Kannada Serial TRP List 2023: ಸಂಜೆ ಆದರೆ ಸಾಕು ಹೆಂಗಸರೆಲ್ಲ ರಿಮೋಟ್ ಹಿಡ್ಕೊಂಡು ಸೀರಿಯಲ್ ನೋಡಲು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಈಗ ಐಪಿಎಲ್ ನ ಸಲುವಾಗಿ ಎಷ್ಟು ಸೀರಿಯಲ್ ಗಳ ಟಿ ಆರ್ ಪಿ ನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದೆ. ಹೌದು ಈ ಟಿ ಆರ್ ಪಿ ಎಂಬುವುದು ಸೀರಿಯಲ್ ಗೆ ಮತ್ತು ಆ ಸೀರಿಯಲ್ ಮೂಡಿ ಬರುತ್ತಿರುವ ಚಾನೆಲ್ ಗೆ ಅತಿ ಮುಖ್ಯವಾದ ಅಂಶ, ಈ ಟಿ ಆರ್ ಪಿ ಕಡಿಮೆಯಾಗಿದ್ದ ರಿಂದ ಎಷ್ಟೋ ಸೀರಿಯಲ್ ಗಳು ಮುಗಿದೆ ಹೋಗಿವೆ. ಆದರೆ ಕೆಲವು ಸೀರಿಯಲ್ ಗಳು ಶುರುವಾದಾಗಿನಿಂದ ಇಲ್ಲಿಯವರೆಗೂ ಒಳ್ಳೆ ಟಿ ಆರ್ ಪಿ ಮತ್ತು ಅದರ ಸ್ಥಾನವನ್ನು ಉಳಿಸಿಕೊಂಡು ಮುನ್ನುಗ್ಗುತ್ತಿವೆ.
ಕೆಲವು ಸೀರಿಯಲ್ ಗಳು ಮೊದ ಮೊದಲು ಒಳ್ಳೆಯ ಟಿ ಆರ್ ಪಿ ಪಡೆದುಕೊಂಡು ಕೊನೆಗೆ ಟಿ ಆರ್ ಪಿ ಚೆನ್ನಾಗಿ ಬರೆದ ಕಾರಣ ಮುಗಿಯುವ ಅಂತಕ್ಕು ಬಂದು ತಲುಪಿವೆ ಕೆಲವು ಸೀರಿಯಲ್ಗಳು ಈಗಾಗಲೇ ಮುಗಿದು ಕೂಡ ಹೋಗಿವೆ. ಟಿ ಆರ್ ಪಿ ಚೆನ್ನಾಗಿ ಬಂದರೆ ದೊಡ್ಡ ದೊಡ್ಡ ಬ್ರಾಂಡ್ ಕಂಪನಿಗಳು ಜಾಹೀರಾತು ಕೊಡಲು ಮುಂದೆ ಬರುತ್ತದೆ ಇದರಿಂದ ಆ ಸೀರಿಯಲ್ ಗೆ ಮತ್ತು ಆ ಸೀರಿಯಲ್ ಮೂಡಿ ಬರುತ್ತಿರುವ ಚಾನೆಲ್ ಗೆ ಚೆನ್ನಾಗಿ ಹಣ ಹರಿದು ಬರುತ್ತದೆ. ಇನ್ನು ಈ ವಾರದಲ್ಲಿ ಅನೇಕ ಸೀರಿಯಲ್ ಗಳ ಟಿ ಆರ್ ಪಿ ನಲ್ಲಿನ ಸ್ಥಾನ ಬದಲಾಗಿದ್ದು ಯಾವ ಯಾವ ಸೀರಿಯಲ್ ಗಳು ಯಾವ ಯಾವ ಸ್ಥಾನದಲ್ಲಿ ಇವೆ ನೋಡೋಣ ಬನ್ನಿ, ಮುಂದೆ ಓದಿ..
ಟಾಪ್ 10ಸ್ಥಾನದಲ್ಲಿ ಇರುವ ಧಾರಾವಾಹಿಗಳು
ಗಟ್ಟಿಮೇಳ:
ಗಟ್ಟಿಮೇಳ ಧಾರವಾಹಿ ಈ ವಾರ ಮೊದಲ ಸ್ಥಾನಕ್ಕೆ ಏರಿದೆ ಹೌದು 1000 ಎಪಿಸೋಡ್ ಗಳನ್ನು ದಾಟಿದರೂ ಕೂಡ ಈಗಲೂ ಅದೇ ಚಾಪೂ ಇಟ್ಟುಕೊಂಡಿದೆ ಇನ್ನು ಈ ವಾರ ಗಟ್ಟಿಮೇಳದಲ್ಲಿ ಅದಿತಿ ಮತ್ತು ಧ್ರುವ ಮದುವೆಯ ಎಪಿಸೋಡ್ ಗಳು ಟಿ ಆರ್ ಪಿ ಯನ್ನು ಹೆಚ್ಚಿಸಲು ಕಾರಣವಾಗಿದೆ.
ಪುಟ್ಟಕ್ಕನ ಮಕ್ಕಳು:
ಪುಟ್ಟಕ್ಕನ ಮಕ್ಕಳು ಶುರುವಾದಾಗಿನಿಂದಲೂ ಮೊದಲ ಸ್ಥಾನದಲ್ಲಿ ಇತ್ತು ಆದರೆ ಒಂದೊಂದು ವಾರದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದು ಮತ್ತೆ ಮುಂದಿನ ವಾರಕ್ಕೆ ಮೊದಲ ಸ್ಥಾನ ಪಡೆಯುವ ಸೀರಿಯಲ್ ಇದಾಗಿದೆ. ಇನ್ನು ಈ ಸೀರಿಯಲ್ ನಲ್ಲಿ ಉಮಾಶ್ರೀ ಅವರ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಅವರ ಪುಟ್ಟಕ್ಕನ ಪಾತ್ರ ಜನರಿಗೆ ಇಷ್ಟವಾಗಿದೆ.
‘ಭಾಗ್ಯಲಕ್ಷ್ಮಿ’, ‘ಲಕ್ಷ್ಮೀ ಬಾರಮ್ಮ’
ಮೂರನೇ ಸ್ಥಾನದಲ್ಲಿ ಕಲರ್ಸ್ ಕನ್ನಡದ ಅಕ್ಕ-ತಂಗಿ ಧಾರಾವಾಹಿಗಳೆಂದೇ ಫೇಮಸ್ ಆಗಿರುವ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯಲಕ್ಷ್ಮಿ’ ಧಾರವಾಹಿಗಳು ಇದ್ದಾವೆ. ಈ ಎರಡು ಸೀರಿಯಲ್ ಗಳು ಒಂದೇ ಟಿ ಆರ್ ಪಿ ಪಡೆದು ಮೂರನೇ ಸ್ಥಾನದಲ್ಲಿದೆ.
ಶ್ರೀರಸ್ತು ಶುಭಮಸ್ತು
ನಾಲ್ಕನೇ ಸ್ಥಾನದಲ್ಲಿ ಜೀ ಕನ್ನಡದ ಇನ್ನೊಂದು ಫೇಮಸ್ ಧಾರವಾಹಿ ಆದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಇದೆ. ಈ ಸೀರಿಯಲ್ ನಲ್ಲಿ ಸುಧಾರಾಣಿ, ಅಜಿತ್ ಹಂದೆ, ದೀಪಕ್ ಗೌಡ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.
ತ್ರಿನಯನಿ ಹಾಗೂ ಮನೆಮಗಳು
ಜೀ ಕನ್ನಡದ ಎರಡು ಡಬ್ಬಿಂಗ್ ಸೀರಿಯಲ್ ಗಳಾದ ತ್ರಿನಯಿನಿ ಮತ್ತು ಮನೆಮಗಳು ಧಾರಾವಾಹಿ ಈ ವಾರ ಟಿ ಆರ್ ಪಿ ರೇಸ್ ನಲ್ಲಿ ಐದನೇ ಸ್ಥಾನದಲ್ಲಿ. ಇನ್ನು ಈ ಎರಡು ಸೀರಿಯಲ್ ಗಳು ಮಧ್ಯಾಹ್ನ ಬಂದರೂ ಕೂಡ 5ನೇ ಸ್ಥಾನದಲ್ಲಿದೆ.
ಆರನೇ ಸ್ಥಾನದಲ್ಲಿ ‘ಸತ್ಯ’ ದಾರವಾಹಿ, ಏಳನೇ ಸ್ಥಾನದಲ್ಲಿ ‘ಹಿಟ್ಲರ್ ಕಲ್ಯಾಣ’ ಮತ್ತು ‘ಪುನರ್ ವಿವಾಹ’, ಎಂಟನೇ ಸ್ಥಾನದಲ್ಲಿ ‘ಕೆಂಡಸಂಪಿಗೆ’, 9ನೇ ಸ್ಥಾನದಲ್ಲಿ ‘ಭೂಮಿಗೆ ಬಂದ ಭಗವಂತ’ ಮತ್ತು ‘ನಮ್ಮ ಲಚ್ಚಿ’, ಹತ್ತನೇ ಸ್ಥಾನದಲ್ಲಿ ‘ಉದೋ ಉದೋ ಯಲ್ಲಮ್ಮ’ ಇದೆ..
ಇದನ್ನೂ ಓದಿ: ಅಮೃತದಾರೆ ಹೊಸ ಸೀರಿಯಲ್ ಕಥೆ ಏನು? ಇದು ಹಿಂದಿಯ ಯಾವ ಸೀರಿಯಲ್ ರಿಮೇಕ್ ಗೊತ್ತಾ?
ಇದನ್ನೂ ಓದಿ: ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಜೂನ್ 30ರ ಒಳಗೆ ಈ ಕೆಲಸ ಕಡ್ಡಾಯ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram