ಈಗಾಗಲೇ ರೈತರಿಗೆ ಬರಗಾಲದಿಂದ ಅದ ನಷ್ಟಕ್ಕೆ ಪರಿಹಾರದ ರೂಪದಲ್ಲಿ ಸರ್ಕಾರ ಈಗಾಗಲೇ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಆದರೆ ಕೆಲವು ರೈತರು ಬ್ಯಾಂಕ್ ಗಳಲ್ಲಿ ಸಾಲ ತೋರಿಸದೆ ಇದ್ದ ಕಾರಣ ಅವರಿಗೆ ಬಂದಿರುವ ಬೆಲೆ ಪರಿಹಾರದ ಹಣವನ್ನು ಸಾಲಕ್ಕೆ ಜಮಾ ಮಾಡಿದ್ದಾರೆ ಇದರಿಂದ ರೈತರಿಗೆ ಆರ್ಥಿಕ ತೊಂದರೆ ಉಂಟಾಗಿದ್ದು. ಈಗ ಬ್ಯಾಂಕ್ ನ ಕ್ರಮಕ್ಕೆ ಸರ್ಕಾರವು ಹಣ ಮರು ಪಾವತಿ ಮಾಡುವಂತೆ ಆದೇಶ ನೀಡಿದೆ.
ಜಿಲ್ಲಾಧಿಕಾರಿಗಳ ಮಾಧ್ಯಮ ಪ್ರಕಟಣೆ :-
ರೈತರ ಬೆಳೆ ಪರಿಹಾರವನ್ನು ಸಾಲಕ್ಕೆ ಜಮಾ ಮಾಡಿರುವ ಬ್ಯಾಂಕ್ ನವರ ಕ್ರಮದ ಬಗ್ಗೆ ವಿಜಯಪುರದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ರಾಜ್ಯ ಸರ್ಕಾರವು ವಿಜಯಪುರ ಜಿಲ್ಲೆಯ ರೈತರ ಸಂಕಷ್ಟ ಕ್ಕೆ ಬರ ಪರಿಹಾರವಾಗಿ 360.10 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಇದನ್ನು ಯಾವುದೇ ಕಾರಣಕ್ಕೂ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
ವಾಪಸ್ ರೈತರ ಖಾತೆಗೆ ಹಣ ಹಾಕುವಂತೆ ರಾಜ್ಯ ಸರ್ಕಾರದ ಸೂಚಿಸಿದೆ.:- ನೇರವಾಗಿ ಬ್ಯಾಂಕ್ ಖಾತೆ ಗೆ ಜಮಾ ಆಗಿರುವ ಪರಿಹಾರದ ಹಣವನ್ನು ಸಾಲದ ಮೊತ್ತವನ್ನು ತೆಗೆದುಕೊಂಡ ಬ್ಯಾಂಕ್ ನವರಿಗೆ ವಾಪಸ್ ರೈತರ ಖಾತೆಗೆ ಹಣವನ್ನು ಹಾಕುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಮುಂಗಾರು ಆರಂಭ ಆಗಿದೆ. ಇದು ರೈತರಿಗೆ ಬೀಜ ಬಿತ್ತನೆ ಹಾಗೂ ಗದ್ದೆ ಉಳುವ ಸಮಯ ಈಗ ರೈತರಿಗೆ ಆರ್ಥಿಕವಾಗಿ ಹಣದ ತೊಂದರೆ ಇರುತ್ತದೆ. ಆ ಹಣವನ್ನು ಬ್ಯಾಂಕ್ ತೆಗೆದುಕೊಂಡರೆ ಬೆಳೆ ಬೆಳೆಯಲು ಕಷ್ಟ ಆಗುತ್ತದೆ ಆದ್ರಿಂದ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲು ಸರಕಾರ ತಿಳಿಸಿದೆ. ಈ ಕೂಡಲೇ ಹಣ ವರ್ಗಾವಣೆ ಮಾಡದ ಬ್ಯಾಂಕ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಣ ವರ್ಗಾವಣೆ ಮಾಡದೆ ಇದ್ದರೆ ಕಾನೂನು ಕ್ರಮ ಜರುಗಿಸಲಾಗುವುದು :-
ರೈತರ ಒಪ್ಪಿಗೆ ಇಲ್ಲದೆಯೇ ಬ್ಯಾಂಕ್ ಗಳು ರಾಜ್ಯ ಸರ್ಕಾರ ನೀಡಿರುವ ಬರ ಪರಿಹಾರ ಹಣವನ್ನು ಅವರು ಈ ಹಿಂದೆ ಬ್ಯಾಂಕ್ ನಲ್ಲಿ ಪಡೆದುಕೊಂಡ ಸಾಲದ ಖಾತೆಗೆ ಜಮೆ ಮಾಡಿಕೊಂಡು ಪರಿಹಾರದ ಹಣವನ್ನು ರೈತರಿಗೆ ಸಿಗದಂತೆ ಮಾಡಿದರೆ ಅದು ಕಾನೂನು ವಿರುದ್ಧದ ಕ್ರಮ ಎಂದು ಬ್ಯಾಂಕ್ ನಾ ಮುಖ್ಯಸ್ಥರನ್ನು ಹಾಗೂ ಶಾಖಾ ವ್ಯವಸ್ಥಾಪಕರನ್ನು ಜವಾಬ್ದಾರನಾಗಿ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಿಯಮದ ಪ್ರಕಾರ ಸರಕಾರದಿಂದ ನೀಡಿರುವ ಯಾವುದೇ ಪ್ರೋತ್ಸಾಹದ ಸಹಾಯ ಧನವನ್ನು ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳದೆ ರೈತರಿಗೆ ಅನುಕೂಲ ಮಾಡಿಕೊಡಬೇಕು.
ಯಾವುದೇ ಬ್ಯಾಂಕ್ ಸಾಲದ ಹಣವನ್ನು ರೈತರಿಗೆ ಸಿಗುವಲ್ಲಿ ಅಡೆತಡೆ ಉಂಟು ಮಾಡಿದರೆ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ-2005ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಡಿ. ಸಿ . ತಿಳಿಸಿದ್ದಾರೆ. ರೈತರ ಜೊತೆಗೆ ಸಂಯಮದಿಂದ ವರ್ತಿಸಬೇಕು ಹಾಗೂ ಬ್ಯಾಂಕ್ ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾದರೆ ಗ್ರಾಹಕರಿಗೆ ಸರಿಯಾದ ಮನವರಿಕೆ ಮಾಡಿಸಿ ಸರಿಯಾದ ರೀತಿಯಲ್ಲಿ ಅವರಿಗೆ ಮಾರ್ಗದರ್ಶನ ಮಾಡಿ ರೈತರ ಸಮಸ್ಯೆಯನ್ನು ಬೇಗನೆ ಪರಿಹರಿಸುವುದು ಬ್ಯಾಂಕ್ ನೌಕರರ ಕರ್ತವ್ಯ ಆಗಿರುತ್ತದೆ ಎಂದು ಎಂದು ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: FD ಖಾತೆಯ ಹೂಡಿಕೆಗೆ ಹೆಚ್ಚಿನ ಬಡ್ಡಿದರ ನೀಡುವ 5 ಬ್ಯಾಂಕ್ ಗಳ ಬಗ್ಗೆ ವಿವರ ಇಲ್ಲಿದೆ