ಪಿಯುಸಿಯಲ್ಲಿ ಸೈನ್ಸ್ ಮಾಡಿದ ವಿದ್ಯಾರ್ಥಿಗಳು ಮುಂದಿನ ಹಂತದ ಶಿಕ್ಷಣಕ್ಕೆ ಸಿಟ್ ಪಡೆಯಲು ಸಿಇಟಿ ranking ಬಹಳ ಮುಖ್ಯ ಆಗುತ್ತದೆ. ಈಗಾಗಲೇ ಪಿಯಸಿ ಪರೀಕ್ಷೆ – 1 ರ ಫಲಿತಾಂಶ ಬಂದು ಬಹಳ ದಿನ ಆಗಿದೆ. ಜೊತೆಗೆ ಪಿಯಸಿ ಪರೀಕ್ಷೆ -2 ಸಹ ಈಗಾಗಲೇ ಮುಗಿದಿದೆ. ಆದರೆ ಇನ್ನೂ ಸಿಇಟಿ ಫಲಿತಾಂಶ ಬಿಡುಗಡೆ ಆಗಿಲ್ಲ. ಈಗ ಸಿಇಟಿ ಫಲಿತಾಂಶದ ಬಗ್ಗೆ ಇಲಾಖೆಯಿಂದ ಅಧಿಕೃತವಾಗಿ ಅಪ್ಡೇಟ್ ಬಿಡುಗಡೆ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಸಾರ ಆಗುತ್ತಿದೆ :- ಜನರ ದಿಕ್ಕು ತಪ್ಪಿಸಲು ಸಾಮಾಜಿಕ ಜಾಲತಾಣದಲ್ಲಿ ದಿನವೂ ಒಂದಲ್ಲ ಒಂದು ಸುಳ್ಳು ಸುದ್ದಿಗಳು ಹಬ್ಬುತ್ತಿರುತ್ತವೆ. ಅದರಂತೆ ಈಗ ಸಿಇಟಿ ಫಲಿತಾಂಶ ಮೇ 20 ರಂದು ಬಿಡುಗಡೆ ಆಗಲಿದೆ ಎಂಬ ಬಗ್ಗೆ ಸುದ್ದಿಯೊಂದು ಪ್ರಕಟ ಆಗಿತ್ತು. ಇದನ್ನು ಗಮನಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಎಚ್.ಪ್ರಸನ್ನ ಅವರು. ಇದು ಸುಳ್ಳು ಸುದ್ದಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ..
ಸಿಇಟಿ ಫಲಿತಾಂಶದ ಬಗ್ಗೆ ಅಪ್ಡೇಟ್ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ :- ಕರ್ನಾಟಕದಲ್ಲಿ ಸಿಇಟಿ ಫಲಿತಾಂಶವು ಪಿಯುಸಿ ಪರೀಕ್ಷೆ – 2 ಹಾಗೂ ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಬಿಡುಗಡೆ ಆದ ಬಳಿಕ ಸಿಇಟಿ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತವಾಗಿ ತಿಳಿಸಿದೆ.
ಸಿಇಟಿ ಪರೀಕ್ಷೆ ಯಾವಾಗ ನಡೆದಿತ್ತು?: ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯು ಏಪ್ರಿಲ್ 18 ಹಾಗೂ ಏಪ್ರಿಲ್ 19 ರಂದು ನಡೆದಿತ್ತು. ಈ ಬಾರಿ ಒಟ್ಟು 3.49 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 2.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರ್ಯಕ್ಷಮತೆಯ ಬೈಕ್‌ಗಳು; ಪಲ್ಸರ್ NS400Z ರಿಂದ Apache RTR 310 ವರೆಗೆ!
ಅಧಿಕಾರಿಗಳ ಎಡವಟ್ಟಿನಿಂದ ಫಲಿತಾಂಶ ಲೇಟ್?
ಪ್ರತಿ ವರ್ಷ ಮೇ ತಿಂಗಳ ಮೊದಲ ವಾರದಲ್ಲಿ ಸಿಇಟಿ ಪರೀಕ್ಷೆ ಆಗುತ್ತಿತ್ತು ಆದರೆ ಈ ಬಾರಿ ಅಧಿಕಾರಿಗಳ ಎಡವಟ್ಟು ಹಾಗೂ ಪಿಯುಸಿ ಪರೀಕ್ಷೆ 2 ರ ದಿನಾಂಕ ಘೋಷಣೆ ಆಗಿ ಮೊದಲೇ ಪರೀಕ್ಷೆ ನಡೆದಿದೆ. ಆದರೆ ಈಗ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಬಳಿಕ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಕೆಲವು ಸುದ್ದಿಗಳು ಕೇಳಿಬಂದಿತ್ತು. ಆದರೆ ಈಗ ಇನ್ನು ಸ್ವಲ್ಪ ದಿನಗಳ ಕಾಲ ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯಬೇಕಾಗಿದೆ.
ಈ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೆಲವು ಬದಲಾವಣೆ ಆಗಿದೆ. ಅದೇನೆಂದರೆ ದ್ವಿತೀಯ ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸುತ್ತಾರೆ. ಮೂರು ಪರೀಕ್ಷೆಗಳಲ್ಲಿ ಮೊದಲ ಎರಡು ಪರೀಕ್ಷೆಗಳಲ್ಲಿ ಯಾವುದರಲ್ಲಿ ಹೆಚ್ಚು ಮಾರ್ಕ್ಸ್ ಬಂದಿದೆ ಎನ್ನುವುದನ್ನು ನೋಡಿ ನೀವು ಒಂದು ಫಲಿತಾಂಶವನ್ನು ನಿಮ್ಮ ಮಾರ್ಕ್ಸ್ ಕಾರ್ಡ್ ನಲ್ಲಿ ಉಲ್ಲೇಖ ಮಾಡುವ ಆಯ್ಕೆ ಇರುತ್ತದೆ. ಅದೇ ಕಾರಣದಿಂದ ಈಗ ಪಿಯುಸಿ ಪರೀಕ್ಷೆ 2 ರ ಫಲಿತಾಂಶ ಬಿಡುಗಡೆ ಆಗದ ಹೊರತು ಸಿಇಟಿ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಲಾಗುವುದಿಲ್ಲ. ಮುಂದಿನ ಶಿಕ್ಷಣಕ್ಕೆ ಸಿಇಟಿ ರ‍್ಯಾಂಕ್‌ಗೆ ಹಾಗೂ ಪಿಯುಸಿ ಪರಿಕ್ಷೆ ಫಲಿತಾಂಶ ಮುಖ್ಯ ಆಗಿ ಇರುತ್ತದೆ.
ಈ ಬಾರಿಯ ಜೆಕೆವಿಕೆಯ ಪ್ರಾಯೋಗಿಕ ಪರೀಕ್ಷೆಯು ಇದೆ ಬರುವ ಮೇ 25 2024 ರಂದು ನಡೆಯಲಿದೆ ಹಾಗೂ ಇದರ ಫಲಿತಾಂಶವು ಮೇ 30ರಂದು ಬಿಡುಗಡೆಯಾಗಲಿದೆ. ಹಾಗೂ ದ್ವಿತೀಯ ಪಿಯು ಪರೀಕ್ಷೆ-2ರ ಫಲಿತಾಂಶವು ಮೇ 30 2024ರಂದು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: FD ಖಾತೆಯ ಹೂಡಿಕೆಗೆ ಹೆಚ್ಚಿನ ಬಡ್ಡಿದರ ನೀಡುವ 5 ಬ್ಯಾಂಕ್ ಗಳ ಬಗ್ಗೆ ವಿವರ ಇಲ್ಲಿದೆ