ಮೊದಲ ದಿನವೇ ಬಾಕ್ಸ್ ಆಫೀಸ್ ಚಿಂದಿ; ಫಸ್ಟ್ ಡೇ ಕಲೆಕ್ಷನ್ ನಲ್ಲಿ ಅಬ್ಬರಿಸಿ ಬೊಬ್ಬಿರಿದ ಕಾಟೇರ

Kaatera Movie 1st Day Box Office Collection

ಪ್ಯಾನ್‌ ಇಂಡಿಯಾ ಸಿನಿಮಾವಲ್ಲದೆ, ವಿಶೇಷವಾಗಿ ಕನ್ನಡ ಸಿನಿಮಾ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ತೆರೆಕಂಡ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಡಿಸೆಂಬರ್ 29ರಂದು ರಿಲೀಸ್ ಆಗಿದೆ. ಈ ಚಿತ್ರ ಮೊದಲ ದಿನ ವಿಮರ್ಶಕರು ಹಾಗೂ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ. ಕರ್ನಾಟಕದಲ್ಲಿ ಸಿಂಗಲ್‌ ಸ್ಕ್ರೀನ್‌ ಪರದೆಗಳಲ್ಲಿ, ಮಲ್ಟಿ ಪ್ಲೆಕ್ಸ್‌ ಅಲ್ಲದ ಆನ್‌ಲೈನ್‌ ಬುಕ್ಕಿಂಗ್‌ ಇಲ್ಲದ ಸಾಮಾನ್ಯ ಚಿತ್ರಮಂದಿರಗಳಲ್ಲಿಯೂ ಕಾಟೇರ ಬಿಡುಗಡೆಯಾಗಿದೆ. ಹೀಗಾಗಿ, ಮೊದಲ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ. ಹೌದು ಡಿಸೆಂಬರ್ 28ರ ಮಧ್ಯರಾತ್ರಿಯಿಂದಲೇ ಶೋಗಳು ಪ್ರದರ್ಶನ ಕಂಡಿವೆ. ಡಿಸೆಂಬರ್ 29ರ ಬಹುತೇಕ ಶೋಗಳು ಹೌಸ್​ಫುಲ್ ಆಗಿವೆ. ಹೀಗಾಗಿ, ಮೊದಲ ದಿನ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿದೆ ಅಂತ ಹೇಳಲಾಗುತ್ತಿದ್ದು, ಈ ಚಿತ್ರ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನುವ ಬಗ್ಗೆ ಇಲ್ಲಿದೆ ಲೆಕ್ಕಾಚಾರ ನಡೀತಿದ್ದು, ಅಫೀಷಿಯಲ್ ಆಗಿ ಚಿತ್ರದ ಗಳಿಕೆಯ ವರದಿ ಹೊರಬಿದ್ದಿದ್ದು, ಮೊದಲ ದಿನದ ಕಲೆಕ್ಷನ್ ಎಷ್ಟು ಅನ್ನೋದರ ಬಗ್ಗೆ ನೋಡ್ತಾ ಹೋಗೋಣ ಬನ್ನಿ.

WhatsApp Group Join Now
Telegram Group Join Now

ಕಾಟೇರಾ ಚಿತ್ರದ ಮೊದಲ ದಿನದ ಅಫೀಷಿಯಲ್ ಕಲೆಕ್ಷನ್ ಎಷ್ಟು ಗೊತ್ತಾ?

ಇನ್ನು ನಿರ್ದೇಶಕ ತರುಣ್ ಸುಧೀರ್ ಹಾಗೂ ದರ್ಶನ್ ಅವರದ್ದು ಹಿಟ್ ಕಾಂಬಿನೇಷನ್. ತರುಣ್ ನಿರ್ದೇಶನದ ಮೊದಲ ಸಿನಿಮಾ ಚೌಕ ಚಿತ್ರದಲ್ಲಿ ದರ್ಶನ್ ಪ್ರಮುಖ ಅತಿಥಿ ಪಾತ್ರ ಮಾಡಿದ್ದರು. ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಹಾಗೂ ತರುಣ್ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ಇದಾದ ಬಳಿಕ ಕಾಟೇರ ಸಿನಿಮಾದಲ್ಲಿ ಇಬ್ಬರೂ ಒಂದಾದರು. ಇನ್ನು ಕಾಟೇರ ಸಿನಿಮಾವನ್ನು ನೋಡಿರುವವರು ಇದು ದರ್ಶನ್‌ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾವೆಂದು ಹೊಗಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದರ್ಶನ್‌ ಸಿನಿಮಾವೆಂದರೆ ಅಭಿಮಾನಿಗಳನ್ನು ಸಂತೃಪ್ತಿ ಪಡಿಸುವ ಸಲುವಾಗಿ ನಡೆಸುವ ಪ್ರಯತ್ನದಂತೆ ಇತ್ತು. ಈ ಕಾಟೇರ ಸಿನಿಮಾದಲ್ಲಿ ಕತೆ ಮತ್ತು ಸಂದೇಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಚಿತ್ರದ ಮೊದಲಾರ್ಧವು ಅತ್ಯುತ್ತಮವಾಗಿದ್ದು, ಕ್ಲೈಮ್ಯಾಕ್ಸ್‌ ಕುರಿತೂ ಮೆಚ್ಚುಗೆ ವ್ಯಕ್ತವಾಗಿದೆ. ಸೆಕೆಂಡ್‌ ಹಾಪ್‌ನಲ್ಲಿ ಕೆಲವು ಕಡೆ ದರ್ಶನ್‌ ಅಭಿಮಾನಿಗಳನ್ನು ಮೆಚ್ಚಿಸುವ ಪ್ರಯತ್ನವಿತ್ತು. ಹೀಗಾಗಿ ಸಿನಿಮಾ ನೋಡಿದ ಪ್ರತಿಯೊಬ್ಬರೂ ಸಿನಿಮಾಗೆ ಫೈವ್ ಸ್ಟಾರ್ ನೀಡಿದ್ದಾರೆ.

ಇನ್ನು ಗಳಿಕೆಯ ವಿಚಾರಕ್ಕೆ ಬರುವುದಾದ್ರೆ, ದರ್ಶನ್ ಅವರ ಸಿನಿಮಾಗಳು ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಮಾಡೋಕೆ ಅವರು ಆಸಕ್ತಿ ತೋರಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಾಟೇರಾ ಚಿತ್ರವನ್ನು ಬಿಡುಗಡೆ ಮಾಡಿದ್ದರೆ ಗಳಿಕೆ ಮತ್ತಷ್ಟು ಹೆಚ್ಚುತ್ತಿತ್ತು. ಆದ್ರೂ ಈ ಚಿತ್ರ ಮೊದಲ ದಿನ ಕರ್ನಾಟಕದ ಬಾಕ್ಸ್ ಆಫೀಸ್​ನಲ್ಲಿ 19.79 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾ ಕಾಟೇರ ಅದ್ಧೂರಿಯಾಗಿ ರಾಜ್ಯಾದ್ಯಂತ ರಿಲೀಸ್ ಆಗಿದೆ. ಹೌದು ಕೆಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗಾಗಿ ಮಿಡ್‌ನೈಟ್ ಶೋ ಹಾಕಲಾಗಿತ್ತು. ಇನ್ನು ಕೆಲವು ಕಡೆ ಬೆಳಗಿನ ಜಾವ 3 ಗಂಟೆಗೆ ಶೋ ಇಡಲಾಗಿತ್ತು. ಕೆಲವೆಡೆ ಮುಂಜಾನೇ 5 ಗಂಟೆಗೇ ‘ಕಾಟೇರ’ ಪ್ರದರ್ಶನ ಕಂಡಿದ್ದೂ ಇದೆ. ಇನ್ನು ಸಿನಿಮಾ ಬಿಡುಗಡೆಗೂ ಮುನ್ನ ಬೆಂಗಳೂರು, ಮೈಸೂರು, ದಾವಣಗರೆ, ಶಿವಮೊಗ್ಗ ಕಡೆಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಫ್ಯಾನ್ಸ್ ಶೋಗಳಿಂದ ಹಿಡಿದು ಮೊದಲ ದಿನ ಪ್ರದರ್ಶನಗೊಳ್ಳಬೇಕಿರೋ ಎಲ್ಲಾ ಶೋಗಳು ಕೂಡ ಬಹುತೇಕ ಚಿತ್ರಮಂದಿರಗಳಲ್ಲಿ ಮೊದಲೇ ಬುಕ್ ಆಗಿದ್ವು, ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳು ಕಾಟೇರ ಮೊದಲ ದಿನ ಅಂದಾಜು ಗಳಿಕೆಯನ್ನು ಲೆಕ್ಕ ಹಾಕಿದ್ರು, ಗರಿಷ್ಠ 13-15 ಕೋಟಿ ಕಲೆಕ್ಷನ್ ಆಗಬಹುದು ಅಂತ ಹೇಳಿದ್ರು. ಆದ್ರೆ ಕಾಟೇರ ಎಲ್ಲರ ಅಂದಾಜುಗಳನ್ನ ಉಡೀಸ್ ಮಾಡಿ ನಿರೀಕ್ಷೆಗೂ ಮೀರಿ ಗಳಿಕೆ ಕಂಡಿರೋದು ನಿಜಕ್ಕೂ ಕೂಡ ಫಾನ್ಸ್ ಗಳಿಗೆ ಖುಷಿಯ ವಿಚಾರ ಅಂತಲೇ ಹೇಳಬಹುದು. ಹೌದು ದರ್ಶನ ಅವ್ರು ಕನ್ನಡಕ್ಕೆ ನೀಡುತ್ತಿರುವ ಮನ್ನಣೆ ಮತ್ತು ಅವ್ರ ಸ್ವಾಭಿಮಾನಕ್ಕೆ ಅಭಿಮಾನಿಗಳು ಗಳಿಕೆಯ ಮೂಲಕ ಸಲ್ಯೂಟ್ ಹೇಳಿದ್ದಾರೆ ಅಂತಲೇ ಹೇಳಬಹುದು. ಹೌದು ಸದ್ಯ ಕಾಟೇರ ಸಿನಿಮಾ ಮೊದಲ ಹತ್ತಿರ ಹತ್ತಿರ 20 ಕೋಟಿ ಗಳಿಕೆ ಮಾಡಿ ಅದ್ದೂರಿ ರೆಸ್ಪಾನ್ಸ್ ಪಡೆದುಕೊಂಡಿದೆ ಅಂತಲೇ ಹೇಳಬಹುದು.

ಇದನ್ನೂ ಓದಿ: ಅಮೃತಧಾರೆ ಹಾಗೂ ಸೀತಾರಾಮ ಟಿಆರ್ ಪಿ ಏರಿಕೆ! ಬಿಗ್ ಬಾಸ್ ಟಿಆರ್ ಪಿ ಎಷ್ಟು ಗೊತ್ತಾ?