ಇತ್ತೀಚಿನ ದಿನಗಳಲ್ಲಿ ನಾವು ಮಕ್ಕಳಿಗೆ ವಿದ್ಯಾಭ್ಯಾಸವನ್ನ ದೊಡ್ಡ ದೊಡ್ಡ ಶಾಲಾ ಕಾಲೇಜುಗಳಿಗೆ ಸೇರಿಸಿ ಹೈ ಪೈ ಆಗಿ ಕ್ವಾಲಿಟಿ ಎಜುಕೇಷನ್ ಹೆಸರಲ್ಲಿ ಅವ್ರನ್ನ ಎಷ್ಟು ಸಂಕುಚಿತ ಮಾಡ್ತಿದ್ದೀವಿ ಅಂದ್ರೆ ಬಾವಿಯಲ್ಲಿನ ಕಪ್ಪೆಯಂತೆ ಮಾಡಿಬಿಡುತ್ತಿದ್ದೀವಿ. ಅದಕ್ಕಿಂತ ಹೆಚ್ಚಾಗಿ ಮೌಲ್ಯಗಳನ್ನು, ಸಂಸ್ಕಾರಗಳ ಗಂಧ ಗಾಳಿಯು ಗೊತ್ತಿಲ್ಲದಂತೆ ಶಿಕ್ಷಣದ ಹೆಸರಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಬದನೇಕಾಯನ್ನ ಮಾತ್ರ ತಿಳಿಸಿಕೊಡ್ತಿದ್ದೀವಿ ಹೊರತು ಬೇರೇನೂ ಕಲಿಸದ ಆಗೇ ಬೆಳೆಸುತ್ತಿದ್ದೇವೆ. ಅದ್ರಲ್ಲಿ ಚಿಕ್ಕ ಕುಟುಂಬಗಳಲ್ಲಿ ಮಕ್ಕಳಿಗೆ ಸಮಯ ಕೊಡಲು ಆಗದಷ್ಟು ಕೇವಲ ಹಣ ಸಂಪಾದನೆ ಮತ್ಯಾವುದೋ ತಲೆಬಿಸಿ ಗಳಿಂದ ಮಕ್ಕಳಿಗೆ ಸಮಯ ಕೊಡೋದಕ್ಕೂ ಕೂಡ ಆಗದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೀವಿ. ಆದ್ರೆ ಈ ಕಾರಣಕ್ಕೆ ಮುಂದೆ ಸಾಕಷ್ಟು ಬೆಲೆ ತೆರಬೇಕಾಗುತ್ತೆ. ಈಗಾಗ್ಲೇ ಬೆಲೆ ತೆತ್ತಿರೋ ಪೋಷಕರು ಕೂಡ ಇದ್ದಾರೆ.
ಒಂದು ಮಕ್ಕಳನ್ನ ಕಳೆದುಕೊಳ್ಳೋದು, ಅಥವಾ ಮಕ್ಕಳು ದೊಡ್ಡವರಾದ ಮೇಲೆ ಪೋಷಕರಿಂದ ದೂರ ಹೋಗಿ ವಿದೇಶಗಳಲ್ಲಿ ನೆಲೆಸೋದು, ಕೊನೆಗೆ ಅಪ್ಪ ಅಮ್ಮನ ಕೊನಗಾಲಕ್ಕೂ ಅಪ್ಪ ಅಮ್ಮನ ಜೊತೆಗಿರದೆ, ಅಂತ್ಯ ಸಂಸ್ಕಾರಕ್ಕೂ ಬಾರದಂತ ಎಷ್ಟೋ ಮಕ್ಕಳು ನಮ್ಮ ಕಣ್ಮುಂದೆ ಈಗಲೂ ಇದ್ದಾರೆ. ಇನ್ನು ಕೆಲವೊಮ್ಮೆ ಸಣ್ಣ ಪುಟ್ಟ ವಿಚಾರಕ್ಕು ಆತ್ಮಹತ್ಯೆ ದಾರಿ ಹಿಡಿಯೋರನ್ನ ಕೂಡ ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ಬಾಲಕ ಕೇವಲ15ವರ್ಷಕ್ಕೆ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಮಾಡಿಕೊಂಡಿದ್ದಾನೆ. ಕೇವಲ 9ನೆ ತರಗತಿ ಓದುತ್ತಿದ್ದ ವಿದ್ಯಾರ್ಥಿಗೆ ಏನಿತ್ತು ಅಂತ ಸಮಸ್ಯೆ ಅಂತ ವಿಷಯದ ಆಳಕ್ಕೆ ಹೋದಾಗ ಕೇವಲ 750ರೂಪಾಯಿ ವಿದ್ಯಾರ್ಥಿಯ ಪ್ರಾಣ ಬಲಿ ಪಡೆದಿದೆ ಅಂದ್ರೆ ನೀವು ನಂಬಲೇಬೇಕು.
ಇದನ್ನೂ ಓದಿ: ಇಂದು ಸ್ವಲ್ಪ ಇಳಿಕೆ ಕಂಡ ಚಿನ್ನದ ಬೆಲೆ; ಹೀಗಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಸಾಲ ಮಾಡಿ ತೀರಿಸಲಾಗದೆ ವಿದ್ಯಾರ್ಥಿ ಸಾವು
ಹೌದು ಕೊಪ್ಪದ ಖಾಸಗಿ ಹಾಸ್ಟೆಲ್ ವಿದ್ಯಾರ್ಥಿ ಆತ್ಮಹತ್ಯೆಗೆ ಟ್ವಿಸ್ಟ್ ಸಿಕ್ಕಿದೆ. ಸದ್ಯ ವಿದ್ಯಾರ್ಥಿ ಬರೆದಿಟ್ಟ ಡೆತ್ ನೋಟ್ ವೈರಲ್ ಆಗಿದ್ದು, 750 ಸಾಲದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಹೇಳಲಾಗಿದೆ. ಹೌದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಖಾಸಗಿ ಶಾಲೆಯಲ್ಲಿ ನಡೆದಿದ್ದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೌದು ಕೇವಲ 750 ರೂಪಾಯಿ ಸಾಲದ ಹಣದಿಂದಾಗಿ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಗೆ ಸಾಲ ಕೊಟ್ಟು, ಬಳಿಕ ಸಾಲ ಕೊಟ್ಟ ಆಂಟಿ ಕಿರುಕುಳ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು ಆಗಸ್ಟ್ 22ರಂದು ವಿದ್ಯಾರ್ಥಿ ಶ್ರೀನಿವಾಸ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ಕೊಪ್ಪದ ಖಾಸಗಿ ಶಾಲೆಯಲ್ಲಿ ಶ್ರೀನಿವಾಸ್ ಆತ್ಮಹತ್ಯೆಗೆ ಶರಣಾಗಿದ್ದ. ನಂತರ ಕಡೂರು ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದ ವಿದ್ಯಾರ್ಥಿ ಶ್ರೀನಿವಾಸ್, ಕೊಪ್ಪ ಪಟ್ಟಣದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಆತ ಆಗಸ್ಟ್ 22ರಂದು ಸೂಸೈಡ್ ಮಾಡಿಕೊಂಡಿದ್ದ. ಇದೀಗ ಆತನ ಆತ್ಮಹತ್ಯೆ ಲೆಟರ್ ವೈರಲ್ ಆಗಿದೆ. ಕೇವಲ 750 ರೂಪಾಯಿ ಸಾಲದ ಹಣಕ್ಕೆ 3000 ರೂಪಾಯಿ ಕೊಡುವಂತೆ ಯಾರೋ ಆಂಟಿ ಕೇಳಿದ್ರು ಎಂದು ಡೆತ್ ನೋಟ್ ನಲ್ಲಿ ವಿದ್ಯಾರ್ಥಿ ಉಲ್ಲೇಖ ಮಾಡಿದ್ದಾನೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಾಲದ ಶೂಲಕ್ಕೆ ಸಿಲುಕಿ ವಿದ್ಯಾರ್ಥಿ ಸೂಸೈಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಿದ್ಯಾರ್ಥಿ ಬರೆದಿದ್ದ ಡೆತ್ ನೋಟ್ ನಲ್ಲಿ ಏನಿದೆ?
ಇನ್ನು ಡೆತ್ ನೋಟ್ ನಲ್ಲಿ ಬರೆದಿರೋ ಆ ಆಂಟಿ ವಾರ್ಡನ್ ಅಥವಾ ಹಾಸ್ಟೆಲ್‍ನ ಬೇರೆ ಸಿಬ್ಬಂದಿಯೋ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇದೀಗ ಡೆತ್ ನೋಟ್ ಹೊರಬಂದಿದ್ದು ಆತನ ಸಾವಿಗೆ ಕಾರಣಕರ್ತರಾದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮೃತ ಬಾಲಕನ ತಂದೆ ಆಗ್ರಹಿಸಿದ್ದಾರೆ. ಇನ್ನು ಮೃತ ಬಾಲಕ ಶ್ರೀನಿವಾಸ್ ತಂದೆ ನಿವೃತ್ತ ಯೋಧರಾಗಿದ್ದು, ಸೇನೆಯಿಂದ ವಾಪಸ್ ಬಂದ ಬಳಿಕ ಕೊಪ್ಪದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದರು. ಕೊಪ್ಪದಿಂದ ಅಜ್ಜಂಪುರ ತಾಲೂಕಿಗೆ ವರ್ಗಾವಣೆಯಾದ ಬಳಿಕ ಮಗನನ್ನು ಖಾಸಗಿ ಶಾಲೆಯ ಹಾಸ್ಟೆಲಿಗೆ ಸೇರಿಸಿ ಬಂದಿದ್ದರು.
ಆದ್ರೆ ಇದೀಗ ಬಾಲಕ ಸಾವನ್ನಪ್ಪಿದ್ದು, ಡೆತ್ ನೋಟ್ ಹೊರ ಬರುತ್ತಿದ್ದಂತೆ ಬಾಲಕನ ಪೋಷಕರು ಹಾಗೂ ಸಂಬಂಧಿಕರು ಕೂಡ ಅವನಿಗೆ ಹಣ ಕೊಟ್ಟವರು ಯಾರು? ಕೊಟ್ಟದ್ದು ಯಾಕೆ ? 750 ರೂ. ನೀಡಿ 3000 ರೂ. ಕೇಳಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಲ್ದೇ ಹಾಸ್ಟೆಲಿನಲ್ಲಿ ಅವನಿಗೆ ಹಣ ಕೊಟ್ಟವರು ಹಾಸ್ಟೆಲ್ ವಾರ್ಡನ್ ಅಥವಾ ಇತರೆ ಮಹಿಳಾ ಸಿಬ್ಬಂದಿ ಎನ್ನುವುದು ತನಿಖೆಯಿಂದ ಹೊರಬರಬೇಕಿದೆ. ಮಗನ ಸಾವಿಗೆ ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪೋಷಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಡೂರು ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದ ಜನ ಕೂಡ ಬಾಲಕನ ಸಾವಿಗೆ ಸೂಕ್ತ ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ತಾಳಿ ಕಟ್ಟುವಾಗ ಮದುವೆ ಇಷ್ಟ ಇಲ್ಲ ಎಂದ ಯುವತಿ! ಕೊನೆಗೆ ಪ್ರೀತಿಸಿದ ಹುಡುಗನ ಜೊತೆ ಹೋದ ಯುವತಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram