ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಪದವಿ ಮುಗಿಸಿರುವವರಿಗೆ 586 ಹುದ್ದೆಗೆ ಅರ್ಜಿ ಆಹ್ವಾನ ಮಾಡಿದೆ.

Karnataka Gramin Bank Recruitment

ಬ್ಯಾಂಕ್ ನಲ್ಲಿ ಉದ್ಯೋಗ ಇದೆ ಎಂದರೆ ಒಂದು ಹುದ್ದೆಗೆ ನೂರಾರು ಜನರು ಅಪ್ಲಿಕೇಶನ್ ಹಾಕುತ್ತಾರೆ. ಯಾಕೆಂದರೆ ಪ್ರೈವೇಟ್ ಕಂಪನಿಗಳ ಹಾಗೆ ನೈಟ್ ಶಿಫ್ಟ್ ಗಳು ಇರುವುದಿಲ್ಲ ಹಾಗೆಯೇ ಮನೆಗೆ ಬಂದಮೇಲೆ ಸಹ ಆಫೀಸ್ ಕೆಲಸ ಮಾಡಬೇಕು ಎಂಬ ಯಾವುದೇ ಜಂಜಾಟ ಇರುವುದಿಲ್ಲ. ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಒಟ್ಟು 586 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಪದವೀಧರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ :- ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 386 ಹಾಗೂ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ನಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 200. ಎರಡು ಬ್ಯಾಂಕ್ ನಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 586
ಆಫೀಸ್ ಅಸಿಸ್ಟೆಂಟ್ 200 ಹುದ್ದೆ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ 386 ಹುದ್ದೆಗಳು ಇವೆ. ಯಾವುದೇ ಒಂದು ಜಿಲ್ಲೆಗೆ ಮಾತ್ರ ಸೀಮಿತ ಆಗಿರದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಮಾಸಿಕ ವೇತನದ ವಿವರಗಳು :- ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಹಾಗೂ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ನೀಡುವ ಮಾಸಿಕ ವೇತನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆಯ್ಕೆಯಾದ ಅಭ್ಯರ್ಥಿಗಳ ಅನುಭವ ಮತ್ತು ಕೆಲಸವನ್ನು ಪರಿಗಣಿಸಿ ಮಾಸಿಕ ವೇತನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಎಟಿಎಂ ನಿಂದ ಹಣ ಡ್ರಾ ಮಾಡುವ ಮೊದಲು ಎಚ್ಚರ; ಬೇಕಾ ಬಿಟ್ಟಿ ಹಣ ಡ್ರಾ ಮಾಡುದ್ರೆ ಶುಲ್ಕ ಹೆಚ್ಚಳ

ಮಾನದಂಡಗಳು :-

ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಲವು ನಿಯಮ ಅಥವಾ ಮಾನದಂಡಗಳು ಇವೆ. ಅವು ಏನೆಂದರೆ –

  • ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ನಡೆದ ವಿಶ್ವ ವಿದ್ಯಾಲಯದಿಂದ ಪದವಿ ಪರ್ಣಗೊಳಿಸಿರಬೇಕು.
  • ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 28. ಸರ್ಕಾರದ ಮೀಸಲಾತಿಯ ಪ್ರಕಾರ ವಯೋಮಿತಿಯ ಸಡಿಲಿಕೆ ಇರುತ್ತದೆ.
  • ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18ಹಾಗೂ ಗರಿಷ್ಠ ವಯಸ್ಸು 30. ಸರಕಾರದ ಮೀಸಲಾತಿ ನಿಯಮಗಳು ಅನ್ವಯ ಆಗುತ್ತವೆ.

ಅರ್ಜಿ ಶುಲ್ಕ ವಿವರಗಳು :- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 850 ರೂಪಾಯಿ ಶುಲ್ಕ ಇರುತ್ತದೆ ಹಾಗೂ ಎಸ್‌ಸಿ ಮತ್ತು ಎಸ್ ಟಿ ಹಾಗೂ PWD ಅಭ್ಯರ್ಥಿಗಳಿಗೆ 175 ರೂಪಾಯಿ ಶುಲ್ಕ ಇರುತ್ತದೆ. ಆನ್ಲೈನ್ ಮೂಲಕವೇ ಶುಲ್ಕ ಪಾವತಿ ಮಾಡಬೇಕು.

ಅರ್ಜಿ ಸಲ್ಲಿಸುವ ವಿಧಾನ :-

ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://ibpsonline.ibps.in/rrb13oamay24/ ಗೆ ಭೇಟಿ ಮಾಡಿ ನೋಂದಣಿ ಮಾಡಿಕೊಂಡು ಅರ್ಜಿ ನಮೂನೆಯಲ್ಲಿ ನಿಮ್ಮ ವೈಯಕ್ತಿಕ ಹಾಗೂ ವಿದ್ಯಾರ್ಹತೆ ಹಾಗೂ ಅನುಭವದ ವಿವರಗಳನ್ನು ಭರ್ತಿ ಮಾಡಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆ :- ಮೊದಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ನಂತರ ಆಯ್ಕೆ ಆಗಿರುವ ಎಲ್ಲಾ ಅಭ್ಯರ್ಥಿಗಳನ್ನು ಪೂರ್ವ ಭಾವಿ ಪರೀಕ್ಷೆಗೆ ತಿಳಿಸಲಾಗುತ್ತದೆ. ನಂತರ ಪರೀಕ್ಷೆಯಲ್ಲಿ ಆಯ್ಕೆ ಆಗಿರುವ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿ ಎಲ್ಲಾ ಹಂತದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಮಾರ್ಕ್ಸ್ ಕಾರ್ಡ್ ಗಾಳನ್ನು ಪರಿಶೀಲಿಸಿ ನಂತರ ಆಫರ್ ಲೆಟರ್ ನೀಡಲಾಗುತ್ತದೆ.

ಕೊನೆಯ ದಿನಾಂಕ ಮಾಹಿತಿ :- ಇದೆ ಬರುವ ಜೂನ್ 27 2024 ರ ಒಳಗಾಗಿ ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 78000 ರೂಪಾಯಿ ಸಬ್ಸಿಡಿ ಪಡೆಯಿರಿ.