Kannada Serial TRP: ಕನ್ನಡ ಕಿರುತೆರೆ ಲೋಕದಲ್ಲಿ ‘ಟಿ ಆರ್ ಪಿ’ ಅನ್ನುವುದು ಬಹಳ ಮುಖ್ಯ ಒಂದು ಧಾರವಾಹಿ ಮತ್ತು ಶೋಗಳ ಹಣೆಬರಹವನ್ನು ಡಿಸೈಡ್ ಮಾಡುವುದು ಟಿ ಆರ್ ಪಿ ಇತ್ತೀಚಿಗೆ ಅಂತೂ ಎಲ್ಲಾ ಧಾರಾವಾಹಿಗಳು ಗ್ರಾಂಡ್ ಆಗಿ ಬರುತ್ತಿದ್ದು ವಾಹಿನಿಗಳು ಸಹ ಒಳ್ಳೆಯ ಕಥೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇನ್ನು ಧಾರವಾಹಿಗಳ ಜೊತೆ ರಿಯಾಲಿಟಿ ಶೋಗಳು ಕೂಡ ಮಿಂಚುತ್ತಿದ್ದು ಬಿಗ್ ಬಾಸ್, ಸರಿಗಮಪ, ಡ್ರಾಮ ಜ್ಯೂನಿಯರ್ಸ್ ಹಾಗೂ ‘ಸುವರ್ಣ Jackpot’ ಶೋಗಳು ಕಳೆದ ವಾರ ಒಳ್ಳೇ ಟಿ ಆರ್ ಪಿ ಪಡೆದಿದ್ದವು ಬಿಗ್ ಬಾಸ್ ಕಳೆದ ವಾರ ರಾಕ್ಷಸರು ಹಾಗೂ ಗಂಧರ್ವರು ಟಾಸ್ಕನ್ನು ರೂಪಿಸಿತ್ತು ಆ ವಾರ ಸ್ಪರ್ಧಿಗಳ ಕಿತ್ತಾಟ ಮಿತಿಮೀರಿ ಹೋಗಿತ್ತು. ಕಳೆದ ವಾರ ಬಿಗ್ ಬಾಸ್ ಗೆ ಎಷ್ಟು ಟಿ ಆರ್ ಪಿ ಬಂದಿದ್ದೆ ಎಂದು ತಿಳಿದುಕೊಳ್ಳಲು ಪ್ರೇಕ್ಷಕರಿಗೂ ಕೂಡ ಕುತೂಹಲವಿದೆ ಹಾಗಾದರೆ ಯಾವ ಸೀರಿಯಲ್ ಎಷ್ಟನೇ ಸ್ಥಾನದಲ್ಲಿದೆ ನೋಡ್ತಾ ಹೋಗೋಣ ಬನ್ನಿ, ಮುಂದೆ ಓದಿ., ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಈ ವಾರದ ಟಾಪ್ 10 ಸೀರಿಯಲ್ ಗಳ ಪಟ್ಟಿ
ಪುಟ್ಟಕ್ಕನ ಮಕ್ಕಳು:
ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೆಚ್ಚು ಟಿಆರ್ ಪಿ ಪಡೆದು ಮೊದಲ ಸ್ಥಾನದಲ್ಲಿ ಇದೆ ಈ ಧಾರಾವಾಹಿಗೆ 8.7 TVR ಬಂದಿದೆ, 2021 ಡಿಸೆಂಬರ್ 13 ನೇ ತಾರೀಕಿನಿಂದ ಈ ಧಾರಾವಾಹಿ ಶುರುವಾಯ್ತು ನಿನ್ನೆಗೆ 2 ವರ್ಷಗಳು ಆಯ್ತು, ಶುರುವಾದದಿಂದ TRPಯಲ್ಲಿ ಮೊದಲ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ.
ಅಮೃತಧಾರೆ:
ಅಮೃತಧಾರೆ ಈ ವಾರ 7.5 TVR ಪಡೆದು ಎರಡನೇ ಸ್ಥಾನದಲ್ಲಿದೆ. ರಾಜೇಶ್ ನಟರಂಗ, ವನಿತಾ ವಾಸು, ಛಾಯಾ ಸಿಂಗ್, ಚಿತ್ರಾ ಶೆಣೈ, ಸಾರಾ ಅಣ್ಣಯ್ಯ, ಸಿಹಿ ಕಹಿ ಚಂದ್ರು ಸೇರಿದಂತೆ ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಗಟ್ಟಿಮೇಳ
ಗಟ್ಟಿಮೇಳ ಧಾರಾವಾಹಿ ಪ್ರಮುಖ ಪಾತ್ರಗಳು ಇಲ್ಲದಿದ್ದರೂ ಕೂಡ TRPಯಲ್ಲಿ ತನ್ನ ಪೈಪೋಟಿಯನ್ನು ಬಿಟ್ಟುಕೊಟ್ಟಿಲ್ಲ ಹೌದು ಮುಕ್ತಾಯದ ಹಂತದಲ್ಲಿರುವ ಗಟ್ಟಿಮೇಳ ಕೆಲವೇ ದಿನಗಳಲ್ಲಿ ಅಂತ್ಯ ಆಗಲಿದೆ. ಈ ವಾರ 7.0 TVR ಪಡೆದು ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ.
ಭಾಗ್ಯಲಕ್ಷ್ಮೀ
6.9 TVR ಪಡೆದು ಭಾಗ್ಯಲಕ್ಷ್ಮೀ ಧಾರಾವಾಹಿ ಈ ವಾರ ನಾಲ್ಕನೇ ಸ್ಥಾನದಲ್ಲಿದೆ. ಸುಷ್ಮಾ ರಾವ್, ಸುದರ್ಶನ್, ಪದ್ಮಜಾ ರಾವ್ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಶ್ರೀರಸ್ತು ಶುಭಮಸ್ತು ಮತ್ತು ಸತ್ಯ
ಶ್ರೀರಸ್ತು ಶುಭಮಸ್ತು ಮತ್ತು ಸತ್ಯ ಧಾರಾವಾಹಿಗಳು 6.8 TVR ಪಡೆದು ಈ ಎರಡು ಧಾರಾವಾಹಿಗಳು ಐದನೇ ಸ್ಥಾನದಲ್ಲಿವೆ.
- 6.4 TVR ಪಡೆದು ಹಿಟ್ಲರ್ ಕಲ್ಯಾಣ ಧಾರಾವಾಹಿ ಆರನೇ ಸ್ಥಾನದಲ್ಲಿದೆ.
- 6 TVR ಪಡೆದು ಲಕ್ಷ್ಮೀ ಬಾರಮ್ಮ ಧಾರಾವಾಹಿ ಏಳನೇ ಸ್ಥಾನದಲ್ಲಿದೆ.
- 5.9 TVR ಪಡೆದು ರಾಮಾಚಾರಿ ಧಾರಾವಾಹಿ ಎಂಟನೇ ಸ್ಥಾನದಲ್ಲಿದೆ.
- 5.8 TVR ಪಡೆದು ಬೃಂದಾವನ ಧಾರಾವಾಹಿ ಒಂಬತ್ತನೇ ಸ್ಥಾನದಲ್ಲಿದೆ.
- 5.7 TVR ಪಡೆದು ಸೀತಾರಾಮ ಧಾರಾವಾಹಿ ಹತ್ತನೇ ಸ್ಥಾನದಲ್ಲಿದೆ.
ಬಿಗ್ ಬಾಸ್ ಶೋ ಕಳೆದ ವಾರ ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್ ಗಳು ಕೂತುಹಲ ಮೂಡಿಸಿತ್ತು ಆ ವಾರ ಸೋಮವಾರದಿಂದ – ಶುಕ್ರುವಾರದವಾರಗೆ 6.2 TVR ಸಿಕ್ಕಿದೆ. ಶನಿವಾರ 7.0 TVR ಮತ್ತು ಭಾನುವಾರ 7.3 TVR ಸಿಕ್ಕಿದೆ. ಜೀ ಕನ್ನಡ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಸರಿಗಮಪ 8.4 TVR ಪಡೆದಿದೆ. ಸುವರ್ಣ Jackpot ಶೋ 3.7 TVR ಸಿಕ್ಕಿದೆ. ಡ್ರಾಮಾ ಜ್ಯೂನಿಯರ್ಸ್ ಗೆ 6.2 TVR ಬಂದಿದೆ.
ಇದನ್ನೂ ಓದಿ: ಭಾರತೀಯ ನೌಕಾಪಡೆಯ 910 ಹಿರಿಯ ಡ್ರಾಫ್ಟ್‌ಮ್ಯಾನ್ ಹುದ್ದೆಗಳಿಗೆ ಇಂದೇ ಅರ್ಜಿಯನ್ನು ಸಲ್ಲಿಸಿ.
ಇದನ್ನೂ ಓದಿ: ಬರ ಪರಿಹಾರ ಬೇಕು ಅಂದ್ರೆ ರೈತರು ಈ ಕೆಲಸ ಮಾಡ್ಲೇಬೇಕು; ಈ ವಾರವೇ ಜಮೆ ಆಗಲಿದೆ ಬರ ಪರಿಹಾರದ ಹಣ