ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯೇನೋ ಹಿಡಿದಿದೆ. ಆದ್ರಿಗ ಸರ್ಕಾರ ರಚನೆಗೂ ಮುನ್ನವೆ ಚುನಾವಣೆಗೂ ಮುನ್ನವೇ ನೀಡಿದ ಗ್ಯಾರಂಟಿ ಯೋಜನೆಗಳು ಸಾಕಷ್ಟು ಸೌಂಡ್ ಮಾಡ್ತಿವೆ. ಹೌದು ಅದು ಫ್ರಿ ಇದು ಫ್ರೀ ಅಂತ ಹೇಳಿದ್ದೆ ಈಗ ಸರ್ಕಾರಕ್ಕೆ ಮುಳುವಾಗುವಂತೆ ಕಾಣಿಸುತ್ತಿದ್ದೂ, ಕೆಲವೊಂದು ಯೋಜನೆಗಳು ಹೊಡೆತ ನೀಡುವ ಲಕ್ಷಣಗಳು ಕೂಡ ಕಾಣ್ತಿವೆ. ಇನ್ನು ಅದ್ರಲ್ಲಿ ಒಂದು ಪ್ರಮುಖ ಯೋಜನೆ ಅಂದ್ರೇ ಅದು ಗೃಹ ಲಕ್ಷ್ಮಿ, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಗಳಲ್ಲಿ ಮಹಿಳೆಯರನ್ನ ಹೆಚ್ಚು ಆಕರ್ಷಸಿದ ಯೋಜನೆ ಅಂದ್ರೆ ಅದೇ ಗೃಹಲಕ್ಷ್ಮಿ. ಪ್ರತಿ ತಿಂಗಳು ಮನೆಯ ಒಡತಿ ಅಥವಾ ಯಜಮಾನೀ ಯಾರಿರುತ್ತಾರೋ ಅಂತವರಿಗೆ 2ಸಾವಿರ ಅಂದ್ರೆ ವರ್ಷಕ್ಕೆ 24ಸಾವಿರ ಉಚಿತವಾಗಿ ನೀಡುವ ಯೋಜನೆಯಾಗಿದ್ದು, ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿಗೆ ಇವೆ. ಆದ್ರೆ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದು ನಿಜ, ಗ್ಯಾರಂಟಿ ಕಾರ್ಡ್ ಗಳನ್ನ ತಲುಪಿಸಿದ್ದು ಸತ್ಯ ಆದರೆ ಇದೀಗ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ತನ್ನ ವರಸೆಯನ್ನೇ ಬದಲಾಯಿಸಿರುವ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಕೆಲವೊಂದು ಕಂಡೀಷನ್ಸ್ ಅಪ್ಲಯ್ ಆಗುತ್ತೆ ಅಂತ ಹೇಳಿ ಯೋಜನೆ ಜಾರಿಗೂ ಮುನ್ನವೇ ಜನರ ಕೋಪಕ್ಕೆ ಗುರಿಯಾಗುವಂತೆ ಕಾಣ್ತಿದೆ. ಇನ್ನು ಗೃಹಲಕ್ಷ್ಮಿ ಯೋಜನೆಗೂ ಕೂಡ ಸಾಕಷ್ಟು ರೂಲ್ಸ್ ಗಳು ಇದ್ದು ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ? ಯಾವ ಕಾರ್ಡ್ ಇದ್ರೆ ಪ್ರತಿ ತಿಂಗಳು ನಿಮ್ಮ ಖಾತೆಗೆ ಬರುತ್ತೆ, ಹಣ ಪಡೆದುಕೊಳ್ಳಲ್ಲೂ ನೀವೇನ್ ಮಾಡಬೇಕು ಎಲ್ಲವನ್ನ ಸಂಪೂರ್ಣವಾಗಿ ತಿಳಿಸಿಕೊಡ್ತೀನಿ ಬನ್ನಿ.
ಈ ಕಾರ್ಡ್ ಇದ್ದವರಿಗೆ ಮಾತ್ರ
ಹೌದು ಇದೀಗ ಕಾಂಗ್ರೆಸ್ ಸರ್ಕಾರ ಹಲವಾರು ಪ್ರಹಸನಗಳ ನಂತರ ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲು ತಯಾರಿ ನಡೆಸುತ್ತಿದ್ದೂ, ಸಚಿವ ಸಂಪುಟದ ಕಂಗಂಟನ್ನ ಬಗೆಹರಿಸುವ ಜೊತೆಗೆ ಕೊಟ್ಟಿರುವ ಯೋಜನೆಗಳನ್ನ ಜಾರಿಗೊಳಿಸುವುದ ಸಹ ಕಷ್ಟವಾಗುತ್ತೆ. ಇನ್ನು ಕೇಂದ್ರ ಸರ್ಕಾರ ಆಗಿರಾಬಹುದು ಅಥವಾ ರಾಜ್ಯ ಸರ್ಕಾರ ಆಗಿರಬಹುದು ಯಾವುದೇ ಹಣಕಾಸಿನ ಯೋಜನೆಗಳು ಅಂದ್ರೆ ಧನ ಸಹಾಯ ಮಾಡುವ ಯೋಜನೆಗಳನ್ನ ಜಾರಿಗೊಳಿಸಿದರೆ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆ ಹಣ ವರ್ಗಾಯಿಸುವ ಕೆಲಸವನ್ನ ಮಾಡುತ್ತೆ.ಇನ್ನು ಗೃಹಲಕ್ಷ್ಮಿ ಯೋಜನೆಯು ಸಹ ಇದೆ ಮಾದರಿಯದ್ದಾಗಿದ್ದು, ಇಲ್ಲಿಯೂ ನೀವು ಯಾವುದೇ ಅಪ್ಲಿಕೇಶನ್ ಹಾಕುವ ಅಗತ್ಯ ಇಲ್ಲ. ಬದಲಿಗೆ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಅಕೌಂಟ್ ಗೆ ಎನ್ ಟಿಸಿಐ ಲಿಂಕ್ ಆಗಿರುತ್ತೋ ಅಂಥವರು ಬ್ಯಾಂಕ್ ಖಾತೆಗೆ ನಿಮ್ಮ ಹಣ ಬಂದು ಸೇರುತ್ತೆ. ಹೌದು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಯಾವ ಬ್ಯಾಂಕ್ ಖಾತೆಯ ಎನ್ ಟಿಸಿಐ ಲಿಂಕ್ ಆಗಿರುತ್ತೋ ಅದನ್ನ ನೀವು ಮೊದಲಿಗೆ ತಿಳಿದುಕೊಳ್ಳಬೇಕು. ಹೌದು ಯಾವ ಖಾತೆಗೆ ಎನ್ ಟಿಸಿಐ ಲಿಂಕ್ ಆಗಿರುತ್ತೋ ಅಂತಹ ಬ್ಯಾಂಕ್ ಖಾತೆಗೆ ಹಣ ತಲುಪಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಹೀಗಾಗಿ ನಿಮ್ಮ ಯಾವುದೇ ಬ್ಯಾಂಕ್ ಖಾತೆಗೆ ಆಧಾರ್ ಜೊತೆಗೆ ಎನ್ ಟಿಸಿಐ ಲಿಂಕ್ ಆಗಿಲ್ಲ ಅಂದ್ರೆ ಮೊದಲು ಲಿಂಕ್ ಮಾಡಿಸುವ ಕೆಲಸವನ್ನ ನೀವು ಮಾಡಬೇಕು. ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಕೈ ಸೇರಲ್ಲ.
ಇದನ್ನೂ ಓದಿ: ರಾಜ್ಯದಲ್ಲಿ ಸಿ.ಎಂ ಸಿದ್ದರಾಮಯ್ಯ ಆಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ.!! ಎಷ್ಟಿದೆ ಇಂದಿನ ಚಿನ್ನದ ಬೆಲೆ?
ಈ ಯೋಜನೆಗೆ ಕೆಲ ನಿಯಮಗಳು, ಷರತ್ತುಗಳು ಅನ್ವಯಿಸುತ್ತವೆ
ಇನ್ನು ಬಿಪಿ ಎಲ್ ರೇಷನ್ ಕಾರ್ಡ್ ನ್ನ ಯಾರು ಹೊಂದಿರುತ್ತಾರೋ ಅಂತವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗಲಿದೆ. ಆದರೆ ಎಪಿಎಲ್ ರೇಷನ್ ಕಾರ್ಡ್ ಹೊಂದಿರೋರಿಗೆ ಈ ಯೋಜನೆಯ ಲಾಭ ಸಿಗೋದಿಲ್ಲ. ಹೌದು ಕಡಿಮೆ ಆದಾಯವನ್ನ ಹೊಂದಿರುವ ಬಿಪಿಎಲ್ ಕುಟುಂಬದ ಮನೆಯೊಡತಿ ಇದರ ಲಾಭವನ್ನ ಪಡೆಯಬಹುದು. ನಿಮ್ಮ ಬಳಿ ರೇಷನ್ ಕಾರ್ಡ್ ಹಾಗೂ ಎನ್ ಟಿಸಿಐ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಇದ್ರೆ ಈ ಯೋಜನೆ ಮೂಲಕ ಹಣವನ್ನ ಪಡೆದುಕೊಳ್ಳಬಹುದು. ಇನ್ನು ಮನೆಯ ಯಜಮಾನಿಗೆ ಈ ಯೋಜನೆಯ ಲಾಭ ಸಿಗಲಿದ್ದು,ರೇಷನ್ ಕಾರ್ಡಿನಲ್ಲಿ ಅದರ ವಿವರವನ್ನ ನೀಡಲಾಗಿರುತ್ತೆ. ಹೀಗಾಗಿ ಮನೆಯ ಯಜಮಾನಿ ಯಾರು ಅನ್ನೋದನ್ನ ನೀವೊಂದು ಬಾರಿ ಗಮನಿಸಿಕೊಳ್ಳಬೇಕು ಅದರಲ್ಲಿ ಬದಲಾವಣೆಗಳು ಇದ್ದಲ್ಲಿ ನೀವು ಬದಲಾವಣೆಗಳನ್ನ ಮಾಡಿಸಿಕೊಳ್ಳಬಹುದು. ಯಾಕಂದ್ರೆ ರೇಷನ್ ಕಾರ್ಡ್ ಆಧಾರದ ಮೇಲೆ ಮನೆಯ ಯಜಮಾನನ್ನ ಗುರುತಿಸಿ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು 2ಸಾವಿರ ರೂಪಾಯಿಗಳನ್ನ ಜಮೆ ಮಾಡುವ ಗುರಿಯನ್ನ ಹೊಂದಿದೆ. ಹೀಗಾಗಿ ನಿಮ್ಮ ಮನೆಯ ಯಜಮಾನರು ಯಾರು ಅನ್ನೋದನ್ನ ನಿರ್ಧರಿಸಿ ಬದಲಾವಣೆಗಳಿದ್ರೆ ಬದಲಾಯಿಸಿಕೊಳ್ಳಿ. ಹೌದು ರೇಷನ್ ಕಾರ್ಡ್ ಮುಖ ಪುಟದಲ್ಲಿ ಯಾರ ಮಾಹಿತಿ ಇರುತ್ತೋ ಅಂತವರಿಗೆ 2ಸಾವಿರ ಹೋಗುತ್ತೆ. ಹೀಗಾಗಿ ಮೊದಲು ಆಧಾರ್ ಕಾರ್ಡ್ ಹಾಗೂ ಎನ್ ಟಿಸಿಐ ಲಿಂಕ್ ಆಗಿದ್ಯಾ ಅನ್ನೋದನ್ನ ಖಚಿತ ಪಡಿಸಿಕೊಳ್ಳೋದ್ರಾ ಜೊತೆಗೆ ಮನೆಯ ಯಜಮಾನರನ್ನ ಖಚಿತಾ ಪಡಿಸಿಕೊಂಡಿದ್ದೆ ಆದಲ್ಲಿ ನೀವು ಯೋಜನೆಯ ಲಾಭ ಪಡೆಯಬಹುದು.
ಒಟ್ಟಿನಲ್ಲಿ ಸದ್ಯಕ್ಕೆ ಈ ಯೋಜನೆಯ ಲಾಭ ಪಡೆಯಲು ಯಾವುದೇ ಅಪ್ಲಿಕೇಶನ್ ಗಳು ಇಲ್ಲ. ರೇಷನ್ ಕಾರ್ಡಿನ ಮೂಲಕ ಮನೆಯ ಯಜಮಾನರನ್ನ ಗುರುತಿಸಿ ಹಣ ವರ್ಗಾಯಿಸುವ ಗುರಿ ಹೊಂದಲಾಗಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram