ಚಿಕನ್ ಪ್ರಿಯರಿಗೆ ದರ ಏರಿಕೆಯ ಶಾಕ್!

Karnataka Chicken Price Hike

ದಿನೇ ದಿನೇ ಎಲ್ಲಾ ಆಹಾರ ಸಮಗಿಗ್ರಳ ಬೆಲೆಯೂ ಗಗನಕ್ಕೆ ಏರುತ್ತಿದೆ. ಇದರಿಂದ ಜನರು ಆರ್ಥಿಕವಾಗಿ ದುರ್ಬಲರಾಗುತ್ತಾ ಇದ್ದರೆ. ಈಗಾಗಲೇ ಅಕ್ಕಿ ಬೆಲೆ, ಉಳಿದ ಎಲ್ಲಾ ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಏರಿದೆ. ಇದರ ಜೊತೆಗೆ ಪೆಟ್ರೋಲ್ ಡೀಸೆಲ್ ಬೆಲೆ ಕೊಂಚ ಇಳಿದರೂ ಸಹ ಅದೇನು ದೊಡ್ಡ ಪರಿಣಾಮ ಬೀರುತ್ತಿಲ್ಲ. ಈಗ ಚಿಕನ್ ತಿನ್ನುವ ಮಾಂಸ ಪ್ರಿಯರಿಗೆ ಈಗ ಇನ್ನೊಂದು ಬೆಲೆ ಏರಿಕೆಯ ಬಿಸಿ ಹೆಚ್ಚಾಗಿದೆ.

WhatsApp Group Join Now
Telegram Group Join Now

ಏಷ್ಟು ದರ ಹೆಚ್ಚಾಗಿದ?: ರಾಜ್ಯದ ವಿವಿಧ ನಗರಗಳಲ್ಲಿ ಒಂದು ಕೆ. ಜಿ ಚಿಕನ್ ಬೆಲೆ 300 ರೂಪಾಯಿ ಆಗಿದೆ. ರಾಜ್ಯದಲ್ಲಿ ಸುಮಾರು 40,000 ಕೋಳಿ ಸಾಗಾಣಿಕೆ ಇವೆ ಎಂಬುದು ವರದಿ ಆಗಿದೆ. ಒಂದು ವಾರಕ್ಕೆ ಬರೋಬ್ಬರಿ 80 ಲಕ್ಷ ಚಿಕನ್ ತಯಾರಾಗುತ್ತದೆ. ಒಟ್ಟು ತೂಕ 1.7 ಕೋಟಿ ಕೆ.ಜಿ. ಪ್ರತಿ ಕೆ.ಜಿ ಮಾಂಸ ತಯಾರಿಕೆಗೆ ತಗಲುವ ವೆಚ್ಚ 60 ರಿಂದ 70 ರೂಪಾಯಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ದರ ಏರಿಕೆಯ ಕಾರಣವೇನು?

  • ಪಶು ಆಹಾರದ ಬೆಲೆ ಏರಿಕೆ: ಕೋಳಿಗಳ ಆಹಾರಕ್ಕೆ ನೀಡುವ ಮೆಕ್ಕೆಜೋಳ, ಸೋಯಾ ಮತ್ತು ಧಾನ್ಯಗಳಂತಹ ಪಶು ಆಹಾರದ ಬೆಲೆ ಹೆಚ್ಚಾಗಿದೆ. ಇದರಿಂದ ಚಿಕನ್ ಉತ್ಪಾದನೆಯ ವೆಚ್ಚವೂ ಜಾಸ್ತಿ ಆಗಿದೆ. ಇದರಿಂದ ಚಿಕನ್ ದರ ಏರಿಕೆ ಗಣನೀಯವಾಗಿ ಹೆಚ್ಚಾಗಿದೆ.
  • ಬೇಡಿಕೆ ಮತ್ತು ಪೂರೈಕೆ: ಚಿಕನ್ ಮಾಂಸಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಪೂರೈಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಸಹ ಚಿಕನ್ ದರ ಏರಿಕೆ ಆಗುತ್ತಿದೆ.
  • ವಾತಾವರಣದ ಪರಿಣಾಮ: ಬಿಸಿಲಿನ ತೀವ್ರತೆ, ಮಳೆ ಕೊರತೆ, ಬರಗಾಲದ ಪರಿಣಾಮಗಳು ಚಿಕನ್ ಉತ್ಪಾದನೆಯ ಮೇಲೆ ಇನ್ನಷ್ಟು ಹೆಚ್ಚಿನ ಪರಿಣಾಮ ಬೀರುತ್ತವೆ. ಇದು ಸಹ ಉತ್ಪಾದನೆಯ ಬೆಲೆ ಇನ್ನಷ್ಟು ಪರಿಣಾಮ ಬೀರುತ್ತಿದೆ.
  • ಸಾಗಣೆ ವೆಚ್ಚ: ಸಾಗಾಣಿಕೆ ಮಾಡುವ ಕೂಲಿ ದರ, ಪೆಟ್ರೋಲ್ ದರ ಹಾಗೂ ಟೋಲ್ ದರ ಎಲ್ಲವೂ ಹೆಚ್ಚಾಗಿ ಇರುವ ಕಾರಣದಿಂದ ಚಿಕನ್ ಸಾಗಣೆ ವೆಚ್ಚ ಏರಿಕೆ ಆಗಿದೆ. ಇದರ ಪರಿಣಾಮ ನೇರವಾಗಿ ಗ್ರಾಹಕರ ಮೇಲೆ ಆಗುತ್ತಿದೆ.
  • ಮಧ್ಯವರ್ತಿಗಳ ಪಾತ್ರ: ಇವೆಲ್ಲ ಕಾರಣಗಳ ನಡುವೆ ಮುಖ್ಯವಾಗಿ ಮಧ್ಯವರ್ತಿಗಳು ತಮ್ಮ ಲಾಭಕ್ಕೆ ಅಂಗಡಿಯವರಿಗೆ ಹೆಚ್ಚಿನ ದರವನ್ನು ಫಿಕ್ಸ್ ಮಾಡುತ್ತಾರೆ ಇದರಿಂದ ಅಂಗಡಿಯ ಮಾಲೀಕರು ಸಹ ಗ್ರಾಹಕರಿಗೆ ಹೆಚ್ಚಿನ ಬೆಲೆಯನ್ನು ನಿಗದಿ ಮಾಡುತ್ತಾರೆ.

ಇದರಿಂದ ಇನ್ನೂ ಹೋಟೆಲ್ ಗಳಲ್ಲಿ Non veg ಅಡಿಗೆಗಳ ಬೆಲೆಯೂ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಬೇಸಿಗೆಯ ಕಾಲದಲ್ಲಿ ಬೆಲೆ ಏರಿಕೆಯ ಬಿಸಿ ಜನರ ನಿತ್ಯ ಜೀವನಕ್ಕೆ ಬಹಳ ಕಷ್ಟ ಆಗುತ್ತಾ ಇದೆ. ಜನಸಾಮಾನ್ಯರ ಬೆಲೆ ಏರಿಕೆಯ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ರಾಜ್ಯ ಸರ್ಕಾರವು ಇನ್ನಷ್ಟು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದು ಉತ್ತಮವಾಗಿದೆ ಹಾಗೂ ಚಿಕನ್ ಉತ್ಪಾದಕರ ಕೆಲವು ಕಷ್ಟಗಳಿಗೆ ಸರ್ಕಾರವು ಸರಿಯಾದ ರೀತಿಯಲ್ಲಿ ಸಹಕಾರ ಅಥವಾ ಸಹಾಯಧನ ನೀಡಿದರೆ ಬೆಲೆ ಇಳಿಕೆ ಆಗುವ ಸಂಭವ ಇದೆ. ಇದರ ಬೇಗ ಹೆಚ್ಚಿನ ಗಮನ ಹರಿಸಿ ಎಂಬುದು ಚಿಕನ್ ಪ್ರಿಯರ ಒತ್ತಾಸೆ ಆಗಿದೆ. ನೀರು ಆಹಾರ ಎರಡು ಜೀವನಕ್ಕೆ ಬಹು ಮುಖ್ಯ ಅಂಶವಾಗಿದೆ. ಈಗಾಗಲೇ ನೀರಿನ ಪೂರೈಕೆ ಮಾಡಲು ಸರ್ಕಾರವು ಹಲವು ಯೋಜನೆಗಳು ರೂಪಿಸುತ್ತಿದೆ. ಇದರ ಜೊತೆಗೆ ಆಹಾರ ಧಾನ್ಯಗಳ ಬೆಲೆ ಇಳಿಕೆ ಮಾಡಿದರೆ ಅನುಕೂಲ ಆಗಲಿದೆ.

ಇದನ್ನೂ ಓದಿ: ಹೊಸ ಮಾರುತಿ ಸುಜುಕಿ ಡಿಜೈರ್; ಸನ್‌ರೂಫ್, 360 ಡಿಗ್ರಿ ಕ್ಯಾಮೆರಾ ಮತ್ತು ದೊಡ್ಡ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತಿದೆ!