ಈ ಕೆಲಸ ಮಾಡದೆ ಇದ್ದರೆ ರೈತರಿಗೆ ಬರ ಪರಿಹಾರದ ಹಣ ಬರುವುದಿಲ್ಲ.

Karnataka Drought Relief Amount

ಈಗಾಗಲೇ ಕೇಂದ್ರ ಸರಕಾರವು ರಾಜ್ಯ ಸರ್ಕಾರದ ಬೇಡಿಕೆಯಂತೆ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿದ್ದು ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಬರ ಪರಿಹಾರದ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಈಗ ಅದರ ಬೆನ್ನಲ್ಲೇ ರೈತರಿಗೆ ಕೆಲವು ಸೂಚನೆಗಳನ್ನು ಸರ್ಕಾರ ನೀಡಿದೆ. ರೈತರು ಬೆಳೆ ಪರಿಹಾರದ ಹಣವನ್ನು ಪಡೆಯಲು ಕೆಲವು ನಿಯಮಗಳನ್ನು ಪಾಲಿಸಲೇಬೇಕಾಗಿದೆ. ಹಾಗಾದರೆ ಸರ್ಕಾರ ಹೇಳಿರುವ ನಿಯಮ ಏನು? ಬರ ಪರಿಹಾರದ ಹಣ ಪಡೆಯಲು ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಏನು?: ಎನ್‌ಡಿಆರ್‌ಎಫ್‌ ಈಗಾಗಲೇ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದು ಅದರ ಪ್ರಕಾರ ಗರಿಷ್ಠ 2 ಹೆಕ್ಟೇರ್‌ ಪ್ರದೇಶದ ಮಿತಿಗೊಳಪಟ್ಟು ಬೆಳೆ ನಷ್ಟ ಪರಿಹಾರ ನೀಡಬೇಕಾಗಿದೆ.

ಯಾವ ಬೆಳೆಗೆ ಏಷ್ಟು ಪರಿಹಾರದ ಹಣವೂ ಸಿಗಲಿದೆ?

ಬೆಳೆ ಪರಿಹಾರದ ಹಣವೂ ಬೆಳೆಗಳಿಗೆ ಅನುಗುಣವಾಗಿ ಬೇರೆ ಬೇರೆ ಮೊತ್ತದ ಹಣವನ್ನು ರಾಜ್ಯ ಸರ್ಕಾರ ನೀಡಲಿದ್ದು ರಾಜ್ಯ ಸರ್ಕಾರ ನೀಡುವ ಪರಿಹಾರ ಹಣದ ವಿವರ ಹೀಗಿದೆ :-

  1. ಮಳೆಯಾಶ್ರಿತ ಬೆಳೆಗೆ – ಮಳೆಯನ್ನು ನಂಬಿಕೊಂಡು ರೈತರು ಬೆಳೆಯುವ ಬೆಳೆಗಳ ನಷ್ಟಕ್ಕೆ ರಾಜ್ಯ ಸರ್ಕಾರವು 8,500 ರೂಪಾಯಿಗಳ ವರೆಗೆ ಪರಿಹಾರದ ಹಣವನ್ನು ನೀಡುತ್ತದೆ.
  2. ನೀರಾವರಿ ಪ್ರದೇಶದ ಬೆಳೆ – ನೀರಾವರಿ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳಿಗೆ ಈ ಬಾರಿ ಮಳೆ ಸಕಾಲಕ್ಕೆ ಆಗದ ಕಾರಣ ನೀರಾವರಿ ಪ್ರದೇಶದಲ್ಲಿ ನೀರು ಬತ್ತಿ ಹೋಗಿದೆ. ಆದ್ದರಿಂದ ನೀರಾವರಿ ಪ್ರದೇಶದ ಬೆಳೆಗೆ 17,000 ರೂಪಾಯಿ ಪರಿಹಾರ ನೀಡಲಿದೆ.
  3. ದೀರ್ಘಾವಧಿ ತೋಟಗಾರಿಕೆ ಬೆಳೆ – ತೋಟಗಾರಿಕಾ ಬೆಳೆಗಳಿಗೆ ಒಟ್ಟು 22,500 ರೂಪಾಯಿಗಳನ್ನು ಪರಿಹಾರ ನೀಡಲಾಗುತ್ತದೆ.

ಇದನ್ನೂ ಓದಿ: ರೈಲ್ವೆ ಪ್ರಯಾಣ ಮಾಡುವಾಗ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ! ಬೀಳುತ್ತೆ ದಂಡ

ಮೊದಲ ಹಂತದ 2,000 ರೂಪಾಯಿ ಹಣ ಜಮಾ ಆಗಿದೆ.

ಈಗಲೇ ಹಲವು ರೈತರ ಖಾತೆಗಳಿಗೆ ಮೊದಲ ಹಂತದಲ್ಲಿ 2,000 ರೂಪಾಯಿ ಹಣವೂ ಜಮಾ ಆಗಿದೆ. ಇನ್ನು ಕೆಲವರಿಗೆ ಹಣ ಜಮಾ ಆಗಲಿಲ್ಲ. ಈಗ ಮೇಲೆ ತಿಳಿಸಿರುವ ಪರಿಹಾರದ ಹಣ ಜಮಾ ಆಗುವಾಗ 2,000 ರೂಪಾಯಿ ಹಣವನ್ನು ಕಡಿತ ಮಾಡಿಕೊಂಡು ಉಳಿದ ಹಣವನ್ನು ರೈತರ ಖಾತೆಗೆ ಜಮಾ ಮಾಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಮೀಕ್ಷೆಯಲ್ಲಿ ನಿಮ್ಮ ಬೆಳೆ ನಷ್ಟದ ಮಾಹಿತಿ ನೀಡದಿದ್ದರೆ ಪರಿಹಾರದ ಹಣ ಬರುವುದಿಲ್ಲ :- ಬೆಳೆ ಪರಿಹಾರ ನೀಡಲು ಸರ್ಕಾರವು ಈಗಾಗಲೇ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನೂ ಆರಂಭಿಸಿದೆ. ಈಗ ತಾವು ಕುಳಿತ ಸ್ಥಳದಿಂದಲೇ ರೈತರು ಬೆಳೆದ ಬೆಳೆಗಳ ವಿವರಗಳನ್ನು ರೈತರೇ ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್ ಗೆ ತೆರಳಿ ಮುಂಗಾರು ರೈತರ ಬೆಳೆ ಸಮೀಕ್ಷೆ 2023 ಅಥವಾ ಮುಂಗಾರು ಬೆಳೆ ಸಮೀಕ್ಷೆ 2023-24 ಅಪ್ಲಿಕೇಶನ್ Download ಮಾಡಿಕೊಂಡು ನಿಮ್ಮ ಬೆಳೆ ವಿವರಗಳನ್ನು ನೀಡಬಹುದಾಗಿದೆ. ಹೀಗೆ ನೀವು ಬೆಳೆಯ ವಿವರಗಳನ್ನು ದಾಖಲಿಸುವುದರಿಂದ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಹಣ ಬೆಳೆ ವಿಮೆ ಯೋಜನೆಯ ಹಣ ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರದ ಹಣವನ್ನು ಪಡೆಯಲು, ಮತ್ತು ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಜೊತೆಗೆ ಬೆಳೆಸಾಲ ಪಡೆಯುವಲ್ಲಿ ಅನುಕೂಲ ಆಗಲಿದೆ. ನಿಮ್ಮ ಬೆಳೆ ನಷ್ಟದ ವಿವರಗಳನ್ನು ಸಲ್ಲಿಸಿ ನೀವು ಬೆಳೆ ಪರಿಹಾರದ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: 9% FD ಬಡ್ಡಿ ಆಫರ್! ಈ ಬ್ಯಾಂಕುಗಳಲ್ಲಿ ಉಳಿಸಿ ಲಕ್ಷಾಧಿಪತಿ ಆಗಿ!