ಎಲೆಕ್ಟ್ರಿಕ್ ವಾಹನ ಈಗ ಬಹಳ ಜನಪ್ರಿಯ ಆಗುತ್ತಿದೆ. ಪರಿಸರ ರಕ್ಷಣೆ, ವಾಯು ಮಾಲಿನ್ಯ ತಡೆಯಲು ಎಲೆಕ್ಟ್ರಾನ್ ವಾಹನಗಳು ಬಹಳ ಉಪಯುಕ್ತವಾಗಿದೆ. ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಜನರ ಸಂಖ್ಯೆ ಜಾಸ್ತಿ ಆಗುತ್ತಾ ಇದೆ. ಆದರೆ ಈಗ ಕರ್ನಾಟಕ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ಬೈಕ್ ಗಳ ಮೇಲೆ ತೆರಿಗೆಯನ್ನು ವಿಧಿಸಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳ ಖರೀದಿಸುವ ಜನರ ಸಂಖ್ಯೆ ಕಡಿಮೆ ಆಗಬಹುದೇ ಎಂಬ ಪ್ರಶ್ನೆ ಉದ್ಭವ ವಾಗಿದೆ.
ಕರ್ನಾಟಕದ ಹೊಸ ತೆರಿಗೆ ನಿಯಮ ಏನು?: ಎಲೆಕ್ಟ್ರಿಕ್ ವಾಹನಗಳನ್ನು ಕೊಂಡುಕೊಳ್ಳುವ ಗ್ರಾಹಕರ ಮೇಲೆ ಇನ್ನೂ ಮುಂದೆ ರಾಜ್ಯ ಸರ್ಕಾರವು ಹೆಚ್ಚಿನ ತೆರಿಗೆ ವಿಧಿಸಲು ತೀರ್ಮಾನಿಸಿದೆ. 25 ಲಕ್ಷ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ವಾಹನ ತೆಗೆದುಕೊಳ್ಳುವ ಗ್ರಾಹಕರಿಗೆ ರಾಜ್ಯ ಸರ್ಕಾರ 10% ತೆರಿಗೆ ವಿಧಿಸುತ್ತದೆ. ರಾಜ್ಯ ಸರ್ಕಾರದ ಈ ತೀರ್ಮಾನವು ಹಲವರ ಬೇಸರಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಉದ್ದೇಶಕ್ಕೆ ಪೆಟ್ಟು ನೀಡಲಿದೆ ಈ ನಿರ್ಣಯ?: ಕೇಂದ್ರ ಸರ್ಕಾರವು 2030 ರ ಹೊತ್ತಿಗೆ ದೇಶದಲ್ಲಿ ಶೇಕಡಾ 30 ರಷ್ಟು ಜನ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆ ಆಗಬೇಕು ಎಂಬ ದೃಷ್ಠಿಯಿಂದ ಹೊಸ ತಂತ್ರಜ್ಞಾನ ಬೆಳೆವಣಿಗೆಗೆ ಹೆಚ್ಚಿನ ಒತ್ತು ನೀಡಿ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಆದರೆ ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕೇಂದ್ರ ಸರ್ಕಾರದ ಗುರಿ ತಲುಪುವುದು ಕಷ್ಟ ಆಗುತ್ತದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೋಟ್ ಏರ್‌ಡೋಪ್ಸ್ 120: ಚಾರ್ಜ್ ಬಗ್ಗೆ ಚಿಂತೆ ಮಾಡದೆ 40 ಗಂಟೆಗಳ ಕಾಲ ಬಿಂದಾಸ್ ಉಪಯೋಗಿಸಬಹುದು
ತೆರಿಗೆ ಏರಿಸಿರುವ ಕಾರಣದಿಂದ ಆಗುವ ಪರಿಣಾಮಗಳು :-
ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ವೆಚ್ಚ ಹೆಚ್ಚು. ತೆರಿಗೆ ಏರಿಸಿರುವ ಕಾರಣದಿಂದ ಎಲೆಕ್ಟ್ರಿಕ್ ವಾಹನಗಳ ಮೂಲ ಬೆಲೆಯೂ ಹೆಚ್ಚಳ ಆಗುವ ಸಾಧ್ಯತೆ ಇದೆ. ಇದರಿಂದ ಎಲ್ಲಾ ವರ್ಗದ ಜನರೂ ಎಲೆಕ್ಟ್ರಿಕ್ ವಾಹನಗಳನ್ನು ತೆಗೆದುಕೊಳ್ಳಲು ಸಾಧ್ಯ ವಾಗದೆ ಇರಬಹುದು. ಸಾಮಾನ್ಯ ಮತ್ತು ಬಡ ವರ್ಗದ ಜನರಿಗೆ ಇದು ಹೆಚ್ಚಿನ ಆರ್ಥಿಕ ಹೋರೆಯಾಗುವ ಸಾಧ್ಯತೆ ಇದೆ. ಇದರಿಂದ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳನ್ನು ತೆಗೆದುಕೊಳ್ಳುವ ಕಡೆ ಗಮನ ಹರಿಸುವುದಿಲ್ಲ.
ವಿವಿಧ ದೇಶಗಳು ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆಯನ್ನು ಕಡಿತ ಗೊಳಿಸಿವೆ:- ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಹಲವಾರು ದೇಶಗಳು ಸಬ್ಸಿಡಿ ರೂಪದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಜನರಿಗೆ ನೀಡುತ್ತಾ ಇವೆ ಹಾಗೆಯೇ ಇನ್ನೂ ಕೆಲವು ದೇಶಗಳಲ್ಲಿ ತೆರಿಗೆ ವಿನಾಯಿತಿ. ತೆರಿಗೆ ರಹಿತ ವ್ಯವಸ್ಥೆ ಇದೆ.
ನಮ್ಮ ಪಕ್ಕದ ದೇಶ ಚೀನಾ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿದೆ. ಚೀನಾ ಪ್ರತಿ ವರ್ಷ 50% ಕ್ಕಿಂತ ಹೆಚ್ಚು ಎಲೆಕ್ಟ್ರಿಕ್ ವಾಹನ ಗಳ ಮಾರಾಟ ಮಾಡುತ್ತಿದೆ. 2009 ರಲ್ಲಿ ಪ್ರಾರಂಭವಾದ ಚೀನಾದ ನ್ಯೂ ಎನರ್ಜಿ ವೆಹಿಕಲ್ (NEV) ನೀತಿಯು EV ಗಳನ್ನು ಖರೀದಿಸುವವರಿಗೆ ಮತ್ತು ತಯಾರಕರಿಗೆ ವ್ಯಾಪಕ ಬೆಂಬಲವನ್ನು ನೀಡಿದೆ. ಚೀನಾ EV ಗಳ ಖರೀದಿ ಬೆಲೆಯನ್ನು ಕಡಿಮೆ ಮಾಡಲು ಅಲ್ಲಿನ ಸರ್ಕಾರವು ಸಬ್ಸಿಡಿಗಳನ್ನು ನೀಡುತ್ತದೆ ಹಾಗೂ ತೆರಿಗೆ ವಿನಾಯಿತಿಗಳನ್ನು ನೀಡಲಾಗುತ್ತದೆ ಜೊತೆಗೆ ಚಾರ್ಜಿಂಗ್ ಕೇಂದ್ರಗಳಂತಹ ಉತ್ತಮ ಮೂಲಸೌಕರ್ಯ ನೀಡುತ್ತಿದೆ. ಬಿಡೆನ್-ಹ್ಯಾರಿಸ್ ಸರ್ಕಾರವು 2050 ರ ವೇಳೆಗೆ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನವನ್ನು ಬಳಸುವ ಗುರಿ ಹೊಂದಿದ್ದು. ಹಲವು ರೀತಿಯ ರಿಯಾಯಿತಿಗಳು ಸಬ್ಸಿಡಿಗಳನ್ನು ನೀಡುತ್ತಿದೆ.
ಇದನ್ನೂ ಓದಿ: ನಿಮ್ಮ ಅನುಕೂಲತೆಗೆ ಯಾವುದು ಸೂಕ್ತ? ಟೇಸರ್‌ನ ಮಿತವ್ಯಯ ಅಥವಾ ಫ್ರಾಂಕ್ಸ್‌ನ ವಿನ್ಯಾಸ, ಯಾವುದನ್ನು ಆಯ್ಕೆ ಮಾಡುತ್ತೀರಾ