ಪರೀಕ್ಷಾ ಫಲಿತಾಂಶ ಬರುತ್ತದೆ ಎಂದರೆ ವಿದ್ಯಾರ್ಥಿಗಳಿಗೆ ಭಯ ಆತಂಕ ಇದ್ದೆ ಇರುತ್ತದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಇದೆ ಬರುವ ಮಾರ್ಚ್ 30 ರಂದು ವೆಬ್ಸೈಟ್ ನಲ್ಲಿ ಫಲಿತಾಂಶ ಬಿಡುಗಡೆ ಮಾಡುವುದಾಗಿ ಇಲಾಖೆಯು ತಿಳಿಸಿದೆ.
ಯಾವ ಸಮಯದಲ್ಲಿ ಫಲಿತಾಂಶ ಪ್ರಕಟ ಆಗಲಿದೆ ?: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (KSEAB) 2023-24ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವು ಶನಿವಾರ, ಮಾರ್ಚ್ 30 ರಂದು ಬಿಡುಗಡೆಯಾಗಲಿದೆ. ಫಲಿತಾಂಶವು ಬೆಳಿಗ್ಗೆ 9 ರಿಂದ 11 ರವರೆಗೆ ಲಭ್ಯವಿರುತ್ತದೆ.
ಫಲಿತಾಂಶ ವೀಕ್ಷಣೆ ಮಾಡುವುದು ಹೇಗೆ ?: ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಗೆ ತೆರಳಿ ನಿಮ್ಮ ರೋಲ್ ನಂಬರ್ ನಮೂದಿಸಿ ನಿಮ್ಮ ಫಲಿತಾಂಶವನ್ನು ವೀಕ್ಷಣೆ ಮಾಡಬಹುದು. ನಿಮ್ಮ ಮೊಬೈಲ್ ಮೂಲಕವೇ ಫಲಿತಾಂಶ ವೀಕ್ಷಣೆ ಮಾಡಬಹುದು ಎಂದು ಇಲಾಖೆಯು ತಿಳಿಸಿದೆ.
ಕಾಲೇಜ್ ನಲ್ಲಿಯೂ ಫಲಿತಾಂಶ ಪ್ರಕಟಣೆ ಆಗಲಿದೆ.:- ಮಾರ್ಚ್ 30 ರಂದು ಕಾಲೇಜುಗಳಲ್ಲಿ ಸಹ ಫಲಿತಾಂಶ ಪ್ರಕಟಿಸಲಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದು.
ಪ್ರಥಮ ಪಿಯುಸಿ ಪರೀಕ್ಷೆಗಳು ಯಾವಾಗ ನಡೆದಿತ್ತು?
ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ 2024 ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಫೆಬ್ರವರಿ 12 ರಿಂದ 27 ರವರೆಗೆ ನಡೆದಿತ್ತು. ಕರ್ನಾಟಕದಲ್ಲಿ ಪ್ರಥಮ ಪಿಯುಸಿಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳು ಏಕಕಾಲದಲ್ಲಿ ಪರೀಕ್ಷೆಗಳನ್ನು ಬರೆದಿದ್ದರು. ಅದರ ಫಲಿತಾಂಶವು ಪ್ರಕಟಣೆ ಆಗಲಿದೆ. ಈ ಬಾರಿಯೂ, ಮೊದಲ ವಿಷಯಗಳ ಪರೀಕ್ಷೆಗಳು ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ ನಡೆದವು. ಹಾಗೂ ಕೆಲವು 10: 15ಗಂಟೆಯಿಂದ 12:30 ರ ವರೆಗೆ ಕೆಲವು ಪರೀಕ್ಷೆ ನಡೆದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅನುತ್ತೀರ್ಣ ಆದವರಿಗೆ ಮತ್ತೆ ಪರೀಕ್ಷೆ ನಡೆಸಲಾಗುವುದು:- ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಅಥವಾ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದವರಿಗೆ ಮೇ ತಿಂಗಳ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ದಿನಾಂಕವನ್ನು ಪ್ರಕಟಿಸಲಾಗಿದೆ ಮತ್ತು ಪರೀಕ್ಷಾ ಶುಲ್ಕ ತುಂಬಲು ಏಪ್ರಿಲ್ 20 ರವರೆಗೆ ಅವಕಾಶವಿದೆ ಎಂದು ಮಂಡಳಿಯು ಪ್ರಕಟಿಸಿದೆ.
ಇದನ್ನೂ ಓದಿ: ಈ ಅವಕಾಶವನ್ನು ನೀವು ಬಳಸಿಕೊಂಡರೆ ನೀವು iPhone 14 ಅಥವಾ 14 Plus ಖರೀದಿಯಲ್ಲಿ 22,000 ರೂಪಾಯಿಗಳನ್ನು ಉಳಿಸಬಹುದು.
ವಿಧ್ಯಾರ್ಥಿಗಳಿಗೆ ಕೆಲವು ಕಿವಿಮಾತುಗಳು :-
- ಫಲಿತಾಂಶವು ಯಾವುದೇ ರೀತಿಯಲ್ಲಿ ನಿಮ್ಮ ಶ್ರಮ ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುವುದಿಲ್ಲ. ಫಲಿತಾಂಶ ಒಂದು ಚಿಕ್ಕ ಹಂತ ಅಷ್ಟೇ ನಿಮ್ಮ ಜೀವನದ ಯಶಸ್ಸು ಕಾಣುವುದಿಲ್ಲ.
- ಫಲಿತಾಂಶ ಯಾವುದೇ ರೀತಿಯಲ್ಲಿ ನಿಮ್ಮ ಭಾವನೆಗಳ ಮೇಲೆ ಪ್ರಭಾವ ಬೀರಿದಂತೆ ನೋಡಿಕೊಳ್ಳಿ. ಧನಾತ್ಮಕವಾಗಿ ಯೋಚಿಸಿ ಮತ್ತು ಮುಂದಿನ ಹಂತದ ಬಗ್ಗೆ ಗಮನ ಹರಿಸಿ.
- ಫಲಿತಾಂಶಕ್ಕಾಗಿ ಕಾಯುವಾಗ ತಾಳ್ಮೆಯಿಂದಿರಿ. ಫಲಿತಾಂಶ ಬಂದ ನಂತರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಶಾಂತವಾಗಿ ಯೋಚಿಸಿ.
- ಫಲಿತಾಂಶದ ಯಾವುದೇ ಒತ್ತಡ ಅಥವಾ ಭಯವಿಲ್ಲದೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಕುಟುಂಬದ ಹಾಗೂ ಸ್ನೇಹಿತರ ಬೆಂಬಲ ಮತ್ತು ಮಾರ್ಗದರ್ಶನ ಪಡೆಯಿರಿ.
- ಯಶಸ್ಸು ಒಂದು ರಾತ್ರಿಯಲ್ಲಿ ಸಿಗುವುದಿಲ್ಲ. ನಿಮ್ಮ ಗುರಿಗಳನ್ನು ಸಾಧಿಸಲು ಶ್ರಮಿಸಿ ಮತ್ತು ಧೈರ್ಯದಿಂದಿರಿ.
ಇದನ್ನೂ ಓದಿ: 5,8,9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ಗಳ ಮೌಲ್ಯಮಾಪನವನ್ನು ಏಪ್ರಿಲ್ 2 ರ ಒಳಗೆ ನಡೆಸುವಂತೆ ಇಲಾಖೆ ಆದೇಶ ಹೊರಡಿಸಿದೆ