ಬೆಂಗಳೂರಿನಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

Job Fair in bengaluru

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು ಎಂದು ರಾಜ್ಯ ಸರ್ಕಾರವು ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಿದೆ. ಈಗಾಗಲೇ 31 ಸಾವಿರಕ್ಕೂ ಹೆಚ್ಚಿನ ಉದ್ಯೋಗ ಆಕಾಂಕ್ಷಿಗಳು ಅರ್ಜಿಯನ್ನು ಸಲ್ಲಿಸಿದ್ದಾರೆ. ಅಭ್ಯರ್ಥಿಗಳಿಗೆ ಅನುಕೂಲ ಆಗುವ ದೃಷ್ಟಿಯಿಂದ 600ಕ್ಕೂ ಹೆಚ್ಚಿನ ಕೌಂಟರ್ ತೆರೆಯಲಾಗಿದೆ. ಉದ್ಯೋಗ ಮೇಳವನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾದ D.k ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ. ಈಗಾಗಲೇ ಉದ್ಯೋಗ ಮೇಳದ ಯಶಸ್ಸಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗ ಹೊಸದಾಗಿ ಉಚಿತ ಬಸ್ ವ್ಯವಸ್ತೆಯನ್ನು ಸಹ ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿಗಳಿಗೆ ಮಾಡಿಂದಲಾಗಿದೆ.. ಹಾಗಾದರೆ ಯಾವ ಯಾವ ಸ್ಥಳಗಳಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಯೋಣ.

WhatsApp Group Join Now
Telegram Group Join Now

ಉದ್ಯೋಗ ಮೇಳಕ್ಕೆ ಬೆಂಗಳೂರು ಮಾತ್ರವಲ್ಲ, ಕರ್ನಾಟಕದ ಮೂಲೆ ಮೂಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣದಿಂದ ಹಾಗೂ ಶಾಂತಿ ನಗರ ಬಸ್ ನಿಲ್ದಾಣದಿಂದ ಅರಮನೆ ಮೈದಾನಕ್ಕೆ ತೆರಳುವ ಉಚಿತ ಬಸ್ ಸೇವೆಯನ್ನು ಒದಗಿಸಲಾಗಿದೆ. ಇದು ಕೇವಲ ಫೆಬ್ರುವರಿ 26 ಮತ್ತು 27 ರಂದು ಮಾತ್ರ ಲಭ್ಯವಿದೆ. ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇದೆ. ಎರಡು ದಿನಗಳ ಕಾಲ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮೇಲೆ ತಿಳಿಸಿದಂತೆ ಮೆಜೆಸ್ಟಿಕ್ ಹಾಗೂ ಶಾಂತಿ ನಗರದಿಂದ ಅರಮನೆ ಮೈದಾನಕ್ಕೆ ಮಾತ್ರ ಈ ಉಚಿತ ಬಸ್ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ನಡೆಸಲು 6 ಸಚಿವರ ಸಮಿತಿಯನ್ನು ರಚಿಸಲಾಗಿದೆ: ಉದ್ಯೋಗ ಮೇಳದ ವ್ಯವಸ್ಥಿತ ನಿರ್ವಹಣೆಗಾಗಿ ಆರು ಜನ ಶಾಸಕರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದ್ದಾರೆ.

ಇದನ್ನೂ ಓದಿ: ಗೃಹ ಲಕ್ಷ್ಮಿ ಹಣ ಜಮಾ ಆಗದ ಮಹಿಳೆಯರಿಗೆ ಹೊಸ ಅಪ್ಡೇಟ್ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ 

ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೋಂದಣಿ ಮಾಡುವುದು ಹೇಗೆ?

ಉದ್ಯೋಗಾಕಾಂಕ್ಷಿಗಳಿಗೆ: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಇಲ್ಲಿ ಕ್ಲಿಕ್ ಮಾಡಿ ನಂತರ “ರಿಜಿಸ್ಟರ್” ಆಯ್ಕೆಯನ್ನು ಕ್ಲಿಕ್ ಮಾಡಿದ ಮೇಲ್ “ಉದ್ಯೋಗ ಮೇಳ” ಆಯ್ಕೆಗೆ ಹೋಗಿ. “ಅಭ್ಯರ್ಥಿ ನೋಂದಣಿ” ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಅರ್ಜಿ ನಮೂನೆಯನ್ನು ಓಪನ್ ಆಗುತ್ತದೆ ಅದನ್ನು ಭರ್ತಿಮಾಡಿ, submit ಮಾಡುವ ಮೊದಲು ನಿಮ್ಮ ಮಾಹಿತಿಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಉದ್ಯೋಗದಾತರಿಗೆ: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಇಲ್ಲಿ ಕ್ಲಿಕ್ ಮಾಡಿ ಮೇಲೆ ತಿಳಿಸಿದಂತೆ “ರಿಜಿಸ್ಟರ್” ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ “ಉದ್ಯೋಗ ಮೇಳ” ಆಯ್ಕೆ ಕ್ಲಿಕ್ ಮಾಡಿ. ನಂತರ “ಉದ್ಯೋಗದಾತ ನೋಂದಣಿ” ಆಯ್ಕೆಯನ್ನು ಕ್ಲಿಕ್ ಮಾಡಿ. ಅರ್ಜಿ ನಮೂನೆಯನ್ನು ತುಂಬಿ, ನಿಮ್ಮ ಮಾಹಿತಿಯನ್ನು ಖಚಿತಪಡಿಸಿಕೊಂಡು ಸಲ್ಲಿಸಿ.

ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಂಪರ್ಕಿಸಿ – ದೂರವಾಣಿ ಸಂಖ್ಯೆ 18005999918. ಉದ್ಯೋಗ ಮೇಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಉದ್ಯೋಗ ಮೇಳಕ್ಕೆ ತೆರಳುವಾಗ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ , ನಿಮ್ಮ Resume , ನಿಮ್ಮ ವಿದ್ಯಾರ್ಥಿಯ ಸರ್ಟಿಫಿಕೇಟ್, ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.

ಇದನ್ನೂ ಓದಿ: ನಿಮ್ಮ ಹಣವನ್ನು ಡಬಲ್ ಮಾಡಬೇಕಾ? ಹಾಗಾದರೆ ಇಲ್ಲಿದೆ ನಿಮಗೆ ಸಹಾಯ ಮಾಡುವ ಟಾಪ್ 10 ಸರ್ಕಾರಿ ಸ್ಕೀಮ್ ಗಳು..