Karnataka Forest Guard Recruitment: ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಬೇಕು ಅಂದುಕೊಂಡು ಆಸೆ ಕನಸುಗಳನ್ನ ಇಟ್ಟುಕೊಂಡಿದ್ದವರಿಗೆ ಮತ್ತು ಕೇವಲ ಪಿಯುಸಿ ಪಾಸ್ ಆಗಿರೋರಿಗೆ ಇದು ಸುವರ್ಣವಾಕಾಶ ಅಂತ ಹೇಳಬಹುದು. ಹೌದು ಬಹಳ ದಿನಗಳ ನಂತರ ಮತ್ತೆ ಅರಣ್ಯ ಇಲಾಖೆಯಲ್ಲಿ ನೇಮಕಾತಿ ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕು ಎನ್ನುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಸಿಕ್ಕಿದ್ದು, ಕೂಡಲೇ ಅರ್ಜಿ ಸಲ್ಲಿಸಲು ನಿಮಗೆ ಒಳ್ಳೆಯ ಅವಕಾಶ. 540 ಹುದ್ದೆಗಳನ್ನು ಇದೇ ವರ್ಷ ಭರ್ತಿ ಮಾಡಲು ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರಣ್ಯ ಇಲಾಖೆ ವೃತ್ತವಾರು ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ.
ಹೌದು ಕರ್ನಾಟಕ ಫಾರೆಸ್ಟ್ ಡಿಪಾರ್ಟ್‌ಮೆಂಟ್ ಇದೀಗ 540 ಅರಣ್ಯ ರಕ್ಷಕರ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಡಿಸೆಂಬರ್ 01 ರಿಂದ 30 ರವರೆಗೆ ಅರ್ಜಿ ಸ್ವೀಕಾರ ಮಾಡಲಿದೆ. ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರಿಗೆ ಯಾವೆಲ್ಲ ಪರೀಕ್ಷೆಗಳು ಇರುತ್ತವೆ, ಅರ್ಹತೆ ಏನು ಅರ್ಜಿ ಸಲ್ಲಿಸೋದು ಹೇಗೆ ಎಲ್ಲವನ್ನ ನೋಡೋಣ ಬನ್ನಿ. ಹೌದು ಭಾರತೀಯ ಅರಣ್ಯ ಸಿಬ್ಬಂದಿ ನೇಮಕಾತಿ 2023 ಭಾರತೀಯ ಫಾರೆಸ್ಟ್ ಗಾರ್ಡ್‌ನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಯು ಜೀವನವನ್ನು ಕಂಡುಕೊಳ್ಳಬಹುದು ಪೋಸ್ಟರ್ ಉದ್ಯೋಗ ನವೀಕರಣ 2023 ಇಂಡಿಯನ್ ಫಾರೆಸ್ಟ್ ಗಾರ್ಡ್ ನಲ್ಲಿ ವಿವಿಧ ಉದ್ಯೋಗಾವಕಾಶಗಳು ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಪಿ ಯು ಪಾಸ್ ಆಗಿದ್ರೆ ಸಾಕು ಸಿಗುತ್ತೆ ಅರಣ್ಯ ಇಲಾಖೆಯಲ್ಲಿ ಕೆಲಸ
ಇನ್ನು ಅಭ್ಯರ್ಥಿಗಳ ದ್ವಿತೀಯ ಪಿಯುಸಿ ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಮತ್ತು ಖಾಲಿ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:20 ಅನುಪಾತದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಇವರನ್ನು ದೇಹದಾರ್ಢ್ಯತೆ, ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳಿಗೆ ಕರೆಯಲಾಗುತ್ತದೆ. ಮೊದಲಿಗೆ ಈ ಪರೀಕ್ಷೆಗಳನ್ನು ನಡೆಸಲಿದ್ದು, ನಿಗದಿಪಡಿಸಿದ ದಿನಾಂಕದಂದು ಈ ಪರೀಕ್ಷೆಗಳಿಗೆ ಪ್ರವೇಶ ಪತ್ರದೊಂದಿಗೆ ಹಾಜರಾಗಬೇಕು. ಈ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರನ್ನು ಮಾತ್ರ ಮುಂದಿನ ಹಂತದ ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ. ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡ ಅರ್ಧ ಹಾಗೂ ನಿಗದಿತ ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಶೇಕಡ ಅಂಕಗಳ ಶೇಕಡ ಅರ್ಧ ಅಂಕಗಳನ್ನು ಕ್ರೂಢೀಕರಿಸಿ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ. ಇವರಿಗೆ ಹುದ್ದೆ ಖಚಿತವಾಗುತ್ತದೆ ಅಂತ ಹೇಳಲಾಗುತ್ತದೆ.
ಅರಣ್ಯ ರಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ಅಧಿಸೂಚಿಸಿರುವ ವೃತ್ತವಾರು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಪ್ರಶ್ನೆ ಪತ್ರಿಕೆ ನಿಗದಿಪಡಿಸಿದ ದ್ವಿತೀಯ ಪಿಯುಸಿ ಪಠ್ಯಕ್ರಮ ಮಟ್ಟದಲ್ಲಿದ್ದು ಬಹು ಆಯ್ಕೆ ಮಾದರಿಯದ್ದು. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. 40 ಅಂಕಗಳಿಗೆ ಗಣಿತ, 60 ಅಂಕಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯ ಜ್ಞಾನ ಪ್ರಶ್ನೆಗಳು ಭಾರತದ ಸ್ವಾತಂತ್ರ್ಯ ಹೋರಾಟ, ಭಾರತದ ಪ್ರಾಚೀನ ನಾಗರಿಕತೆಗಳು, ಇತಿಹಾಸ, ಸಂವಿಧಾನ, ಅರ್ಥನೀತಿ, ಭೂಗೋಳ ಮತ್ತು ನೈಸರ್ಗಿಕ ಸಂಪನ್ಮೂಲಗಳು, ರಾಜನೀತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರಚಲಿತ ವಿದ್ಯಮಾನಗಳು ಹಾಗೂ ಕ್ರೀಡೆ ಕುರಿತು ಇರುತ್ತವೆ. ಲಿಖಿತ ಪರೀಕ್ಷೆಯ ನಂತರ ಶಾರ್ಟ್ ಲಿಸ್ಟ್ ಆದವರು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಪಡೆಯುತ್ತಾರೆ.
ಇವರು ತಮ್ಮ ಮೂಲದಾಖಲೆಗಳ (ಶೈಕ್ಷಣಿಕ, ಮೀಸಲಾತಿ ಕೋರಿದ ಹಾಗೂ ಇತರೆ) ಜೊತೆಗೆ ಮೆಡಿಕಲ್ ಸರ್ಟಿಫಿಕೇಟ್ ಅನ್ನು ಸಲ್ಲಿಸಬೇಕಾಗಿರುತ್ತವೆ. ಇವುಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಗಳನ್ನು ಪಾಸ್ ಮಾಡಿರಬೇಕು. – ಕನಿಷ್ಠ 18 ವರ್ಷ ಪೂರೈಸಿರಬೇಕು. – ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 32 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ಅರ್ಹತೆಯವರಿಗೆ 27 ವರ್ಷ ಗರಿಷ್ಠ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ. ಇನ್ನು ಅರ್ಜಿ ಸಲ್ಲಿಸಲು ಆರಂಭಿಕ ದಿನ 1-12-2023 ಕೊನೆವ ದಿನಾಂಕ 30-12-2023 ಇನ್ನು ಅರ್ಜಿ ಶುಲ್ಕ ಸಾಮಾನ್ಯ ವರ್ಗದವರಿಗೆ 200 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 100 ರೂಪಾಯಿ ನಿಗಧಿ ಮಾಡಲಾಗಿದೆ. ಹೀಗಾಗಿ ಆಸಕ್ತರು ಇನ್ನು ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇನ್ನು ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಇನ್ಮುಂದೆ ಭೂ ದಾಖಲೆಗಳು ಆಗಲಿವೆ ಡಿಜಿಟಲೀಕರಣ; ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಜಾರಿ
ಇದನ್ನೂ ಓದಿ: ಕಡಿಮೆ ಬಡ್ಡಿದರದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಸಾಲವನ್ನು ಪಡೆಯುವುದು ಹೇಗೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram