Kannada Serial TRP: ಕಿರುತೆರೆ ಲೋಕದಲ್ಲಿ ಟಿ ಆರ್ ಪಿ ಬಹಳ ಮುಖ್ಯವಾದದ್ದು ಒಂದು ಧಾರಾವಾಹಿ ಹಾಗೂ ಶೋನ ಭವಿಷ್ಯ ಪ್ರತಿವಾರ ಬರುವ ಟಿಆರ್‌ಪಿಯಲ್ಲಿ ನಿರ್ಧಾರವಾಗುತ್ತದೆ. ಟಿಆರ್ ಪಿ ರೇಸ್ ನಲ್ಲಿ ಏರಿಳಿತ ಸಾಮಾನ್ಯ. ಒಂದು ವಾರ ಏರಿದರೆ ಇನ್ನೊಂದು ವಾರ ಕೆಳಕ್ಕೆ ಕುಸಿಯಬಹುದು. ಇನ್ನು ಈಗ ಕಳೆದ ವಾರ ಧಾರವಾಹಿಗಳ ಟಿ ಆರ್ ಪಿ ಲಿಸ್ಟ್ ಬಂದಿದೆ. ಕಳೆದ ವಾರ ಟಿ ಆರ್ ಪಿ ಯಲ್ಲಿ ನಂಬರ್ ಒನ್ ಸ್ಥಾನವನ್ನು ‘ಪುಟ್ಟಕ್ಕನ ಮಕ್ಕಳು’ ಪಡೆದಿದೆ. ಹಾಗಾದರೆ ಟಾಪ್ 10 ಸ್ಥಾನದಲ್ಲಿ ಯಾವ ಯಾವ ಧಾರವಾಹಿಗಳು ಇದ್ದಾವೆ ಹಾಗೆ ಕಳೆದ ವಾರ ಶುರುವಾದ ‘ಅಮೃತಧಾರೆ’ ದಾರಾವಾಹಿಗೆ ಸಿಕ್ಕ ಟಿ ಆರ್ ಪಿ ಎಷ್ಟು ಎಂದು ನೋಡೋಣ ಬನ್ನಿ, ಮುಂದೆ ಓದಿ.,
ಇದನ್ನೂ ಓದಿ: ಅಭಿಷೇಕ್-ಅವಿವಾ ಆರತಕ್ಷತೆಯ ಕಲರ್ ಫುಲ್ ಫೋಟೋಗಳು, ಇಲ್ಲಿವೆ ನೋಡಿ
ಟಾಪ್ 10 ಸ್ಥಾನದಲ್ಲಿರುವ ಧಾರವಾಹಿಗಳು
ಪುಟ್ಟಕ್ಕನ ಮಕ್ಕಳು
ಜೀ ಕನ್ನಡದಲ್ಲಿ ರಾತ್ರಿ 7.30 ಕ್ಕೆ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಈ ವಾರ ಕರ್ನಾಟಕ ನಂಬರ್ ಒನ್ ಧಾರವಾಹಿ ಆಗಿದ್ದು. ಸಾಮಾನ್ಯಕ್ಕಿಂತ ಹೆಚ್ಚಿನ ಟಿ ಆರ್ ಪಿ ಯನ್ನು ಇದು ಪಡೆದಿದೆ ಇತ್ತೀಚೆಗೆ 400 ಸಂಚಿಕೆಗಳನ್ನು ಸಂಪೂರ್ಣಗೊಳಿಸಿತು. ಇನ್ನು ಕಥೆಯಲ್ಲಿ ಸ್ನೇಹ ಮತ್ತು ಕಂಠಿ ಮದುವೆಯ ಸಂಚಿಕೆಗಳು ಪ್ರಸಾರವಾಗುತ್ತಿದ್ದು ಮುಂದಿನ ವಾರ ಇನ್ನೂ ಹೆಚ್ಚಿನ ಟಿ ಆರ್ ಪಿ ಬರಬಹುದು ಎನ್ನಲಾಗುತ್ತಿದೆ.
ಗಟ್ಟಿಮೇಳ
‘ಗಟ್ಟಿಮೇಳ’ ಧಾರವಾಹಿ ಈ ವಾರ ಟಿ ಆರ್ ಪಿ ರೇಸ್ ನಲ್ಲಿ ಎರಡನೇ ಸ್ಥಾನದಲ್ಲಿದ್ದು ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳು ಪ್ರಸಾರವಾಗಿದ್ದರು. ತನ್ನ ಜನಪ್ರಿಯತೆ ಹಾಗೂ ಟಿ ಆರ್ ಪಿ ಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ಇರುತ್ತದೆ. ರಕ್ಷ್, ನಿಶಾ ರವಿಕೃಷ್ಣನ್, ಪ್ರಿಯಾ ಆಚಾರ್ ಹಲವಾರು ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಭಾಗ್ಯಲಕ್ಷ್ಮೀ
ಕಲರ್ಸ್ ಕನ್ನಡದಲ್ಲಿ ರಾತ್ರಿ ಏಳು ಗಂಟೆಗೆ ಪ್ರಸಾರವಾಗುವ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಈ ವಾಹಿನಿಯ ನಂಬರ್ ಒನ್ ಸೀರಿಯಲ್ ಆಗಿದೆ. ಟಿ ಆರ್ ಪಿ ರೇಸ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದು ಈ ಧಾರಾವಾಹಿಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸುಷ್ಮಾ ರಾವ್, ಸುದರ್ಶನ್ ರಂಗಪ್ರಸಾದ್ ಮೊದಲಾದವರು ಈ ಧಾರಾವಾಹಿಯಲ್ಲಿದ್ದಾರೆ.
ಲಕ್ಷ್ಮಿ ಬಾರಮ್ಮ ಮತ್ತು ಶ್ರೀರಸ್ತು ಶುಭಮಸ್ತು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಇನ್ನೊಂದು ಜನಪ್ರಿಯ ಧಾರವಾಹಿ ‘ಲಕ್ಷ್ಮಿ ಬಾರಮ್ಮ’ ಈ ಸೀರಿಯಲ್ ಟಿ ಆರ್ ಪಿ ರೇಸ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಈ ಧಾರಾವಾಹಿಯಲ್ಲಿ ಶಮಂತ್, ಭೂಮಿಕಾ ರಮೇಶ್ ಮೊದಲಾದವರು ಈ ಧಾರಾವಾಹಿಯಲ್ಲಿದ್ದಾರೆ. ಹಾಗೆ ನಾಲ್ಕನೇ ಸ್ಥಾನದಲ್ಲಿ ಮತ್ತೊಂದು ಧಾರಾವಾಹಿಯಾದ ‘ಶ್ರೀರಸ್ತು ಶುಭಮಸ್ತು’ ಇದೆ. ಈ ಧಾರಾವಾಹಿಯಲ್ಲಿ ಸುಧಾರಾಣಿ ಮತ್ತು ಅಜಿತ್ ಹಂದೆ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸತ್ಯ & ನಮ್ಮ ಲಚ್ಚಿ
ಜೀ ಕನ್ನಡ ವಾಹಿನಿಯಲ್ಲಿ ಒಂಬತ್ತು ಗಂಟೆಗೆ ಪ್ರಸಾರವಾಗುತ್ತಿರುವ ‘ಸತ್ಯ’ ಸೀರಿಯಲ್ ಟಿ ಆರ್ ಪಿ ರೇಸ್ ನಲ್ಲಿ ಐದನೇ ಸ್ಥಾನದಲ್ಲಿದೆ.
ಸ್ಟಾರ್ ಸುವರ್ಣದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ‘ನಮ್ಮ ಲಚ್ಚಿ’ ದಾರಾವಾಹಿಯು ಟಿ ಆರ್ ಟಿ ರೇಸ್ ನಲ್ಲಿ ಆರನೇ ಸ್ಥಾನದಲ್ಲಿದೆ.
ಅಮೃತಧಾರೆ
ಜೀ ಕನ್ನಡ ವಾಹಿನಿಯಲ್ಲಿ ಕಳೆದ ವಾರದಿಂದ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ದಾರಾವಾಹಿಯು ಮೊದಲ ವಾರದಲ್ಲೇ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದು. ಟಿ ಆರ್ ಪಿ ರೇಸ್ ನಲ್ಲಿ ಏಳನೇ ಸ್ಥಾನದಲ್ಲಿದ್ದು, ಈ ಧಾರಾವಾಹಿಗೆ ಮೊದಲ ವಾರ 4.9 ಟಿವಿಆರ್ ಬಂದಿದೆ.
ಎಂಟನೇ ಸ್ಥಾನದಲ್ಲಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’, ಒಂಬತ್ತನೇ ಸ್ಥಾನದಲ್ಲಿ ‘ತ್ರಿನಯನಿ’ ಹಾಗೂ ‘ಮನೆಮಗಳು’, 10ನೇ ಸ್ಥಾನದಲ್ಲಿ ‘ಕೆಂಡಸಂಪಿಗೆ’ ಇದೆ.
ಇದನ್ನೂ ಓದಿ: ಅಮ್ಮ ಅಪ್ಪನಿಗೆ ಇನ್ನೂ ಹೂ ಹಾಕ್ಬೇಕು ಮೇಘನಾ ರಾಜ್ ಮತ್ತು ಮಗನ ಭಾವುಕ ಕ್ಷಣ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram