ಗೃಹಲಕ್ಷ್ಮೀ ಯೋಜನೆಯ ಹಣ ಇನ್ನು ಕೈ ಸೇರಿಲ್ಲ; ಡಿಸೆಂಬರ್ ಕಳೆಯುತ್ತ ಬಂದ್ರು ಹಣ ಮಾತ್ರ ಬಂದಿಲ್ಲ

Gruhalakshmi Scheme

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆ ಸಾಕಷ್ಟು ತಲೆನೋವಿನೊಂದಿಗೆ ಶುರುವಾಗಿ, ಈಗಲೂ ಪರಿಪೂರ್ಣವಾಗಿ ಎಲ್ಲ ಫಲನುಭವಿಗಳಿಗೂ ತಲುಪುತ್ತಿಲ್ಲ. ಹೌದು ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿಯಡಿ ಈವರೆಗೆ 9,44,155 ಇನ್ನು ಅರ್ಜಿದಾರರಿಗೆ ಹಣ ಹೋಗಿಲ್ಲ. ಇದರಲ್ಲಿ 3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಜತೆಗೆ 1,59,356 ಅರ್ಜಿದಾರರ ಆಧಾರ್‌ ಹಾಗೂ ಬ್ಯಾಂಕ್‌ ಖಾತೆ ಹೆಸರಿನಲ್ಲಿ ವ್ಯತ್ಯಾಸ ಸೇರಿದಂತೆ 5,96,268 ಫಲಾನುಭವಿಗಳ ಖಾತೆಯೊಂದಿಗೆ ಆಧಾರ್‌ ಜೋಡಣೆಯಾಗಿಲ್ಲ. 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ವ್ಯತ್ಯಾಸವಾಗಿದೆ. ಹಾಗೂ 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ವ್ಯತ್ಯಾಸವಾಗಿದೆ. ಹೀಗೆ ನಾನಾ ಕಾರಣಗಳಿಂದಾಗಿ 9.44 ಲಕ್ಷಕ್ಕೂ ಹೆಚ್ಚು ಅರ್ಜಿದಾರರಿಗೆ ಗೃಹಲಕ್ಷ್ಮಿ ಯೋಜನೆಯ ಭಾಗ್ಯ ಸಿಕ್ಕಿಲ್ಲ ಅಂತ ಸಾಕಷ್ಟು ಬಾರಿ ಹೇಳಲಾಗ್ತಿದೆ ಹೊರತು ಫಲಾನುಭವಿಗಳ ಹಣ ತಲುಪಿಸುವಲ್ಲಿ ಸರ್ಕಾರ ವಿಫಲವಾಗ್ತಿದೆ.

WhatsApp Group Join Now
Telegram Group Join Now

ಪ್ರತಿಯೊಂದು ತಿಂಗಳು ಹಣ ತಲುಪಿಸುವಲ್ಲಿ ಒಂದೊಂದು ಭರವಸೆಯನ್ನ ಸರ್ಕಾರ ನಿಡ್ತಾ ಬಂದಿದ್ದು, ಇಲ್ಲಿಯವರೆಗೂ ಯಾವುದೇ ಭರವಸೆಗಳು ಈಡೇರಿಲ್ಲ. ಪ್ರತಿ ತಿಂಗಳು 20ನೇ ತಾರೀಖುನೊಳಗೆ ಹಣ ಹಾಕೋದಾಗಿ ತಿಳಿಸಿದ್ರು ಕೂಡ ನವಂಬರ್ ತಿಂಗಳ ಹಣ ಮಾತ್ರ ಇನ್ನು ಕೆಲವರಿಗೆ ಅಕ್ಟೋಬರ್ ತಿಂಗಳ ಹಣವೇ ಬಂದಿಲ್ಲ, ಮತ್ತು ಕೆಲವರಿಗೆ ಒಂದು ತಿಂಗಳ ಹಣವು ಕೂಡ ಫಲಾನುಭವಿಗಳ ಖಾತೆ ಸೇರಿಲ್ಲ. ಈಗಾಗಿ ಎಲ್ಲ ಕಡೆಯಿಂದಲೂ ಯೋಜನೆಯ ಲಾಭ ಸಿಕ್ಕಿಲ್ಲ. ಹಾಗಾದ್ರೆ ನವಂಬರ್ ತಿಂಗಳ ಹಣ ಯಾವಾಗ ಬರುತ್ತೆ? ಯೋಜನೆಯ ಕುರಿತು ಫಲಾನುಭವಿಗಳು ಹಾಗೂ ಇನ್ನು ಹಣ ಪಡೆಯದೇ ಇರುವವರು ಏನ್ ಹೇಳ್ತಿದ್ದಾರೆ ನೋಡೋಣ ಬನ್ನಿ.

ಹೌದು ಈಗಾಗಲೇ ನವಂಬರ್ ತಿಂಗಳು ಕಳೆದು ಡಿಸೆಂಬರ್ ತಿಂಗಳ 10ನೇ ತಾರೀಖು ಕಳೆದಿದ್ರು ಕೂಡ ಇನ್ನು ಯೋಜನೆಯ ಹಣ ಫಲಾನುಭವಿಗಳ ಖಾತೆ ಸೇರಿಲ್ಲ ಹೀಗಾಗಿ ಫಲಾನುಭವಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೌದು ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದ ಮೇಲೆ ಎಷ್ಟೋ ಗೃಹಿಣಿಯರು ನಮಗೆ ಸಹಾಯವಾಯಿತು. ಎಲ್ಲದಕ್ಕೂ ಇನ್ನೊಬ್ಬರ ಮೇಲೆ ಡಿಪೆಂಡ್ ಆಗೋಕೆ ಆಗೋದಿಲ್ಲ. ಹೀಗಾಗಿ ಸಣ್ಣ ಪುಟ್ಟ ಖರ್ಚುಗಳಿಗೆ ಯೋಜನೆಯ ಹಣ ಸಹಕಾರಿಯಾಗುತ್ತಿತ್ತು, ಆದ್ರೆ ಸಂಬಂಧಪಟ್ಟ ಇಲಾಖೆ ಯೋಜನೆಯ ಲಾಭ ಪಡೆಯಲು ದಿನಾಂಕ ನಿಗಧಿ ಮಾಡಿದ್ರು ಕೂಡ ಆ ದಿನಾಂಕಕ್ಕೆ ಸರಿಯಾಗಿ ಹಣ ಬಾರದೆ ತುಂಬ ತೊಂದ್ರೆ ಆಗ್ತಿದೆ ಅಂತ ಸಾಕಷ್ಟು ಜನ ಅಸಮಾಧಾನ ವ್ಯಕ್ತಡಿಸಿದ್ದಾರೆ. ಅಲ್ದೇ ಹಣ ಬಂದಿದ್ರೆ ಚೆನ್ನಾಗಿರ್ತಿತ್ತು, ಈಗ ಅದನ್ನೇ ನಂಬಿಕೊಂಡಿದ್ದ ನಮಿಗೆ ಸಮಸ್ಯೆ ಆಗ್ತಿದೆ. ಆದಷ್ಟು ಬೇಗ ಸರ್ಕಾರ ಎಲ್ಲವನ್ನ ಸರಿಪಡಿಸಿ ತಿಂಗಳಿಗೆ ಸರಿಯಾಗಿ ಹಣ ಹಾಕಿದ್ರೆ ಸರಿ ಹೋಗುತ್ತೆ ಅಂತ ಹಣವನ್ನ ವಿಳಂಬವಾಗಿಯಾದ್ರೂ ಪಡೆಯುತ್ತಿರುವವರು ಹೇಳ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀ ಹಣ ವಿಳಂಬ ಆಗ್ತಿರೋದ್ಯಾಕೆ ಗೊತ್ತಾ?

ಇನ್ನು ಹಣ ಪಡೆಯದೇ ಇರುವವರು ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನ ನೀಡ್ತಿದೆ. ಕೊಟ್ಟ ಭರವಸೆಗಳನ್ನ ಈಡೇರಿಸದೆ ಮೋಸ ಮಾಡ್ತಿದೆ ಅಂತ ಸಾಕಷ್ಟು ಜನ ಬೇಸರ ವ್ಯಕ್ತಪಡಿಸಿದ್ರು. ಅಗತ್ಯ ಇರೋರತು ನಮಗೆ ಹಣ ಬಂದ್ರೆ ಸಾಕು ದಯವಿಟ್ಟು ಹಣ ಬರೋ ಥರ ಮಾಡಿ ಅಂತ ಸಾಕಷ್ಟು ಜನ ಕೇಳಿಕೊಂಡಿದ್ದಾರೆ. ಆದ್ರೆ ಸರ್ಕಾರ ಮಾತ್ರ ಪ್ರಯತ್ನ ಮಾಡ್ತಿದ್ದೇವೆ.. ಯಾರಿಗೂ ಮೋಸ ಆಗಲ್ಲ ತಡವಾದ್ರೂ ಕೂಡ ಎಲ್ಲರಿಗೂ ಹಣವನ್ನ ಹಾಕ್ತಿವಿ ಅರ್ಜಿ ಸಲ್ಲಿಸಿರೋ ಎಲ್ಲರಿಗೂ ಹಣ ಹಾಕ್ತಿವಿ ಅಂತ ಹೇಳ್ತಾನೆ ಬಂದಿದೆ. ಆದ್ರೂ ಕೂಡ ಇನ್ನು ಹಣ ಹಾಕುವಲ್ಲಿ ಸರ್ಕಾರ ಹಾಗೂ ಸಂಬಂಧ ಪಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಡವಿದ್ದು ಸಾಕಷ್ಟು ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು ಕೆಲವೊಂದು ಮಹಿಳೆಯರಿಗೆ ಯೋಜನೆಯ ಲಾಭ ಸಿಕಿದ್ದು, ಇನ್ನು ಒಂದಷ್ಟು ಜನ ಮಹಿಳೆಯರು ಹಣ ನಮಗೆ ಬಂದಿಲ್ಲ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕೆಲವೊಂದು ತಪ್ಪುಗಳು ಇದ್ದು EKYC ಅಪ್ಡೇಟ್ ಮಾಡಿಸದವರು, ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮತ್ತು NPCI ಮ್ಯಾಪಿಂಗ್ ಮಾಡಿಸದವರಿಗೆ ಹಣ ಬರುವುದಿಲ್ಲ ಅಂತ ಈ ಮೊದಲೇ ಹೇಳಲಾಗಿತ್ತು. ಹೀಗಾಗಿ ಈ ರೀತಿಯ ಸಮಸ್ಯೆಗಳಿದ್ದಗಿಯೂ ನಿಮಗೆ ಹಣ ಬರೋದಿಲ್ಲ. ಇನ್ನು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತಿದ್ದುಪಡಿ, ತೊಂದರೆ ಇದ್ದರೆ ಕೂಡ ಹಣ ಬರೋದಿಲ್ಲ ನಂತರ ಅದನ್ನ ಸರಿ ಮಾಡಿಸಿ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಮಾಡಿಸಿದರೆ ಅಂತವರಿಗೆ ಮುಂದಿನ ತಿಂಗಳಿನಿಂದ 2000 ರೂಪಾಯಿ ಹಣ ಪಡೆಯಬಹುದು ಅಂತ ಪ್ರತಿ ತಿಂಗಳು ಇಲಾಖೆ ಹೇಳ್ತಾಲೆ ಬಂದಿದೆ. ಇನ್ನು ಇದರ ಜೊತೆಗೆ ಇದುವರೆಗೆ ಅರ್ಜಿ ಸಲ್ಲಿಸದವರು ಹಾಗೂ ತಾಂತ್ರಿಕ ತೊಂದರೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವವರು ಎಲ್ಲವನ್ನು ಸರಿಮಾಡಿಕೊಂಡು ಅರ್ಜಿ ಸಲ್ಲಿಸಿಕೆ ಮಾಡಬಹುದು ಅಂತಲೂ ಹೇಳಿತ್ತು. ಆದ್ರೆ ಎಲ್ಲವು ಸರಿ ಮಾಡಿಕೊಂಡರು ಇನ್ನು ಕೂಡ ಯೋಜನೆಯ ಲಾಭ ನಮಗೆ ಸಿಕ್ಕಿಲ್ಲ ಅಂತ ಸಾಕಷ್ಟು ಜನ ಅರ್ಜಿ ಸಲ್ಲಿಸಿದವರು ಬೇಸರ ವ್ಯಕ್ತಪಡಿಸಿದ್ದಾರೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಡಿಸೆಂಬರ್ ತಿಂಗಳ 10ನೇ ತಾರೀಕು ಕಳೆದ್ರು ಒಂದು ಕಂತಿನ ಹಣ ಬಂದಿಲ್ಲ

ಇನ್ನು ಕಳೆದ ತಿಂಗಳು ಕೂಡ ಇಲಾಖೆ ಪ್ರತಿ ತಿಂಗಳು 20ನೇ ತಾರೀಖುನೊಳಗೆ ಹಣ ಸಂದಾಯ ಮಾಡಲಾಗುತ್ತೆ ಅಂತ ಹೇಳಿದ್ರು. ಆದ್ರೂ ಕೂಡ ಡಿಸೆಂಬರ್ 10ನೇ ತಾರೀಖು ಕಳೆದ್ರು ಕೂಡ ಹಣ ಸಂದಾಯವಾಗಿಲ್ಲ. ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ ಅಂತ ಫಲಾನುಭವಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈಗಲೂ ಕೂಡ ಸರ್ಕಾರ ಆಧಾರ್ ಕಾರ್ಡ್, ಮತ್ತು ಬ್ಯಾಂಕ್ ಖಾತೆಯಲ್ಲಿನ ಸಮಸ್ಯೆಗಳು ಇರೋದು ಸೇರಿದಂತೆ, ಫಲಾನುಭವಿಗಳ ಹೆಸರಲ್ಲಿ ಆಗಿರುವ ದೋಷಗಳು ಇದಕ್ಕೆ ಕಾರಣ ಅಂತ ಹೇಳಿದೆ. ಅಲ್ದೇ ಮನೆ ಯಜಮಾನಿಯ ಖಾತೆಗೆ ಹಣ ಸಂದಾಯ ಮಾಡಲು ಆಗ್ತಿಲ್ಲ ಅಂದ್ರೆ ಅದನ್ನ ಕೂಡ ಸರಿಪಡಿಸಲು ಸರ್ಕಾರ ಇನ್ನು ಒಂದು ಹೆಜ್ಜೆ ಮುಂದುವರೆದು ಇದೀಗ ಫಲನುಭವಿಗಳ ಪತಿಯರ ಖಾತೆಗೆ ಹಣ ಹಾಕೋದು ಇಲ್ಲ, ಫಲಾನುಭವಿಯ ನಂತರದ ಮನೆಯ ಯಜಮಾನಿ ಅಥವಾ ಯಜಮಾನರ ಖಾತೆ ಹಣ ಹಾಕೋದಾಗಿ ತಿಳಿಸಿದೆ ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅಂತ ಗೊತ್ತಿಲ್ಲ. ಈ ತಿಂಗಳು 10 ನೇ ತಾರೀಖು ಕಳೆದ್ರು ಇನ್ನು ಕೂಡ ಹಣ ಬಂದಿಲ್ಲ ಆದ್ರೆ ಮುಂದಿನ ದಿನಗಳಲ್ಲಿ ಯಾರಿಗೆಲ್ಲ ಹಣ ಬರುತ್ತೋ ಇಲ್ವೋ ಗೊತ್ತಿಲ್ಲ ಹಾಗೆ ಒಂದು ಕಂತಿನ ಹಣ ಪಡೆಯದೇ ಇರುವವರ ಖಾತೆಗೆ ಹಣ ಬರುತ್ತಾ ಇಲ್ವಾ ಅಂತ ಕಾದು ನೋಡಬೇಕಿದೆ.

ಇದನ್ನೂ ಓದಿ: ಗ್ರಾಮೀಣ ವಿಭಾಗದ ಪ್ರತಿಭೆಗಳನ್ನು ಹೊರತರಲು ಮುಂದಿನ ವರ್ಷದಲ್ಲಿ ಪಬ್ಲಿಕ್ ಶಾಲೆಗಳ ನಿರ್ಮಾಣ, ಮಧು ಬಂಗಾರಪ್ಪ ಹೇಳಿಕೆ

ಇದನ್ನೂ ಓದಿ: ಮತ್ತೊಂದು ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ, ಮುಂದಿನ ವರ್ಷ 8ನೇ ತರಗತಿಯ ಮಕ್ಕಳಿಗೆ ಸೈಕಲ್ ವಿತರಣೆ