Dr Bro: ದುಬೈನಲ್ಲಿ ಡಾ.ಬ್ರೋ ಜೊತೆ ಕನ್ನಡದ ನಟರು.. ಅಚಾನಕ್ಕಾಗಿ ಎಲ್ಲರನ್ನು ಒಟ್ಟಿಗೆ ನೋಡಿ ಸೈಕಾದೆ ಎಂದ ಡಾ.ಬ್ರೋ

Dr Bro: ಇತ್ತೀಚ್ಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಸಹವಾಸವೇ ಬೇಡ ಅನ್ನುವಷ್ಟರ ಮಟ್ಟಿಗೆ ಕೆಲವೊಂದಷ್ಟು ಜನ ನಡೆದುಕೊಳ್ಳುತ್ತಾರೆ. ಆದ್ರೆ ಕನ್ನಡದಲ್ಲಿ ಯೂಟ್ಯೂಬ್ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನ ಬರೆದ ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಗೆ ಕೇವಲ ಕನ್ನಡಿಗರು ಮಾತ್ರ ಅಲ್ಲ ಭಾರತದಾದ್ಯಂತ ಅಭಿಮಾನಿಗಳಿದ್ದಾರೆ. ಕಾರಣ ಅವ್ರು ಮಾಡುವ ಕೆಲಸಗಳು ವಿಚಾರಗಳು ಬಹಳ ವಿಚಾರವಂತಿಕೆಯನ್ನ ಒಳಗೊಂದಿರುತ್ತವೆ. ಹೌದು ವ್ಲಾಗ್ ಚಾನಲ್ ಅಂದರೆ ಹೀಗಿರಬೇಕೆಂದು ಎಲ್ಲರಿಗೂ ತೋರಿಸಿಕೊಟ್ಟವರು ಡಾಕ್ಟರ್ ಬ್ರೋ. ಅವರ ಯುಟ್ಯೂಬ್ ಚಾನೆಲ್ ಹೆಸರು ಕೂಡ ಡಾ.ಬ್ರೋ.

WhatsApp Group Join Now
Telegram Group Join Now

ಇನ್ನು ಇವ್ರು ಯೌಟ್ಯೂಬ್ ಚಾನೆಲ್ ನಲ್ಲಿ ಒಂದು ಮಿಲಿಯನ್ ಗಿಂತ ಅಧಿಕ Subscribers ಹೊಂದಿದ್ದಾರೆ. ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಅವರಿಗೆ ಹೆಚ್ಚೇನು ಪ್ರಾಯವಾಗಿಲ್ಲ. ಅವರ ವಯಸ್ಸು ಈಗ ಕೇವಲ 23, ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಬುದ್ಧತೆಯನ್ನು ಹೊಂದಿ, ದೇಶ ವಿದೇಶ ಸುತ್ತಾಡಿ, ಕನ್ನಡಿಗರಿಗೆ ಪ್ರಪಂಚದಲ್ಲಿ ಏನೇನಾಗುತ್ತಿದೆ ಎನ್ನುವುದನ್ನು ವಿವರಿಸುವಲ್ಲಿ ಯಶಶ್ವಿಯಾಗುತ್ತಿದ್ದಾರೆ. ಹೌದು ಕೇವಲ ಯೂಟ್ಯೂಬ್ ಮಾತ್ರವಲ್ಲ ಫೇಸ್ಬುಕ್ ಇನ್ಸ್ಟಾಗ್ರಾಮ್ ಅಲ್ಲಿ ಕೂಡ ಡಾಕ್ಟರ್ ಬ್ರೋ ಮೊದಲ ಸ್ಥಾನದಲ್ಲಿದ್ದಾರೆ. ಹೀಗೆ ದೇಶ ವಿದೇಶ ಸುತ್ತಿ ಅಲ್ಲಿನ ಸಂಸ್ಕೃತಿ ಅಲ್ಲಿನ ಜನರ ಆಚಾರ ವಿಚಾರಗಳನ್ನ ತೋರಿಸಿಕೊಡುವ ಡಾ. ಬ್ರೋ ಈಗ ದುಬೈ ನಲ್ಲಿದ್ದು ಅಲ್ಲಿ ನಮ್ಮ ಕನ್ನಡ ನಟರನ್ನ ನೋಡಿ ಸೈಕ್ ಆದೆ ಅಂತ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಗೆಳೆಯನ ಬರ್ತಡೇಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಧ್ರುವ ಸರ್ಜಾ..

ಕನ್ನಡದ ನಟರನ್ನ ನೋಡಿ ಡಾ. ಬ್ರೋ ಫುಲ್ ಹ್ಯಾಪಿ..

ಡಾ. ಬ್ರೋ(Dr Bro) ನಮ್ಮ ದೇಶ ಮಾತ್ರ ಅಲ್ಲಾ ಹಲವಾರು ದೇಶಗಳಿಗೆ ಭೇಟಿ ನೀಡಿ ಅಲ್ಲಿನ ನೆಲ, ಜಲ ಸಂಪ್ರದಾಯ, ಪರಿಸರ, ಆಚಾರ ವಿಚಾರ ಹೀಗೆ ಎಲ್ಲವನ್ನ ಮಾತೃಭಾಷೆಯಲ್ಲಿ ಅಂದ್ರೆ ನಮ್ಮ ಕನ್ನಡದಲ್ಲಿ ಜನರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಹೌದು ಇಲ್ಲಿಯವರೆಗೆ ಆಫ್ರಿಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಇಂಡೋನೇಷಿಯಾ ಹೀಗೆ ಹಲವಾರು ಯುರೋಪ್ ದೇಶಗಳಿಗೆ ಟ್ರಾವೆಲ್ ಮಾಡಿ ಅಲ್ಲಿನ ಜನ ಜೀವನದ ಬಗ್ಗೆ ಕನ್ನಡಿಗರಿಗೆ ಎಳೆ ಎಳೆಯಾಗಿ ಮಾಹಿತಿ ನೀಡುತ್ತಿರುವ ಡಾ ಬ್ರೋಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹೀಗೆ ದೇಶ ಸುತ್ತೋದು ಮೊದಲೆನಲ್ಲ ಬಿಡಿ ಆದ್ರೆ ಗೊತ್ತಿಲ್ಲದ ನಾಡಲ್ಲಿ ನಮ್ಮ ನೆಲದವರು ಸಿಕ್ರೆ ಎಷ್ಟು ಖುಷಿಯಾಗುತ್ತೆ ಅಲ್ವಾ. ಅಂಥದ್ದೇ ಒಂದು ಖುಷಿಯನ್ನ ನಮ್ಮ ಬ್ರೋ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಟೊ ಸಮೇತ ಹಂಚಿಕೊಂಡಿದ್ದಾರೆ.

ಹೌದು ದುಬೈ ಪ್ರವಾಸದಲ್ಲಿದ್ದ ಗಗನ್ ಶ್ರೀನಿವಾಸನ್ ಅವ್ರಿಗೆ ನಮ್ಮ ಕನ್ನಡದ ನಟರು ಆಚಾನಕ್ ಆಗಿ ಕಣ್ಣಿಗೆ ಬಿದಿದ್ದಾರೆ. ಹೌದು ನಮ್ಮ ಕನ್ನಡ ಚಿತ್ರರಂಗದ ನಟರು ಕೂಡ ದುಬೈ ಪ್ರವಾಸಕ್ಕೆ ಹೋಗಿದ್ದು ಅಲ್ಲಿ ಗಗನ್ ಶ್ರೀನಿವಾಸನ್ ಹಾಗೂ ಇವ್ರ ಭೇಟಿಯಾಗಿದೆ. ಹೌದು ಡಾರ್ಲಿಂಗ್ ಕೃಷ್ಣ, ವಸಿಷ್ಠ ಸಿಂಹ, ವಾಸುಕಿ ವೈಭವ್, ನೀನಾಸಂ ಸತೀಶ್, ಲೂಸ್ ಮಾದ ಯೋಗೇಶ್, ಧನಂಜಯ್, ಡಾ. ಭೂಷಣ್ ಸೇರಿದಂತೆ ಸಾಕಷ್ಟು ನಟರು ಕೂಡ ಒಟ್ಟಿಗೆ ದುಬೈ ಗೆ ಹಾರಿದ್ರು, ಆ ಫೋಟೋಗಳನ್ನ ಇವ್ರು ಕೂಡ ಹಂಚಿಕೊಂಡಿದ್ರು. ಇದೀಗ ಇವ್ರ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೋ ಒಂದನ್ನ ಡಾ. ಬ್ರೋ ಹಂಚಿಕೊಂಡಿದ್ದು ಫುಲ್ ಖುಷಿಯಾಗಿದ್ದಾರೆ. ಅಲ್ಲದೇ ನಾನು ಚಿಕ್ಕ ವಯಸ್ಸಿನಿಂದ ಇವ್ರನ್ನ ದೂರದಿಂದ ನೋಡಿ ಬೆಳಿದಿದ್ದೆ, ಇವತ್ತು ಇವ್ರೆಲ್ಲರನ್ನು ಒಟ್ಟಿಗೆ ಅಚಾನಕ್ಕಾಗಿ ನೋಡಿ ಸೈಕ್ ಆದೆ ಅಂತ ಬ್ರೋ ಕ್ಯಾಪ್ಶನ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಡಾ.ಬ್ರೋ ಅವ್ರು ಫೋಟೋ ಶೇರ್ ಮಾಡಿದ 2 ಗಂಟೆಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನೀವೇನ್ ಬ್ರೋ ಅವ್ರನ್ನ ನೋಡಿ ಸೈಕ್ ಆಗೋದು ಅವ್ರೆ ನಿಮ್ಮನ್ನ ನೋಡಿ ಸೈಕ್ ಆಗಿರ್ತಾರೆ ಬಿಡಿ, ನೀವು ಅವರಿಗಿಂತ ನೆಕ್ಸ್ಟ್ ಲೆವೆಲ್, ನಿಮ್ಮನ್ನ ನೋಡಿದ್ದು ಮೀಟ್ ಮಾಡಿದ್ದು ಅವ್ರ ಪುಣ್ಯ, ನಿಮ್ನ ನೋಡೋದು ಒಂದು ಥ್ರಿಲ್ ಬಿಡಿ ಬ್ರೋ ಅಂತೆಲ್ಲಾ ಕಾಮೆಂಟ್ಸ್ ಮಾಡಿ ಫುಲ್ ಖುಷ್ ಆಗಿದ್ದಾರೆ. ಹೌದು ಸಾಕಷ್ಟು ಜನಗಳ ಕಮೆಂಟ್ಸ್ ಇದೆ ಆಗಿದ್ದು ಅದರೊಲ್ಲಬ್ಬರು ಹಿಂದೆ ನಿಂತಿರೋರು ಕನ್ನಡ ಚಿತ್ರರಂಗದವರು ಮುಂದೆ ನಿಂತಿರೋರು ಚರಿತ್ರೆ ಸೃಷ್ಟಿ ಮಾಡಿದೋರು ಅಂತ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಡಾ. ಬ್ರೋ ಕನ್ನಡಿಗರ ಮನಸ್ಸಲ್ಲಿ ಒಂದು ರೀತಿಯ ಅಧ್ಯಾಯ ಅಂತ ಹೇಳುದ್ರು ತಪ್ಪಾಗಲ್ಲ.

ಇದನ್ನೂ ಓದಿ: ಗಟ್ಟಿಮೇಳ ವಿಕ್ಕಿ ಪಾತ್ರ ಅಂತ್ಯ! ಕೊನೆಯ ದಿನದ ಶೂಟಿಂಗ್ ಸೆಟ್ ನಲ್ಲಿ ಕಣ್ಣೀರಿಟ್ಟ ವಿಕ್ರಾಂತ್ ಪಾತ್ರಧಾರಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram