ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿ ಯಾಗಿ ಕೇಳಿದವರೆಲ್ಲ ಸೂಪರ್ ಡೂಪರ್ ಅಂತೀರೋ ‘ಜಿಂಗಿಚಾಕ ಜಿಂಗಿಚಾಕ ‘ ಹಾಡು ಸಖತ್ ವೈರಲ್ ಆಗ್ತಿದೆ. ಈ ಹಾಡು ಕೇಳಿದವರು ಇದರ ಸಾಹಿತ್ಯ ಏನು ಎಂದು ಅರ್ಥ ಆಗದೆ ತಲೆಕೆಡಿಸಿಕೊಂಡಿದ್ದರೆ ಅನ್ನೋದಕ್ಕಿಂತ ಬಹಳಷ್ಟು ಮಂದಿ ಈ ಹಾಡು ಬರೆದವರು ಬಿಟ್ಟು, ಯಾರಿಗೂ ಈ ಹಾಡು ಅರ್ಥ ಆಗಿಲ್ಲ ಬಿಡು ಆದ್ರೂ ಹಾಡಿದವರು ಸಖತ್ ಸ್ವೀಟ್ ವಾಯ್ಸ್ ನಲ್ಲಿ ಹಾಡಿದ್ದಾರೆ ಅಂತ ಮಾತನಾಡಿಕೊಳ್ಳುತ್ತಿದ್ರು. ಸದ್ಯ ಈಗ ಈ ಹಾಡು ಹಾಡಿದವರು ಯಾರೆಂದು ರಿವೀಲ್ ಆಗಿದೆ. ಹೌದು ಹರ್ಷಿಕಾ ಪೂಣಚ್ಚ, ವಾಸು, ನವೀನ್ ಕೃಷ್ಣ ನಟನೆಯ “ಜಿಂಗಿಚಾಕ ಜಿಂಗಿಚಾಕ, ಕುಚು ಕುಚು ಟುವ್ವಿ ಟುವ್ವಿ” ಹಾಡೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಹಾಡು ಕೇಳಿದವರು ಏನಿದು ಸಾಹಿತ್ಯ ಅಂತ ತಲೆ ಕೆಡಿಸಿಕೊಂಡಿದ್ದಾರೆ. ಈಗ ಈ ಹಾಡಿನ ಗಾಯಕ ಯಾರು ಎಂದು ರಿವೀಲ್ ಆಗಿದೆ. ಹೌದು ಜೀ ಕನ್ನಡ ವಾಹಿನಿಯ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟರೊಬ್ಬರು ಈ ಹಾಡನ್ನು ಹಾಡಿದ್ದರಂತೆ. ಸ್ವತಃ ನಟಿ ವೈಷ್ಣವಿ ಗೌಡ ಈ ವಿಷಯವನ್ನು ತಮ್ಮ ಯೌಟ್ಯೂಬ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಜಿಂಗಚಕ ಜಿಂಗಚಕ ಕುಚು ಕುಚು ಟುವ್ವಿ ಟುವ್ವಿ, ತನನಂ ಗಿಲ್ ಗಿಲ್ ಕಿ, ತಮ್ನಂ ಬುಲ್ ಬುಲ್ ಕಿ” ಹಾಡಿನಲ್ಲಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದರು. ನವೀನ್ ಕೃಷ್ಣ, ವಾಸು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ಇದು ಗಲ್‌ಬಸ್ಕಿ ಭಾಷೆಯಂತೆ. ಸದ್ಯ ಈಗ ಈ ಹಾಡನ್ನು ಹಾಡಿದವರು ಯಾರು ಅನ್ನೋದನ್ನ ನಟಿ ವೈಷ್ಣವಿ ರಿವಿಲ್ ಮಾಡಿದ್ದಾರೆ. ಹೌದು ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ನಟನೆಯ ‘ಸೀತಾರಾಮ’ ಧಾರಾವಾಹಿಯ ಈಗ ಸಖತ್ ಹಿಟ್ ಆಗ್ತಿರೋ ಧಾರವಾಹಿ. ಈ ಧಾರವಾಹಿಯ ಪ್ರತಿಯೊಂದು ಪಾತ್ರವು ಕೂಡ ಜನರಿಗೆ ಸಾಕಷ್ಟು ಹತ್ತಿರವಾಗಿತ್ತು. ಸದ್ಯ ಈ ಧಾರವಾಹಿಯಲ್ಲಿ ನಟಿಸುತ್ತಿರುವ ನಟ ಅಶೋಕ್ ಅವರು ಈ ಹಾಡನ್ನು ಹಾಡಿದ್ದಾರೆ ಅನ್ನೋದನ್ನ ವೈಷ್ಣವಿ ಗೌಡ ಅವರು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ಚೆನ್ನಾಗಿಯೇ ಇದ್ದ ಶ್ರೀ ಮುರಳಿಗೆ ಈಗ ಏನಾಯ್ತು? ಸ್ಪಂದನಾ ಕಾರ್ಯಕ್ಕೆ ಕುಂಟುತ್ತ ಬಂದ ಶ್ರೀ ಮುರುಳಿ
ವಿಷಯವನ್ನ ಬಹಳ ಅದ್ಭುತವಾಗಿ ರಿವಿಲ್ ಮಾಡಿದ ನಟಿ ವೈಷ್ಣವಿ
ಹೌದು ಅಶೋಕ್ ಅವರು ಈಗಾಗಲೇ ‘ಕೆಜಿಎಫ್’ ಸೇರಿ 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಜೀ ಕನ್ನಡ ವಾಹಿನಿಯ ‘ಸೀತಾರಾಮ’ ಧಾರಾವಾಹಿಯಲ್ಲಿ ಅಶೋಕ್ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದು ನಾಯಕ ರಾಮ್ ಅವರ ಗೆಳೆಯನ ಪಾತ್ರ ಆಗಿದೆ. ಹೀಗಾಗಿ ಹೀಗೆ ಮಾತಾಡುವಾಗ ಈ ಹಾಡಿನ ಹಿನ್ನಲೆ ಧ್ವನಿ ಇವರದ್ದೇ ಅನ್ನೋದು ವೈರಲ್ ಆಗಿದೆ. ಹೌದು ಒಂದು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಹಾಡೊಂದು ವೈರಲ್ ಆಗ್ತಿದೆ. ಯಾರಪ್ಪಾ ಇದನ್ನಾ ಹಾಡಿದ್ದು” ಅಂತ ಹೇಳಿದ್ದರಂತೆ. ಆಗ ಅಶೋಕ್ ಅವರು “ನಾನೇ ಹಾಡಿದ್ದು” ಗಗನ್ ಚಿನ್ನಪ್ಪಗೆ ಹೇಳಿದ್ದರಂತೆ. ಇನ್ನು ಅಶೋಕ್ ಅವರು ಜಿಂಗಚಕ ಜಿಂಗಚಕ ಹಾಡು ಹಾಡಿದಾಗ ಸಿಹಿ ಪಾತ್ರಧಾರಿ ರಿತು ಸಿಂಗ್ ಕೂಡ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ವಿಷಯ ಈಗ ಸಖತ್ ವೈರಲ್ ಆಗ್ತಿದೆ. ಇನ್ನು ಅಶೋಕ್ ಅವ್ರೆ ಹೇಳಿರುವಂತೆ ಆಗಿನ ಕಾಲಕ್ಕೆ ಈ ಹಾಡು ನಾಪತ್ತೆ ಆಗಿತ್ತು, ಈಗ ಈ ಹಾಡು ಸಖತ್ ವೈರಲ್ ಆಗ್ತಿದೆ ಅಂತ ಹೇಳಿದ್ರು ಈಗ ನಾನೇ ಈ ಹಾಡು ಹಾಡಿದ್ದೀನಿ ಅಂತ ಎಲ್ಲರ ಬಳಿ ಹೋಗಿ ಹೇಳ್ತಿದ್ದೀನಿ” ಎಂದು ಅಶೋಕ್ ಅವರು ಹೇಳಿದ್ದಾರೆ.
ಇನ್ನು ಅಶೋಕ್ ಅವ್ರು ನಟನ ಕ್ಷೇತ್ರಕ್ಕೆ ಬರೋಕು ಮೊದಲು ಸಿಂಗರ್ ಆಗಿದ್ರಂತೆ ಆದ್ರೆ ಅವ್ರು ಅಷ್ಟು ಫೇಮಸ್ ಆಗಿಲ್ಲ. ಕಾರಣ ತಿರುಪತಿ ತಿರುಮಲ ವೆಂಕಟೇಶ’ ಹಾಡನ್ನು ಹಾಡಿರುವ ಅಶೋಕ್ ಅವರು ಕೆಲ ದಿನಗಳ ಕಾಲ ಸಂಗೀತದ ಕಡೆಗೆ ಗಮನ ಕೊಟ್ಟಿರಲಿಲ್ಲ. ಯಾಕಂದ್ರೆ ನಟನೆ ಕಡೆಗೆ ಹೆಚ್ಚಿನ ಒಲವು ಇಟ್ಟುಕೊಂಡಿದ್ದ ಅಶೋಕ್ ಹಾಡೋದ್ರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ವಂತೆ. ಇನ್ನು ಮಾಸ್ಟರ್ ಆನಂದ್ ಅವರು ‘5 ಈಡಿಯಟ್ಸ್’ ಸಿನಿಮಾದ ಹಾಡು ಹಾಡಿ ಅಂತ ಅಶೋಕ್ ಅವರಿಗೆ ಹೇಳಿದ್ದರಂತೆ. ಆಗ ಅಶೋಕ್ ಈ ಹಾಡನ್ನ ಹಾಡಿದ್ದಾರೆ. ಅಂದಹಾಗೆ ಈ ಸಿನಿಮಾಕ್ಕೆ ಮಾಸ್ಟರ್ ಆನಂದ್ ನಿರ್ದೇಶನ ಮಾಡಿದ್ದರು. ಇನ್ನು ವಿಶೇಷ ಅಂದ್ರೆ ಇದೆ ಜಿಂಗಚಕ ಜಿಂಗಚಕ’ ಹಾಡನ್ನು ಅಶೋಕ್ ಅವರ ತಂದೆ ರಾಮ್ ನಾರಾಯಣ್ ಅವರು ಬರೆದಿದ್ದರು. ಹೌದು ಈ ಹಾಡಿನಲ್ಲಿ ಸಾಹಿತ್ಯ ಇರೋದಿಲ್ಲ. ಆಡುಪದಗಳಾದ ‘ಜಿಂಗಚಕ ಜಿಂಗಚಕ ಜಾಂಗಮಳ’ ಎನ್ನುವಂತಹ ಪದಗಳನ್ನು ಪೋಣಿಸಿ ಹಾಡು ಬರೆದಿದ್ದಾರಂತೆ ಅಲ್ದೆ ಇದೊಂದು ಪ್ರಯೋಗ ಅಷ್ಟೇ. ಈ ಹಾಡು ಹಿಟ್ ಆದರೂ ಆಗಬಹುದು, ನಾಪತ್ತೆಯೂ ಆಗಬಹುದು ಎಂದು ರಾಮ್ ನಾರಾಯಣ್ ಅವ್ರೆ ಹೇಳಿದ್ರಂತೆ. ಇದೀಗ ಅವ್ರ ಮಾತು ಸತ್ಯವಾಗಿದ್ದು ಈ ಹಾಡು ಸಖತ್ ಟ್ರೆಂಡ್ ಆಗ್ತಿದೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನವೇ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ! 3,800 ರೂಪಾಯಿ ಇಳಿಕೆಯಾದ ಚಿನ್ನ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram