K.S Eshwarappa: ಈಶ್ವರಪ್ಪ ಧೀಡಿರ್ ರಾಜಕೀಯ ನಿವೃತ್ತಿಗೆ ಕಾರಣ ಏನು? ಈಶ್ವರಪ್ಪ ಆಸ್ತಿ ಎಷ್ಟು?

K.S Eshwarappa: ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, ಅದರಲ್ಲೂ 40% ಕಮಿಷನ್ ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಕೆ.ಎಸ್.ಈಶ್ವರಪ್ಪ ದಿಡೀರ್ ರಾಜಕೀಯ ನಿವೃತ್ತ ಘೋಷಿಸಿದ್ದಾರೆ. ಹೌದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಈಶ್ವರಪ್ಪ, “ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದೇನೆ” ಎಂದು ತಿಳಿಸಿರುವುದಾಗಿ ಪತ್ರ ಬರೆದಿದ್ದಾರೆ.ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರನ್ನು ಪರಿಗಣಿಸಬಾರದು”ಅಂತಲೂ ಬರೆದಿರುವ ಈಶ್ವರಪ್ಪ ಅವ್ರ ಮುಂದಿನ ನಡೆ ಏನಿರಬಹುದು ಅಂತ ಎಲ್ಲರಲ್ಲೂ ಕುತೂಹಲ ಶುರುವಾಗಿದೆ.

WhatsApp Group Join Now
Telegram Group Join Now

40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪಮುಖ್ಯಮಂತ್ರಿಯವರೆಗೆ ಗೌರವ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ನನ್ನ ಅನಂತ ಧನ್ಯವಾದ ತಿಳಿಸಿರುವ ಈಶ್ವರಪ್ಪ ಅವ್ರ ಅಸಮಾಧಾನಕ್ಕೆ ಕಾರಣವೂ ಇದೆ.ಹೌದು ಈಶ್ವರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದರು. ಆದರೆ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಪ್ಪಿರಲಿಲ್ಲ ಅಂತ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ. ಈಶ್ವರಪ್ಪ ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಆಯನೂರು ಮಂಜುನಾಥ್‌ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಈಶ್ವರಪ್ಪ ವಂಶ ರಾಜಕಾರಣವನ್ನು ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿ, ಈಶ್ವರಪ್ಪ ವಿರುದ್ಧ ನಿಲುವು ತಾಳಿದ್ದರು. ಇದು ಕೂಡ ಈಶ್ವರಪ್ಪ ರಾಜಕೀಯ ನಿವೃತ್ತಿಗೆ ಒಂದು ಕಾರಣವಾಗಿರಬಹುದು

ಇನ್ನು ಶಿವಮೊಗ್ಗದ ಅಡಿಕೆ ಮಂಡಿಗಳ ವ್ಯಾಪಾರದಿಂದ ಹಿಡಿದು ಬೆಂಗಳೂರಿನ ವಿಧಾನಸೌಧದಲ್ಲಿ ಅಧಿಕಾರ ನಡೆಸುವವರೆಗೆ ಕೆ.ಎಸ್.ಈಶ್ವರಪ್ಪ ಅವರು ಸಾಕಷ್ಟು ದೂರ ಸಾಗಿದ್ದಾರೆ. ಆದರೆ, ತಮ್ಮ ರಾಜಕೀಯ ಪ್ರಯಾಣದುದ್ದಕ್ಕೂ, ಗುತ್ತಿಗೆದಾರ, ಹಿಂದೂ ವಾಹಿನಿಯ ಮುಖಂಡ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಕೆ ಪಾಟೀಲ್ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಹೊತ್ತು ನ್ಯಾಯಾಲಯದ ವಿವಾದಗಳಿಗೆ ಹೆಸರುವಾಸಿಯಾಗಿ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನದಿಂದ ಕೆಳಗಿಳಿಯುತ್ತಾರೆ.. ನಂತರ ಪುತ್ರನಿಗೆ ಪಕ್ಷದಿಂದ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ಮಾಡಿ ಇದೀಗ ಸೋತು ಸುಣ್ಣವಾಗಿ ರಾಜಕೀಯ ನಿವೃತ್ತಿ ಘೋಷಿಸಿಕೊಂಡಿದ್ದಾರೆ.

ಇದನ್ನು ಓದಿ : ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

ಕುರುಬ ಸಮುದಾಯದವರಾದ ಈಶ್ವರಪ್ಪನವರು ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಯ ಸಚಿವರಾಗಿ, ಜೊತೆಗೆ ರಾಜ್ಯದ ಉಪಮುಖ್ಯಮಂತ್ರಿಯಾಗಿ ಗಮನ ಸೆಳೆದಿದು, ರಾಜ್ಯ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರೂ ಕೂಡ ವಿವಾದಗಳ ಮುಂದೆ ಕೈಕಟ್ಟಿ ನಿಲ್ಲಿವಂಟಾಗಿಬಿಟ್ಟಿತ್ತು..

ಈಶ್ವರಪ್ಪ ಆಸ್ತಿ ಎಷ್ಟು?

ಇನ್ನು 15ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಮಾಡಿರುವ ಈಶ್ವರಪ್ಪ ಕೃಷಿ ಭೂಮಿ, ವಾಣಿಜ್ಯ ಮಳಿಗೆಗಳು ಸೇರಿದಂತೆ, ವಸತಿ ಕಟ್ಟಡಗಳ ಮಾಲೀಕರು ಹೌದು..4ಬಾರಿ ವಿಧಾನ ಸಭೆಗೆ ಆಯ್ಕೆಯಾಗಿರುವ ಈಶ್ವರಪ್ಪ ಒಮ್ಮೆ ಮಾತ್ರ ಸೋಲಿನ ರುಚಿ ನೋಡುವಂತಯಿತು. ಅದು ಕೂಡ ಕೆಜೆಪಿ ಪಕ್ಷ ಕಟ್ಟಿ ಮುಖಭಂಗ ಮಾಡಿಕೊಂಡಿದ್ರು..

ಒಟ್ಟಿನಲ್ಲಿ ಓದುವ ಸಂದರ್ಭದಲ್ಲೆ RSS ಸಂಘ ಪಾರಿವಾರದವರ ಒಡನಾಟ ಇಂದು ಈಶ್ವರಪ್ಪ ನವರನ್ನ ರಾಜಕೀಯದಲ್ಲಿ ಮೊನ್ನೆಲೆಗೆ ಬರುವಂತೆ ಮಾಡಿತ್ತು ಆದ್ರೆ ರಾಜಕೀಯ ರಂಗದಲ್ಲಿ ಪ್ರತಿಯೊಬ್ಬರ ಹೆಸರಲ್ಲಿ ಒಂದೊಂದು ವಿವಾದಗಳು ಇದ್ದೆ ಇರುತ್ತೆ ಹೀಗಾಗಿ ವಿವಾದ ಅನ್ನೋದು ಈಶ್ವರಪ್ಪ ಅವರನ್ನು ಬಿಟ್ಟಿಲ್ಲ.. ಆರೋಪಗಳಿಂದ ಈಶ್ವರಪ್ಪ ಹೊರಬಂದರು ರಾಜಕೀಯ ರಂಗಲ್ಲದಲ್ಲಿ ಭದ್ರಾವಗಿ ನೆಲೆಯೂರಿ ಮಗನಿಗೆ ಟಿಕೆಟ್ ಕೊಡಿಸುವ ವಿಷಯದಲ್ಲಿ ಸೋತು ಸ್ವಯಂ ನಿವೃತ್ತಿ ಘೋಷಿಸಿರೋದು ನಿಜಕ್ಕೂ ಅವ್ರ ಅಭಿಮಾನಿಗಳಿಗೆ ಬೇಸರದ ಸಂಗತಿಯೇ ಸರಿ.

ಇದನ್ನು ಓದಿ : ಮೇ 5ಕ್ಕೆ ದ್ವಿತೀಯ ಪಿ.ಯು.ಸಿ ಫಲಿತಾಂಶ ಬರುತ್ತಾ!? ರಿಸೆಲ್ಟ್ ಚೆಕ್ ಮಾಡೋದು ಹೇಗೆ?