Karnataka 2nd PUC Result 2023: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಮೇ 5ರಂದು ಪ್ರಕಟಿಸುತ್ತದೆ ಅಂತ ಕೆಲವರು ಹೇಳ್ತಿದ್ದಾರೆ. ಇದರ ಬಗ್ಗೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲೂ ಕೂಡ ಗೊಂದಲ ಇದೆ ಹಾಗಾದ್ರೆ ರಿಸಲ್ಟ್ ಯಾವಾಗ ಬರುತ್ತೆ, ಅದನ್ನ ಚೆಕ್ ಮಾಡೋದು ಹೇಗೆ ನೋಡೋಣ ಬನ್ನಿ.
ಹೌದು ಈ ವರ್ಷ, ದ್ವಿತೀಯ ಪಿಯುಸಿ ಪರೀಕ್ಷೆಯು ಕಳೆದ ಮಾರ್ಚ್ 9 ರಿಂದ ಮಾರ್ಚ್ 29ರವರೆಗೆ ನಡೆದಿತ್ತು. ಇದರಲ್ಲಿ ಕರ್ನಾಟಕ ಪಿಯುಸಿ ಪರೀಕ್ಷೆಗೆ 7.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂದು, ಪರೀಕ್ಷೆಯನ್ನ ಎದುರಿಸಿದ್ರು, ಪರೀಕ್ಷೆಯಾದ ನಂತ್ರ ಸಾಮಾನ್ಯವಾಗಿ ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಶಿಕ್ಷಣ ಸಂಸ್ಥೆಯವರಿಗೂ ಫಲಿತಾಂಶದ ಬಗ್ಗೆ ಕಾತುರತೆ ಇದ್ದೆ ಇರುತ್ತದೆ. ಈ ಮದ್ಯೆ ಕೆಲವರು ರಿಸಲ್ಟ್ ಆಗ ಈಗ ಅಂತ ಹೇಳಿ ಇಲ್ಲಸಲ್ಲದ ಗೊಂದಲಕ್ಕೆ ಗುರಿ ಮಾಡುತ್ತಾರೆ.. ಹಾಗಾದ್ರೆ ಅಧಿಕೃತವಾಗಿ ಫಲಿತಾಂಶ ಹೊರಬೀಳುವ ದಿನ ಪ್ರಕಟಿವಾಗಿದ್ಯಾ? ಶಿಕ್ಷಣ ಸಚಿವರಿಂದ ಮಾಹಿತಿ ನಿಜಕ್ಕೂ ಹೊರಬಂದಿದ್ಯ ತಿಳಿದುಕೊಳ್ಳೋಣ.
ಇದನ್ನು ಓದಿ: ಮೈಟ್ರೋ ರೈಲ್ವೆ ಹುದ್ದೆಗಳು, ಪರೀಕ್ಷೆ ಇಲ್ಲ ನೇರ ನೇಮಕಾತಿ
ಅಧಿಕೃತವಾಗಿ ಫಲಿತಾಂಶ ಪ್ರಕಟವಾಗೋದು ಯಾವಾಗ ಗೊತ್ತಾ?
ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಕರ್ನಾಟಕ ಶಿಕ್ಷಣ ಇಲಾಖೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನ ಪ್ರಕಟಿಸಿಲ್ಲ… ಇನ್ನು ಮೇ 5ರಂದೇ ಫಲಿತಾಂಶ ಪ್ರಕಟವಾಗುತ್ತೆ ಅಂತಾನೂ ಕೂಡ ಹೇಳೋದಕ್ಕೆ ಆಗಲ್ಲ ಇದೆಲ್ಲಾ ಕೇವಲ ಅಂತೇ ಕಂತೆ ಅಷ್ಟೇ. ಈಗಾಗ್ಲೇ 25ಸಾವಿರಕ್ಕೂ ಅಧಿಕ ಶಿಕ್ಷಕರು ವ್ಯಾಲ್ಯೂವಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಏಪ್ರಿಲ್ 5ರಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮೇ 5ರ ಒಳಗಾಗಿ ಇದನ್ನ ಮುಗಿಸಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಿದೆ ಅಷ್ಟೇ ಆದರೆ ಅಧಿಕೃತವಾಗಿ ಯಾವುದನ್ನು ಎಲ್ಲಿಯೂ ಹೇಳಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆ ಇರೋದ್ರಿಂದ ಸಾಧ್ಯವಾದಷ್ಟು ಚುನಾವಣೆಯಲ್ಲಿ ಒಳಗಾಗಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಿದೆ ಅಷ್ಟೇ.
ರಿಸೆಲ್ಟ್ ಚೆಕ್ ಮಾಡೋದು ಹೇಗೆ?
ಇನ್ನು ಫಲಿತಾಂಶ ಪ್ರಕಟವಾದ ತಕ್ಷಣ, ಅಭ್ಯರ್ಥಿಗಳು ಅಥವಾ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು pue. karnataka.gov.in ಗೆ ಲಾಗ್ ಇನ್ ಮಾಡುವ ಮೂಲಕ ಕರ್ನಾಟಕ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಪರಿಶೀಲಿಸಬಹುದು.
ನೀವು ಮಾರ್ಕ್ಸ್ ಕಾರ್ಡ್ ನ್ನ ಕೂಡ ಡೌನ್ಲೋಡ್ ಮಾಡ್ಕೊಳಬಹುದು, ಹೇಗಂದ್ರೆ ಮೊದಲು karresults.nic.in ನಲ್ಲಿ ಕರ್ನಾಟಕದ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನಂತರ
“ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 ಡೌನ್‌ಲೋಡ್ ಮಾಡಿ”
ಲಾಗಿನ್ ನಲ್ಲಿ ಕೇಳುವ ಮಾಹಿತಿಯನ್ನ ನೀಡಿ ಲಾಗ್-ಇನ್ ಆಯ್ಕೆಯನ್ನು ಒತ್ತಿರಿ.
ಪಿಯುಸಿ ಫಲಿತಾಂಶ ನಿಮಗೆ ಸಿಗುತ್ತೆ.ನಂತರ ಡೌನ್ಲೋಡ್ ಆಪ್ಷನ್ ಕೂಡ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಮಾರ್ಕ್ ಶೀಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದನ್ನು ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.