೆದುಕೊಂಡಿರೋದು ಬಹಳ ನೋವಿನ ವಿಚಾರ. ಅಭಿಮಾನಿಗಳಂತು ಇತರದ ನಿರ್ಧಾರ ಬೇಡ ಅಂತ ಹೇಳ್ತಿದ್ದಾರೆ ಆದ್ರೆ ಮುಂದಿನ ದಿನಗಳಲ್ಲಿ ಜೆಕೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 15 ಕಡೆಯ ದಿನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸೋದು ಹೇಗೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram