ಬಾಡಿಗೆ ಮನೆಯಲ್ಲಿದ್ದೋರಿಗೆ ಸಿಗುತ್ತಾ ಫ್ರೀ ಕರೆಂಟ್- ಉಚಿತ 200ಯುನಿಟ್ ಪಡೆಯಲು ಏನ್ ಮಾಡಬೇಕು?

ಕಾಂಗ್ರೆಸ್ ಚುನಾವಣೆಗೂ ಮೊದಲೇ ನೀಡಿದ 5 ಗ್ಯಾರಂಟಿಗಳಲ್ಲಿ ಯಾವುದರ ಬಗ್ಗೆಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಆದರೆ ಜನ ಮಾತ್ರ ನಾವು ಕರೆಂಟ್ ಬಿಲ್ ಕಟ್ಟಲ್ಲ ಯಾಕ್ ಕಟ್ಟಬೇಕು ಅಂತೆಲ್ಲಾ ಹೇಳಿ ಒಂದು ರೀತಿ ಗೊಂದಲದ ವಾತಾವರಣಗಳು ನಿರ್ಮಾಣ ಆಗುತ್ತಿರುವಂತ ಸಂದರ್ಭದಲ್ಲೇ ಇದೀಗ ಅಧಿಕಾರಿಗಳ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಪ್ರತಿಮನೆಗೆ 200 ಯೂನಿಟ್ ವಿದ್ಯುತ್ ಪೂರೈಸುವ ಗೃಹಜ್ಯೋತಿ(Gruha jyothi) ಯೋಜನೆಯಲ್ಲಿ ಕೇವಲ ಮನೆ ಮಾಲೀಕರಿಗಷ್ಟೆ ಅಲ್ಲದೆ, ಬಾಡಿಗೆದಾರ ಫಲಾನುಭವಿಗಳಿಗೂ ಸೌಲಭ್ಯ ದೊರೆಯುವಂತೆ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ ಅಂತ ಹೇಳಲಾಗಿದ್ದು ಸಾಮಾನ್ಯವಾಗಿ ವಿದ್ಯುತ್ ಸಂಪರ್ಕಗಳು ಮನೆಯ ಮಾಲೀಕರ ಹೆಸರಿನಲ್ಲಿ ಇರುತ್ತದೆ. ಹೌದು ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಶೇ.30ರಿಂದ 40ರಷ್ಟು ಮಂದಿ ಬಾಡಿಗೆದಾರರು ವಾಸವಿದ್ದಾರೆ. ಹೀಗಾಗಿ ಕಾಂಗ್ರೆಸ್ ಚುನಾವಣೆಯ ವೇಳೆ ಗೃಹಬಳಕೆಯ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿದೆ. ಅದರ ಪ್ರಕಾರ ಯೋಜನೆಯ ಚರ್ಚೆಗಳು ನಡೆದಿವೆ. ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಕಾಂಗ್ರೆಸ್ ನೀಡಿದ ಐದು ಭರವಸೆಗಳ ಅನುಷ್ಠಾನದ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ಐದು ಭರವಸೆಗಳನ್ನು ನೀಡಿದ್ದು ಈ ಕಾರಣಕ್ಕೆ ಜನಸಾಮಾನ್ಯರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು. ಅಲ್ದೇ ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದು ಒಂದಷ್ಟು ದಿನಗಳು ಆದರೂ ಕೂಡ ಇನ್ನು ಭರವಸೆಗಳ ಅನುಷ್ಠಾನದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಡಿಸಿಲ್ಲ. ಆದ್ರೆ ಗೃಹಜ್ಯೋತಿ ಯೋಜನೆಯ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: ರಾಜ್ಯದಲ್ಲಿ 5ದಿನ ವರುಣ ಆರ್ಭಟ ಶುರುವಾಗಲಿದೆ, ಯಾವ ಯಾವ ಜಿಲ್ಲೆಗಳಲ್ಲಿ ಸುರಿಯುತ್ತೆ ಅತೀ ಹೆಚ್ಚು ಮಳೆ

ಅಗತ್ಯ ದಾಖಲೆಗಳೇನು? ಏನಾದ್ರೂ ಕಂಡೀಷನ್ಸ್ ಇದ್ಯಾ?

ಹೌದು ಈ ಯೋಜನೆಯ ಅನ್ವಯ ಮನೆಯ ಮಾಲೀಕರಿಗೆ ಒಂದು ಮೀಟರ್ ಗೆಗೆ ಮಾತ್ರ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಉಳಿದಂತೆ ಹೆಚ್ಚುವರಿ ಮೀಟರ್ ಗಳಿದ್ದರೆ ಅವುಗಳ ಶುಲ್ಕವನ್ನು ಮಾಲೀಕರೇ ಭರಿಸಬೇಕಿದೆ. ಇನ್ನು ಮನೆಗಳಲ್ಲಿ ಬಾಡಿಗೆದಾರರಿದ್ದರೆ ಅವರಿಗೂ ಸೌಲಭ್ಯ ದೊರಕಿಸಲು ಚರ್ಚೆಗಳು ನಡೆಯುತ್ತಿವೆ. ಇನ್ನು ಬಾಡಿಗೆ ಕರಾರು ತುಂಬಾ ವರ್ಷಗಳ ಹಳೆಯದಾಗಿದ್ದರೆ ಅದನ್ನು ಪರಿಗಣಿಸಬೇಕೇ ಆಥವಾ ಹೊಸ ಕರಾರು ಪತ್ರಗಳನ್ನು ಒದಗಿಸುವಂತೆ ಸೂಚಿಸಬೇಕೆ ಎಂಬ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಹೊಸದಾಗಿ ಕರಾರು ಪತ್ರಗಳನ್ನು ಮಾತ್ರ ಪರಿಗಣಿಸಬೇಕು ಎಂಬ ನಿಯಮ ರೂಪಿಸಿದರೆ, ಮನೆ ಮಾಲೀಕರು ಬಾಡಿಗೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ವಿದ್ಯುತ್ ಬಿಲ್‍ನಲ್ಲಿ ಉಳಿತಾಯ ಆಗುವ ಹಣವನ್ನ ಮನೆ ಮಾಲೀಕರಿಗೆ ಹೆಚ್ಚುವರಿ ಬಾಡಿಗೆ ರೂಪದಲ್ಲಿ ಪಾವತಿಸುವ ಅನಿವಾರ್ಯತೆ ಬಾಡಿಗೆದಾರರಿಗೆ ಎದುರಾಗುತ್ತದೆ. ಹಾಗಾಗಿ ಹಳೆಯ ಕರಾರನ್ನೇ ಪರಿಗಣಿಸಬೇಕು, ಅದೇ ಮನೆಯಲ್ಲಿ ಬಾಡಿಗೆದಾರರು ವಾಸವಿದ್ದಾರೆ ಎಂಬುದಕ್ಕೆ ಪೂರಕ ದಾಖಲೆಗಳನ್ನು ಪಡೆಯಬೇಕೆ ಅಥವಾ ಅಧಿಕಾರಿಗಳು ಸ್ಥಳ ಪರಿಶೀಲನೆ ಮೂಲಕ ಖಚಿತ ಪಡಿಸಿಕೊಳ್ಳಬೇಕೆ ಎಂಬ ಕುರಿತು ಎಸ್ಕಾಂಗಳು ಚರ್ಚೆ ನಡೆಸಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಜೊತೆಗೆ ಒಂದು ಸುತ್ತಿನ ಮಾತುಕತೆ ಮುಕ್ತಾಯವಾಗಿದೆ.

ಇನ್ನು ಈ ಐದು ಗ್ಯಾರಂಟಿಗಳ ಈಡೇರಿಕೆಗೆ ಎಷ್ಟು ಖರ್ಚಾಗುತ್ತದೆ ಎನ್ನುವ ಲೆಕ್ಕಾಚಾರವನ್ನು ಹಾಕಲಾಗಿದ್ದು, ಗೃಹಜ್ಯೋತಿ(Gruha jyothi) ಯೋಜನೆಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಗಳು ಬರುತ್ತಾಲೆ ಇದ್ದು ಕಾಂಗ್ರೆಸ್ ನೀಡಿದ ಐದು ಭರವಸೆಗಳಲ್ಲಿ ಗೃಹಜ್ಯೋತಿ ಯೋಜನೆ ಸಾಕಷ್ಟು ಸೌಂಡ್ ಮಾಡಿತ್ತು. ಈಗಾಗಲೇ ಈ ಯೋಜನೆಯ ಅನುಷ್ಠಾನದ ಕುರಿತು ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದೆ. ಜೊತೆಗೆ ಕೆಲವೊಂದಷ್ಟು ಕಂಡೀಷನ್ಸ್ ಗಳನ್ನ ಸರ್ಕಾರ ಹಾಕಿದ್ದು, ಬಾಡಿಗೆದಾರರು ಮನೆ ಮಾಲೀಕರೊಂದಿಗೆ ಮಾಡಿಕೊಂಡಿರುವ ಕರಾರು ಪತ್ರ, ತಮ್ಮ ಆಧಾರ್ ಕಾರ್ಡ್, ಮೊಬೈಲ್‍ಸಂಖ್ಯೆ, ವಿದ್ಯುತ್ ಸಂಪರ್ಕದ ಖಾತೆ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರವನ್ನು ಒದಗಿಸಬೇಕಿದೆ. ಇದೆಲ್ಲವನ್ನ ಸರಿಯಾಗಿ ಒದಗಿಸಿದವರಲ್ಲಿ ಯಾರು 200ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡ್ತಾರೋ ಅಂತವರಿಗೆ ಈ ಸೌಲಭ್ಯ ಸಿಗುತ್ತದೆ ಅಂತ ಹೇಳಲಾಗಿದೆ.

ಇದನ್ನೂ ಓದಿ: ಹೆಂಡತಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಜೀವ ತೆಗೆದ ಹೆಂಡತಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram