Kannada serials: ನಮ್ಮ ಕಿರುತರೆ ಲೋಕ ಹೇಗಪ್ಪಾ ಅಂದ್ರೆ ಹೊಸ ನೀರು ಬಂದಾಗ ಹಳೆ ನೀರನ್ನ ಚೆಲ್ಲಿ ಹೊಸ ನೀರನ್ನ ಹಿಡಿಟ್ಟುಕೊಳ್ಳುತ್ತೇವಲ್ಲ ಹಾಗೆ. ಹೊಸ ಧಾರವಾಹಿಗಳ ಆಗಮನ ಆಗ್ಬೇಕು ಅಥವಾ ಧಾರವಾಹಿ ಕಲಾವಿದರ ನಡುವಿನ ಭಿನ್ನಾಭಿಪ್ರಾಯ, ಜಗಳ, ಮತ್ಯಾವುದೋ ಕಾರಣಕ್ಕೆ ಧಾರವಾಹಿಯನ್ನ ಮುಗಿಸಲೇಬೇಕಾದ ಕೆಲವೊಂದಿಷ್ಟು ಸಂದರ್ಭಗಳು ಎದುರಾಗುತ್ತವೆ ಆಗಲು ಸಹ ಹೊಸಬರಿಗೆ ಅವಕಾಶ ಮಾಡಿಕೊಟ್ಟು ಧಾರವಾಹಿಯನ್ನ ಮುಗಿಸಲೇಬೇಕಾಗುತ್ತೆ. ಇದೀಗ ಅದರಂತೆ ಕಲರ್ಸ್ ಕನ್ನಡ ಹಾಗೂ ಜಿ ಕನ್ನಡ ವಾಹಿನಿಯ 2ಪ್ರಮುಖ ಧಾರವಾಹಿಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿವೆ. ಹೊಸ ಧಾರವಾಹಿಗಳ ಆಗಮನಕ್ಕೆ ಕೆಲವೊಂದು ಸಲ ಹಳೆ ಧಾರವಾಹಿಗಳು ಗುಡ್ ಬೈ ಹೇಳಲೇಬೇಕಾದ ಕಾರಣ, ಶುರುವಿನಲ್ಲೇ ದಾಖಲೆಯನ್ನ ಬರೆದಿದ್ದ ಹಾಗೂ ಕೆಲವೊಂದಿಷ್ಟು ವಿವಾದಗಳನ್ನ ಹೊತ್ತಿದ್ದ ಧಾರವಾಹಿಗಳು ಈಗ ಕೊನೆ ಸಂಚಿಕೆಗಳನ್ನ ಅಂದ್ರೆ ಮುಕ್ತಾಯದ ಸಂಚಿಕೆಗಳನ್ನ ಪ್ರಸಾರ ಮಾಡ್ತಿವೆ. ಹಾಗಾದ್ರೆ ಯಾವ ಧಾರವಾಹಿಗಳು ತನ್ನ ಪ್ರಸಾರವನ್ನ ನಿಲ್ಲಿಸುತ್ತಿವೆ ಕಾರಣ ಏನು ಯಾಕೆ ಈ ಎಲ್ಲ ಸಂಪೂರ್ಣ ವಿವರಗಳನ್ನ ನೋಡೋಣ ಬನ್ನಿ.
ಕಲರ್ಸ್ ಕನ್ನಡದ ಗಿಣಿರಾಮ ಮುಕ್ತಾಯ..
ಉತ್ತರ ಕರ್ನಾಟಕದ ಖಡಕ್ ಭಾಷೆಯ ಸೊಗಡಿನಲ್ಲಿ ಪ್ರಸಾರವಾಗುತ್ತಿದ್ದ ವೀಕ್ಷಕರ ಮನ ಗೆದಿದ್ದ ಗಿಣಿರಾಮ ಸೀರಿಯಲ್ ಇದೀಗ ಮುಕ್ತಾಯದ ಹಂತವನ್ನ ತಲುಪಿದೆ. ಹೌದು ಬಹಳ ಹೆಲ್ದಿ ಕಾಂಪಿಟೇಷನ್ ಕೊಟ್ಟಿದ್ದು, ಟಿ ಆರ್ ಪಿ ಯಲ್ಲೂ ಕೂಡ ಮುಂದೆ ಇದ್ದ ಗಿಣಿರಾಮ ಸೀರಿಯಲ್ ಉತ್ತರ ಕರ್ನಾಟಕದ ಸೊಗಡಿನಿಂದಲೇ ಜನಮನ ಗೆದ್ದಿದ್ದಂತಹ ಧಾರಾವಾಹಿ ಇದೀಗ ಮುಕ್ತಾಯದ ಸಂಚಿಕೆಗಳನ್ನ ಪ್ರಸಾರ ಮಾಡ್ತಿರೋದು ನಿಜಕ್ಕೂ ಕೂಡ ಕಿರುತರೆ ವೀಕ್ಷಕರಿಗೆ ಒಂದು ರೀತಿಯ ನೋವಿನ ಸಂಗತಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೌದು ಶಿವರಾಮ್ ಹಾಗೂ ಮಹತಿ ಪಾತ್ರ ಜನರಿಗೆ ಬಹಳಷ್ಟು ಹತ್ತಿರವಾಗಿತ್ತು ಅಷ್ಟೆ ಇಷ್ಟವಾಗಿತ್ತು. ಆದ್ರೆ ಇದೀಗ ಈ ಸೀರಿಯಲ್ ಮುಕ್ತಾಯದ ಹಂತ ತಲುಪಿರೋದು ಕಿರುತಾರೆ ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಾವಾಗುತ್ತಿರುವ ಗಿಣಿರಾಮ ಸೀರಿಯಲ್ ನ ಮಹತಿ ಹಾಗೂ ಶಿವಾರಮ ಪಾತ್ರಕ್ಕೆ ದೊಡ್ಡ ಅಭಿಮಾನಿ ಬಳಗವೆ ಸೃಷ್ಟಿಯಾಗಿತ್ತು. ಆದರೆ ಇದೀಗ ಈ ಧಾರಾವಾಹಿ ಮುಕ್ತಾಯವಾಗ್ತಿದೆ ಅಂತ ಅಭಿಮಾನಿಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ. ಹೌದು ಕಲರ್ಸ್ ಕನ್ನಡ ದಲ್ಲಿ ಇದೀಗ ಹೊಸ ಧಾರವಾಹಿಗಳು ಹಾಗೂ ಕೆಲವೊಂದಷ್ಟು ಹೊಸ ಹೊಸ ಕಾರ್ಯಕ್ರಮಗಳ ರೂಪುರೇಷೆಗಳು ತಯಾರಾಗ್ತಿರೋದ್ರಿಂದ ಇದೀಗ ಅನಿವಾರ್ಯವಾಗಿ ತನ್ನ ಪ್ರಸಾರವನ್ನ ಗಿಣಿರಾಮ ಸೀರಿಯಲ್ ನಿಲ್ಲಿಸಲೇಬೇಕಾಗಿದೆ. ಈಗಾಗ್ಲೇ ಮಧ್ಯಾಹ್ನ ದ ಫುಲ್ ಮಿಲ್ಸ್ ಕಾರ್ಯಕ್ರಮ ಪ್ರಸಾರವಾಗಲೂ ತಾಯಾರಾಗುತ್ತಿದೆ ಹೀಗಾಗಿ ಜೊತೆಗೆ ಹೊಸ ಧಾರವಾಹಿಗಳ ಭರಾಟೆಯಿಂದ ಇದೀಗ ಗಿಣಿರಾಮ ಸೀರಿಯಲ್ ಮುಕ್ತಾಯದ ಹಂತ ತಲುಪಿದೆ.
ಇದನ್ನೂ ಓದಿ: KR ಪೇಟೆ ಚಂದನ್ ಗೌಡಗೆ ಸಿಕ್ಕ ಓಟು ಎಷ್ಟು ಗೊತ್ತಾ? ಕೆ. ಆರ್ ಪೇಟೆ ಮತದಾರರು ಚಂದನ್ ಕೈ ಹಿಡಿಯಲಿಲ್ವಾ?
ಮುಕ್ತಾಯಗೊಂಡ ಜೊತೆ ಜೊತೆಯಲ್ಲಿ
ಇನ್ನು ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ವಿವಾದಗಳ ಜೊತೆಗೆ ಸೀರಿಯಲ್ ಇನ್ನೇನು ಮುಗಿದೇ ಹೊಯ್ತು ಅರ್ಧಕ್ಕೆ ತನ್ನ ಪ್ರಸಾರವನ್ನ ನಿಲ್ಲಿಸುತ್ತೆ ಅಂತ ಹೇಳಲಾಗಿದ್ದ ಧಾರಾವಾಹಿ ಅಂದ್ರೆ ಅದು ಜೊತೆಜೊತೆಯಲ್ಲಿ ಧಾರವಾಹಿ. ಹೌದು ಆರಂಭದಲ್ಲಿ ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡು, ಟಿ ಆರ್ ಪಿ ಯಲ್ಲಿ ಮುನ್ನಡೆಯಲ್ಲಿದ್ದ ಜೊತೆಜೊತೆಯಲ್ಲಿ ಧಾರಾವಾಹಿ ನಂತರದ ದಿನಗಳಲ್ಲಿ ಸಾಕಷ್ಟು ವಿವಾದಕ್ಕೆ ಗುರಿ ಆಯ್ತು, ಅಲ್ಲದೆ ಪ್ರಸಾರವನ್ನ ನಿಲ್ಲಿಸಿಬಿಡುತ್ತೆ ಅಂದುಕೊಂಡಿದ್ದ ಧಾರವಾಹಿ ಇದೀಗ ಮತ್ತೆ ಧಾರಾವಾಹಿಯೊಳಗಿನ ಕಲಾವಿದರಿಂದಲೇ ಮುಕ್ತಾಯಗೊಳ್ಳುತ್ತಿರುವುದು ನಿಜಕ್ಕೂ ನೋವಿನ ವಿಚಾರ. ಹೌದು ಆರೂರು ಜಗದೀಶ್ ಅವ್ರಿಗೆ ಸಮಯ ಸರಿಯಿಲ್ಲ ಅನ್ಸುತ್ತೆ ಮೊದಲು ಅನಿರುದ್ದ್ ಅವ್ರ ವಿಚಾರಕ್ಕೆ ಧಾರವಾಹಿ ನಿಂತೇಹೋಯ್ತಿ ಅನ್ನೋ ಹಂತಕ್ಕೆ ಬಂದಿತ್ತು ಅನಂತರ ಹಿರಿಯ ನಟ ಹರೀಶ್ ರಾಜ್ ಅವ್ರ ಆಗಮನ ಧಾರವಾಹಿಗೆ ಚೈತನ್ಯ ಬಂದಂತಾಗಿತ್ತು. ಇದೀಗ ಮತ್ತೆ ಇದೆ ರೀತಿಯ ವಿವಾದಗಳು ಮನಸ್ತಾಪಗಳು ಧಾರವಾಹಿಯನ್ನ ಮುಗಿಸಲು ತಯಾರಾಗ್ಬಿಟ್ಟಿವೆ. ಹೌದು ನಿಮ್ಮೆಲ್ಲರಿಗೂ ಗೊತ್ತಿರುವಂತೆ. ಮೇಘ ಶೆಟ್ಟಿ ಅನ್ನೋ ಪ್ರತಿಭೆ ಕಿರುತರೆಗೆ ಪರಿಚಯವಾಗ್ತಾರೆ. ನಂತರ ಸಿನಿಮಾ ರಂಗದಲ್ಲೂ ಕೂಡ ಬ್ಯುಸಿ ಆಗ್ತಾರೆ. ಇದೀಗ ಇದೆ ಕಾರಣವನ್ನ ಇಟ್ಟುಕೊಂಡು ಮೇಘ ಶೆಟ್ಟಿ, ಶೂಟಿಂಗ್ ಗೆ ಟೈಮ್ ಕೊಡ್ತಾಯಿಲ್ಲವಂತೆ ಹೀಗಾಗಿ ಶೂಟಿಂಗ್ ಟೈಮ್ ಗೆ ಸರಿಯಾಗಿ ಆಗದೆ ಕಥೆ ಚೆನ್ನಾಗಿದ್ರು, ಟಿ ಆರ್ ಪಿ ಇದ್ರು ಕೂಡ ಧಾರವಾಹಿ ಮುಂದಿನ ತಿಂಗಳಿನಲ್ಲಿ ಮುಕ್ತಾಯವಾಗಲಿದೆ ಅಂತ ಧಾರವಾಹಿ ಸದಸ್ಯರೊಬ್ಬರೂ ಮೇಘ ಶೆಟ್ಟಿ ಹೆಸರನ್ನ ಹೇಳಿಕೊಳ್ಳದೆ ತಂಡದಲ್ಲಿ ಆಗ್ತಿರುವ ಕೆಲವೊಂದಷ್ಟು ಬೆಳವಣಿಗೆಗಳನ್ನ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಧಾರವಾಹಿ ಮುಕ್ತಾಯಗೊಳ್ಳುತ್ತಿರೋದು ಎಷ್ಟು ಸತ್ಯವೋ ಗೊತ್ತಿಲ್ಲ ಆದ್ರೆ ಇನ್ನು ಹೆಚ್ಚಿನ ದಿನಗಳನ್ನ ಪ್ರಸಾರವಂತೂ ಕಾಣಲ್ಲ. ಆದ್ರೆ ಧಾರವಾಹಿ ನಿರ್ದೇಶಕರು ಅಥವಾ ನಿರ್ಮಾಪಕರು ಅಥವಾ ಮುಖ್ಯಪಾತ್ರಧಾರಿಗಳು ಯಾರು ಕೂಡ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅಲ್ಲದೆ ಅರೂರು ಜಗದೀಶ್ ಅವ್ರು ಕೂಡ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಇದನ್ನೂ ಓದಿ: ತಿಂಗಳಿಗೆ ಲಕ್ಷ ಲಕ್ಷ ದುಡಿಯುವ ಕನ್ನಡ ಟಾಪ್ 10 ಯೂಟ್ಯೂಬರ್ಸ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram