ಮಹಿಳೆಯರಿಗೆ ಉಚಿತ ಬಸ್ ಬೆನ್ನಲ್ಲೇ ಹಿರಿಯ ನಾಗರಿಕರಿಗೆ ಸಾರಿಗೆ ಸಚಿವ ರಿಂದ ಗುಡ್ ನ್ಯೂಸ್, ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ಡೈರೆಕ್ಟ್ ಎಂಟ್ರಿ ..

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಸ್ತಿತ್ವಕ್ಕೆ ಬಂದ ಮೇಲೆ, ಆಯಾ ಖಾತೆಗಳ ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಒಂದಷ್ಟು ಬದಲಾವಣೆಗಳನ್ನ ಮಾಡಲು ಹೊರಟ್ಟಿದ್ದು, ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ(Ramilinga reddy) ಕೂಡ ಇದೀಗ ಕರ್ನಾಟಕದಲ್ಲೂ ಒಂದಷ್ಟು ಬದಲಾವಣೆಗೆ ಮುಂದಾಗಿದ್ದಾರೆ. ಹೌದು ಆಂಧ್ರಪ್ರದೇಶದಂತೆ ರಾಜ್ಯದಲ್ಲೂ ಹಿರಿಯ ನಾಗರೀಕರಿಗಾಗಿ ವಿಶೇಷ ಸವಲತ್ತು ನೀಡಲು ಯೋಚಿಸಿರುವ ಸಚಿವರು, ರಾಜ್ಯದ ದೇವಸ್ಥಾನಗಳಲ್ಲಿ ಇನ್ಮುಂದೆ ಹಿರಿಯ ನಾಗರೀಕರು ಸಾಮಾನ್ಯ ಕ್ಯೂನಲ್ಲಿ ನಿಲ್ಲುವಂತಿಲ್ಲ. ದೇವಸ್ಥಾನಗಳಲ್ಲಿ ಇನ್ನುಮುಂದೆ ಹಿರಿಯ ನಾಗರಿಕರಿಗೆ ಡೈರೆಕ್ಟ್ ಎಂಟ್ರಿ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.

WhatsApp Group Join Now
Telegram Group Join Now

ಇದಕ್ಕಾಗಿ ಹಿರಿಯ ನಾಗರೀಕರಿಗಾಗಿ ವಿಶೇಷ ಕ್ಯೂ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಸುಳಿವನ್ನು ರಾಜ್ಯದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ರು, ಅದರಂತೆ ಇದೀಗ ರಾಜ್ಯದ ಎಲ್ಲ ಮುಜರಾಯಿ ಇಲಾಖೆಗೊಳಪಡುವ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಅಂತ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ತಿಳಿಸಿದ್ದಾರೆ. ಹೌದು ದೇವಸ್ಥಾನಗಳಲ್ಲಿ ವಯಸ್ಸಾದವರು ಸಾಮಾನ್ಯ ಕ್ಯೂನಲ್ಲಿ ನಿಂತು ಹೋಗಲು ಸಾಧ್ಯವಿಲ್ಲ. ಸಹಜವಾಗಿ ಕೆಲವರಿಗೆ 65 ವರ್ಷ ಆದ ನಂತ್ರ ತುಂಬಾ ಹೊತ್ತು ನಿಲ್ಲಲು ಸಾಧ್ಯವಾಗುವುದಿಲ್ಲ. ಅವರಿಗೆಲ್ಲಾ ಬೇರೆ ಕ್ಯೂ ಮಾಡಲು ತಿಳಿಸಿದ್ದೇನೆ. ಆನ್ಲೈನ್ ಬುಕ್ಕಿಂಗ್‌ನಲ್ಲೂ ವಿಶೇಷವಾಗಿ ಹಿರಿಯರಿಗೆ ವಸತಿಗಳನ್ನು ಕೊಡಲು ತಿಳಿಸಿದ್ದೇನೆ. ಎಲ್ಲ ದೇವಸ್ಥಾನಗಳು ಸ್ವಚ್ಚವಾಗಿರಬೇಕು. ದೇವಸ್ಥಾನಗಳಲ್ಲಿ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ ಅಂತ ಇದೀಗ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: CCTV ಯಲ್ಲಿ ಬಯಲಾಯ್ತು ಆಸಲಿ ಸತ್ಯ! ಕುಡಿದು ರೀಲ್ಸ್ ಸ್ಟಾರ್ ನಿಖಿಲ್ ಮಾಡಿದ ಅವಾಂತರ ನೋಡಿ?

ಇನ್ಮುಂದೆ ಸರತಿ ಸಾಲಿನಲ್ಲಿ ನಿಂತು ಕಾಯೋ ಅವಶ್ಯಕತೆ ಇಲ್ಲ

ಹೌದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟವು ಕರ್ನಾಟಕ ಸರ್ಕಾರದ ಹಿಂದೂ ದೇವಾಲಯಗಳಲ್ಲಿ ಹಿರಿಯನಾಗರಿಕರಿಗೆ ನೇರ ದರ್ಶನಕ್ಕೆ ಮನವಿ ಸಲ್ಲಿಕೆ ಮಾಡಲಾಗುತ್ತು.ಅದರಂತೆ 65 ವರ್ಷ ಮೇಲ್ಪಟ್ಟವರಿಗೆ ದೇವಾಲಯಗಳಲ್ಲಿ ನೇರ ದರ್ಶನಕ್ಕೆ ಅರ್ಚಕರ ಒಕ್ಕೂಟದಿಂದ ಮುಜುರಾಯಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಇನ್ನು ಮುಖರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿಗೆ(Ramilinga reddy) ಪತ್ರ ಬರೆದು ನೇರವಾಗಿ ಅರ್ಚಕರ ಒಕ್ಕೂಟದಿಂದ ಅವರಿಗೆ ಮನವಿ ಮಾಡಲಾಗಿತ್ತು. ಆದ್ದರಿಂದ, ರಾಜ್ಯದ ಎ‌ ಮತ್ತು ಬಿ ವರ್ಗದ ಧಾರ್ಮಿಕ ಸಂಸ್ಥೆಗಳಲ್ಲಿ ಹಿರಿಯನಾಗರೀಕರಿಗೆ ಕ್ಯೂ ಇಲ್ಲದೇ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇನ್ನು ಹಿರಿಯ ನಾಗರಿಕರಿಗೆ ನೇರ ದರ್ಶನಕ್ಕೆ ರಾಜ್ಯದ ಎಲ್ಲ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗಿರಲಿದೆ.

ಹೌದು ಖಾಸಗಿ ಆಡಳಿತ ಮಂಡಳಿಯ, ಧಾರ್ಮಿಕ-ದತ್ತಿ ಸಮಿತಿಗಳಿಂದ ನಡೆಯುವ ಹಾಗೂ ಟ್ರಸ್ಟ್‌ಗಳಿಂದ ನಡೆಯುವ ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ನೇರ ದರ್ಶನಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಇನ್ನು ಕೂಡ ಯಾವುದೇ ತೀರ್ಮಾನವನ್ನು ಮಾಡಿಲ್ಲ. ಇದರಿಂದಾಗಿ, ಧರ್ಮಸ್ಥಳ, ಉಡುಪಿ ಅಷ್ಟಮಠಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನೇರ ದರ್ಶನದ ಬಗ್ಗೆ ಯಾವುದೇ ಸ್ಪಷ್ಟ ಆದೇಶ ನೀಡಿಲ್ಲ. ಹೀಗಾಗಿ ಈ ರೀತಿಯ ದೇವಸ್ಥಾನಗಳನ್ನ ಹೊರತು ಪಡಿಸಿ ಉಳಿದಂತೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಸದ್ಯಕ್ಕೆ ಈ ಆದೇಶ ಅಪ್ಲೈ ಅಗಲಿದ್ದು, ಮುಂದಿನ ದಿನಗಳಲ್ಲಿ ಮುಜರಾಯಿ ಇಲಾಖೆಗೆ ಒಳಪಡದ ದೇವಸ್ಥಾನ, ಧಾರ್ಮಿಕ ಕೇಂದ್ರಗಳಿಗೆ ಈ ನಿಯಮ ಅಪ್ಲೈ ಆಗುತ್ತಾ ಅನ್ನೋದು ಗೊತ್ತಿಲ್ಲ.

ಇದನ್ನೂ ಓದಿ: ತಂದೆ ಚಿಕಿತ್ಸೆ ಕೊಡಿಸಲು ಬಂದ ಮಗಳು ಮಸಣ ಸೇರಿದಳು, ಅರೋಗ್ಯವಂತ ಮಹಿಳೆಯ ಪ್ರಾಣ ಕಿತ್ತುಕೊಂಡ ಇಂಜೆಕ್ಷನ್ ಯಾವುದು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram