ಈ ಹಿಂದೆ ಕರ್ನಾಟಕದಲ್ಲಿ ಪದವಿ ಕೋರ್ಸ್ ಅವಧಿಯನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಬದಲಾಯಿಸಲಾಗಿತ್ತು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ನಾಲ್ಕು ವರ್ಷದ ಪದವಿ ಇರುವುದಿಲ್ಲ. ಇನ್ನು ಮುಂದೆ ಮೂರು ವರ್ಷಕ್ಕೆ ಪದವಿ ಮರು ಜಾರಿಯಾಗಲಿದೆ ಎಂದು ತಿಳಿಸಿದೆ.
ಯಾಕೆ ನಿಯಮ ಬದಲಾವಣೆ ಆಗಿದೆ.?: ನಾಲ್ಕು ವರ್ಷದ ಪದವಿ ಕೋರ್ಸ್ ಬಗ್ಗೆ ಸರಿಯಾದ ರೀತಿಯ ಸ್ಪಷ್ಟತೆ ಸಿಗದ ಕಾರಣದಿಂದ ಹಳೆ ಅವಧಿಯನ್ನು ಮುಂದುವರೆಸಲು ಇಲಾಖೆ ತೀರ್ಮಾನಿಸಿದೆ.
ರಾಜ್ಯ ಶಿಕ್ಷಣ ನೀತಿ ಆಯೋಗದ ಪ್ರಕಟಣೆ ಹೀಗಿದೆ :- ಆಯೋಗ ನೀಡಿದ ವರದಿಯ ಪ್ರಕಾರ 2023-24 ರ ಸಾಲಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹಿಂದಿನಂತೆ ಮೂರು ವರ್ಷಗಳ ಪದವಿ ಕೋರ್ಸ್ ಗೆ ಪಠ್ಯಕ್ರಮ ಸಿದ್ಧತೆ ಮಾಡಲಾಗಿದೆ. ರಾಷ್ಟೀಯ ಶಿಕ್ಷಣ ನೀತಿಯ ನಾಲ್ಕು ವರ್ಷದ ಕೋರ್ಸ್ ಬಗ್ಗೆ ನಮಗೆ ಸ್ಪಷ್ಟತೆ ಸಿಗದ ಕಾರಣ ನಾವು ಮೂರು ವರ್ಷದ ಪದವಿಯನ್ನು ಮುಂದುವರೆಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪಠ್ಯಕ್ರಮದ ಮಾಹಿತಿ:-
ಮಧ್ಯಂತರ ವರದಿಯ ಶಿಫಾರಸುಗಳನ್ನು ಅನುಸರಿಸಿ, ಸರ್ಕಾರವು ಪದವಿ ಕಾರ್ಯಕ್ರಮದ ಅವಧಿಯನ್ನು ಮೂರು ವರ್ಷಗಳಿಗೆ ಸೀಮಿತಗೊಳಿಸಲಾಗಿದೆ ಮತ್ತು ಮೂರು ಸ್ಪಷ್ಟ ಪದವಿಪ ಪಠ್ಯಕ್ರಮಗಳನ್ನು (CFW ಗಳು) ಅನುಮೋದಿಸಲಾಗಿದೆ. ಆರು ಸೆಮಿಸ್ಟರ್ ಪರೀಕ್ಷೆಗಳು ಒಳಗೊಂಡಿವೆ ಒಂದೊಂದು ಸೆಮಿಸ್ಟರ್ ನಲ್ಲಿ ಸಹ ವಿದ್ಯಾರ್ಥಿಗಳು ಮುಖ್ಯ ಮೂರು ವಿಷಯಗಳನ್ನು ಅಧ್ಯಯನ ಮಾಡಬೇಕು ಹಾಗೂ ಇದೊಂದು ವಿಷಯಗಳನ್ನ ಆಯ್ಕೆ ಮಾಡಿಕೊಳ್ಳಬೇಕು. ಈ ಹಿಂದೆ ಇರುವ ನಿಯಮದಂತೆ ಭಾಷೆಗಳ ಆಯ್ಕೆಗಳು ಇರಲಿವೆ. ಜೊತೆಗೆ ಐದನೇ ಮತ್ತು ಆರನೇ ಸೆಮಿಸ್ಟರ್‌ಗಳಲ್ಲಿ, ಅವರು ಒಂದು ವಿಷಯದಲ್ಲಿ ಆಳವಾದ ಜ್ಞಾನವನ್ನು ಪಡೆಯಲು ಒಂದು ವಿಷಯ ಆಯ್ಕೆ ಮಾಡಿಕೊಳ್ಳಬೇಕು..ಈ ಹೊಸ ಪದವಿ ಕಾರ್ಯಕ್ರಮಗಳು ತಮ್ಮ ಆಸಕ್ತಿಗಳು ಮತ್ತು ವೃತ್ತಿ ಗುರಿಗಳಿಗೆ ಹೆಚ್ಚು ಹೊಂದಿಕೆಯಾಗುವ ಶಿಕ್ಷಣವನ್ನು ಪಡೆಯಲು ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ.
ಉನ್ನತ ಶಿಕ್ಷಣ ಇಲಾಖೆಯ ಪತ್ರಿಕಾ ಪ್ರಕಟಣೆ ಹೀಗಿದೆ :- ಮೊದಲ ವರ್ಷದ ನಂತರ ಪ್ರಮಾಣಪತ್ರ ನೀಡುವ ಬಗ್ಗೆ ಹಾಗೂ ಎರಡನೇ ವರ್ಷದ ನಂತರ ಡಿಪ್ಲೊಮಾ ಪದವಿ ಯೋಜನೆಗಳ ಕುರಿತು ಮಾಹಿತಿಗಳು ಸರ್ಕಾರದ ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಜಾರಿಯಾಗುತ್ತವೆ. ಇದರ ಬಗ್ಗೆ ಈಗಲೇ ಮಾಹಿತಿ ನೀಡಲು ಸಾಧ್ಯವಿಲ್ಲ. ಪಠ್ಯಕ್ರಮದ ಬದಲಾವಣೆಯಲ್ಲಿ ನಿಯಮಬದ್ಧವಾಗಿ ಬದಲಾಯಿಸಲು ಸರ್ಕಾರ ತೀರ್ಮಾನ ಮಾಡುತ್ತಿದೆ. ಜ್ಞಾನ ಹೆಚ್ಚಿಸಲು ಹಾಗೂ ಉದ್ಯಮ ಸಂಬಂಧಿತ ಕೌಶಲ್ಯ ಆಧಾರಿತ ಕೋರ್ಸ್‌ಗಳನ್ನು ಒದಗಿಸಲು ಹಾಗೂ ಆಯಾ ಪ್ರದೇಶಕ್ಕೆ ನಿರ್ದಿಷ್ಟವಾದ ಕೋರ್ಸ್‌ಗಳನ್ನು ರೂಪಿಸಲು ವಿಶ್ವವಿದ್ಯಾಲಯಗಳಿಗೆ ನಿರ್ದೇಶನಾ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದೆಯಾ? ಚಿಂತಿಸಬೇಡಿ! ಈ ಸಲಹೆಗಳೊಂದಿಗೆ ಸುಲಭವಾಗಿ ಸಾಲ ಪಡೆಯಿರಿ!
ರಾಷ್ಟ್ರೀಯ ಶಿಕ್ಷಣ ನೀತಿ ಮೂರು ವರ್ಷದ ಕೋರ್ಸ್ ಅನ್ನು ನಾಲ್ಕು ವರ್ಷಕ್ಕೆ ಏರಿಸಲು ಕಾರಣ ಏನು?
ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು 4 ವರ್ಷಗಳ ಪದವಿ ಪೂರ್ಣಗೊಳಿಸಬೇಕು ಎಂಬ ನಿಯಮ ಇದೆ. ಜಾಗತಿಕ ಶಿಕ್ಷಣದೊಂದಿಗೆ ಭಾರತೀಯ ಶಿಕ್ಷಣ ಹೊಂದಿಕೆಯಾಗುವ ಉದ್ದೇಶದಿಂದ, ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಪದವಿ ವ್ಯಾಸಂಗದ ಅವಧಿಯನ್ನು 4 ವರ್ಷಗಳಿಗೆ ಹೆಚ್ಚಿಸಲಾಗಿದೆ.
2021-22 ರಲ್ಲಿ ಈ ನಿಯಮ ಜಾರಿಯಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರ ಇದ್ದಾಗ ರೂಪಿಸಿದ್ದ ಎಲ್ಲಾ ನಿಯಮಗಳನ್ನು ಬದಲಿಸುವಂತೆ ಈ ನಿಯಮವನ್ನು ಬದಲಾಯಿಸಿದೆ ಎಂಬ ಮಾತಿಗಳಿ ಕೇಳಿ ಬರುತ್ತಿವೆ.
ಇದನ್ನೂ ಓದಿ: ರೈಲು ಟಿಕೆಟ್ ನಿಂದ ಪ್ರಯಾಣವಷ್ಟೇ ಅಲ್ಲದೆ, ಅನೇಕ ಉಚಿತ ಸೇವೆಗಳೂ ಲಭ್ಯವಿದೆ!