ನಮ್ಮ ಜನ ಇಷ್ಟು ಅಪಡೇಟ್ ಆಗಲು ಬಯಸುತ್ತಿದ್ದಾರೆ ಅಂದ್ರೆ ಅರೋಗ್ಯವನ್ನು ಕೂಡ ಕೊಂಡುಕೊಳ್ಳಬಹುದು ಅನ್ನೋ ಮಟ್ಟಕ್ಕೆ ಹೋಗ್ಬಿಟ್ಟಿದ್ದಾರೆ. ಅಂದ್ರೆ ಮುಂದೊಂದು ದಿನ ತಮ್ಮಗೆ ತಮ್ಮ ದೇಹಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಅಂತ ಆಲೋಚನೆ ಮಾಡಿ, ಕೆಲವೊಂದಷ್ಟು ಸಲ ದುಡುಕಿನ ನಿರ್ಧಾರವನ್ನ ಕೂಡ ಮಾಡಿಬಿಡ್ತಾರೆ. ಇವಾಗ ಚೆನ್ನಾಗಿದ್ದೀವ ಸಾಕು ಅಂತ ಆಲೋಚನೆ ಮಾಡೋರು ಬಹಳ ಕಡಿಮೆ ಮಂದಿ. ಹೌದು ಮುಂದೆಯೂ ತಮಗೆ ಏನು ತೊಂದರೆ ಆಗಬಾರದು ವಂಶ ಪಾರಂಪರ್ಯ ವಾಗಿ ಯಾವ ಖಾಯಿಲೆಗಳು ನಮ್ಮನ್ನ ಬಾದಿಸಬಾರದು ಅಂತ ಕಾಯಿಲೆ ಬರೋದಕ್ಕೂ ಮೊದಲೇ ಕಾಯಿಲೆ ಬರಲೇಬಾರದು ಅಂತ ಯೋಚ್ನೆ ಮಾಡಿ ಕೆಲವೊಮ್ಮೆ ವೈದ್ಯರು ಕೊಡುವ ಬಿಟ್ಟಿ ಸಲಹೆಗಳನ್ನ ನಂಬಿ ಪ್ರಾಣಕ್ಕೆ ಕುತ್ತು ತೆಗೆದುಕೊಂಡಿದ್ದಾರೆ. ಆದ್ರೆ ಇವತ್ತು ಒಬ್ಬ ಮಹಿಳೆ ತನ್ನ ತಂದೆಗೆ ಪಾರ್ಶ್ವವಾಯು ಆಗಿತ್ತು ಅಂತ ಚಿಕಿತ್ಸೆ ಕೊಡಿಸಲು ಬಂದಾಗ ತನಗೂ ವಿಪರೀತ ಬೆನ್ನು ನೋವು ಆಗಾಗ ಮೈ ಕೈ ನೋವು ಬರೋದಾಗಿ ಹೇಳಿಕೊಂಡಿದ್ದಾರೆ. ವೈದ್ಯರು ಕೂಡ ಬಿಟ್ಟಿ ಸಲಹೆ ಕೊಟ್ಟು ಒಂದು ಇಂಜೆಕ್ಷನ್ ತೆಗೆದುಕೊಳ್ಳಲು ಹೇಳಿದ್ದಾರೆ. ಆ ಮಹಿಳೆಯೂ ಹಿಂದೆ ಮುಂದೆ ಯೋಚಿಸದೆ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ, ಆದರೆ ಮರುಕ್ಷಣವೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿದೆ.
ಇದನ್ನೂ ಓದಿ: ನಂಬಿದವರಿಂದಲೇ ರಶ್ಮಿಕಾ ಮಂದಣ್ಣನಿಗೆ ಲಕ್ಷ ಲಕ್ಷ ಪಂಗನಾಮ!! ಹಣ ಕಳೆದುಕೊಂಡು ರಶ್ಮಿಕಾ ಪರಿಸ್ಥಿತಿ ಅಯ್ಯೋ ಪಾಪ
ತಂದೆ ಚಿಕಿತ್ಸೆ ಕೊಡಿಸಲು ಬಂದ ಮಗಳು ಮಸಣ ಸೇರಿದಳು
ಪಾರ್ಶ್ವವಾಯು ಪೀಡಿತ ತಂದೆಗೆ ಚಿಕಿತ್ಸೆ ಕೊಡಿಸಲು ಬಂದ ಸ್ವಪ್ನ ರಾಯ್ಕರ್, ತನಗೆ ಮುಂದೆ ಪಾರ್ಶ್ವವಾಯು ಬರದಂತೆ ಮುಂಚೆಯೇ ನೀಡುವ ಇಂಜೆಕ್ಷನ್ ಪಡೆದು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಹಳಗಾದ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ನಡೆದಿದೆ. ಹೌದು ಕೊಪ್ಪಳ ಮೂಲದ ಸ್ವಪ್ನ ಕುಟುಂಬದ ಜತೆ ಗೋವಾ ಹಾಗೂ ಉತ್ತರ ಕನ್ನಡ ಪ್ರವಾಸಕ್ಕಾಗಿ ಅವರು ಆಗಮಿಸಿದ್ದುರು. ಗೋವಾದ ಕಾಮಾಕ್ಷಿ ದೇವಸ್ಥಾನಕ್ಕೆ ತೆರಳಿ ನಂತರ ನಿನ್ನೆ ಕಾರವಾರಕ್ಕೆ ಆಗಮಿಸಿದ್ದರು. ಕಾರಣ ಕೂಡ ಇಷ್ಟೇ ಸ್ವಪ್ನ ಅವ್ರ ತಂದೆಗೆ ಎರಡು ವರ್ಷದ ಹಿಂದೆ ಪ್ಯಾರಲಿಸಿಸ್ ಆಗಿದ್ದು ಹಳಗ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು.
ಈ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ತಂದೆಯ ಆರೋಗ್ಯದ ವೈದ್ಯರ ಬಳಿ ತೋರಿಸಲು ಸ್ವಪ್ನ ಹೋಗಿದ್ದಾರೆ. ಇದೇ ವೇಳೆ ಆಕೆ ತನಗೆ ಆಗಾಗ ಕಾಡುತ್ತಿದ್ದ ಬೆನ್ನು ನೋವಿನ ಬಗ್ಗೆ ಹೇಳಿಕೊಂಡಿದ್ದಾರೆ, ಈ ವೇಳೆ ಪ್ಯಾರಲಿಸಿಸ್ಗೆ ಮುಂಜಾಗ್ರತೆಗಾಗಿ ಇಂಜೆಕ್ಷನ್ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದರು ಅಂತ ಹೇಳಲಾಗ್ತಿದೆ. ಹೀಗಾಗಿ ವೈದ್ಯರ ಸೂಚನೆ ಮೇರೆಗೆ ಮಹಿಳೆ ಇಂಜೆಕ್ಷನ್ ಪಡೆದ ಒಂದೇ ನಿಮಿಷದಲ್ಲಿ ಕೂಗಿಕೊಂಡು ಕುಸಿದು ಬಿದ್ದಿದ್ದಾರೆ, ತಕ್ಷಣ ಅವ್ರನ್ನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಆದರೆ ಕುಸಿದುಬಿದ್ದ ವೇಳೆಯಲ್ಲಿಯೇ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದ್ದು, ಆಕೆ ಮೃತಪಟ್ಟಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ತಿಳಿಸಿದ್ದಾರೆ.
ಇನ್ನು ಸ್ವಪ್ನ ಅವ್ರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರವಾಸಕೆಂದು ಬಂದ ಮಗಳು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಸುಮ್ಮನೇ ಇಂಜೆಕ್ಷನ್ ತೆಗೆದುಕೊಂಡು ಸಾವು ತಂದುಕೊಂಡುಬಿಟ್ಲು ಅಂತ ಕುಟುಂಬಸ್ಥರು ರೋದಿಸುತ್ತಿದ್ದರು. ಅಲ್ಲದೆ ಮಡದಿಯ ಮುಖವನ್ನ ಮಗುವಿಗೆ ತೋರಿಸಲಾಗದೆ ಆಸ್ಪತ್ರೆಯ ಹೊರಗೆ ನಿಂತು ಸ್ವಪ್ನ ಅವ್ರ ಪತಿ ಬಿಕ್ಕಿ ಬಿಕ್ಕಿ ಅತ್ತಿದ್ರು. ಹೌದು ಸ್ವಪ್ನ ಅವ್ರಿಗೆ 3ವರ್ಷದ ಗಂಡು ಮಗು ಇದ್ದು, ಇದೀಗ ಆ ಮಗು ಅನಾಥವಾಗಿದೆ. ಇನ್ನು “ನನಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದೆ. ಆಗ ಬೆನ್ನು ನೋವು ಅಂತ ಮಗಳು ವೈದ್ಯರ ಬಳಿ ತೋರಿಸಿದಾಗ ವೈದ್ಯರು ಪ್ಯಾರಲಿಸಿಸ್ ಬರದಂತೆ ಮುಂಚೆಯೇ ಚುಚ್ಚುಮದ್ದು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ನನ್ನ ಮಗಳು ಇಂಜೆಕ್ಷನ್ ಕೊಡುತ್ತಿದ್ದಂತೆ ಪಪ್ಪಾ ಎಂದು ಹೇಳಿ ಕುಸಿದು ಬಿದ್ದಳು. ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ವೈದ್ಯರೇ ಇಂಜೆಕ್ಷನ್ ತೆಗೆದುಕೊಳ್ಳಿ ಅಂತ ಹೇಳಿದ್ದರು. ಮಗಳು ಕೂಡ ತೆಗೆದುಕೊಂಡ್ಲು, ನಂತರ ಅವರೇ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ” ಅಂತ ಮೃತ ಸ್ವಪ್ನ ಅವ್ರ ತಂದೆ ಕೇಶವ ಪಾವಸ್ಕರ್ ಮಗಳನ್ನ ಕಳೆದುಕೊಂಡು ರೋದಿಸುತ್ತಿದ್ದಾರೆ. ಇಲ್ಲಿ ತಪ್ಪು ಯಾರದ್ದು ಸರಿ ಯಾರಾದ್ದೇನ್ನುವ ಪ್ರಶ್ನೆಯನ್ನ ಬಿತ್ತು ನೋಡಿದ್ರೆ, ಒಂದು ಪ್ರಾಣ ಕೇವಲ ಒಂದು ಇಂಜೆಕ್ಷನ್ ಇಂದ ಹೋಗುತ್ತೆ ಅಂದ್ರೆ ಯಪ್ಪಾ ಯಾವುದನ್ನೂ ಕೂಡ ಯಾರು ಊಹಿಸೋದು ಕೂಡ ಕಷ್ಟವಾಗುತ್ತೆ.
ಇದನ್ನೂ ಓದಿ: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram