ಮೊಬೈಲ್ ಅಪ್ಲಿಕೇಷನ್ ಮೂಲಕ ಸಿಟಿ ಗಳಲಿ ಓಡಾಡಲು ಕ್ಯಾಬ್ ಆಟೋ ಬುಕ್ ಮಾಡುವಾಗ ಒಂದೊಂದು ಕಂಪನಿಯು ಒಂದೊಂದು ದರವನ್ನು ತೋರಿಸುತ್ತದೆ. ಆದರೆ ಈಗ ಸರ್ಕಾರ ಒಂದೇ ರೀತಿಯ ಹಣವನ್ನು ಗ್ರಾಹಕರಿಂದ ಪಡೆಯಬೇಕು ಎಂಬ ಹೊಸ ನಿಯಮ ಜಾರಿಗೊಳಿಸಿದೆ. ದರಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಶನಿವಾರದ ಪ್ರಕಟಿಸಲಾಗಿದೆ. ಪೀಕ್ ಅವರ್ ಗಳಲಿ ಹಣವನ್ನು ಹೆಚ್ಚಿಸಿ ಗ್ರಾಹಕರಿಂದ ಸುಲಿಗೆ ಮಾಡುತ್ತಿದ್ದ ಓಲಾ, ಉಬರ್, ರ್ಯಾಪಿಡೋ ಮತ್ತು ಸಿಟಿ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರ ಈಗ ಒಂದೇ ರೀತಿಯ ದರವನ್ನು ನಿಗದಿ ಮಾಡಿದೆ.
ಹೊಸ ದರಗಳು ಪಟ್ಟಿ ಹೀಗಿದೆ :-
ಈ ಹಿಂದೆ, ಎರಡು ವರ್ಗದ ಟ್ಯಾಕ್ಸಿಗಳಿಗೆ ಬೇರೆ ಬೇರೆ ದರಗಳು ಇದ್ದವು. ಹೊಸ ದರದ ಪಟ್ಟಿಯನ್ನು ವಾಹನದ ವೆಚ್ಚವನ್ನು ಆಧರಿಸಿ ಕ್ಯಾಬ್‌ಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಸರ್ಕಾರ ನಿಗದಿ ಪಡಿಸಿದ ಹಣಕ್ಕಿಂತ ಹೆಚ್ಚಿನ ದರವನ್ನು ಕ್ಯಾಬ್ ಡ್ರೈವರ್ ಗಳು ಪಡೆದರೆ ಅವರ ಮೇಲೆ ಗ್ರಾಹಕರು ದೂರು ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
- 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ವೆಚ್ಚದ ವಾಹನಗಳಿಗೆ ನಾಲ್ಕು ಕಿ.ಮೀ.ವರೆಗೆ 100 ರೂಪಾಯಿ ಹಾಗೂ ನಾಲ್ಕು ಕಿಲೋಮೀಟರ್ ನಂತರ ಪ್ರತಿ ಕಿಲೋಮೀಟರ್ ಗೆ 24 ರೂಪಾಯಿ ದರವನ್ನು ನಿಗದಿ ಪಡಿಸಲಾಗಿದೆ.
- 10 ರಿಂದ 15 ಲಕ್ಷದವರೆಗಿನ ವಾಹನಗಳಿಗೆ ನಾಲ್ಕು ಕಿಲೋಮೀಟರ್ ವರೆಗೆ 115 ರೂಪಾಯಿ ಮತ್ತು ನಂತರ ಪ್ರತಿ ಕಿಲೋಮೀಟರ್ ಗೆ 28 ರೂಪಾಯಿ ನಿಗದಿ ಮಾಡಲಾಗಿದೆ.
- 15 ಲಕ್ಷಕ್ಕಿಂತ ಜಾಸ್ತಿ ಬೆಲೆಯ ವಾಹನಗಳಿಗೆ ನಾಲ್ಕು ಕಿಲೋಮೀಟರ್ ತನಕ 130 ರೂಪಾಯಿ ನಂತರ ಪ್ರತಿ ಕಿಲೋಮೀಟರ್ ಗೆ 32 ರೂಪಾಯಿ ದರ ನಿಗದಿ ಮಾಡಿದ್ದಾರೆ.
ವೈಟಿಂಗ್ ಚಾರ್ಜ್ GST ದರಗಳ ಪಟ್ಟಿ
ಗ್ರಾಹಕರು ಕ್ಯಾಬ್ ಬುಕ್ ಮಾಡಿ ಕ್ಯಾಬ್ ನಿಮ್ಮ ಸ್ಥಳಕ್ಕೆ ಬಂದು ಐದು ನಿಮಿಷಗಳು ಆದರೆ ನೀವು ಅದಕ್ಕೆ ಯಾವುದೇ ರೀತಿಯ ಹಣ ಪಾವತಿ ಮಾಡಬೇಕಾಗಿಲ್ಲ. 5 ನಿಮಿಷಗಳ ನಂತರ ಪ್ರತಿ ನಿಮಿಷಕ್ಕೆ 1 ರೂಪಾಯಿಯಂತೆ ನಿಗದಿ ಮಾಡಲಾಗಿದೆ. GST ದರವನ್ನು 5% ಹಾಗೂ ಯಾವುದೇ ಟೋಲ್ ಗೇಟ್ ಪಾಸ್ ಆದರೆ ಅದರ ಹಣವನ್ನು ಗ್ರಾಹಕರಿಂದ ಪಡೆಯಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದಲ್ಲದೆ ಗ್ರಾಹಕರು ಪಿಕ್ ಅವರ ಗಳಲ್ಲಿ ಶೇಕಡಾ 10 ಪರ್ಸೆಂಟ್ ಹೆಚ್ಚಿನ ದರವನ್ನು ಪಡೆಯಬಹುದು. ಅದಕ್ಕೂ ಹೆಚ್ಚಿನ ಹಣವನ್ನು ಪಡೆಯುವಂತೆ ಇಲ್ಲ.
ಇದನ್ನೂ ಓದಿ: ಐಟಿ ಉದ್ಯೋಗಿಗಳು ಆತಂಕಕ್ಕೆ ಕಾರಣವಾಗಿದೆ ವಿಪ್ರೋ ಕಂಪನಿಯ ಉದ್ಯೋಗಿಗಳನ್ನು ವಜಾ ಗೊಳಿಸುವ ನಿರ್ಧಾರ
ಇಲ್ಲಿಯತನಕ ಇದ್ದ ದರಗಳ ವಿವರ:-
2021 ರಲ್ಲಿ ಸರಕಾರ ಒಂದು ರೀತಿಯ ದರಗಳನ್ನು ನಿಗದಿ ಮಾಡಿತ್ತು. ಅದರ ವಿವರಗಳು ಹೀಗಿವೆ:- 4 ಕಿಲೋಮೀಟರ್ ಗೆ ಒಂದು ಲಕ್ಷದಿಂದ 5 ಲಕ್ಷದವರೆಗಿನ ವಾಹನಗಳಿಗೆ 75 ರೂಪಾಯಿ, 5 ರಿಂದ 10 ಲಕ್ಷದ ವರೆಗಿನ ವಾಹನಗಳಿಗೆ 100 ರೂಪಾಯಿ, 10 ರಿಂದ 16 ಲಕ್ಷದ ವಾಹನಗಳಿಗೆ 120 ರೂಪಾಯಿ, 16 ಲಕ್ಷಕ್ಕಿಂತ ಜಾಸ್ತಿ ಬೆಲೆ ಬಾಳುವ ವಾಹನಗಳಿಗೆ 150 ರೂಪಾಯಿ ನಿಗದಿ ಮಾಡಿತ್ತು.
ಇದನ್ನೂ ಓದಿ: ಪ್ರತಿ ತಿಂಗಳು ನಿಮ್ಮ ಪಿಎಫ್ ಖಾತೆಗೆ ಹಣ ಜಮಾ ಆಗುತ್ತದೆಯೇ ಎಂದು ಈಗ ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು.
ಇದನ್ನೂ ಓದಿ: ರೂ.4000 ರಿಯಾಯಿತಿಯೊಂದಿಗೆ 8GB RAM ಮತ್ತು 128GB ಸ್ಟೋರೇಜ್ ನ ಈ ಮೋಟೋ ಸ್ಮಾರ್ಟ್‌ಫೋನ್ ವಿವರಗಳನ್ನು ತಿಳಿಯಿರಿ